Viral Video: ಮದುವೆ ಉಡುಗೆಯಲ್ಲಿ ಕಿತ್ತಾಡಿದ ವಧು; ವೈರಲ್​ ಆಯ್ತು ವಿಡಿಯೋ

ದಕ್ಷಿಣ ವೇಲ್ಸ್​ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮದುವೆ ಏರ್ಪಡಿಸಲಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಮದುವೆ ಹುಡುಗಿ ಜಗಳಕ್ಕೆ ನಿಂತಿದ್ದಾಳೆ. ಈ ವೇಳೆ ಕೆಲವರಿಗೆ ಏಟನ್ನು ಕೂಡ ಆಕೆ ನೀಡಿದ್ದಾಳೆ.

news18-kannada
Updated:September 9, 2020, 11:33 AM IST
Viral Video: ಮದುವೆ ಉಡುಗೆಯಲ್ಲಿ ಕಿತ್ತಾಡಿದ ವಧು; ವೈರಲ್​ ಆಯ್ತು ವಿಡಿಯೋ
ಹೊಡೆದಾಟ ನಡೆಸಿದ ವಧು
  • Share this:
ಮದುವೆ ದಿನ ತುಂಬಾನೇ ವಿಶೇಷವಾಗಿರಬೇಕು. ಮದುವೆಯಲ್ಲಿ ಯಾವ ಉಡುಗೆ ತೊಡಬೇಕೆಂಬಿತ್ಯಾದಿ ಕನಸುಗಳನ್ನು ಅನೇಕರು ಕಂಡಿರುತ್ತಾರೆ. ಮದುವೆಯ ದಿನ ಅನೇಕರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರೆ, ಇನ್ನೂ ಕೆಲವೊಮ್ಮೆ ಕೆಲವರ ಬಾಳಲ್ಲಿ ದುಸ್ವಪ್ನವಾಗಿ ಬಿಡುತ್ತದೆ. ಮದುವೆಯನ್ನು ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಕನಸು ಕಂಡಿದ್ದ ಈ ಮಹಿಳೆಯ ಕತೆಯೂ ಈಗ ಹಾಗೆಯೇ ಆಗಿದೆ. ಮದುವೆಯ ದಿನ ಹಸೆಮಣೆ ಏರುವುದನ್ನು ಬಿಟ್ಟು, ಮದುವೆ ಉಡುಗೆಯಲ್ಲಿ ಆಕೆ ಜಗಳ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ದಕ್ಷಿಣ ವೇಲ್ಸ್​ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮದುವೆ ಏರ್ಪಡಿಸಲಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಮದುವೆ ಹುಡುಗಿ ಜಗಳಕ್ಕೆ ನಿಂತಿದ್ದಾಳೆ. ಈ ವೇಳೆ ಕೆಲವರಿಗೆ ಏಟನ್ನು ಕೂಡ ಆಕೆ ನೀಡಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಲಕ್ಷಾಂತರ ಮಂದಿ ವಿಡಿಯೋವನ್ನು ನೋಡಿದ್ದಾರೆ.

Nothing like a good old punch up to end your wedding day. from r/trashy



ಕೆಲ ಅನಾಮಧೇಯ ವ್ಯಕ್ತಿಗಳು ಬಂದು ಮದುವೆ ಹಾಲ್​ನಲ್ಲಿ ಗಲಾಟೆ ಮಾಡುತ್ತಿದ್ದರು. ಇದರಿಂದ ಸಿಟ್ಟಾ ವಧು ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಅದೇನೆ ಇರಲಿ, ಮದುವೆಯ ಸಿಹಿ ಕ್ಷಣವನ್ನು ನೆನಪಿಟ್ಟುಕೊಳ್ಳಬೇಕು ಎಂದುಕೊಂಡಿದ್ದ ಯುವತಿಗೆ ಭಾರೀ ನಿರಾಸೆ ಉಂಟಾಗಿದೆ.
Published by: Rajesh Duggumane
First published: September 9, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading