ಹಾವನ್ನು ಮಗುವಿನಂತೆ ಮಾತನಾಡಿಸಿ ಮನೆಯಿಂದ ಹೊರಗೆ ಕಳುಹಿಸಿದ ಮಹಿಳೆ; ವಿಡಿಯೋ ವೈರಲ್

Viral Video: ಹಾವು ಕಂಡಾಕ್ಷಣ ಜನರು ಅದನ್ನು ಹೊಡೆದು ಸಾಯಿಸುತ್ತಾರೆ ಅಥವಾ ಇನ್ನು ಕೆಲವರು ನಿಧಾನವಾಗಿ ಹಾವನ್ನು ಹಿಡಿಯುವವರನ್ನು ಕರೆಯಿಸಿ ಹಿಡಿದುಕೊಂಡು ಕಾಡಲ್ಲಿ ಬಿಡಲು ಹೇಳುತ್ತಾರೆ. ಮಾನವೀಯ ವರ್ತನೆ ತೋರುವವರಿಗಿಂತ ಹಿಂಸಿಸುವರೇ ಹೆಚ್ಚು. ಇವರೆಲ್ಲರ ಮಧ್ಯೆ ಇಲ್ಲೊಬ್ಬ ಮಹಿಳೆಯು ಹಾವನ್ನು ಮನೆಯಿಂದ ಹೊರಗೆ ಕಳುಹಿಸಿರುವ ವಿಡಿಯೋ ವೈರಲ್ ಆಗಿದೆ

Viral Video

Viral Video

 • Share this:
  Viral Cobra Video: ಕಲ್ಲು ನಾಗರ ಕಂಡರೆ ಪೂಜಿಸುವರು, ನಿಜ ನಾಗರ ಕಂಡರೆ ಕೋಲು ಹಿಡಿದು ಹೊಡಿ ಬಡಿ ಎನ್ನುವರು ಇದು ಎಂಥ ಲೋಕವಯ್ಯಾ ಎಂಬ ಪದಗಳನ್ನು ನಾವು ಕೇಳಿರುತ್ತೇವೆ. ಹೌದು ಇದು ಒಂದೆಡೆ ಮಾನವರ ಮೌಢ್ಯ ಮತ್ತು ಮಾನವೀಯತೆಗೆ ಕನ್ನಡಿ ಹಿಡಿದಂತಿದೆ. ಹೌದು ಹಾವು ಕಂಡಾಕ್ಷಣ ಜನರು ಅದನ್ನು ಹೊಡೆದು ಸಾಯಿಸುತ್ತಾರೆ ಅಥವಾ ಇನ್ನು ಕೆಲವರು ನಿಧಾನವಾಗಿ ಹಾವನ್ನು ಹಿಡಿಯುವವರನ್ನು ಕರೆಯಿಸಿ ಹಿಡಿದುಕೊಂಡು ಕಾಡಲ್ಲಿ ಬಿಡಲು ಹೇಳುತ್ತಾರೆ. ಮಾನವೀಯ ವರ್ತನೆ ತೋರುವವರಿಗಿಂತ ಹಿಂಸಿಸುವರೇ ಹೆಚ್ಚು. ಇವರೆಲ್ಲರ ಮಧ್ಯೆ ಇಲ್ಲೊಬ್ಬ ಮಹಿಳೆಯು ಹಾವನ್ನು ಮನೆಯಿಂದ ಹೊರಗೆ ಕಳುಹಿಸಿರುವ ವಿಡಿಯೋ ವೈರಲ್ ಆಗಿದೆ.

  ಮಹಿಳೆಯೊಬ್ಬಳು ತನ್ನ ಮನೆಯ ಆವರಣಕ್ಕೆ ಬಂದಿದ್ದ ಸಣ್ಣ ನಾಗರಹಾವನ್ನು ಮನೆಯಿಂದ ಹೊರಗೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯು ಮಗುವಿನ ಹತ್ತಿರ ಮಾತನಾಡುವ ರೀತಿಯಲ್ಲಿ ಹಾವಿನೊಂದಿಗೆ ತಮಿಳು ಭಾಷೆಯಲ್ಲಿ ಮಾತನಾಡಿ ಹೊರಗೆ ಕಳುಹಿಸುವುದನ್ನು ನೋಡಬಹುದು.

  ಕೊಯಮತ್ತೂರಿನಲ್ಲಿ ಸಂಭವಿಸಿದ ಈ ಘಟನೆಯಲ್ಲಿ, ಮಹಿಳೆಯು ಮನೆಗೆ ಪ್ರವೇಶಿಸಿದ ನಾಗರಹಾವನ್ನು ತಳ್ಳಲು ಕೋಲನ್ನು ಬಳಸಿರುವುದು ಕಂಡುಬಂದಿದೆ. ಆಕೆ ಹಾವನ್ನು ಕಂಡು ಗಾಬರಿಯಾಗದೆ ಅದನ್ನು ಗೇಟ್‍ನ ಹೊರಗೆ ಹೋಗುವಂತೆ ನಿಧಾನವಾಗಿ ಸೂಚಿಸಿದ್ದಾರೆ. ನಂತರ ಹಾವಿಗೆ ಹಾಲೆರೆಯುವುದಾಗಿ ಭರವಸೆ ನೀಡಿದರು.

  ಹಾವು ಮನೆಯಿಂದ ಹೊರಗೆ ಹೋಗುತ್ತಿರುವುದನ್ನು ನಾವು ವೀಡಿಯೊದಲ್ಲಿ ಕಾಣಬಹುದಾಗಿದೆ. ಮಹಿಳೆ ತುಂಬಾ ಪ್ರೀತಿಯ ಮಾತುಗಳಿಂದ ಜನರ ಸುರಕ್ಷತೆ ಹಾಗೂ ಅದರ ಸುರಕ್ಷತೆಗಾಗಿ ಮನೆಗೆ ಮತ್ತೆ ಬರದಂತೆ ವಿನಂತಿಸಿದಳು.

  ಹಾವಿನ ಬಗ್ಗೆ ಮಹಿಳೆಯು ತೋರಿದ ತಾಯಿಯ ಕರುಣೆ, ವಾತ್ಸಲ್ಯ, ಪ್ರೀತಿಯ ಮಾತುಗಳು ಸಾಕಷ್ಟು ಜನರ ಗಮನ ಸೆಳೆದಿದೆ ಮತ್ತು ಮಹಿಳೆಯ ಈ ನಡವಳಿಕೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

  ಇದನ್ನೂ ಓದಿ: Viral Video : ‘ರಿಪ್ಪರ್’ ಎಂಬ ಹೆಸರಿನ ಬಾತು ಕೋಳಿ ಮನುಷ್ಯರ ಮಾತನ್ನು ಅನುಕರಣೆ ಮಾಡುತ್ತವೆ; ಅಧ್ಯಯನ

  ಸಾಮಾಜಿಕ ಮಾಧ್ಯಮದಲ್ಲಿ ಇನ್ನೊಂದು ಘಟನೆ ಸೆರೆಯಾಗಿದ್ದು ಥಾಯ್ಲೆಂಡ್‍ನ ಅಂಗಡಿಯೊಂದರಲ್ಲಿ ಹಾವು ಹರಿದಾಡುತ್ತಿರುವುದನ್ನು ಕಂಡ ಉದ್ಯೋಗಿಯು ಭಯಭೀತಳಾಗಿ ಓಡಿಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂನ್ 8ರಂದು ಥಾಯ್ಲೆಂಡ್‍ನ ಚಾನ್ ಬುರಿಯಲ್ಲಿ ಈ ಘಟನೆ ಸಂಭವಿಸಿದೆ. ಅಂಗಡಿಯಲ್ಲಿ ತನ್ನ ಮೇಜಿನ ಬಳಿ ಕುಳಿತ ಮಹಿಳೆಯು ರೆಫ್ರಿಜರೇಟರ್ ಬಳಿ ಹೋದಳು. ಈ ಮಧ್ಯೆ, ಹಾವೊಂದು ಬಾಗಿಲಿನ ಮೂಲಕ ಅಂಗಡಿಯೊಳಗೆ ನುಸುಳಿತು ಮತ್ತು ಅವಳ ಮೇಜಿನ ಕೆಳಗೆ ತೆವಳಿಕೊಂಡು ಅಂಗಡಿಯ ಇನ್ನೊಂದು ತುದಿಗೆ ಹೋಯಿತು.

  ಇದನ್ನೂ ಓದಿ: Video Viral: ಹುಡುಗಿಯರ ಒಳಉಡುಪೇ ಈತನ ಟಾರ್ಗೆಟ್! ಕಳ್ಳ ಕದ್ದಿರುವ ಅಂಡರ್​ವೇರ್ ಸಂಖ್ಯೆ ತಿಳಿದರೆ ಬೆಚ್ಚಿ ಬಿಳೋದು ಪಕ್ಕಾ!

  ಅವಳು ತಿರುಗಿ ನೋಡಿದಾಗ, ಆಕೆಗೆ ಅದು ತಿಳಿದು ಭಯದಿಂದ ಅಂಗಡಿಯಿಂದ ಓಡಿಹೋದಳು. 38 ಸೆಕೆಂಡ್‍ಗಳ ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾವು ಅಂಗಡಿಯಲ್ಲಿ ಸಾಮಾನು ಕೊಳ್ಳಲು ಬಂದಿತ್ತು ಎಂದು ಹೇಳಿದರೆ, ಮತ್ತೊಬ್ಬರು, ನಿಜವಾಗಿಯೂ ಭಯವಾಗುತ್ತದೆ, ಹಾವು ಎಷ್ಟು ವೇಗವಾಗಿ ಹೋಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ನಮ್ಮನ್ನು ರಕ್ಷಿಸಿ ನಿಮ್ಮ ಸಹಾಯ ಬೇಕಾಗಿದೆ ಎಂದು ಒಳಗೆ ಬಂದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
  Published by:Sharath Sharma Kalagaru
  First published: