ಉದರ ನಿಮಿತ್ತಂ ಬಹುಕೃತ ವೇಷಂ. ಹೌದು, ಜನ (People) ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡಬೇಕಾಗುತ್ತದೆ. ಬೀದಿ ವ್ಯಾಪಾರಿಗಳದ್ದೂ (Street Vendor) ಇದೇ ಗೋಳು. ದೊಡ್ಡ ದೊಡ್ಡ ಮಾರಾಟಗಾರರು (Sellers) ಜಾಹೀರಾತು (Advertisement) ಇನ್ನಿತರ ಮಾಧ್ಯಮಗಳ ಮೂಲಕ ಪ್ರಚಾರ (promotion) ಮಾಡಿ, ತಮ್ಮ ಉತ್ಪನ್ನಗಳ (Product) ಮಾರಾಟ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನಿತ್ಯದ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ನಡೆಸುವ ಬೀದಿ ವ್ಯಾಪರಿಗಳಿಂದ ಅದೆಲ್ಲಾ ಎಲ್ಲಿ ಸಾಧ್ಯ ಹೇಳಿ? ಅವರ ಧ್ವನಿಯೇ ಪ್ರಚಾರದ ಮಾಧ್ಯಮ, ಜೋರಾಗಿ ಕೂಗುವ ಮೂಲಕವೋ, ಹಾಡುವ (Singing) ಮೂಲಕವೋ ಗ್ರಾಹಕರನ್ನು (Customer) ಸೆಳೆಯುವುದೇ ಪ್ರಚಾರ.
ವೈರಲ್ ಆಗುತ್ತಿರುವ ಬೀದಿ ಬದಿ ವ್ಯಾಪಾರಿ
ಈ ಹಿಂದೆ ಊರೂರು ಸುತ್ತಿಕೊಂಡು ಕಡಲೇಕಾಯಿ ಮಾರುವ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನ ಕಚ್ಚಾ ಬಾದಾಮ್ ಹಾಡು ವೈರಲ್ ಆಗಿದ್ದು ನೆನಪಿರಬಹುದು. ಅದೇ ರೀತಿ ಮತ್ತೊಬ್ಬ ಬೀದಿ ಬದಿ ವ್ಯಾಪಾರಿಯೊಬ್ಬರು ವೈರಲ್ ಆಗುತ್ತಿದ್ದಾರೆ. ಆದರೆ, ಇಲ್ಲಿ ಅವರು ಧ್ವನಿಯನ್ನು ಮಾತ್ರವಲ್ಲ, ಮುಖವನ್ನು ಕೂಡ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ! ಏನು ಆ ವ್ಯಾಪಾರಿಯ ಮುಖ ನೋಡಿ ಗ್ರಾಹಕರು ಬರುತ್ತಾರಾ? ಅಂದರೆ ಆ ವ್ಯಾಪಾರಿ ಯಾವುದಾರೂ ಸಿನಿಮಾ ತಾರೆಯ ತದ್ರೂಪಿ ಇರಬಹುದೇ? ಎಂದು ಆಲೋಚಿಸುತ್ತಿದ್ದೀರಾ? ಹಾಗೇನೂ ಇಲ್ಲ. ಆತ ಹಣ್ಣುಗಳನ್ನು ಕೊಳ್ಳಿರೆಂದು ಗ್ರಾಹಕರನ್ನು ಕೂಗಿ ಕರೆಯುತ್ತಾರೆ ಮತ್ತು ಮುಖದಲ್ಲಿ ತಮಾಷೆಯ ಚಿತ್ರ ವಿಚಿತ್ರ ಸನ್ನೆಗಳನ್ನು ಮಾಡಿ ತೋರಿಸುತ್ತಾರೆ ಎಂಬುವುದೇ ವಿಶೇಷ.
ಚಿತ್ರ ವಿಚಿತ್ರ ಸನ್ನೆಗಳ ಮೂಲಕ ವ್ಯಾಪಾರ ಮಾಡುವ ಹಣ್ಣು ವ್ಯಾಪಾರಿ
ಆ ಹಣ್ಣು ವ್ಯಾಪಾರಿಯು ಚಿತ್ರ ವಿಚಿತ್ರ ಸನ್ನೆಗಳ ಮಾಡುತ್ತಾ ಹಣ್ಣುಗಳನ್ನು ಮಾರುವ ವಿಡಿಯೋ ಒಂದನ್ನು ರೆಡಿಟ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋದ ಜೊತೆ “ನನ್ನ ಹಣ್ಣಿನ ವ್ಯಾಪಾರಿಗೆ ಹಣ್ಣುಗಳ ಬಗ್ಗೆ ಒಲವಿಲ್ಲದೇ ಇದ್ದರೆ ನನಗೆ ಅದು ಬೇಡ” ಎಂಬ ಬರಹವೂ ಇದೆ.
ಈ ವಿಡಿಯೋವನ್ನು ಭಾನುವಾರ ಹಂಚಿಕೊಳ್ಳಲಾಗಿದ್ದು, ಇದು ವರೆಗೆ ಅದು 65,000 ಕ್ಕೂ ಹೆಚ್ಚು ವೋಟ್‍ಗಳನ್ನು ಪಡೆದಿದೆ.
ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಬೀದಿ ಬದಿಯ ತಳ್ಳುಗಾಡಿಯಲ್ಲಿ ಹಣ್ಣು ಮಾರುವ ವ್ಯಾಪಾರಿಯೊಬ್ಬ ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸುತ್ತಾನೆ. ತಾನು ಮಾರುತ್ತಿರುವ ಹಣ್ಣುಗಳ ಎಷ್ಟೊಂದು ಮಾಗಿವೆ ಎಂಬುದನ್ನು ತೋರಿಸಲು, ಪಪ್ಪಾಯವನ್ನು ಹೂವಿನ ಆಕೃತಿಯಲ್ಲಿ ಕತ್ತರಿಸುವ ಆತ ತೆಗೆದುಕೊಳ್ಳಿ ಎಂದು ವಿಚಿತ್ರವಾಗಿ ಮುಖ ಮಾಡಿ ಕಿರುಚುತ್ತಾನೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಅದರೊಳಗೆ ನೋಡುತ್ತಾ, ವಿಚಿತ್ರ ಮುಖ ಮಾಡಿ “ಎಷ್ಟೊಂದು ಕೆಂಪಾಗಿದೆ” ಎಂದು ಕೂಗುತ್ತಾನೆ. ಗ್ರಾಹಕರನ್ನು ಆಕರ್ಷಿಸಲು ತಟ್ಟೆಯೊಂದರಿಂದ ತನ್ನ ತಲೆಗೆ ಹೊಡೆದುಕೊಳ್ಳುತ್ತಾನೆ, ಹಾಡುತ್ತಾನೆ, ಕಿರುಚುತ್ತಾನೆ.
ಈ ಬೀದಿ ವ್ಯಾಪಾರಿ ಇರುವ ಸ್ಥಳದ ಮಾಹಿತಿ ವಿಡಿಯೋದಲ್ಲಿ ಇಲ್ಲ. ಆದರೆ, ವರ್ತನೆಗಳಿಂದ ಆಕರ್ಷಿತರಾಗಿ ಒಂದಷ್ಟು ಜನ ಅವರ ಸುತ್ತ ನೆರೆದಿರುವುದನ್ನು ಮಾತ್ರ ನಾವು ನೋಡಬಹುದು. ಆ ಜನ ಆ ವ್ಯಾಪಾರಿಯ ಹಣ್ಣುಗಳನ್ನು ಮಾರುವ ವಿಭಿನ್ನ ಶೈಲಿಯನ್ನು ಕಂಡು ಆನಂದಿಸುತ್ತಿರುವಂತೆ ಕಾಣುತ್ತದೆ.ನೆಟ್ಟಿಗರು ಕೂಡ ಈ ವಿಡಿಯೋವನ್ನು ನೋಡಿ ಆನಂದಿಸಿದ್ದು, ಮಜವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೋ ನೋಡಿ ಜನರು ಹೆಂಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ನೋಡಿ
ನೆಟ್ಟಿಗರೊಬ್ಬರು ಸೂಪರ್ ಮಾರ್ಕೆಟ್ ಮತ್ತು ಡಿಪಾರ್ಟ್‍ಮೆಂಟಲ್ ಸ್ಟೋರುಗಗಳನ್ನು ನಿರ್ವಹಿಸುವ ರೀಟೆಲ್ ಕಂಪೆನಿಯೊಂದರ ಉದಾಹರಣೆ ನೀಡುತ್ತಾ, “ಕ್ರೋಗರ್ ಕಂಪೆನಿಯವರು ತಮ್ಮ ಒಂದು ರೀಬ್ರಾಂಡಿಂಗ್ ಪ್ರಚಾರಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು, ಅವರಿಗೆ ಅಸಲಿಗೆ ಈ ಮನುಷ್ಯನ ಅಗತ್ಯವಿತ್ತು” ಎಂದು ಬರೆದಿದ್ದಾರೆ.
ಇದನ್ನೂ ಓದಿ: Skydive: ಅನಾಥ ವ್ಯಕ್ತಿಯ ಸ್ಕೈಡೈವ್! ನೆಟ್ಟಿಗರ ಮನಗೆದ್ದ ಟಿಕ್ಟಾಕ್ ಜೋಡಿ
“ನೀವು ಮೊದಲಿಗೆ ಅವುಗಳ ಮೇಲೆ ಕಿರುಚಿದರೆ ಅವು ಇನ್ನಷ್ಟು ರಸಭರಿತವಾಗುತ್ತವೆ” ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರೀಯಿಸಿದ್ದಾರೆ. ಕೆಲವು ತಿಂಗಳ ಹಿಂದೆ ದ್ರಾಕ್ಷಿ ವ್ಯಾಪಾರಿಯೊಬ್ಬ ಜಿಂಗಲ್‍ಗಳನ್ನು ಹೇಳುತ್ತಾ ದ್ರಾಕ್ಷಿಗಳನ್ನು ಮಾರುತ್ತಿದ್ದ ದೃಶ್ಯವುಳ್ಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ಸುಮಾರು 2.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿತ್ತು ಮತ್ತು ಲೆಕ್ಕವಿಲ್ಲದಷ್ಟು ಮೆಚ್ಚುಗೆಗಳನ್ನು ಪಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ