HOME » NEWS » Trend » VIRAL VIDEO ODISHA WOMAN RIDING HORSE BY WEARING SAREE CRAZY VIDEO GOES VIRAL WATCH IT NOW STG SCT

Viral Video: ಸೀರೆಯುಟ್ಟು ಕುದುರೆ ಓಡಿಸಿದ ಭಾರತೀಯ ನಾರಿ; ಮಹಿಳೆಯ ಅಶ್ವ ಸವಾರಿಯ ವಿಡಿಯೋ ವೈರಲ್

Woman Horse Riding Video: ಮೊನಾಲೀಸಾ ಸೀರೆ ಉಟ್ಟುಕೊಂಡೇ ಕಿತ್ತೂರು ರಾಣಿ ಚೆನ್ನಮ್ಮನ ಥರ ಕುದುರೆ ಸವಾರಿ ಮಾಡುವ ಸುಮಾರು 3.30 ನಿಮಿಷದ ವಿಡಿಯೋ ಈಗ ಯೂಟ್ಯೂಬ್ ‍ನಲ್ಲಿ ಭಾರಿ ಸಂಚಲನ ಮಾಡಿದೆ.

Trending Desk
Updated:June 10, 2021, 11:52 AM IST
Viral Video: ಸೀರೆಯುಟ್ಟು ಕುದುರೆ ಓಡಿಸಿದ ಭಾರತೀಯ ನಾರಿ; ಮಹಿಳೆಯ ಅಶ್ವ ಸವಾರಿಯ ವಿಡಿಯೋ ವೈರಲ್
ಸೀರೆಯುಟ್ಟು ಕುದುರೆ ಸವಾರಿ ಮಾಡಿದ ಮಹಿಳೆ
  • Share this:

ಈಕೆ ಮೊನಾಲೀಸಾ. ಸಾಮಾಜಿಕ ಮಾಧ್ಯಮಗಳಲ್ಲಿ ಈಕೆಯ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಆದರೆ ತನ್ನ ಸುಂದರ ಮುಗುಳು ನಗೆಯ ಕಾರಣಕ್ಕಾಗಿ ಅಲ್ಲ. ಬದಲಿಗೆ ಆಕೆಯ ದಿಟ್ಟತನದ ಕಾರಣಕ್ಕಾಗಿ. ಏಕೆಂದರೆ ಈ ಮೊನಾಲೀಸಾ ಆ ಮೊನಾಲೀಸಾ ಅಲ್ಲ.! ಈ ಮೊನಾಲೀಸಾಳ ಗತ್ತು, ಗೈರತ್ತೇ ಬೇರೆ. ಈಕೆ ಬುಲೆಟ್ ಬೈಕ್ ಓಡಿಸಬಲ್ಲಳು. ಟ್ರಕ್‍ ಕೂಡ ಚಲಾಯಿಸಬಲ್ಲಳು. ಬೈಕ್‍ನಿಂದ ಟ್ರಕ್ನ​ವರೆಗೆ ವಿವಿಧ ವಾಹನಗಳನ್ನು ಆಕೆ ಸೀರೆ ಉಟ್ಟು ಚಲಾಯಿಸುವುದು! ಸದ್ಯ ಈಕೆ ಸುದ್ದಿಯಲ್ಲಿರುವುದು ಆ ಕಾರಣಕ್ಕೆ ಅಲ್ಲ. ಬದಲಿಗೆ ಕುದುರೆ ಸವಾರಿಯ ಕಾರಣಕ್ಕೆ. ಕುದುರೆಯನ್ನೂ ಆಕೆ ಸೀರೆ ಉಟ್ಟೇ ಸವಾರಿ ಮಾಡುವುದು ನೋಡುವುದಕ್ಕೆ ವಿಶೇಷವಾಗಿಯೂ ವಿಭಿನ್ನವಾಗಿಯೂ ಕಾಣಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಕುದುರೆ ಸವಾರಿ ವಿಡಿಯೋ ವೈರಲ್ ಆಗಿದೆ.


ಸೀರೆ ಉಟ್ಟ ನೀರೆಯರೆಲ್ಲ ಅಬಲೆಯರಲ್ಲ:



ಒಡಿಶಾದ ಜಹಾಲ್ ಎಂಬ ಊರಿನಲ್ಲಿ ಗೃಹಿಣಿಯಾಗಿರುವ ಮೊನಾಲೀಸಾ ಅವರ ಅಚ್ಚುಮೆಚ್ಚಿನ ಉಡುಗೆ ಸೀರೆ. ಸಾಮಾನ್ಯವಾಗಿ ಸೀರೆ ಉಡುವ ಗೃಹಿಣಿಯರು ಅಬಲೆಯರು ಎಂಬ ಮೂಢನಂಬಿಕೆ ಕೆಲವರಲ್ಲಿದೆ. ಆದರೆ ಅವರ ಈ ನಂಬಿಕೆಗೆ ದೊಡ್ಡ ಸವಾಲು ಹಾಕುವ ದಿಟ್ಟ ಹೆಣ್ಣು ಮೊನಾಲೀಸಾ. ಬೈಕ್, ಸ್ಕೂಟಿಗಳಂತಹ ಎರಡು ಚಕ್ರದ ವಾಹನಗಳನ್ನೂ ಓಡಿಸಬಲ್ಲರು. ಅದರಲ್ಲೂ ಬುಲೆಟ್ ಥರದ ಬೈಕ್ಗಳನ್ನೂ ಸಲೀಸಾಗಿ ಚಲಾಯಿಸಬಲ್ಲರು. ಸಾಮಾನ್ಯ ಪುರುಷರೇ ಚಲಾಯಿಸಲು ಹಿಂದೇಟು ಹಾಕುವ ಭಾರಿ ಟ್ರಕ್‍ಗಳನ್ನೂ ಓಡಿಸಬಲ್ಲರು. ಮಾತ್ರವಲ್ಲ ಅದನ್ನೆಲ್ಲ ಚಲಾಯಿಸಲು ತಮ್ಮ ಮೆಚ್ಚಿನ ಸೀರೆಗೆ ಬದಲಿ ಉಡುಗೆಯನ್ನು ಹುಡುಕುವುದಿಲ್ಲ. ತಮ್ಮ ನೆಚ್ಚಿನ ಸೀರೆ ಧರಿಸಿಯೇ ಆಕೆ ಅವನ್ನೆಲ್ಲ ಚಲಾಯಿಸಬಲ್ಲರು. ಈ ಕಾರಣದಿಂದಲೇ ಮೊನಾಲೀಸಾ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸುವುದು.






ಇದನ್ನೇ ಓದಿ: Cryptocurrency: ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಎಷ್ಟು ಸೇಫ್?; ಇಲ್ಲಿದೆ ಮಾಹಿತಿ

ಸೀರೆಯುಟ್ಟು ಅಶ್ವ ಸವಾರಿ ಮಾಡುವ ದಿಟ್ಟೆ:


ಮೊನಾಲೀಸಾ ಅವರು ಸೀರೆ ಉಟ್ಟುಕೊಂಡೇ ಕಿತ್ತೂರು ರಾಣಿ ಚೆನ್ನಮ್ಮನ ಥರ ಕುದುರೆ ಸವಾರಿ ಮಾಡುವ ಸುಮಾರು 3.30 ನಿಮಿಷದ ವಿಡಿಯೋ ಈಗ ಯೂಟ್ಯೂಬ್ ‍ನಲ್ಲಿ ಭಾರಿ ಸಂಚಲನ ಮಾಡಿದೆ. ಸ್ಲೋ ಮೋಷನ್ನಲ್ಲಿ ಚಿತ್ರೀಕರಿಸಿದ ಈ ವಿಡಿಯೋದಲ್ಲಿ ಆಕೆ ಸೀರೆಯುಟ್ಟು ಸಲೀಸಾಗಿ ಅಶ್ವ ಸವಾರಿ ಮಾಡುವುದನ್ನು ಊರಿನ ಹಿರಿಯರು ಅಚ್ಚರಿಯಿಂದ, ಮುಗ್ಧವಾಗಿ ನೋಡುವ ಪರಿ ಕೂಡ ಆಕರ್ಷಕವಾಗಿದೆ.


Youtube Video

ಮೊನಾಲೀಸಾ ಅವರ ಪತಿ ಬದ್ರಿ ನಾರಾಯಣ ಭದ್ರ ಅವರು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಸಾವಿರಾರು ವ್ಯೂಗಳನ್ನು, ವಿಡಿಯೋ ಶೇರಿಂಗ್ ಅನ್ನು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಂಪಾದಿಸಿದೆ.


ಪತಿಯ ಪ್ರೋತ್ಸಾಹದಿಂದಲೇ ಈ ಸಾಧನೆ:


ತಾವು ಇಂದು ಇಷ್ಟು ಜನಪ್ರಿಯತೆಗಳಿಸಲು ತಮ್ಮ ಪತಿಯೇ ಕಾರಣ. ಅವರ ಪ್ರೋತ್ಸಾಹವೇ ನನಗೆ ಸ್ಫೂರ್ತಿ. ನನ್ನ ಎಲ್ಲ ಜನಪ್ರಿಯತೆಯ ಶ್ರೇಯ ನನ್ನ ಪತಿಗೆ ಸಲ್ಲಬೇಕು. ಪತಿ ಬದ್ರಿ ಅವರು ಸೃಜನಶೀಲ ನಿರ್ದೇಶಕರಾಗಿದ್ದು, ಸಮಾಜ ಸೇವಕರೂ ಆಗಿದ್ದಾರೆ. ನನ್ನ ಯೂಟ್ಯೂಬ್ ವಿಡಿಯೋಗಳನ್ನು ಸೆರೆ ಹಿಡಿದಿರುವುದು ಕೂಡ ಅವರೇ ಎಂದು ಪತಿಯ ಪ್ರಶಂಸೆ ಮಾಡುತ್ತಾರೆ ಮೊನಾಲೀಸಾ.


Published by: Sushma Chakre
First published: June 10, 2021, 11:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories