Viral Video: ಮಹಿಳೆ ಮೇಲೆ ಕೋತಿಗಳ ದಾಳಿ: ಮುಂದೇನಾಯ್ತು? ಈ ವಿಡಿಯೋ ನೋಡಿ

21 ಸೆಕೆಂಡುಗಳ ಈ ವಿಡಿಯೋದಲ್ಲಿ, ಕೋತಿಯೊಂದು ಮಹಿಳೆಯು ಒಂದು ಬ್ಯಾಗ್ ಹಾಕಿಕೊಂಡು ಮೆಟ್ಟಿಲ ಬಳಿ ಬರುತ್ತಿರುವಾಗ ಕೋತಿಯೊಂದು ಚಂಗನೆ ಹಾರಿ ಆಕೆಯ ಬ್ಯಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿತು

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸಾಮಾನ್ಯವಾಗಿ ನಾವು ಯಾವುದೇ ಪ್ರವಾಸಿ ತಾಣಗಳಿಗೆ (Tourist Place) ಅಥವಾ ದೇವಸ್ಥಾನ(Temple)ಗಳಿಗೆ ಹೋದರೆ ಅಲ್ಲಿ ಬಹಳಷ್ಟು ಕೋತಿ(Monkey)ಗಳನ್ನು ನಾವು ನೋಡುತ್ತೇವೆ. ಅಲ್ಲಿ ಸುತ್ತಾಡಲು ಬಂದಿರುವ ಜನರ ಹಿಂದೆ ಮುಂದೆ ತುಂಬಾನೇ ಧೈರ್ಯದಿಂದ ಅತ್ತಿಂದಿತ್ತ ಅಡ್ಡಾಡುತ್ತಾ ಜನರ ಕೈಯಲ್ಲಿರುವ ತಿಂಡಿಗಳ ಪ್ಯಾಕೆಟ್ (Food Packet) ಅಥವಾ ನೀರಿನ ಬಾಟಲ್ (Water Bottle) ಗಳನ್ನು ಅವರ ಕೈಯಿಂದ ಕಸಿದುಕೊಂಡು ಹೇಗೆ ಓಡಿ ಹೋಗಬೇಕು ಎಂದು ಹೊಂಚು ಹಾಕುತ್ತಾ ಇರುತ್ತವೆ ಎಂದು ಹೇಳಬಹುದು. ಅನೇಕ ಸಾರಿ ಈ ಕೋತಿಗಳು ಮೆಲ್ಲಗೆ ಬಂದು ನಮ್ಮ ಕೈಯಲ್ಲಿ ಏನೇ ಇದ್ದರೂ ಅದನ್ನು ತಕ್ಷಣವೇ ಕಸಿದುಕೊಂಡು ಓಡಿ ಹೋಗಿರುವ ಘಟನೆಗಳು ಸಾಕಷ್ಟು ನೋಡಿರುತ್ತೇವೆ.

ಅದರಲ್ಲೂ ಈ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಈ ಕೋತಿಗಳನ್ನು ನೋಡಿ ತುಂಬಾನೇ ಹೆದರಿಕೊಳ್ಳುತ್ತಾರೆ. ಕೋತಿಗಳು ಇನ್ನೂ ಕಿಲೋ ಮೀಟರ್ ದೂರದಲ್ಲಿ ಬರುತ್ತಿದ್ದರೂ ಸಹ ಇವರು ತಮ್ಮ ಕಡೆಗೆ ಕೋತಿ ಬರುತ್ತಿದೆ ಅಂತ ತಿಳಿದು ಭಯ ಪಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.

ಅಯ್ಯೋ ಇದೇಕೆ ಈ ಕೋತಿಗಳ ಬಗ್ಗೆ ಇಷ್ಟೊಂದು ಮಾತಾಡುತ್ತಿದ್ದೇವೆ ಎಂದು ನಿಮಗೆ ಸಂದೇಹ ಬರುತ್ತಿರಬೇಕಲ್ಲವೇ? ಹೌದು.. ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ವಿಚಾರವೂ ಸಹ ಕೋತಿಗಳಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ:  Viral News: 3 ದಿನ ರೆಸ್ಟೋರೆಂಟ್ ನಲ್ಲಿ ಸಿಲುಕಿದ ಮಹಿಳೆ: ಎಲ್ಲವೂ ಫ್ರೀ ಫ್ರೀ..!

ಪ್ರವಾಸಿಗರ ಗುಂಪಿನ ಮೇಲೆ ದಾಳಿ ಮಾಡಿದ ಕೋತಿಗಳು

ಗಿಬ್ರಾಲ್ಟರ್ ಎಂಬ ಪ್ರವಾಸಿ ತಾಣದಲ್ಲಿ ನಡೆದ ಘಟನೆಯಲ್ಲಿ, ಎರಡು ಕೋತಿಗಳು ಪ್ರವಾಸಿಗರ ಗುಂಪಿನ ಮೇಲೆ ದಾಳಿ ಮಾಡಿ ಜನಪ್ರಿಯ ಪ್ರವಾಸಿ ತಾಣದಲ್ಲಿ ಅವರನ್ನು ಅಟ್ಟಿಸಿಕೊಂಡು ಹೋದವು. ಈ ಭಯಾನಕ ಕ್ಷಣವನ್ನು ನಯರಾ ಅಲೋನ್ಸೊ ಸೋಸಾ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಮತ್ತು ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಎಂದು ಹೇಳಬಹುದು.21 ಸೆಕೆಂಡ್ ವಿಡಿಯೋ ವೈರಲ್

21 ಸೆಕೆಂಡುಗಳ ಈ ವಿಡಿಯೋದಲ್ಲಿ, ಕೋತಿಯೊಂದು ಮಹಿಳೆಯು ಒಂದು ಬ್ಯಾಗ್ ಹಾಕಿಕೊಂಡು ಮೆಟ್ಟಿಲ ಬಳಿ ಬರುತ್ತಿರುವಾಗ ಕೋತಿಯೊಂದು ಚಂಗನೆ ಹಾರಿ ಆಕೆಯ ಬ್ಯಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿತು. ಅಲ್ಲೇ ಮುಂದೆ ಇದ್ದಂತಹ ಒಬ್ಬ ಹುಡುಗ ಹಿಂದಕ್ಕೆ ಬಂದು ಮಹಿಳೆಗೆ ಕಿರುಕುಳ ಕೊಡುತ್ತಿದ್ದ ಆ ಕೋತಿಯನ್ನು ಹೊಡೆದೋಡಿಸಲು ಪ್ರಯತ್ನ ಮಾಡುತ್ತಿರುವುದನ್ನು ಇದರಲ್ಲಿ ನೋಡಬಹುದು.

ಇದರಿಂದ ಕೋತಿಯು ಇನ್ನಷ್ಟು ಕೋಪಗೊಂಡು ಮತ್ತು ಆ ಹುಡುಗನ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ತಕ್ಷಣವೇ, ಮತ್ತೊಂದು ಕೋತಿ ನೆಗೆದು ಅವನನ್ನು ಮೆಟ್ಟಿಲುಗಳನ್ನು ಹತ್ತುವ ದಾರಿಯನ್ನು ನಿರ್ಬಂಧಿಸಿತು. ಹುಡುಗ ತನ್ನನ್ನು ತಾನು ಮುಕ್ತಗೊಳಿಸಿಕೊಂಡು ಓಡಿ ಹೋಗುವುದನ್ನು ಇದರಲ್ಲಿ ಕಾಣಬಹುದು.
ಫೆಬ್ರವರಿ 22ರಂದು ನಡೆದ ಘಟನೆ

ಈ ವಿಡಿಯೋಗೆ ಒಂದು ಶೀರ್ಷಿಕೆಯನ್ನು ಸಹ ನೀಡಲಾಗಿದೆ. ಇದರ ಪ್ರಕಾರ ಈ ಘಟನೆಯು ಫೆಬ್ರವರಿ 22 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೈರಲ್ ಕ್ಲಿಪ್ ನೆಟ್ಟಿಗರಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದ್ದು, ಅವರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ನೆಟ್ಟಿಗರಿಂದ ಕಮೆಂಟ್ ಗಳು

"ಬಹುಶಃ ಇದು ತಪ್ಪಾಗಿರಬಹುದು, ಆದರೆ ಇದನ್ನು ನೋಡಿ ನನಗೆ ನಗುವನ್ನು ಹಿಡಿದಿಟ್ಟುಕೊಳ್ಳಲು ಆಗದೆ ತುಂಬಾ ನಕ್ಕಿದ್ದೇನೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ:  Viral Photo: ಶ್ರೀ ಶರಣಬಸವೇಶ್ವರ ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ: ಫೋಟೋ ವೈರಲ್

"ಇದು ನಿಜವಾಗಿಯೂ ತಮಾಷೆಯಲ್ಲ, ಕೋತಿಗಳು ಒಬ್ಬ ವ್ಯಕ್ತಿಗೆ ಸಾಕಷ್ಟು ಹಾನಿ ಮಾಡಬಹುದು, ಸಾಯಿಸಲೂಬಹುದು” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ನಯರಾ ಅಲಾನ್ಸೋ ಸೋಸಾ ಹೇಳಿದ್ದೇನು?

"ನಾನು ಗಿಬ್ರಾಲ್ಟರ್‌ಗೆ ಹೋದಾಗ ನಾನು ಅದನ್ನು ರೆಕಾರ್ಡ್ ಮಾಡಿದ್ದೇನೆ. ಏಕೆಂದರೆ ಅವರ ಬೆನ್ನ ಮೇಲೆ ಬ್ಯಾಕ್ ಪ್ಯಾಕ್‌ ಹೊಂದಿರುವ ಪ್ರವಾಸಿಗರಿದ್ದರೆ, ಕೋತಿಗಳು ಅಂತಹವರ ಮೇಲೆ ದಾಳಿ ಮಾಡುತ್ತವೆ ಮತ್ತು ಅಂತಿಮವಾಗಿ, ಈ ಬಾರಿ, ಇದು ಹಾಸ್ಯಾಸ್ಪದವಾಗಿದೆ ಮತ್ತು ನಾನು ಅದನ್ನು ರೆಕಾರ್ಡ್ ಮಾಡಿದ್ದೇನೆ" ಎಂದು ನಯರಾ ಅಲಾನ್ಸೊ ಸೋಸಾ ಅವರು ಹೇಳಿದರು.
Published by:Mahmadrafik K
First published: