ಪ್ರಾಣಿಗಳು ಯಾವಾಗ ಸಿಟ್ಟಿಗೇಳುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೂ ಪ್ರವಾಸಿಗರ ಅದರ ಜೊತೆಗೆ ಆಟವಾಡೋದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮಾಡುತ್ತಾರೆ. ಅದಕ್ಕೆ ಸಿಟ್ಟು ಬಂದರೆ ಪ್ರಾಣಹಾನಿಯನ್ನು ಮಾಡುತ್ತದೆ. ಹೀಗಿದ್ದರು ಪ್ರವಾಸಿಗರು ಎಚ್ಚರಿಕೆಯಿಂದ ಇದ್ದರೆ ಉಳಿತು. ಪ್ರಾಣಿಗಳನ್ನು ಅದರ ಪಾಡಿಗೆ ಬಿಟ್ಟು, ನಮ್ಮ ಪಾಡಿಗೆ ನಾವಿದ್ದರೆ ಏನು ಮಾಡುವುದಿಲ್ಲ.
ಇಲ್ಲೊಂದು ವಿಡಿಯೋ ಇದೆ. ಪ್ರವಾಸಿಗನು ನೀರಿನಲ್ಲಿ ಎಂಜಾಯ್ ಮಾಡುತ್ತಿರುತ್ತಾನೆ. ಆತನ ಬಳಿ ಎರಡು ಮೊಸಳೆಗಳಿವೆ. ಅದರಲ್ಲಿ ಒಂದು ಮೊಸಳೆ ಆತನ ಕಾಲ ಬಳಿ ಇದ್ದರೆ, ಮತ್ತೊಂದು ಬಲ ಭುಜದ ಬಳಿಯಿದೆ. ಆತ ಮೊಸಳೆ ಎಂದು ಭಯ ಪಡದೆ ಆದರ ಬಳಿಯೇ ಇರುತ್ತಾನೆ. ಆದರೆ ಭುಜದ ಪಕ್ಕದಲ್ಲಿದ್ದ ಮೊಸಳೆ ಇದ್ದಕ್ಕಿದ್ದಂತೆ ಏನು ಮಾಡಿತು ಗೊತ್ತಾ?.
ಮೊಸಳೆಗೆ ಏನಾಯಿತೋ ಗೊತ್ತಿಲ್ಲ. ವ್ಯಕ್ತಿಯ ಕೈಯನ್ನು ಕಚ್ಚಲು ಮುಂದಾಗುತ್ತದೆ. ಅಷ್ಟರಲ್ಲಾಗಲೇ ವ್ಯಕ್ತಿಗೆ ನೋವಾಗಿದೆ. ರಭಕ್ಕನೆ ನೀರಿನಿಂದ ಮೇಲೆ ಬಂದು ತನ್ನ ಪ್ರಾಣ ಕಾಪಾಡಿಕೊಂಡಿದ್ದಾನೆ.
Just a taste... pic.twitter.com/iUVoLBZjXl
— Theo Shantonas (@TheoShantonas) October 13, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ