HOME » NEWS » Trend » VIRAL VIDEO MAN REFUSES OFFER OF TRAIN AS DOWRY CITING LACK OF PARKING SPACE VIRAL VIDEO IN TRENDING STG SCT

ವರದಕ್ಷಿಣೆಯಾಗಿ ರೈಲು ಕೊಡ್ತೀನಿ ಅಂದ್ರು, ನಿಲ್ಲಿಸಲು ಜಾಗವಿಲ್ಲದ್ದಕ್ಕೆ ಬೇಡ ಎಂದೆ!; ವೈರಲ್ ಆಯ್ತು ಫನ್ನಿ ವಿಡಿಯೋ

ವರದಕ್ಷಿಣೆ ಉಡುಗೊರೆಯಾಗಿ ನೀಡಲಾಗುವ ರೈಲನ್ನು ತಿರಸ್ಕರಿಸುವುದಾಗಿ ಹೇಳಿಕೊಳ್ಳುವ ವ್ಯಕ್ತಿಯೊಬ್ಬನ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಳಕಿಗೆ ಬಂದಿದೆ.

news18-kannada
Updated:May 3, 2021, 12:00 PM IST
ವರದಕ್ಷಿಣೆಯಾಗಿ ರೈಲು ಕೊಡ್ತೀನಿ ಅಂದ್ರು, ನಿಲ್ಲಿಸಲು ಜಾಗವಿಲ್ಲದ್ದಕ್ಕೆ ಬೇಡ ಎಂದೆ!; ವೈರಲ್ ಆಯ್ತು ಫನ್ನಿ ವಿಡಿಯೋ
ವೈರಲ್ ವಿಡಿಯೋ
  • Share this:
ಜನರನ್ನು ಮೆಚ್ಚಿಸಲು ಇಂಟರ್ನೆಟ್ ಎಂದಿಗೂ ವಿಫಲವಾಗುವುದಿಲ್ಲ. ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಉಲ್ಲಾಸದ ವಿಡಿಯೋಗಳನ್ನು ವೀಕ್ಷಕರು ಹೊಂದಿದ್ದು, ಇದು ಅನೇಕರಿಗೆ ನಗೆಯುಕ್ಕಿಸುತ್ತದೆ. ಯುವಜನತೆ ಅಷ್ಟೇ ಅಲ್ಲ ಹಿರಿಯ ವಯಸ್ಕರೂ ಸಹ ಈಗ ಸ್ಮಾರ್ಟ್‌ಫೋನ್‌ಗಳಲ್ಲಿ ಫನ್ನಿ ವಿಡಿಯೋಗಳನ್ನು ನೋಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೇ ರೀತಿ, ದೇಶದ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರಲ್ಲಿ ನಗೆಯುಕ್ಕಿಸಿದೆ. ಆತ ನೀಡುವ ಹೇಳಿಕೆಗೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುವಂತೆ ಮಾಡಿದೆ.

ವರದಕ್ಷಿಣೆ ಉಡುಗೊರೆಯಾಗಿ ನೀಡಲಾಗುವ ರೈಲನ್ನು ತಿರಸ್ಕರಿಸುವುದಾಗಿ ಹೇಳಿಕೊಳ್ಳುವ ವ್ಯಕ್ತಿಯೊಬ್ಬನ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯು ಮದುವೆಯಾದಾಗ ವರದಕ್ಷಿಣೆ ಉಡುಗೊರೆಯಾಗಿ ರೈಲು ನೀಡಲಾಗಿದೆಯೇ ಎಂದು ಕೇಳಲಾಗುತ್ತದೆ. ಅದಕ್ಕೆ, ಮನುಷ್ಯನು ಆತ್ಮವಿಶ್ವಾಸದಿಂದ ಹೌದು ಎಂದು ಪ್ರತಿಕ್ರಿಯಿಸುತ್ತಾನೆ. ಈ ಘಟನೆ ನಿಜವೇ ಎಂದು ವಿಡಿಯೋ ರೆಕಾರ್ಡಿಂಗ್ ಮಾಡುವ ವ್ಯಕ್ತಿ ಮತ್ತೆ ಕೇಳಿದಾಗಲೂ ''ಹಾ..ಸತ್ಯವಾಗಿದೆ'' ಎಂದು ಹಿಂದಿಯಲ್ಲಿ ಆತ ಉತ್ತರಿಸುತ್ತಾನೆ.

ತಾನು ಭಾರವಾದ ವಾಹನವನ್ನು ಓಡಿಸಲು ಸಾಕಷ್ಟು ಕೌಶಲ್ಯ ಹೊಂದಿಲ್ಲದ ಕಾರಣ ಅದನ್ನು ಸ್ವೀಕರಿಸಲು ನಿರಾಕರಿಸಿದೆ ಎಂದು ತನ್ನ ಹೇಳಿಕೆಗೆ ಸ್ಪಷ್ಟೀಕರಣ ನೀಡಿದನು. ಅಲ್ಲದೆ, ವಧುವಿನ ಕಡೆಯವರು ತನಗೆ ಕಾರಿನಂತಹ ಸಣ್ಣ ವಾಹನವನ್ನು ನೀಡಿದ್ದರೆ ಅದನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದೆ. ಇದಲ್ಲದೆ, ಟ್ರೈನ್‌ ನಿಲ್ಲಿಸಲು ತನ್ನ ಮನೆ ಹತ್ತಿರ ಹೆಚ್ಚು ಜಾಗವೂ ಇಲ್ಲ. "ನಾನು ಅದನ್ನು ಎಲ್ಲಿ ನಿಲ್ಲಿಸಬಹುದಿತ್ತು?" ಎಂದು ವ್ಯಕ್ತಿ ಹೇಳಿದ್ದಾನೆ.

ಈ ವಿಡಿಯೋವನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯು ಅದರೊಂದಿಗೆ ರೈಲಿನ ಎಂಜಿನ್ ಅನ್ನು ಸಹ ಪಡೆಯುತ್ತೀರಾ ಎಂದು ಕೇಳಿದಾಗ, ಆ ವ್ಯಕ್ತಿ ''ಎಲ್ಲವೂ ಸಿಗುತ್ತಿತ್ತು. ನೀವು ರೈಲಿನೊಂದಿಗೆ ಎಲ್ಲವನ್ನೂ ಪಡೆದಾಗ ನೀವು ಎಲ್ಲವನ್ನೂ ಪಡೆಯುತ್ತೀರಿ'' ಎಂಬ ಆ ವ್ಯಕ್ತಿಯ ಪ್ರತಿಕ್ರಿಯೆಯೂ ನಗೆಯುಕ್ಕಿಸುವಂತಿದೆ.

30 ಸೆಕೆಂಡುಗಳ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು 24 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 1800 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಹಲವರು ನಮಗೂ ಅಷ್ಟೇ ಆತ್ಮವಿಶ್ವಾಸವನ್ನು ಹೊಂದಲು ಬಯಸಿದ್ದು, ಆ ವಿಡಿಯೋ ಕ್ಲಿಪ್‌ ವೈರಲ್‌ ಆಗುತ್ತಿದೆ. ಕೆಲವರು ವರದಕ್ಷಿಣೆ ತಿರಸ್ಕರಿಸುವ ಉತ್ತಮ ಆಲೋಚನೆಯ ಬಗ್ಗೆ ಯೋಚಿಸುವಂತೆಯೂ ಆ ವ್ಯಕ್ತಿಗೆ ಸಲಹೆ ನೀಡುತ್ತಿದ್ದಾರೆ.

ನಾನು ಕೊರೊನಾಗೆ ಹೆದರಲ್ಲ, ಮಾಸ್ಕ್‌ ಹಾಕಲ್ಲ..!
ಈ ವರ್ಷದ ಆರಂಭದಲ್ಲಿ, ಸೂರ್ಯನ ಬಿಸಿಲಿನ ಕೆಳಗೆ ಕುಳಿತುಕೊಳ್ಳುವ ಮೂಲಕ ಕೊರೊನಾ ವೈರಸ್‌ ವಿರುದ್ಧ ಹೋರಾಡುವ ವ್ಯಕ್ತಿಯೊಬ್ಬ ವಿಲಕ್ಷಣವಾದ ಹೇಳಿಕೆಯನ್ನು ಒಳಗೊಂಡ ಮತ್ತೊಂದು ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾಂಕ್ರಾಮಿಕ ರೋಗದ ನಡುವೆ ಮಾಸ್ಕ್‌ ಧರಿಸದೆ ಚುನಾವಣಾ ಪ್ರಚಾರದ ರ‍್ಯಾಲಿಯ ಸಂದರ್ಭದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರನ್ನು ವರದಿಗಾರರು ಅವರನ್ನು ಪ್ರಶ್ನೆ ಮಾಡಿರುವ ವಿಡಿಯೋ ಇದು.



ಈ ವೈರಲ್‌ ವಿಡಿಯೋದಲ್ಲಿರುವ ವ್ಯಕ್ತಿಯು "ನಾನು ಕೊರೊನಾಗೆ ಹೆದರುವುದಿಲ್ಲ" ಎಂದು ಹೇಳುವುದನ್ನು ಕೇಳಬಹುದು. ನಾನು ಸೂರ್ಯನ ಕೆಳಗೆ (ಬಿಸಿಲಲ್ಲಿ) ಕುಳಿತಾಗ ಕೊರೊನಾ ಓಡಿಹೋಗುತ್ತದೆ. ಬಿಸಿಲಿನಲ್ಲಿ ಬೆವರುವುದರಿಂದ ಕೊರೊನಾ ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಾಸ್ಕ್‌ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.

ಈ ವಿಡಿಯೋವನ್ನು ಸಹ ಸುಮಾರು 39 ಸಾವಿರ ಮಂದಿ ವೀಕ್ಷಿಸಿದ್ದು, ಸುಮಾರು 1900 ನೆಟ್ಟಿಗರು ಲೈಕ್‌ ಮಾಡಿದ್ದಾರೆ.
Published by: Sushma Chakre
First published: May 3, 2021, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories