HOME » NEWS » Trend » VIRAL VIDEO MAN MARRIES 37TH TIME IN FRONT OF 28 WIVES 135 CHILDREN AND 126 GRANDCHILDREN HG

Viral Video: ಏನ್​ ಗುರು! 28 ಪತ್ನಿ, 135 ಮಕ್ಕಳು, 126 ಮೊಮ್ಮಕ್ಕಳಿದ್ದರು 37ನೇ ವಿವಾಹವಾದ ಮುದುಕ!

ಮುದುಕ 37ನೇ ವಿವಾಹವಾಗಿರೊದೇನೊ ನಿಜ. ಆದರೆ ಆತನಿಗೆ ಮಕ್ಕಳೆಷ್ಟು?. ಅವರಿಗೆ ಹುಟ್ಟಿರುವ ಅಂದರೆ ಮೊಮ್ಮಕ್ಕಳೆಷ್ಟು? ಈ ಬಗ್ಗೆ ತಿಳಿದುಕೊಂಡರೆ ಅಚ್ಚರಿಯಾಗೋದರಲ್ಲಿ ಅನುಮಾನವೇ ಇಲ್ಲ.  ಕುತೂಹಲಕಾರಿಯಾಗಿ ಈ ಘಟನೆ.

news18-kannada
Updated:June 9, 2021, 3:44 PM IST
Viral Video: ಏನ್​ ಗುರು! 28 ಪತ್ನಿ, 135 ಮಕ್ಕಳು, 126 ಮೊಮ್ಮಕ್ಕಳಿದ್ದರು 37ನೇ ವಿವಾಹವಾದ ಮುದುಕ!
ಫೋಟೋ; ಟ್ವಿಟ್ಟರ್​
  • Share this:
ಗತಕಾಲದಲ್ಲಿ ರಾಜರುಗಳು ಬಹು ಪತ್ನಿಯರನ್ನು ಹೊಂದಿದ್ದರು ಎಂಬುದನ್ನು ಓದಿದ್ದೇವೆ, ಕೇಳಿದ್ದೇವೆ. ಅಷ್ಟೇ ಏಕೆ ಇತಿಹಾಸವನ್ನು ಮೆಲುಕು ಹಾಕಿದಾಗ ಜಗದೋದ್ಧಾರಕ ಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದರು ಎಂಬುದನ್ನು ಕೇಳಿದ್ದೇವೆ. ಆದರೆ ಪ್ರಸ್ತುತ ಸಮಾಜದಲ್ಲಿ ಇಂತಹ ಘಟನೆಗಳು ಕಂಡುಬರುವುದು ಅಪರೂಪ. ಆದರೂ ಅಲ್ಲೊಂದು ಇಲ್ಲೊಂದರಂತೆ  ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇಲ್ಲೊಬ್ಬ ಮುದುಕ ಒಂದಲ್ಲ,ಎರಡಲ್ಲ, ಹತ್ತು- ಹದಿನೈದು, ಅಲ್ಲವೇ ಅಲ್ಲ.. ಬರೋಬ್ಬರಿ 37ನೇ ಪತ್ನಿಯನ್ನು ವರಿಸುವ ಮೂಲಕ ಸುದ್ದಿಯಾಗಿದ್ದಾನೆ. ಆತನ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುದುಕ 37ನೇ ವಿವಾಹವಾಗಿರೊದೇನೊ ನಿಜ. ಆದರೆ ಆತನಿಗೆ ಮಕ್ಕಳೆಷ್ಟು?. ಅವರಿಗೆ ಹುಟ್ಟಿರುವ ಅಂದರೆ ಮೊಮ್ಮಕ್ಕಳೆಷ್ಟು? ಈ ಬಗ್ಗೆ ತಿಳಿದುಕೊಂಡರೆ ಅಚ್ಚರಿಯಾಗೋದರಲ್ಲಿ ಅನುಮಾನವೇ ಇಲ್ಲ.  ಕುತೂಹಲಕಾರಿಯಾಗಿ ಈ ಘಟನೆ.

ಐಪಿಎಸ್​ ಅಧಿಕಾರಿ ರೂಫಿನ್​ ಶರ್ಮಾ ಅವರು ಟ್ವಿಟ್ಟರ್​ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. 45 ಸೆಕೆಂಡುಗಳ ಈ ವಿಡಿಯೋಗೆ ‘‘ಬ್ರೇವೆಸ್ಟ್​ ಮ್ಯಾನ್​.. ಲೀವಿಂಗ್​’’ ಎಂದು ಅಡಿಬರದ ನೀಡಿದ್ದಾರೆ. ಅದರ ಜೊತೆಗೆ 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳು ಮುಂದೆ 37ನೇ ಮದುವೆಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಘಟನೆ ಎಲ್ಲಿಯದ್ದು? ಆ ವ್ಯಕ್ತಿ ಯಾರು? ಈ ಬಗ್ಗೆ ಯಾವುದನ್ನು ಉಲ್ಲೇಖಿಸಿಲ್ಲ.


ಅನೇಕರು ವೈರಲ್​ ಆಗುತ್ತಿರುವ ಈ ವಿಡಿಯೋಗೆ ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಅದರಲ್ಲಿ ಒಬ್ಬರು ‘‘ ಇಲ್ಲಿಯವರೆಗೆ ನನಗೆ ಮದುವೆಯಾಗಲು ಧೈರ್ಯ ಬರಲಿಲ್ಲ ಆದರೆ ಈತ 37ನೇ ಮುದುಯಾಗಿದ್ದಾನೆ’’ ಎಂದು ಬರೆದಿದ್ದರೆ, ಮತ್ತೊಬ್ಬ ವ್ಯಕ್ತಿ ‘‘ ಈ ವಿಡಿಯೋ ವೀಕ್ಷಿಸಿದರೆ ಮದುವೆಯಾಗದೆ ಇರುವ ಸಿಂಗಲ್ಸ್​ ಸಾವನ್ನಪ್ಪಬಹುದು‘‘ ಎಂದ ತಮಾಷೆಯಾಗಿ ಕಾಮೆಂಟ್​ ಬರೆದಿದ್ದಾನೆ.
Published by: Harshith AS
First published: June 9, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories