ಕೆಲವೊಮ್ಮೆ ಸೋಶಿಯಲ್ ಮೀಡಿಯಾ(Social Media)ದಲ್ಲಿ ವಿಚಿತ್ರ ಅನ್ನಿಸುವಂತಹ ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಒಂದು ಕ್ಷಣ ಈ ವಿಡಿಯೋಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಹೌದು, ಇದೀಗ ಅಂತಹುವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದವರು ಒಂದು ಆಶ್ಚರ್ಯಚಕಿತರಾಗಿದ್ದುಂಟು. ಕೆಲ ನೆಟ್ಟಿಗರು ಪ್ರಾಣಿಗಳಿಗೆ (Animals) ನಾವು ಪ್ರೀತಿ ತೋರಿಸಿದ್ರೆ, ಅವುಗಳು ಸಹ ನಮಗೆ ಪ್ರತಿಯಾಗಿ ಪ್ರೀತಿ(Love)ಯನ್ನು ನೀಡುತ್ತವೆ. ಇಂತಹ ದೃಶ್ಯಗಳು ಸಮಾಜದಲ್ಲಿ ಪ್ರೀತಿಯನ್ನು ಪಸರಿಸುತ್ತವೆ ಎಂದು ಬರೆದುಕೊಂಡಿದ್ದಾರೆ. ಇಲ್ಲೋರ್ವ ವ್ಯಕ್ತಿ ನೀರಿನಲ್ಲಿ ಮೊಸಳೆ(Crocodile)ಯನ್ನು ಅಪ್ಪಿಕೊಂಡು, ಮುದ್ದಾಡುತ್ತಾ ಡ್ಯಾನ್ಸ್ ಮಾಡಿದ್ದಾನೆ.
ನದಿ ತೀರದ ಗ್ರಾಮಗಳಿಗೆ ಮೊಸಳೆಗಳು ಎಂಟ್ರಿ ಕೊಟ್ಟಾಗ ಗ್ರಾಮಸ್ಥರು ಭಯದಿಂದ ಹೊರಗೆ ಬರಲ್ಲ. ಮೊಸಳೆಯನ್ನು ಕಂಡ ಕೂಡಲೇ ಮನೆ ಸೇರಿಕೊಳ್ಳುತ್ತಾರೆ. ಆದ್ರೆ ಈ ವ್ಯಕ್ತಿ ಮಾತ್ರ ಯಾವುದೇ ಭಯವಿಲ್ಲದೇ ಮೊಸಳೆ ಜೊತೆಯೇ ಹೆಜ್ಜೆ ಹಾಕಿದ್ದಾನೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸುಮಾರು ಮೂರರಿಂದ ನಾಲ್ಕು ಅಡಿ ಆಳದ ನೀರಿನಲ್ಲಿ ವ್ಯಕ್ತಿ ನಿಂತಿದ್ದಾನೆ. ಆತನ ಬಾಹುಗಳಲ್ಲಿ ಮೊಸಳೆ ಬಂಧಿಯಾಗಿದೆ. ಮೊಸಳೆಯ ಮುಂಗಾಲನ್ನು ಕೈಯಲ್ಲಿ ಹಿಡಿದುಕೊಂಡು ಕಪಲ್ ಡ್ಯಾನ್ಸ್ ಮಾಡಿದ್ದಾನೆ. ಇನ್ನು ಮೊಸಳೆ ಸಹ ಆತನ ತಲೆ ಮೇಲೆ ತನ್ನ ಮುಖವನ್ನಿರಿಸಿ ಆನಂದಿಸಿದೆ. ಮೊಸಳೆ ಇಲ್ಲಿ ಆ ವ್ಯಕ್ತಿಗೆ ಯಾವುದೇ ಹಾನಿಯನ್ನ ಮಾಡಿಲ್ಲ. ವ್ಯಕ್ತಿ ಮತ್ತು ಮೊಸಳೆ ಪ್ರಣಯ ಜೋಡಿಗಳಂತೆ ವಿಹರಿಸಿದ್ದಾರೆ.
ಫ್ಲೋರಿಡಾದಲ್ಲಿ ಮಾತ್ರ ಮೊಸಳೆ ಜೊತೆ ನೃತ್ಯ ಮಾಡುವ ವ್ಯಕ್ತಿಯನ್ನು ನೋಡಲು ಸಾಧ್ಯ ಎಂದು ವಿಡಿಯೋ ಜೊತೆ ಬರೆಯಲಾಗಿದೆ. ಕೆಲ ದಿನಗಳ ಹಿಂದೆ Instagram ನ bitchreject ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೊತೆಗೆ ಈ ವಿಡಿಯೋವನ್ನು Quinton Glenn (alphaq1996) ಖಾತೆಯೊಂದಿಗೆ ಟ್ಯಾಗ್ ಮಾಡಲಾಗಿದೆ.
ಇದನ್ನೂ ಓದಿ: Viral Video: ತಾಯಿ ಮಾಡಿಕೊಟ್ಟ ತಿಂಡಿಗೆ ಪುಟ್ಟ ಹುಡುಗಿಯ ಅದ್ಭುತ ರಿಯಾಕ್ಷನ್, ತಿನ್ನೋದಷ್ಟೇ ಅಲ್ಲ, ಕಾಂಪ್ಲಿಮೆಂಟ್ಸ್ ಕೊಡಿ
alphaq1996 ಖಾತೆಯಲ್ಲಿ ಯುವಕನೋರ್ವ ವಿವಿಧ ಪ್ರಾಣಿಗಳ ಜೊತೆ ಇರೋದನ್ನು ನೋಡಬಹುದಾಗಿದೆ. ಇಲ್ಲಿ ಈ ಯುವಕ ಮೊಸಳೆಗಳನ್ನು ಸೆರೆ ಹಿಡಿದಿರುವ ಫೋಟೋಗಳಿವೆ.
ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್
ಇನ್ನೂ ಮೊಸಳೆ ಜೊತೆಗಿನ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಇದು ಅಸಲಿಯೋ ಅಥವಾ ನಕಲಿಯೋ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನೀವೂ ಅವಳನ್ನು (ಮೊಸಳೆ) ಅಷ್ಟೊಂದು ಆಳವಾಗಿ ಪ್ರೀತಿಸುತ್ತೀರಾ? ರೊಮ್ಯಾಂಟಿಕ್ ವಿಡಿಯೋ ಇದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ನೋಡ ನೋಡುತ್ತಿದ್ದಂತೆ ವ್ಯಕ್ತಿಯ ಮೇಲೆ ಮಲಗಿದ ಮೊಸಳೆ: ವಿಡಿಯೋ ನೋಡಿ
ಮೊಸಳೆ ಅಂದ್ರೆ ಒಂದು ಕ್ಷಣ ಭಯ ಆಗುತ್ತದೆ. ಇದು ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ. ಅಂತಹ ಅನೇಕ ವಿಡಿಯೋಗಳನ್ನು ನೋಡಿರಬಹುದು. ನೀರು ಕುಡಿಯಲು ಬರುವ ಪ್ರಾಣಿಗಳ ಮೇಲೆ ಮೊಸಳೆ ಆಕ್ರಮಣ ನಡೆಸುತ್ತವೆ. ಮೊಸಳೆಗಳು ಸಿಂಹಗಳ ಮೇಲೆಯೂ ದಾಳಿ ನಡೆಸುತ್ತವೆ ಅಂದ್ರೆ ನಂಬಲೇಬೇಕು.
ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಮೊಸಳೆಯು ಮಾನವನ ಎದೆಯ ಮೇಲೆ ಕುಳಿತಿರುವುದನ್ನು ಕಾಣಬಹುದು.
ಇದನ್ನೂ ಓದಿ: Animal Friendship: ಈ ಚಂದದ ಮೀನು ಮತ್ತೆ ಸ್ಟೈಲಿಷ್ ಡಾಗ್ ಈಗ ಬೆಸ್ಟ್ ಫ್ರೆಂಡ್ಸ್
ಇನ್ನೂ ಮೊಸಳೆ ಬಾಯಿಯನ್ನು ಬ್ಯಾಂಡ್ ನಿಂದ ಬಿಗಿದಿರೋದನ್ನು ನೋಡಬಹುದಾಗಿದೆ. ಹಾಗಾಗಿ ಮೊಸಳೆಗೆ ತನ್ನ ಬಾಯಿ ತೆಗೆಯಲು ಸಾಧ್ಯವಾಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಇದೊಂದು ಸಾಕು ಪ್ರಾಣಿಯಾಗಿದ್ದರಿಂದ ಆ ವ್ಯಕ್ತಿಯೊಂದಿಗೆ ಅನೋನ್ಯವಾಗಿದೆ ಎಂದು ಕಮೆಟಂಟ್ ಮಾಡಿದ್ದಾರೆ. ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ