Viral Video: ಈ ಸಮುದ್ರ ಹಾವಿನ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಾ..!

Huge Sea Snake: ಈ ವೀಡಿಯೋವನ್ನು ಎರಡು ದಿನಗಳ ಹಿಂದೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಹಾವು ಪ್ಯಾಡಲ್ ಬೋರ್ಡ್‌ವರೆಗೆ ತುಂಬಾ ವೇಗವಾಗಿ ಬಂದು ಅಸಹಜವಾದ ದಿಟ್ಟ ನಡವಳಿಕೆ ಪ್ರದರ್ಶಿಸಿದೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:

ನಾವು ಸಾಮಾನ್ಯವಾಗಿ ನಮ್ಮ ಕಡೆಗೆ ಬಿಡದೆ ಯಾವುದೋ ಒಂದು ಪ್ರಾಣಿ ನೋಡುತ್ತಿದ್ದರೆ, ಇನ್ನೇನು ಆ ಪ್ರಾಣಿ ನಮ್ಮ ಕಡೆಗೆ ಓಡಿ ಬಂದು ನಮ್ಮ ಮೇಲೆ ಆಕ್ರಮಣ ಮಾಡುತ್ತದೆ ಎಂಬ ಭಯ ನಮಗೆ ಶುರುವಾಗುತ್ತದೆ.ಅದರಲ್ಲೂ ಒಂದು ಉದ್ದವಾದ ಹಾವು ಆತನ ಕಡೆಗೆ ವೇಗವಾಗಿ ಬರುತ್ತಿರುವುದನ್ನು ನೋಡಿಯೂ ಅದರ ವಿಡಿಯೋವನ್ನು ಹೆದರದೆ ಮಾಡಿದ್ದಾರೆ ಎಂದರೆ ಆ ಮನುಷ್ಯ ಎಂತಹ ಧೈರ್ಯಶಾಲಿಯಾಗಿರಬೇಕು ನೀವೇ ನೋಡಿ.


ಆಸ್ಟ್ರೇಲಿಯಾದಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿರುವ ಬ್ರೊಡಿ ಮೋಸ್ ಎಂಬಾತನೆ ಈ ಧೈರ್ಯಶಾಲಿ ವ್ಯಕ್ತಿ ಎಂದರೆ ತಪ್ಪಾಗಲಾರದು. ಬ್ರೊಡಿ ಮೋಸ್ ಆಸ್ಟ್ರೇಲಿಯಾದ ಸಮುದ್ರದಲ್ಲಿ ಪ್ಯಾಡಲ್ ಬೋರ್ಡಿಂಗ್ ಮಾಡುತ್ತಿದ್ದಾಗ ಸಮುದ್ರ ಹಾವು ಅವನ ಬಳಿಗೆ ಸರಸರನೆ ಈಜಿ ಬರುತ್ತಿದ್ದದ್ದನ್ನು ಕಂಡು ಆ ದೃಶ್ಯವನ್ನು ತಾನು ಸ್ವಲ್ಪವೂ ಭಯ ಪಡದೇ ವಿಡಿಯೋ ಮಾಡಿದ್ದಾರೆ.


ಈ ವೀಡಿಯೋವನ್ನು ಎರಡು ದಿನಗಳ ಹಿಂದೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಹಾವು ಪ್ಯಾಡಲ್ ಬೋರ್ಡ್‌ವರೆಗೆ ತುಂಬಾ ವೇಗವಾಗಿ ಬಂದು ಅಸಹಜವಾದ ದಿಟ್ಟ ನಡವಳಿಕೆ ಪ್ರದರ್ಶಿಸಿದೆ.


ಸಮುದ್ರ ಹಾವುಗಳು ಸಾಮಾನ್ಯವಾಗಿ ಮಾನವರನ್ನು ಕಂಡ ಕೂಡಲೇ ತುಂಬಾ ದೂರ ಹೋಗುತ್ತವೆ, ಆದರೆ ವರ್ಷದ ಈ ಸಮಯದಲ್ಲಿ ಸಮುದ್ರ ಹಾವುಗಳು "ಲೈಂಗಿಕವಾಗಿ ತುಂಬಾ ನಿರಾಶೆಗೊಳಗಾಗಿರುತ್ತವೆ ಮತ್ತು ಆಕ್ರಮಣಕಾರಿ" ಆಗಿರುತ್ತವೆ ಎಂದು ಮೋಸ್ ವಿವರಿಸಿದರು.


"ಸಮುದ್ರ ಹಾವುಗಳು ಸಾಮಾನ್ಯವಾಗಿ ಮನುಷ್ಯರ ಹತ್ತಿರವೇ ಬರುವುದಿಲ್ಲ. ಆದರೆ ವರ್ಷದ ಈ ಸಮಯದಲ್ಲಿ ಅವುಗಳು ಸಂಗಾತಿಯ ಹುಡುಕಾಟದಲ್ಲಿ ತುಂಬಾನೇ ಸಕ್ರಿಯರಾಗಿರುತ್ತವೆ ಎಂದು ಅವರು ಈ ಭಯಾನಕ ವಿಡಿಯೋ ಹಂಚಿಕೊಂಡು ಅದರ ಶೀರ್ಷಿಕೆಯಲ್ಲಿ ಬರೆದಿದ್ದಾರೆ.View this post on Instagram


A post shared by YBS (@brodiemoss)

ವಿಡಿಯೋದಲ್ಲಿ ಹಾವು ಸಮುದ್ರದ ನೀರಿನ ಮೇಲ್ಭಾಗದಲ್ಲಿ ಕಾಣಿಸಿಕೊಂಡಿದೆ ಮತ್ತು ಕಣ್ಮರೆಯಾಗುವ ಮೊದಲು ಅವನನ್ನು ಹಿಂಬಾಲಿಸಿದೆ ಎಂದು ಮೋಸ್ ಹೇಳಿದ್ದಾರೆ. ಸರೀಸೃಪವು ತನ್ನ ತಲೆಯನ್ನು ಪ್ಯಾಡಲ್ ಬೋರ್ಡ್ ಮೇಲೆ ಕೆಲವು ಕ್ಷಣಗಳವರೆಗೆ ಇರಿಸಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ವಲ್ಪ ಸಮಯದ ನಂತರ ಆ ಹಾವು ತಿರುಗಿ ವೇಗವಾಗಿ ನೀರಿನಾಳಕ್ಕೆ ಹೋಗಿ ಬೇರೆ ಕಡೆಗೆ ಹೋಗುವುದನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ.


ಎರಡು ದಿನಗಳ ಹಿಂದೆ ಹಂಚಿಕೊಂಡಾಗಿನಿಂದ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಇದನ್ನು 85,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇದು ಟ್ವಿಟ್ಟರ್‌ನಂತಹ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ತುಂಬಾ ವೈರಲ್ ಆಗಿದೆ.


ವಿಡಿಯೋ ನೋಡಿದ ನೆಟ್ಟಿಗರು "ಆಸ್ಟ್ರೇಲಿಯನ್ನರು ನಿಜವಾದ ಜನರಲ್ಲ, ಆಸ್ಟ್ರೇಲಿಯಾದವರು ಅಪಾಯಕಾರಿ ಪ್ರಾಣಿಗಳನ್ನು ನೋಡುತ್ತಾ ಬೆಳೆಯುತ್ತಾರೆ” ಎಂದು ಒಬ್ಬ ಟ್ವಿಟ್ಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: ರೈಲು ಸ್ಪೀಡಾಗಿ ಹೋಗ್ತಿದ್ಯಾ.. ನಿಧಾನಕ್ಕೆ ಹೋಗ್ತಿದ್ಯಾ..? ಗೊಂದಲದಲ್ಲಿ ನೆಟ್ಟಿಗರು..!

ಈ ವಿಡಿಯೋ ಎರಡು ದಿನಗಳಲ್ಲಿ ಮೈಕ್ರೋಬ್ಲಾಗಿಂಗ್ ಮಾಧ್ಯಮದಲ್ಲಿ 4.9 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ‘ಕೋರಲ್ ರೀಫ್’ ಎಂದೂ ಕರೆಯಲ್ಪಡುವ ಸಮುದ್ರ ಹಾವುಗಳು ಹೆಚ್ಚಾಗಿ ನೀರಿನಲ್ಲಿ ವಾಸಿಸುವ ಸರ್ಪಗಳಾಗಿದ್ದು, ಇಲ್ಲಿಯವರೆಗೆ ಪತ್ತೆಯಾದ ಸಮುದ್ರ ಹಾವುಗಳು ಹೆಚ್ಚು ವಿಷಕಾರಿಯಾಗಿರುತ್ತವೆ ಎಂದು ಹೇಳಲಾಗುತ್ತದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: