ಇಲ್ಲೊಬ್ಬ ಯುವಕ ಕೇವಲ ನಡೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾನೆ. ಅರೇ ಅದು ಹೇಗೆ ಸಾಧ್ಯವೆಂದು ಅಂದುಕೊಂಡಿದ್ದೀರಾ! ಹೌದು. ಯುವಕನು ಫುಟ್ಬಾಲ್ ಚೆಂಡಿನೊಂದಿಗೆ ವಿಶಿಷ್ಟವಾಗಿ ನಡೆಯುವ ಭಂಗಿಯ ಮೂಲಕ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಗಿನ್ನಿಸ್ ದಾಖಲೆ ಮಾಡುವುದರ ಮೂಲಕ ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿದ್ದಾನೆ. ಅಮೆರಿಕದ ಯುವಕನಾದ ಈತ 32 ಅಡಿಗಳಿಗಿಂತ ಹೆಚ್ಚು ದೂರ ಮೂನ್ ವಾಕ್ ಮಾಡಿ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾನೆ.
"ಅಬೌಬಾಕರ್ ಟ್ರೋರ್ ನು 10 ಮೀ (32 ಅಡಿ 9.7 ಇಂಚು) ತಲೆಯ ಮೇಲೆ ಫುಟ್ಬಾಲ್ / ಸಾಕರ್ ಚೆಂಡನ್ನು ಇಟ್ಟುಕೊಂಡು ಮೂನ್‌ವಾಕ್ ಮಾಡಿದ್ದಾರೆ" ಎಂದು ಪೋಸ್ಟ್ ನಲ್ಲಿ ಜಿಡಬ್ಲ್ಯೂಆರ್ ಬರೆದಿದ್ದಾರೆ. ಇವನ ವಿಡಿಯೋ ಮನುಷ್ಯನ ಕೌಶಲ್ಯದಿಂದ ಮೂನ್ ವಾಕಿಂಗ್ ತೋರಿಸುತ್ತದೆ. ಇಲ್ಲಿ ನಂಬಲಾಗದ ಸಂಗತಿಯೆಂದರೆ ಅವನು ಚೆಂಡನ್ನು ಹೇಗೆ ಸಮತೋಲನಗೊಳಿಸುತ್ತಾನೆ ಎಂಬುದು ಅಚ್ಚರಿಯಾಗಿದೆ.
ಗಿನಿಯಾ ಮೂಲದ ಅಬೌಬಕರ್ ಟ್ರೋರ್ ನ ವಿಡಿಯೋ, 2019ರಿಂದಲೂ ಅಂತರ್ಜಾಲದಲ್ಲಿ ನೋಡುಗರ ಕಣ್ಣುಗಳನ್ನು ಆಕರ್ಷಿಸುತ್ತಿದೆ. ಏಕೆಂದರೆ ವೀಕ್ಷಕರು ಅವನ ತಲೆಯ ಮೇಲೆ ಸಮತೋಲಿತ ಫುಟ್ಬಾಲ್ ನೊಂದಿಗೆ ಮೃದುವಾದ ಮೂನ್ ವಾಕ್ ಅನ್ನು ಪ್ರದರ್ಶಿಸುತ್ತಾನೆ. ಫೆಬ್ರವರಿ 28, 2019 ರಂದು ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಟ್ರೌರೆ, ಫುಟ್ಬಾಲ್ ಅನ್ನು ತನ್ನ ತಲೆಯ ಮೇಲೆ ಸಂಪೂರ್ಣವಾಗಿ ಸಮತೋಲನಗೊಳಿಸಿ ಹತ್ತು ಮೀಟರ್ (32 ಅಡಿಗಳಿಗಿಂತ ಹೆಚ್ಚು) ಮೂನ್ ವಾಕ್ ಮಾಡಿ ವಿಶ್ವ ಗಿನ್ನಿಸ್ ದಾಖಲೆಯನ್ನು ರಚಿಸಿದ.
ಇದನ್ನೂ ಓದಿ: ಚಲಿಸುವ ರೈಲಿನಡಿ ಸಿಲುಕಿದವನನ್ನು ಬಚಾವ್ ಮಾಡಿದ ರೈಲ್ವೆ ಸಿಬ್ಬಂದಿ; ವಿಡಿಯೋ ವೈರಲ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಬುಧವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಟ್ರೋರ್ ಹತ್ತು ಅಡಿ ಮತ್ತು 9.7 ಇಂಚುಗಳಷ್ಟು ಸಮತೋಲನವನ್ನು ಮಾಡುತ್ತಾನೆ. ಅವನು ಮೂನ್ ವಾಕ್ ಮಾಡುತ್ತಾ, ಮನೋಹರವಾಗಿ ಫುಟ್‌ಬಾಲ್ ಅನ್ನು ತನ್ನ ತಲೆಯಿಂದ ಕೆಳಕ್ಕೆ ತರುತ್ತಾನೆ ಮತ್ತು ಅದರೊಂದಿಗೆ ಕೆಲವು ಆಸಕ್ತಿದಾಯಕ ತಂತ್ರಗಳನ್ನು ಮಾಡುತ್ತಾನೆ. ವಿಡಿಯೋವನ್ನು ಹಂಚಿಕೊಂಡಾಗಿನಿಂದ 53.7 ಸಾವಿರ ಲೈಕ್‌ಗಳನ್ನು ಗಳಿಸಿದ್ದಾನೆ. ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸುತ್ತಾ, ಇನ್ನೊಬ್ಬ ಫ್ರೀ ಸ್ಟೈಲ್ ಕಲಾವಿದ ಬೆನ್ ನುಟಾಲ್, “ಸುಗಮವಾಗಿದೆ” ಎಂದು ಸಂದೇಶವನ್ನು ಬರೆಯುವುದರ ಮೂಲಕ ಟ್ರೋರ್ ನ ಮೂನ್ ವಾಕ್ ಅನ್ನು ಹೊಗಳಿದ್ದಾರೆ.
View this post on Instagram
ಟ್ರೌರ್ ಲುಜಿಯಾ ಪ್ರದರ್ಶನದಲ್ಲಿ ಸಾಕರ್-ಪ್ರೇರಿತ ನೃತ್ಯ ಚಲನೆಗಳನ್ನು ಮಾಡುತ್ತಾನೆ. ಇದಲ್ಲದೆ, ಈಗಾಗಲೇ ಒಂದು ವಿಶ್ವ ದಾಖಲೆಯೊಂದಿಗೆ, ಟ್ರೋರ್ ಮತ್ತೆ ಹೊಸ ರೀತಿಯ ದಾಖಲೆ ಸಾಧಿಸಲು ಯೋಜನೆ ರೂಪಿಸಿದ್ದಾನೆಂದು ಹೇಳಲಾಗುತ್ತಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ, ಟ್ರೋರ್ ನ ಕೌಶಲ್ಯಗಳು ನೆಟ್ಟಿಗರ ಕಣ್ಣನ್ನು ಕುಕ್ಕಿದೆ. ಹಲವಾರು ಜನರು ಫುಟ್ಬಾಲ್ ಆಟಗಾರನ ಪರಿಪೂರ್ಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋ ಕ್ಲಿಪ್ ನ ಕಾಮೆಂಟ್ ವಿಭಾಗದಲ್ಲಿ ಪ್ರಶಂಸೆಯ ಸಂದೇಶಗಳ ಮೂಲಕ ಸುರಿಮಳೆಗೈದಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಸಾವಿರಾರು ಜನರಿಂದ ಮೆಚ್ಚುಗೆಯ ಸಂದೇಶಗಳ ಮೂಲಕ ಟ್ರೋರ್ ಅವರ ವಿಡಿಯೋ ಪ್ರಖ್ಯಾತಗೊಂಡಿದ್ದು, ಟ್ರೋರ್ ಅವರು ಮತ್ತಷ್ಟು ಹೊಸ ದಾಖಲೆಯನ್ನು ಮಾಡುವ ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ