ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ; ದಂಡದಿಂದ ತಪ್ಪಿಸಿಕೊಳ್ಳಲು ಯುವಕ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್!

ಕೈಯಲ್ಲಿ ಒಂದು ಚೀಲವನ್ನು ಹಿಡಿದಿದ್ದ ಆ ವ್ಯಕ್ತಿಯು, ಟಿಕೆಟ್‌ಗಾಗಿ ಸಾರಿಗೆ ಸಿಬ್ಬಂದಿ ಸಮೀಪಿಸುತ್ತಿರುವುದನ್ನು ನೋಡಿ ರೈಲಿನ ಸಣ್ಣ ಕಿಟಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.

ಚಲಿಸುವ ರೈಲಿನಲ್ಲಿ ಯುವಕನ ಸಾಹಸ

ಚಲಿಸುವ ರೈಲಿನಲ್ಲಿ ಯುವಕನ ಸಾಹಸ

  • Share this:
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಅಂದಮೇಲೆ ಹಣ ಪಾವತಿಸಿ ಟಿಕೆಟ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಪ್ರಯಾಣ ಮಾಡಲು ಸಾರಿಗೆ ಸಿಬ್ಬಂದಿ ಅವಕಾಶ ನೀಡುವುದಿಲ್ಲ. ಕೆಲವೊಮ್ಮೆ, ಕೆಲವು ಜನರು ವಿಚಿತ್ರವಾಗಿ ಆಡುತ್ತಾರೆ ಮತ್ತು ಯಾರೂ ಊಹಿಸಲಾಗದ ಕೆಲಸಕ್ಕೆ ಕೈ ಹಾಕುತ್ತಾರೆ. ಇತ್ತೀಚೆಗೆ, ಉಕ್ರೇನ್‌ನಲ್ಲಿ ಚಲಿಸುವ ಟ್ರಾಮ್ (ರೈಲು)‌ನಿಂದ ವ್ಯಕ್ತಿಯೊಬ್ಬ ಜಿಗಿಯುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಫೇಸ್‌ಬುಕ್ ಬಳಕೆದಾರರಾದ ತಾರಸ್ ಖ್ವಿಲ್ ಎಂಬುವವರು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ನೀಲಿ ಡೆನಿಮ್ ಜೀನ್ಸ್ ಮತ್ತು ಕಪ್ಪು ಜಾಕೆಟ್ ಹಾಗೂ ನಿಯಾನ್ ಟೀ ಶರ್ಟ್ ಧರಿಸಿರುತ್ತಾನೆ.

ಕೈಯಲ್ಲಿ ಒಂದು ಚೀಲವನ್ನು ಹಿಡಿದಿದ್ದ ಆ ವ್ಯಕ್ತಿಯು, ಟಿಕೆಟ್‌ಗಾಗಿ ಸಾರಿಗೆ ಸಿಬ್ಬಂದಿ ಸಮೀಪಿಸುತ್ತಿರುವುದನ್ನು ನೋಡಿ ರೈಲಿನ ಸಣ್ಣ ಕಿಟಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಕಿಟಕಿ ತುಂಬಾ ಕಿರಿದಾಗಿದ್ದು, ಅದರಿಂದ ತಪ್ಪಿಸಿಕೊಳ್ಳುವುದನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿ ಚಾಕಚಕ್ಯತೆಯಿಂದ ತನ್ನ ದೇಹವನ್ನು ಆ ಚಿಕ್ಕ ಕಿಟಕಿಯೊಳಗೆ ತೂರಿಸಿಕೊಂಡು ಗಾಯಗೊಳ್ಳದೇ ಹೊರಗೆ ಹೋಗಲು ಯಶಸ್ವಿಯಾಗುತ್ತಾನೆ. ಅಷ್ಟೇ ಅಲ್ಲದೇ ಅವನು ತನ್ನ ಚೀಲವನ್ನು ತನ್ನೊಂದಿಗೆ ಹೊರತೆಗೆಯುವಲ್ಲಿ ಯಶಸ್ವಿಯಾದನು. ಇದೆಲ್ಲವೂ ಟ್ರಾಮ್‌ (ರೈಲು) ಟಿಕೆಟ್‌ಗೆ ಹಣ ನೀಡುವುದನ್ನು ತಪ್ಪಿಸಿಕೊಳ್ಳಲು ಮಾಡಿರುತ್ತಾನೆ.

ವಿಡಿಯೋವನ್ನು ಹಂಚಿಕೊಂಡ ತಾರಸ್, ಇಡೀ ಘಟನೆಯನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, “ಪೊಲೀಸರು ಬರುವ ಮೊದಲು ಅಪರಾಧಿಗಳು ಓಡಿಹೋಗುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಘಟನೆ ಉಕ್ರೇನ್‌ನ ಚೆರ್ಕಾಸಿ ಒಬ್ಲಾಸ್ಟ್ ಎಂಬ ನಗರದಲ್ಲಿ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ವರದಿಯ ಪ್ರಕಾರ, ಟಿಕೆಟ್ ರಹಿತ ಪ್ರಯಾಣಿಕರಿಗೆ ಟಿಕೆಟ್ ತೋರಿಸಲು ಕೇಳಲಾಯಿತು. ಆದರೆ ಟಿಕೆಟ್ ಪಾವತಿಸಲು ಸಾಧ್ಯವಾಗದಿದ್ದಾಗ ಆ ವ್ಯಕ್ತಿ ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಮ್‌ನಿಂದ ಹೊರಗೆ ಜಿಗಿದರು ಎಂದು ತಿಳಿದು ಬಂದಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಆ ವ್ಯಕ್ತಿಯನ್ನು ಬೆಂಬಲಿಸುತ್ತಿದ್ದರೆ, ಇತರರು ಅವನ ಟ್ರಾಮ್‌ನಿಂದ ಜಿಗಿದು ಓಡಿಹೋಗಿದ್ದನ್ನು ಖಂಡಿಸುತ್ತಿದ್ದಾರೆ. “ಬಹುಶಃ ಅವನ ಬಳಿ ಹಣವಿರಲಿಲ್ಲ. ಮತ್ತು ಗಾಡಿಯ ಬಾಗಿಲು ಮುಚ್ಚಿರಬಹುದು. ಆದ್ದರಿಂದ ಬೇರೆ ದಾರಿ ಕಾಣದೇ ಆ ವ್ಯಕ್ತಿ ಕಿಟಕಿ ಮಾರ್ಗದ ಮೂಲಕ ಪರಾರಿ ಆದನು. ಅವರ ಉದ್ಯಮಶೀಲತಾ ಮನೋಭಾವಕ್ಕಾಗಿ ನಾನು ಅವನನ್ನು ಬೆಂಬಲಿಸುತ್ತೇನೆ." ಎಂದು ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ. ಮತ್ತೊಂದು ಕಾಮೆಂಟ್ "ಪ್ರಯಾಣಿಕನು ಬಹುಶಃ ಕುಡಿದು ಅಥವಾ ಮಾದಕವಸ್ತುಗಳ ಸೇವನೆ ಮಾಡಿರಬಹುದು. ಇಂತಹ ಮದ್ಯವ್ಯಸನಿಗಳೇ ಅತಿರೇಕದ ಸಾಹಸವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.
Published by:Sushma Chakre
First published: