HOME » NEWS » Trend » VIRAL VIDEO MAKE SCHOOL A SAFE PLACE MALAYSIAN TEENAGER SLAMS RAPE JOKES BY TEACHER VIDEO GOES VIRAL STG SCT

Viral Video: ಅತ್ಯಾಚಾರದ ಬಗ್ಗೆ ಹಾಸ್ಯ ಮಾಡಿದ ಶಿಕ್ಷಕನಿಗೆ ವಿಡಿಯೋ ಮೂಲಕ ತಿರುಗೇಟು ನೀಡಿದ ಮಲೇಷ್ಯಾ ಬಾಲಕಿ

ಅತ್ಯಾಚಾರದ ಹಾಸ್ಯಗಳು, ಸೆಕ್ಸಿಸ್ಟ್ ಟೀಕೆಗಳು ಮತ್ತು ಬಾಡಿ ಶೇಮಿಂಗ್ ಬಗ್ಗೆ ಬಲವಾದ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಸಚಿವಾಲಯ ಗುರುವಾರ ಕರೆ ನೀಡಿದ್ದು, ಪೊಲೀಸರು ಐನ್ ದೂರಿನ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

news18-kannada
Updated:May 2, 2021, 7:39 AM IST
Viral Video: ಅತ್ಯಾಚಾರದ ಬಗ್ಗೆ ಹಾಸ್ಯ ಮಾಡಿದ ಶಿಕ್ಷಕನಿಗೆ ವಿಡಿಯೋ ಮೂಲಕ ತಿರುಗೇಟು ನೀಡಿದ ಮಲೇಷ್ಯಾ ಬಾಲಕಿ
ಐನ್ ಹುಸ್ನಿಜಾ ಸೈಫುಲ್ ನಿಜಾಮ್
  • Share this:
ಮಲೇಷ್ಯಾದ ಬಾಲಕಿ ಐನ್ ಹುಸ್ನಿಜಾ ಸೈಫುಲ್ ನಿಜಾಮ್ ಕಳೆದ ವಾರ ಶಾಲೆಯಿಂದ ಮನೆಗೆ ಬಂದು ಟಿಕ್‌ಟಾಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದರು. ತರಗತಿಯ ಸಮಯದಲ್ಲಿ ಅತ್ಯಾಚಾರದ ಬಗ್ಗೆ ಹೇಳಲಾದ ಹಾಸ್ಯದ ಬಗ್ಗೆ ಪುರುಷ ಶಿಕ್ಷಕನ ವಿರುದ್ಧ ಮಾಡಲಾದ ಈ ವಿಡಿಯೋ ವೈರಲ್‌ ಆಗಿದೆ. ಆಗ್ನೇಯ ಏಷ್ಯಾದ ದೇಶದಲ್ಲಿ ಲೈಂಗಿಕ ಶಿಕ್ಷಣ, ದುರ್ಬಳಕೆ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗೆ ನಾಂದಿ ಹಾಡಿದ ಈ ವಿಡಿಯೋ ಅಹೋರಾತ್ರಿ ವೈರಲ್ ಆಗಿದೆ. ಇದಕ್ಕೆ ಕಾರಣ ಅಲ್ಲಿ ಇಂತಹ ವಿಷಯಗಳನ್ನು ಹೆಚ್ಚಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಬಾಲಕಿ ಐನ್‌ ರಾಯಿಟರ್ಸ್‌ ಜತೆಗೆ ಮಾತನಾಡಿದ್ದು, “ಹಲವಾರು ವಿದ್ಯಾರ್ಥಿಗಳು ತಮ್ಮ ಕತೆಗಳೊಂದಿಗೆ ಮುಂದೆ ಬರುತ್ತಿದ್ದಾರೆ… ಆದರೆ ವಿದ್ಯಾರ್ಥಿಗಳು ಏನು ಹೇಳಲು ಹೊರಟಿದ್ದರೋ ಆ ಬಗ್ಗೆ ಜನರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮತ್ತು ನನಗೆ, ಅದು ತುಂಬಾ ದುಃಖಕರವಾಗಿದೆ'' ಎಂದು ಹೇಳಿದಳು.

ಜಪಾನಿನ ಅನಿಮೆ ನೋಡುವುದನ್ನು ಮತ್ತು ಡ್ರಾಯಿಂಗ್ ಮಾಡಲು ಇಷ್ಟಪಡುವ 17 ವರ್ಷದ ಬಾಲಕಿ, ತಾನು ಯಾವಾಗಲೂ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ಆದರೆ, ಈ ವಿಡಿಯೋಗೆ ಇಷ್ಟು ದೊಡ್ಡ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾಳೆ. ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ 1.4 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

#MakeSchoolASaferPlace ಎಂಬ ಹ್ಯಾಶ್‌ಟ್ಯಾಗ್ ರಚಿಸಲು ಚರ್ಚೆಯು ಅವಳನ್ನು ಪ್ರೇರೇಪಿಸಿತು. ಅಲ್ಲದೆ, ಇದು ಇತರ ಹದಿಹರೆಯದವರು ಶಾಲೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ವರ್ಣಭೇದ ನೀತಿಯಂತಹ ಇತರ ವಿಷಯಗಳ ಬಗ್ಗೆ ಮುಂದೆ ಬರಲು ಪ್ರೋತ್ಸಾಹಿಸುತ್ತದೆ ಎಂದು ವಿದ್ಯಾರ್ಥಿನಿ ಆಶಿಸಿದ್ದಾಳೆ.

"ನಮ್ಮ ಆಂದೋಲನವು ಪ್ರತಿ ವಿದ್ಯಾರ್ಥಿಗೆ ಶಾಲೆಯನ್ನು ಸುರಕ್ಷಿತ ವಾತಾವರಣವನ್ನಾಗಿ ಮಾಡುವಲ್ಲಿ ಕೇಂದ್ರೀಕರಿಸುತ್ತದೆ. ನೀವು ಹುಡುಗರೇ ಆಗಿರಲಿ ಅಥವಾ ಹುಡುಗಿಯರೇ ಆಗಿರಲಿ - ಯಾವುದೇ ಲಿಂಗವಾಗಿದ್ದರೂ ಸರಿ'' ಎಂದು ಐನ್ ಹುಸ್ನಿಜಾ ಸೈಫುಲ್ ನಿಜಾಮ್ ಹೇಳಿದಳು.

ಐನ್ ತನ್ನ ಶಾಲೆಯ ಬಗ್ಗೆ ನಕಾರಾತ್ಮಕ ಗಮನವನ್ನು ಸೆಳೆಯುತ್ತಿದ್ದಾಳೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರೋಪಿಸುತ್ತಿದ್ದಂತೆ ಆ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್ ಆಗಲು ಪ್ರಾರಂಭವಾಯ್ತು ಎಂದು ಐನ್‌ ಕಂಡುಕೊಂಡಿದ್ದಾಳೆ. ಅಲ್ಲದೆ, ಅವಳು ಶಾಲೆಯ ಸಹಪಾಠಿಯಿಂದ ಅತ್ಯಾಚಾರದ ಬೆದರಿಕೆಯನ್ನು ಸಹ ಪಡೆದುಕೊಂಡಿದ್ದು, ಜೊತೆಗೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವಳ ಬಗ್ಗೆ ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದಾರೆ.



ಇನ್ನು, ಈ ಬಗ್ಗೆ ಐನ್ ಅವರ ಪೋಷಕರು ಹೇಗೆ ಪ್ರತಿಕ್ರಿಯಿಸಬೇಕು ಎಂದು ಅವರಿಗೂ ಆರಂಭದಲ್ಲಿ ಖಚಿತತೆ ಇರಲಿಲ್ಲ. ಆದರೆ, ಶಿಕ್ಷಕರ ಟೀಕೆಗಳನ್ನು ಮತ್ತು ಅತ್ಯಾಚಾರದ ಬೆದರಿಕೆಯನ್ನು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

"ನಾವು ಸಾಮಾನ್ಯರಂತೆ ವರ್ತಿಸಿದರೆ, ಅಥವಾ ಕೇವಲ ''ಜೋಕ್‌'' ಎಂದು ಆ ಟೀಕೆಗಳನ್ನು ಹಾಗೇ ಬಿಟ್ಟರೆ.. ನನ್ನ ಕಿರಿಯ ಮಕ್ಕಳಿಗೂ ಸಹ ಶಿಕ್ಷಕರೊಂದಿಗೆ ಬಹುಶ: ಅದೇ ರೀತಿಯ ಅನುಭವವನ್ನು ಹೊಂದಬಹುದು'' ಎಂದು ಐದು ಮಕ್ಕಳನ್ನು ಹೊಂದಿರುವ ಐನ್ ಅವರ ತಾಯಿ ನಾರ್ಶಾನಿಜಾ ಷರೀಫುಡಿನ್ ಹೇಳಿದರು.

ಅತ್ಯಾಚಾರದ ಹಾಸ್ಯಗಳು, ಸೆಕ್ಸಿಸ್ಟ್ ಟೀಕೆಗಳು ಮತ್ತು ಬಾಡಿ ಶೇಮಿಂಗ್ ಬಗ್ಗೆ ಬಲವಾದ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಸಚಿವಾಲಯ ಗುರುವಾರ ಕರೆ ನೀಡಿದ್ದು, ಪೊಲೀಸರು ಐನ್ ದೂರಿನ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದರ ಜತೆಗೆ, ಈ ಬಗ್ಗೆ ತನಿಖೆ ನಡೆಸುವುದಾಗಿ ದೇಶದ ಶಿಕ್ಷಣ ಸಚಿವಾಲಯ ಸಹ ಬುಧವಾರ ತಿಳಿಸಿದೆ.

ಐನ್ ನಂತಹ ವಿದ್ಯಾರ್ಥಿಗಳು ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತಿದ್ದಾರೆ, ಅವರು ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಲು ಹೆದರುವುದಿಲ್ಲ. "ಈ ವಿದ್ಯಾರ್ಥಿಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ಶಿಕ್ಷಕರು ಮತ್ತು ನಾಯಕರು ತಿಳಿದುಕೊಳ್ಳುವುದು ಬಹಳ ಮುಖ್ಯ" "ಇದು ತಂತ್ರಜ್ಞಾನಕ್ಕೆ ಮತ್ತು ಅವರು ಬಯಸುವ ಯಾವುದೇ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದಿರುವ ಪೀಳಿಗೆಯಾಗಿದೆ ಮತ್ತು ಇದು ವಿಶ್ವಾದ್ಯಂತ ತಲುಪಬಹುದು. " ಎಂದು ಶಿಕ್ಷಣ ವಕಾಲತ್ತು ಗುಂಪಿನ ಪೆಮಿಂಪಿನ್ ಜಿಎಸ್ಎಲ್‌ನ ಚೆರಿಲ್ ಫರ್ನಾಂಡೊ ಅಭಿಪ್ರಾಯ ಪಟ್ಟಿದ್ದಾರೆ.
First published: May 2, 2021, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories