ಆಸ್ಪತ್ರೆಯಲ್ಲೇ ಕೊರೋನಾ ರೋಗಿಯೊಂದಿಗೆ ಮದುವೆಯಾದ ಕೇರಳದ ಯುವತಿ!

ಮದುಮಗನಿಗೆ ಕೋವಿಡ್ ಕಾಣಿಸಿಕೊಂಡು ಕೇರಳದ ಅಲಫುಳ ವಂದನಮ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ ನಿಗದಿಯಂತೆ ಆಸ್ಪತ್ರೆಗೆ ಪಿಪಿಇ ಕಿಟ್ ಧರಿಸಿ ಬಂದ ಮದುಮಗಳು ಆತನನ್ನು ವರಿಸಿದ್ದಾಳೆ.

ಕೇರಳದ ಆಸ್ಪತ್ರೆಯಲ್ಲಿ ಕೊರೋನಾ ರೋಗಿಯ ಮದುವೆ

ಕೇರಳದ ಆಸ್ಪತ್ರೆಯಲ್ಲಿ ಕೊರೋನಾ ರೋಗಿಯ ಮದುವೆ

  • Share this:
ಕಳೆದ ವರ್ಷ ಮಧುಮಗಳಿಗೆ ಕೋವಿಡ್ ಬಂದ ಕಾರಣ ಆಕೆ ಪಿಪಿಇ ಕಿಟ್ ಧರಿಸಿ ಕೋವಿಡ್ ಸೆಂಟರ್‌ನಲ್ಲೇ ಮದುವೆ ಮಾಡಿಕೊಂಡಿದ್ದ ಘಟನೆ ರಾಜಸ್ತಾನದ ಬರಾದಲ್ಲಿ ನಡೆದಿತ್ತು. ಇನ್ನು ಯುಎಸ್‍ನ ಕ್ಯಾಲಿಫೋರ್ನಿಯಾದಲ್ಲಿ ಮದುಮಗಳು ಲಾರೇನ್ ಕೋವಿಡ್‍ನಿಂದ ಹೋಂ ಕ್ವಾರಂಟೈನ್‍ನಲ್ಲಿದ್ದ ವೇಳೆ ಪಾಟ್ರಿಕ್ ಡೆಲ್ಗಾಡೋ ಅವರನ್ನು ಮದುವೆಯಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಖುಷಿಪಟ್ಟಿದ್ದರು. ಇದೀಗ ಈ ವರ್ಷ ಕೋವಿಡ್ ಎರಡನೇ ಅಲೆಯ ಭೀಕರತೆಯ ನಡುವೆ ಕೋವಿಡ್ ಆಸ್ಪತ್ರೆಯಲ್ಲಿ ಕೇರಳದ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಹೌದು, ಮದುಮಗನಿಗೆ ಕೋವಿಡ್ ಕಾಣಿಸಿಕೊಂಡು ಕೇರಳದ ಅಲಫುಳ ವಂದನಮ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ ನಿಗದಿಯಂತೆ ಆಸ್ಪತ್ರೆಗೆ ಪಿಪಿಇ ಕಿಟ್ ಧರಿಸಿ ಬಂದ ಮದುಮಗಳು ಆತನನ್ನು ವರಿಸಿದ್ದಾಳೆ. ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಕೇರಳದ ಅಲಪ್ಪುಜಾ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿವಾಹ ಜರುಗಿತು.

ಕೋವಿಡ್ ಸೋಂಕು ಪ್ರತಿದಿನ ಹೆಚ್ಚಳವಾಗುತ್ತಿರುವುದನ್ನು ಅರಿತ ಮಧುಮಗಳು ಅಭಿರಾಮಿ, ಮಧುಮಗ ಶರತ್ ಮಾನ್ ಮುಂದಿನ ಪರಿಸ್ಥಿತಿ ಅರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮದುವೆ ಮುಗಿಸಿಕೊಳ್ಳುವುದಾಗಿ ನಿರ್ಧರಿಸಿದರು. ಅಲ್ಲದೆ ವರನ ತಾಯಿಗೂ ಕೊರೋನಾ ಕಾಣಿಸಿಕೊಂಡಿತ್ತು. ಅವರು ಸಹ ಅಲಪ್ಪುಳ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ ಕಾರಣ ವಧುವಿನ ಸಂಬಂಧಿಕರು ಸಾಂಪ್ರದಾಯಿಕವಾಗಿ ಅವರೇ ಮುಂದೆ ನಿಂತು ಮದುವೆ ಮುಗಿಸಿದರು. ಮೊದಲು ತಾಳಿ ಕಟ್ಟಿದ ವರ ನಂತರ ಸಂಪ್ರದಾಯದಂತೆ ತುಳಸಿ ಹಾರ ಬದಲಾಯಿಸಿಕೊಂಡರು. ಒಟ್ಟಿನಲ್ಲಿ ಕೇರಳ ಸಂಪ್ರದಾಯದಂತೆ ಇವರಿಬ್ಬರ ವಿವಾಹ ಜರುಗಿದೆ.ಗಲ್ಫ್ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವರ ಶರತ್ ಮಾನ್ ಅವರ ತಾಯಿ ಜಿಜಿಮೋಲ್‍ಗೆ ನೆಲೆಸಿದ್ದರು. ಅವರ ತಾಯಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ವರ್ಷದ ಹಿಂದೆಯೇ ಶರತ್ ಮಾನ್ ಹಾಗೂ ಅಭಿರಾಮಿ ವಿವಾಹ ನಿಶ್ಚಯವಾಗಿತ್ತು. ತಾಯಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಶರತ್ ಕೂಡ ಕ್ವಾರಂಟೈನ್ ಮುಗಿಸಿ ಗಲ್ಫ್‌ನಿಂದ ಮರಳಿದ್ದರು. ಆದರೆ ಕಳೆದ ವಾರ ಮಧ್ಯರಾತ್ರಿ ತಾಯಿಗೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಮೊದಲು ತಳಪತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಅಲಪ್ಪುಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಗ ಶರತ್‍ಮಾನ್ ಕೂಡ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಅವರಿಗೂ ಕೋವಿಡ್ ದೃಢಪಟ್ಟಿತ್ತು. ಆದ ಕಾರಣ ಇವರಿಬ್ಬರೂ ಅಲಪ್ಪುಳ ಸರ್ಕಾರಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು.

ಇವರಿಬ್ಬರ ಮದುವೆ ಮುಹೂರ್ತವನ್ನು ಮುಂದೂಡಲು ಇಷ್ಟಪಡದ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಬಳಿ ಮುನ್ನೆಚ್ಚರಿಕೆ ಕ್ರಮಕೈಗೊಂಡು ಮದುವೆ ಮಾಡುವುದಾಗಿ ಮನವಿ ಮಾಡಿಕೊಂಡಿದ್ದರು. ಇವರ ಮನವಿಯನ್ನು ಮಾನ್ಯ ಮಾಡಿದ ಜಿಲ್ಲಾಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಮದುವೆಗೆ ಅನುಮತಿ ನೀಡಿತು. ಈ ವೇಳೆ ವಧುವಿನ ಸಂಬಂಧಿಕರೊಬ್ಬರನ್ನು ಬಿಟ್ಟರೆ ಮತ್ಯಾರಿಗೂ ಅವಕಾಶ ಇರಲಿಲ್ಲ.

ಹೀಗೆ ಕೋವಿಡ್ ಯಾವ ಸಂದರ್ಭದಲ್ಲಿ ಯಾರಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರು ನಮ್ಮ ಎಚ್ಚರಿಕೆಯಲ್ಲಿ ಇರುವುದು ಬಹುಮುಖ್ಯ.
Published by:Sushma Chakre
First published: