Kangaroo In Bar: ಬಾರ್​​ಗೆ ಬಂದ ಕಾಂಗರೂ! ಕುಡಿಯೋಕೆ ಬಂದವರ ರಿಯಾಕ್ಷನ್ ಹೇಗಿತ್ತು ನೋಡಿ

ವಿಡಿಯೋದಲ್ಲಿ ಕಾಂಗರೂವೊಂದು (Kangaroo) ಬಾರ್ ಒಂದರ ಒಳಗೆ ಪ್ರವೇಶಿಸುತ್ತಿರುವ ದೃಶ್ಯವಿದೆ. ಅಷ್ಟು ದೊಡ್ಡ ಕಾಂಗರೂ ಬಾರ್ ಒಳಗೆ ತಮ್ಮ ಮುಂದೆಯೇ ನಡೆದು ಹೋಗುತ್ತಿದ್ದರೂ ಅಲ್ಲಿದ್ದ ಜನ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿರುವ ಸೋಜಿಗದ ಸಂಗತಿಯನ್ನು ನಾವು ಅದರಲ್ಲಿ ಕಾಣಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಂಗರೂಗಳ ನಾಡು ಆಸ್ಟ್ರೇಲಿಯದಲ್ಲಿ (Australia) ಸೆರೆ ಹಿಡಿಯಲಾದ ವಿಡಿಯೋವೊಂದು (Video) ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಕಾಂಗರೂವೊಂದು (Kangaroo) ಬಾರ್ ಒಂದರ ಒಳಗೆ ಪ್ರವೇಶಿಸುತ್ತಿರುವ ದೃಶ್ಯವಿದೆ. ಅಷ್ಟು ದೊಡ್ಡ ಕಾಂಗರೂ ಬಾರ್ ಒಳಗೆ ತಮ್ಮ ಮುಂದೆಯೇ ನಡೆದು ಹೋಗುತ್ತಿದ್ದರೂ ಅಲ್ಲಿದ್ದ ಜನ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿರುವ ಸೋಜಿಗದ ಸಂಗತಿಯನ್ನು ನಾವು ಅದರಲ್ಲಿ ಕಾಣಬಹುದು. ನಮ್ಮ ದೇಶದಲ್ಲಿ ಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಹಸುಗಳು, ಮಂಗಗಳು, ಕುರಿಗಳು, ನಾಯಿಗಳು ಎಲ್ಲೆಂದರಲ್ಲಿ, ಎಗ್ಗುಸಿಗ್ಗಿಲ್ಲದೆ ಓಡಾಡುವುದು ಸಾಮಾನ್ಯ ಸಂಗತಿ. ಒಮ್ಮೊಮ್ಮೆ ಕಾಡು ಪ್ರಾಣಿಗಳು (Wild Animals) ನಾಡಿಗೆ ದಾಳಿ ಇಡುವುದುಂಟು. ಆದರೆ, ಆಸ್ಟ್ರೇಲಿಯಾದಲ್ಲಿ ಕಾಂಗರೂವೊಂದು, ಅದೂ ಬಾರ್‌ಗೆ ಪ್ರವೇಶಿಸುವುದು ಎಂದರೆ ಏನು ಕಥೆ ಅನ್ನುತ್ತೀರಾ..?

ಇದೇನು ಅಸಾಮಾನ್ಯ ಸಂಗತಿಯಂತೂ ಅಲ್ಲ ಬಿಡಿ..! ಏಕೆಂದರೆ, ಕಾಂಗರೂಗಳು ಆಸ್ಟ್ರೇಲಿಯಾದ ಸ್ಥಳಿಯ ಪ್ರಾಣಿಗಳು. ಹಾಗಾಗಿ, ಕಾಂಗರೂಗಳು ಸಾರ್ವಜನಿಕ ಸ್ಥಳಗಳಲ್ಲಿ (Public Places) ಮನಸ್ಸಿಗೆ ಬಂದಂತೆ ಓಡಾಡುವುದು ಅಂತಹ ವಿಶೇಷ ಅಥವಾ ಅಚ್ಚರಿಯ ಸಂಗತಿ ಏನಲ್ಲ. ಅದು ಅವರಿಗೆ ಮಾಮೂಲಾಗಿ ಬಿಟ್ಟಿದೆ.

ಬಾರ್​ಗೆ ಪ್ರವೇಶಿಸುವ ಕಾಂಗರೂ

ವಿಡಿಯೋದಲ್ಲಿ, ಬಾರ್ ಒಂದನ್ನು ಪ್ರವೇಶಿಸುವ ಕಾಂಗರೂ ಅಲ್ಲಿನ ಜನರಿಗೆ ಯಾವುದೇ ತೊಂದರೆ ನೀಡುವುದಿಲ್ಲ, ತನ್ನ ಪಾಡಿಗೆ ತಾನು ಒಳಗೆ ಹೋಗಿ, ಶೀಘ್ರದಲ್ಲೇ ಹೊರಗೆ ಕೂಡ ಬರುತ್ತದೆ.

85,000 ಕ್ಕೂ ಅಧಿಕ ಲೈಕ್ಸ್

ಇನ್‍ಸ್ಟಾಗ್ರಾಂನಲ್ಲಿ ಆಸ್ಟ್ರೇಲಿಯನ್ ಅನಿಮಲ್ಸ್ ಎಂಬ ಹೆಸರಿನ ಖಾತೆಯೊಂದರಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ ಇದುವರೆಗೆ 85,000 ಕ್ಕೂ ಅಧಿಕ ಮೆಚ್ಚುಗೆಗಳು ದೊರಕಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಈ ವಿಡಿಯೋಗೆ “ಅನಿರೀಕ್ಷಿತ ಅತಿಥಿ” ಎಂಬ ಅಡಿಬರಹವನ್ನು ನೀಡಲಾಗಿದ್ದು, ವಿಡಿಯೋ ಕ್ರೆಡಿಟನ್ನು ಪೆನ್ನಿವಿಟ್ಟನ್‍ಬೇಕರ್ ಎಂಬುವರಿಗೆ ನೀಡಲಾಗಿದೆ.

ಜನರ ರಿಯಾಕ್ಷನ್

ಕಾಂಗರೂ ಸಮೀಪದಲ್ಲೇ ಇದ್ದರೂ, ಸುತ್ತಲಿನ ಜನ ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿರುವುದನ್ನು ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಅಚ್ಚರಿಗೊಂಡಿದ್ದಾರೆ. “ಅಲ್ಲಿ ನೆರೆದಿದ್ದ ಎಲ್ಲರೂ ಅವನನ್ನು ಒಮ್ಮೆ ನೋಡಿ ಮತ್ತು “ಹ್ಮ್ ಒಳ್ಳೆದು” ಎಂಬಂತೆ ಮತ್ತೆ ಸಾಲಿನಲ್ಲಿ ಕಾಯುತ್ತಾ ನಿಂತಿದ್ದು ನಮಗೆ ಇಷ್ಟವಾಯಿತು” ಎಂದು ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Viral News: ಅಮೆರಿಕಾದ ಹೆಲ್ ಪಟ್ಟಣದ ಮೇಯರ್ ಈ ಬೆಕ್ಕು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಜನರು ಕಮೆಂಟಿಸಿದ್ದು ಹೀಗೆ ನೋಡಿ

“ಇದು ಭಾರತದ ಕಡಲ ತೀರಗಳಲ್ಲಿ ಹಸುಗಳು ಇರುವಂತೆಯೇ ಇದೆ” ಎಂದು ಮತ್ತೊಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಬರೆದುಕೊಂಡಿದ್ದರೆ, ಇನ್ನೊಬ್ಬರು, “ದೊಡ್ಡ ಬರ್ಗರ್ ಬೇಕು” ಎಂದು ಬರೆದಿದ್ದಾರೆ. “ಕಾಂಗರೂ ವೀಕೆಂಡ್ ಸಂಗಾತಿಗಾಗಿ ಹುಡುಕಾಡುತ್ತಿದೆ” ಎಂದು ಮತ್ತೊಬ್ಬ ನೆಟ್ಟಿಗ ಹಾಸ್ಯದ ಪ್ರತಿಕ್ರಿಯೆ ನೀಡಿದ್ದರೆ, “ಹ್ಮ್, ಕಾಂಗರೂ ಸರಿಯಾಗಿದೆಯೇ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. “ಇದು ‘ಅನಿರೀಕ್ಷಿತ’ ಎಂಬಂತೆ ಕಾಣುತ್ತಿಲ್ಲ. ಎಲ್ಲರೂ ಕೇವಲ ಜರುಗಿದರು ಮತ್ತು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡರು. ನಿತ್ಯದ ಗ್ರಾಹಕನಂತೆ ಕಾಣುತ್ತಿದೆ” ಎಂದು ಇನ್ನೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಲಾಂಛನ ಮತ್ತು ಕರೆನ್ಸಿ ನೋಟಿನಲ್ಲಿಯೂ ಜಾಗ ಗಿಟ್ಟಿಸಿಕೊಂಡಿರುವ ಕಾಂಗಾರೂ

ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ಆಸ್ಟ್ರೇಲಿಯಾದ ರಾಷ್ಟ್ರೀಯ ಲಾಂಛನ ಮತ್ತು ಕರೆನ್ಸಿ ನೋಟಿನಲ್ಲಿಯೂ ಜಾಗ ಗಿಟ್ಟಿಸಿಕೊಂಡಿರುವ ಈ ಪ್ರಾಣಿ, ಇದು ಕ್ವಾಂಟಾಸ್ ಮತ್ತು ದ ರಾಯಲ್ ಆಸ್ಟ್ರೇಲಿಯನ್ ಏರ್‌ಫೋರ್ಸ್‌ ರೌಂಡೆಲ್ ಸೇರಿದಂತೆ, ಆಸ್ಟ್ರೇಲಿಯಾದ ಪ್ರಮುಖ ಹೆಸರಾಂತ ಕಂಪೆನಿಗಳ ಲೋಗೋಗಳಲ್ಲಿಯೂ ಕಾಣ ಸಿಗುತ್ತದೆ.


ಕಾಂಗರೂ ಆಸ್ಟ್ರೇಲಿಯಾದ ಸಂಸ್ಕೃತಿ ಮತ್ತು ರಾಷ್ಟ್ರೀಯ ಇಮೇಜ್ ಆಗಿರುವುದರಿಂದ, ಸಾಕಷ್ಟು ಪಾಪ್ ಸಂಸ್ಕೃತಿ ಉಲ್ಲೇಖಗಳನ್ನು ಹೊಂದಿದೆ.

ಇದನ್ನೂ ಓದಿ: Viral Video: ಮದುವೆಯ ದಿನ ವಧುವಿಗೆ ಸಹಾಯ ಮಾಡಿದ ವರನನ್ನು ನೋಡಿ ಫಿದಾ ಆದ ನೆಟ್ಟಿಗರು

ಈ ತಿಂಗಳ ಆರಂಭದಲ್ಲಿ, ಕ್ವೀನ್ಸ್‌ಲ್ಯಾಂಡ್ ಔಟ್‍ಬ್ಯಾಕ್‍ನಲ್ಲಿ ಬಿಳಿ ಬಣ್ಣದ ಕಾಂಗರೂ ಒಂದು ಕಾಣಿಸಿಕೊಂಡಿತ್ತು. ಕ್ವೀನ್ಸ್‌ಲ್ಯಾಂಡ್‍ನಲ್ಲಿ ವಾಸಿಸುವ ಮಹಿಳೆಯೊಬ್ಬರು, ಲಾಂಗ್‍ರಿಚ್‍ನ ಹೊರಭಾಗದಲ್ಲಿನ ಪ್ರದೇಶವೊಂದರಲ್ಲಿ ಕುಪ್ಪಳಿಸುತ್ತಿದ್ದ ಬಿಳಿ ಕಾಂಗರೂವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಅಷ್ಟೇ ಅಲ್ಲ ಆಕೆ ಕ್ಲಿಕ್ಕಿಸಿದ ಆ ಕಾಂಗರೂವಿನ ಫೋಟೋಗಳು, ಔಟ್‍ಬ್ಯಾಕ್ ಪಯೋನಿಯರ್ಸ್‍ನ ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಆಗಿತ್ತು. ಆ ಫೋಟೋಗಳು ಕೂಡ ವೈರಲ್ ಆಗಿದ್ದವು.
Published by:Divya D
First published: