ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಾವು ಈಗಾಗಲೇ ತುಂಬಾನೇ ಒಳ್ಳೆ ಒಳ್ಳೆಯ ವಿಡಿಯೋಗಳನ್ನು (Viral Videos) ನೋಡಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ನಾವು ಹೇಳಲು ಹೊರಟಿರುವಂತಹ ಘಟನೆ ಸ್ವಲ್ಪ ಅಹಿತಕರವಾದದ್ದು ಆಗಿದೆ. ಹೌದು, ಕೆಲವು ದಿನಗಳ ಹಿಂದೆಯಷ್ಟೆ ಎಂದರೆ ಡಿಸೆಂಬರ್ 16, 2022 ರಂದು ಇಸ್ತಾಂಬುಲ್ನಿಂದ ದೆಹಲಿಗೆ )Istanbul-Delhi flight ) ಬರುತ್ತಿದ್ದ 6ಇ 12 ವಿಮಾನದಲ್ಲಿ ಪ್ರಯಾಣಿಕ (Passenger) ಮತ್ತು ಗಗನಸಖಿಯ (Airhostess)ನಡುವಿನ ಜಗಳದ ವಿಡಿಯೋ ಇಂಟರ್ನೆಟ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಜಗಳ ಶುರುವಾಗಿದ್ದು ಹೇಗೆ ಅಂತ ಈಗಾಗಲೇ ವಿಡಿಯೋ ನೋಡಿದ ನೆಟ್ಟಿಗರಿಗೆ ಸರಿಯಾಗಿ ಅರ್ಥವಾಗಿರುತ್ತದೆ. ಈ ಜಗಳದಲ್ಲಿ ಪ್ರಯಾಣಿಕರೊಬ್ಬರು ಗಗನಸಖಿಯನ್ನು ಬಾಯಿಗೆ ಬಂದಂತೆ ಬೈಯುತ್ತಿರೋದನ್ನು ಗಮಿಸಬಹುದಾಗಿದೆ.
ಪ್ರಯಾಣಿಕರ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಂಡ ಗಗನಸಖಿ ಸ್ವಲ್ಪ ಸಮಯದ ನಂತರ “ಇಲ್ಲ, ಕ್ಷಮಿಸಿ ಸರ್, ನೀವು ಸಿಬ್ಬಂದಿಯೊಂದಿಗೆ ಆ ರೀತಿ ಮಾತನಾಡುವುದು ಒಳ್ಳೆಯದಲ್ಲ. ನಾನು ಸಮಾಧಾನದಿಂದ ನಿಮ್ಮ ಮಾತನ್ನು ಗೌರವದಿಂದ ಕೇಳುತ್ತಿದ್ದೇನೆ. ನೀವು ಸಹ ಸಿಬ್ಬಂದಿಯನ್ನೂ ಗೌರವಿಸಬೇಕು. ನೀವು ನನ್ನೊಂದಿಗೆ ಆ ರೀತಿ ಮಾತನಾಡಲು ಸಾಧ್ಯವಿಲ್ಲ. ನಾನು ಕೂಡ ಇಲ್ಲಿ ಉದ್ಯೋಗಿಯಾಗಿದ್ದೇನೆ" ಎಂದು ಗಗನಸಖಿ ವಿಮಾನದಲ್ಲಿರುವ ಪ್ರಯಾಣಿಕರಿಗೆ ತಿಳಿಸಿದರು.
ಗಗನಸಖಿಯನ್ನು ‘ಸರ್ವೇಂಟ್’ ಎಂದ ಪ್ರಯಾಣಿಕ
ವಿಮಾನದಲ್ಲಿರುವ ಪ್ರಯಾಣಿಕ ಆ ಗಗನಸಖಿಯನ್ನು "ಸರ್ವೇಂಟ್" ಎಂದು ಹೇಳಿದಾಗ ಆವರಿಬ್ಬರ ನಡುವಿನ ವಾಗ್ವಾದ ಇನ್ನಷ್ಟು ಜಾಸ್ತಿ ಆಯಿತು ಅಂತ ಹೇಳಲಾಗುತ್ತಿದೆ. ಗಗನಸಖಿ ಸಹ ಪ್ರಯಾಣಿಕನ ಮಾತಿಗೆ ಪ್ರತ್ಯುತ್ತರವಾಗಿ "ಹೌದು, ನಾನು ಒಬ್ಬ ಉದ್ಯೋಗಿ, ನಾನು ನಿಮ್ಮ ಸರ್ವೇಂಟ್ ಅಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡಲು ಪ್ರಾರಂಭಿಸಿದಾಗ ಅನೇಕ ಜನರು ಗಗನಸಖಿಯ ಬೆಂಬಲಕ್ಕೆ ನಿಂತಿದ್ದಾರೆ. ಜೆಟ್ ಏರ್ವೇಸ್ನ ಸಿಇಒ ಸಂಜೀವ್ ಕಪೂರ್ ಅವರು ಇಂಡಿಗೋ ಗಗನಸಖಿ ಮತ್ತು ಪ್ರಯಾಣಿಕನ ನಡುವೆ ನಡೆದ ಜಗಳದ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಗಗನಸಖಿ ಬೆಂಬಲಕ್ಕೆ ನಿಂತ ನೆಟ್ಟಿಗರು
ಗಗನಸಖಿಯು ಪ್ರಯಾಣಿಕನಿಗೆ ಸ್ವಲ್ಪ ಗೌರವದಿಂದ ಮಾತಾಡಿ ಅಂತ ಪದೇ ಪದೇ ಕೇಳಿದರೂ ಸಹ ಪ್ರಯಾಣಿಕ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ ಎಂಬುದು ವಿಡಿಯೋ ನೋಡಿದರೆ ಅರ್ಥವಾಗುತ್ತದೆ. ಅನೇಕ ಟ್ವಿಟ್ಟರ್ ಬಳಕೆದಾರರು ಗಗನಸಖಿಯನ್ನು ಬೆಂಬಲಿಸಿ ಬರೆದಿದ್ದಾರೆ ಮತ್ತು ಅವರ ಪ್ರತಿಕ್ರಿಯೆ ಅಗತ್ಯ ಮತ್ತು ಸೂಕ್ತವಾಗಿದೆ ಎಂದು ವ್ಯಕ್ತಪಡಿಸಿದ್ದಾರೆ.
ಗಗನಸಖಿಯ ಬೆಂಬಲಕ್ಕೆ ನಿಂತ ಸಂಜೀವ್ ಕಪೂರ್
ಸಂಜೀವ್ ಕಪೂರ್ ತಮ್ಮ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಕೆಲವು ವರ್ಷಗಳ ಹಿಂದೆ ಅವರ ಜೊತೆಗೆ ನಡೆದ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಗಗನಸಖಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು ಮತ್ತು ಅಶಿಸ್ತಿನ ಪ್ರಯಾಣಿಕರು ಕ್ಯಾಬಿನ್ ಸಿಬ್ಬಂದಿಯ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಎಂದು ವಿವರಿಸಿದರು.
"ನಾನು ಮೊದಲೇ ಹೇಳಿದಂತೆ, ಸಿಬ್ಬಂದಿ ಸಹ ಮನುಷ್ಯರು. ಅವರು ನೀಡುವಂತಹ ಸೇವೆಯಲ್ಲಿ ಸ್ವಲ್ಪ ವಿಳಂಬವಾಗಿರಬಹುದು. ಆದರೆ ಹಲವಾರು ವರ್ಷಗಳಿಂದ ನಾನು ಈ ರೀತಿಯ ಘಟನೆಗಳನ್ನು ವಿಮಾನಗಳಲ್ಲಿ ನೋಡಿದ್ದೇನೆ. ಒತ್ತಡದ ಹೊರತಾಗಿಯೂ ಗಗನಸಖಿ ತುಂಬಾನೇ ಸಮಾಧಾನವಾಗಿ ಮಾತಾಡುತ್ತಿದ್ದಳು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಬರೆದಿದ್ದಾರೆ.
As I had said earlier, crew are human too. It must have taken a lot to get her to breaking point. Over the years I have seen crew slapped and abused on board flights, called "servant" and worse. Hope she is fine despite the pressure she must be under. https://t.co/cSPI0jQBZl
— Sanjiv Kapoor (@TheSanjivKapoor) December 21, 2022
ಘಟನೆಯ ಬಗ್ಗೆ ಇಂಡಿಗೋ ಹೇಳಿದ್ದೇನು?
ಇಂಡಿಗೋ ಈ ಘಟನೆಗೆ ಪ್ರತಿಕ್ರಿಯಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. "ವಿಮಾನದಲ್ಲಿ ನಡೆದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಕೋಡ್ ಶೇರ್ ಸಂಪರ್ಕದ ಮೂಲಕ ಪ್ರಯಾಣಿಸುವ ಕೆಲವು ಪ್ರಯಾಣಿಕರು ಆಯ್ಕೆ ಮಾಡಿದ ಊಟಕ್ಕಾಗಿ ಈ ಸಮಸ್ಯೆ ಸಂಬಂಧಿಸಿದೆ.
ಇದನ್ನೂ ಓದಿ: Aviation Disaster: 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ನಿದ್ರಿಸಿದ ಪೈಲಟ್ಗಳು!
ಇಂಡಿಗೋಗೆ ತನ್ನ ಗ್ರಾಹಕರ ಅಗತ್ಯತೆಗಳ ಬಗ್ಗೆ ತಿಳಿದಿದೆ ಮತ್ತು ನಮ್ಮ ಗ್ರಾಹಕರಿಗೆ ಸೌಜನ್ಯಯುತ ಮತ್ತು ತೊಂದರೆಯಿಲ್ಲದ ಅನುಭವವನ್ನು ಒದಗಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿರುತ್ತೇವೆ" ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ