ಜಗಳ ಮಾಡಿದ ಕುಡುಕನನ್ನು ಜೆಸಿಬಿಯಿಂದ ತಳ್ಳಿದ ಚಾಲಕ; ವೈರಲ್ ಆಯ್ತು ವಿಡಿಯೋ

ಕಂಠಪೂರ್ತಿ ಕುಡಿದಿದ್ದ ಸೂರೆಯ್ಯ ಎಂಬಾತ ಮುಲುಗು ಎಂಬ ಪ್ರದೇಶದಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಚಾಲಕನ ಜೊತೆ ವಾಗ್ವಾದ ನಡೆಸಿದ್ದ. ಇದರಿಂದ ಕೋಪಗೊಂಡ ಚಾಲಕ ಜೆಸಿಬಿಯಿಂದ ಆತನನ್ನು ಕೆಳಗೆ ತಳ್ಳಿದ್ದಾನೆ.

news18-kannada
Updated:July 8, 2020, 4:09 PM IST
ಜಗಳ ಮಾಡಿದ ಕುಡುಕನನ್ನು ಜೆಸಿಬಿಯಿಂದ ತಳ್ಳಿದ ಚಾಲಕ; ವೈರಲ್ ಆಯ್ತು ವಿಡಿಯೋ
ಸಾಂದರ್ಭಿಕ ಚಿತ್ರ
  • Share this:
ಹೈದರಾಬಾದ್ (ಜು. 8): ಕುಡಿದ ಅಮಲಿನಲ್ಲಿ ಕೊಲೆಗಳೇ ನಡೆದುಹೋದ ಎಷ್ಟೋ ಉದಾಹರಣೆಗಳು ನಮ್ಮ ನಡುವೆ ಇವೆ. ತೆಲಂಗಾಣದಲ್ಲಿ ಕೂಡ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೋರ್ವನ ಮೇಲೆ ಜೆಸಿಬಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತೆಲಂಗಾಣದ ಮುಲುಗು ಎಂಬಲ್ಲಿ ಈ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದಿದ್ದ ಸೂರೆಯ್ಯ ಎಂಬಾತ ಮುಲುಗು ಎಂಬ ಪ್ರದೇಶದಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಚಾಲಕನ ಜೊತೆ ವಾಗ್ವಾದ ನಡೆಸಿದ್ದ. ಕುಡುಕನ ಮಾತಿನಿಂದ ಕೆರಳಿದ ಚಾಲಕ ಜೆಸಿಬಿ ಬಕೆಟ್​ ಅನ್ನು ಆತನ ತಲೆ ಮೇಲಿಟ್ಟು ಸುಮ್ಮನೆ ಅಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಿದ್ದ. ಆದರೆ, ಅಷ್ಟಕ್ಕೆ ಸುಮ್ಮನಾಗದ ಸೂರಯ್ಯ ಮತ್ತೆ ಜಗಳ ನಡೆಸಿದ್ದಾನೆ.
ಇದರಿಂದ ಕೋಪಗೊಂಡ ಜೆಸಿಬಿ ಚಾಲಕ ಜೆಸಿಬಿಯಿಂದ ಆತನನ್ನು ಕೆಳಗೆ ದೂಡಿ ಬೀಳಿಸಿದ್ದಾನೆ. ಜೆಸಿಬಿಯ ಚಕ್ರದ ಮೇಲೇ ಬಿದ್ದ ಸೂರೆಯ್ಯನ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿದ್ದವರು ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಸೂರೆಯ್ಯ ಅವರ ಮಗ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಜೆಸಿಬಿ ಚಾಲಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Published by: Sushma Chakre
First published: July 8, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading