ನಮ್ಮ ದೇಶದ ಸೈನಿಕ ಸೈನಿಕರು ನಮ್ಮ ರಾಷ್ಟ್ರವನ್ನು ಶತ್ರುಗಳಿಂದ ಸುರಕ್ಷಿತವಾಗಿಡಲು ಯಾವಾಗಲೂ ತಮ್ಮ ಜೀವನವನ್ನು ಪಣಕ್ಕಿಡುತ್ತಾರೆ. ಅವರ ಧೈರ್ಯ ಮತ್ತು ತ್ಯಾಗಕ್ಕಾಗಿ ನಾವು ಯೋಧರಿಗೆ ಸೆಲ್ಯೂಟ್ ಹೊಡೆಯುತ್ತೇವೆ. ಆದರೆ, ಯೋಧರು ಹಲವು ವಿಷಯಗಳಲ್ಲಿ ಪರಿಣತರಾಗಿರುತ್ತಾರೆ ಎಂಬುದು ನಮ್ಮ ಅರಿವಿಗೆ ಹೆಚ್ಚು ಬರುವುದಿಲ್ಲ. ಅಪರೂಪದ ಪ್ರಕರಣದಲ್ಲಿ ಸ್ಯಾಮ್ ಡೇನಿಯಲ್ ಎಂಬ ಸೈನಿಕ ಡ್ರಮ್ಸ್ ಬಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಅವರು ಒಂದು ರಾಗದಿಂದ ಇನ್ನೊಂದು ರಾಗಕ್ಕೆ ಬಹಳ ಸುಲಭವಾಗಿ ಬದಲಾಯಿಸುತ್ತಿದ್ದರು.
ಈ ವಿಡಿಯೋ ಅನ್ನು 'Soldierathon' ಎಂಬ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ಇದರಲ್ಲಿ ಸ್ಯಾಮ್ ಡೇನಿಯಲ್ ಎಂಬ ಸೈನಿಕ ಡ್ರಮ್ಸ್ ಬಾರಿಸುವುದಷ್ಟೇ ಅಲ್ಲ, ಯಾವುದೇ ದೋಷವಿಲ್ಲದೆ, ಸುಲಭವಾಗಿ ಒಂದು ರಾಗದಿಂದ ಇನ್ನೊಂದಕ್ಕೆ ಪರಿವರ್ತನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಡ್ರಮ್ ಸ್ಟಿಕ್ ಗಳು ನೆಲದ ಮೇಲೆ ಬೀಳಿಸದೆ ಕೆಲವು ತಂತ್ರಗಳನ್ನು ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಮ್ಮೆ ನೀವೂ ವಿಡಿಯೋ ನೋಡಿ.. ಮಿಸ್ ಮಾಡಿಕೊಳ್ಳಬೇಡಿ..
Super Talented Indian Soldier Sam K. Daniel@narendramodi Prime Minister Sir can you make him famous😊?
Jai Hind 🇮🇳 @adgpi pic.twitter.com/11QkW2mS65
— Soldierathon (@Soldierathon) February 8, 2021
ಇನ್ನು, ಈ ಅದ್ಭುತ ವೀಡಿಯೊ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಲ್ಲಿ ಸುಮಾರು ಎರಡು ಸಾವಿರ ಬಾರಿ ರೀ ಟ್ವೀಟ್ಗೊಳಗಾಗಿದ್ದು, ಸುಮಾರು 8 ಸಾವಿರ ಮೆಚ್ಚುಗೆ ಪಡೆದಿದೆ. ಇನ್ನು, 61 ಸಾವಿರ ಕ್ಕೂ ಹೆಚ್ಚು ವೀಕ್ಷಣೆಗಳನ್ನೂ ಗಳಿಸಿದೆ. ಫೆಬ್ರವರಿ 8 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಕಷ್ಟು ಕಾಮೆಂಟ್ಗಳನ್ನು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ