ಪ್ರೀತಿಗಾಗಿ ಅನೇಕರು ಏನೋನೋ ಮಾಡುತ್ತಾರೆ. ಅದೇ ರೀತಿ ಖ್ಯಾತ ಹಾಲಿವುಡ್ ನಟ ಕೆವಿನ್ ಬೇಕನ್ ತಮ್ಮ ಪತ್ನಿ ನಟಿ ಕೈರಾ ಸೆಡ್ಗ್ವಿಕ್ ಅವರ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ. ಅವರು ಮಾಡಿರುವ ಪ್ರಯೋಗವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಹಾಲಿವುಡ್ ನಟ ಕೆವಿನ್ ಬೇಕನ್ ತಮ್ಮ ಪ್ರೀತಿಯ ಪತ್ನಿ ಕೈರಾರನ್ನು ಇಂಪ್ರೆಸ್ ಮಾಡಲು ಬಾಳೆಹಣ್ಣಿನ ಸುಲಭವಾದ ಹ್ಯಾಕಿಂಗ್ ವಿಧಾನವನ್ನು ತಿಳಿಕೊಟ್ಟಿದ್ದಾರೆ. ಪ್ರೇಮಿಗಳ ದಿನದಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಪತ್ನಿ ನಿದ್ದೆ ಮಾಡುತ್ತಿದ್ದ ವೇಳೆ ಬಾಳೆಹಣ್ಣಿನ ಚೂರುಗಳನ್ನು ಹೇಗೆ ಮಾಡಬೇಕೆಂಬ ತಮ್ಮ ರಹಸ್ಯ ಹ್ಯಾಕ್ ವಿಧಾನವನ್ನು ಬಹಿರಂಗಪಡಿಸಿದ್ದಾರೆ. ಅವರ ಈ ವಿಶಿಷ್ಟ ಪ್ರಯೋಗ ಲಕ್ಷಾಂತರ ಅಭಿಮಾನಿಗಳಿಗೆ ಇಷ್ಟವಾಗಿದೆ.
ಅನೇಕರು ಕೆವಿನ್ ಅವರ ಹ್ಯಾಕಿಂಗ್ ತಂತ್ರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದು, ವಿಡಿಯೋ ಶೇರ್ ಮಾಡುತ್ತಾ ವಿವಿಧ ರೀತಿಯಲ್ಲಿ ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ವೈರಲ್ ವೀಡಿಯೊದಲ್ಲಿ ಅವರು ಬಾಳೆಹಣ್ಣಿನ ಸಿಪ್ಪೆ ತೆಗೆಯುವ ಮೊದಲೇ ಬಾಳೆ ಚೂರುಗಳನ್ನು ಹೇಗೆ ಮಾಡುವುದು ಅನ್ನೋದನ್ನು ವಿವರಿಸಿದ್ದಾರೆ. ಎಂತಹ ಅದ್ಭುತ! ಇದು ಸಾಧ್ಯವೇ? ಎಂದು ನೀವು ಅಂದುಕೊಳ್ಳುತ್ತಿದ್ದರೆ, ಈ ಕೆಳಗಿನ ವಿಡಿಯೋ ವೀಕ್ಷಿಸಿ.
ಪತ್ನಿ ಮಲಗಿದ್ದ ವೇಳೆ ಕೆವಿನ್ ಬೇಕನ್ ಒಂದು ಬಾಳೆಹಣ್ಣನ್ನು ಕೈಗೆತ್ತಿಕೊಂಡು ಪಿಸುಧ್ವನಿಯಲ್ಲಿ ತಮ್ಮ ಪ್ರಯೋಗದ ಬಗ್ಗೆ ಮೊದಲು ತಿಳಿಸುತ್ತಾರೆ. ‘ತನ್ನ ಹೆಂಡತಿ ಮಲಗಿದ್ದಾಳೆ, ಅವಳಿಗೆ ತೊಂದರೆ ಕೊಡುವುದು ಬೇಡ. ನಾನೀಗ ನಿಮಗೆ ಒಂದು ಜೀನಿಯಸ್ ಟ್ರಿಕ್ ಕಲಿಸುತ್ತೇನೆ.
ಸಿಪ್ಪೆ ತೆಗೆಯುವ ಮೊದಲೇ ಬಾಳೆ ಚೂರುಗಳನ್ನು ಹೇಗೆ ಮಾಡುವುದು ಅನ್ನೋದನ್ನು ತಿಳಿಸುತ್ತೇನೆ ನೋಡಿ’ ಎಂದು ಹೇಳುತ್ತಾರೆ. ಒಂದು ಸೂಜಿಗೆ ದಾರವನ್ನು ಪೋಣಿಸಿ ಅದನ್ನು ಬಾಳೆಹಣ್ಣಿನೊಳಗೆ ಹಾಕುತ್ತಾರೆ. ಬಳಿಕ ಬಾಳೆಹಣ್ಣಿನ ಸಿಪ್ಪೆ ತೆಗೆದು ಬಾಳೆ ಚೂರು ಚೂರಾಗಿರುವುದನ್ನು ತೋರಿಸುತ್ತಾರೆ.
ತಮ್ಮ ಪೋಸ್ಟ್ ಗೆ ಕೆವಿನ್ ‘ನಾವು ಮಾಡುವ ಕೆಲಸಗಳು… ನಿಮಗಾಗಿ @kyrasedgwickofficial Happy #ValentinesDay.’ ಎಂದು ಬರೆದುಕೊಂಡಿದ್ದಾರೆ. ಹಾಲಿವುಡ್ ನಟ ಈ ಹ್ಯಾಕ್ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಸಾವಿರಾರು ಜನರು ಆಶ್ಚರ್ಯ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ನಟನ ಅಭಿಮಾನಿಗಳಲ್ಲಿ ಒಬ್ಬರು, ‘ಹೊಸ ಹೊಸದನ್ನು ತಿಳಿದುಕೊಳ್ಳುವುದು ಒಳ್ಳೆಯದು’ ಎಂದರೆ, ‘ಸೂಪರ್ ಟ್ರಿಕ್ ‘ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಹಲವರು ತುಂಬಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ