• Home
  • »
  • News
  • »
  • trend
  • »
  • Viral Video: ಹಾವಿನಿಂದ ಮರಿಗಳನ್ನು ರಕ್ಷಿಸಿದ ಕೋಳಿ: ಸೆಣಸಾಟದ ವಿಡಿಯೋ ವೈರಲ್

Viral Video: ಹಾವಿನಿಂದ ಮರಿಗಳನ್ನು ರಕ್ಷಿಸಿದ ಕೋಳಿ: ಸೆಣಸಾಟದ ವಿಡಿಯೋ ವೈರಲ್

ಹಾವು-ಕೋಳಿಯ ಸೆಣೆಸಾಟದ ವಿಡಿಯೋ

ಹಾವು-ಕೋಳಿಯ ಸೆಣೆಸಾಟದ ವಿಡಿಯೋ

ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಸೆಣಸಾಡುವ ಕೋಳಿಯ ವಿಡಿಯೋವನ್ನು ಕೊಕ್ಸಾಲ ಅಕಿನ್ ಎಂಬುವವರು ಪ್ರೀತಿ ಎಂಬುದು ಭಯಕ್ಕಿಂತ ಪ್ರಬಲವಾದ ಭಾವನೆ ಎಂಬ ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದರು. ಕೇವಲ 48 ಗಂಟೆಗಳಲ್ಲಿ 2,200ಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದಾರೆ. 1000ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಇಡೀ ಜಗತ್ತಿನಲ್ಲಿ ಮೊದಲ ಶ್ರೇಷ್ಠ ಸ್ಥಾನ ತಾಯಿಗೆ. ಭೂಮಿಯ ತೂಕದಷ್ಟು ಸಹನೆ ಹೊಂದಿರುವ ಆಕೆಗಿಂತ ಬೇರೆ ಯಾವ ಬಂಧುವಿಲ್ಲ. ತನ್ನ ಕುಟುಂಬ, ಮಕ್ಕಳ ರಕ್ಷಣೆ ಹಾಗೂ ಆರೈಕೆಯಲ್ಲಿ ತನ್ನ ಇಡೀ ಜೀವವನ್ನು ಸವೆಸುತ್ತಾಳೆ. ಈ ಆರೈಕೆ, ಕಾಳಜಿ ವಾತ್ಸಲ್ಯ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ, ಪಕ್ಷಿಗಳಿಗೂ ಇದು ಅನ್ವಯಿಸುತ್ತದೆ. ಮಕ್ಕಳಿಗೆ ಸಂಕಷ್ಟ , ಅಪಾಯ ಎದುರಾದಾಗ ಅಷ್ಟೇ ಪ್ರಬಲವಾಗಿ ಹೋರಾಡಿ ಮಕ್ಕಳನ್ನು ಕಾಯುತ್ತಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಹೌದು, ತಾಯಿ ಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಸೆಣಸಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ 38 ಸೆಕೆಂಡ್‍ಗಳಿದ್ದು, ಹಾವು ಮತ್ತು ಕೋಳಿಯ ನಡುವಿನ ಹೋರಾಟವೇ ರೋಚಕ.


ಕೋಳಿ ತನ್ನ ಮರಿಗಳೊಂದಿಗೆ ಮೂಲೆಯಲ್ಲಿ ಇರುತ್ತದೆ. ಆಗ ಬಂದ ಹಾವು ಮರಿಗಳ ಮೇಲೆ ಆಕ್ರಮಣ ಮಾಡಲು ನೋಡುತ್ತದೆ. ಆಗ ಇದನ್ನು ಗಮನಿಸಿದ ತಾಯಿ ಕೋಳಿ ಹಾವಿನ ಮೇಲೆ ಆಕ್ರಮಣ ಮಾಡಿ ತನ್ನ ರೆಕ್ಕೆಯಿಂದ ಮರಿಗಳನ್ನು ರಕ್ಷಿಸುತ್ತಾ, ಕೊಕ್ಕಿನಿಂದ ಕುಕ್ಕಲು ಶುರು ಮಾಡುತ್ತದೆ. ಹೀಗೆ ಅವುಗಳ ಹೋರಾಟ ಮುಂದುವರೆಯುತ್ತದೆ.ನಂತರ ಹಾವು ವಾಪಾಸ್ ಹೋಗುವಂತೆ ಮಾಡಿ ಮತ್ತೆ ಮರಿಗಳ ಹತ್ತಿರ ಹೋಗಲು ಪ್ರಯತ್ನಿಸುತ್ತದೆ ಕೋಳಿ. ಆದರೆ, ಹಾವು ಸಹ ಹಿಂದೆ ಹೋಗುವುದಿಲ್ಲ. ಅಂತೆಯೇ ತಾಯಿ ಕೋಳಿ ಕುಕ್ಕುತ್ತಾ ತನ್ನ ಹೋರಾಟವನ್ನು ಇನ್ನು ಪ್ರಬಲವಾಗಿ ಮುಂದುರೆಸುತ್ತದೆ. ನಂತರ ಸೋತ ಹಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಹೋಗುತ್ತದೆ.


ಇದನ್ನೂ ಓದಿ: ಸೀರೆಗೂ ಸೈ ಮಾಡರ್ನ್ ಉಡುಗೆಗೂ ಜೈ ಅನ್ನೋ ಸಿಂಪಲ್​ ನಟಿ ಶ್ವೇತಾ ಶ್ರೀವಾತ್ಸವ್​


ಈ ವಿಡಿಯೋವನ್ನು ಕೊಕ್ಸಾಲ ಅಕಿನ್ ಎಂಬುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿ ಎಂಬುದು ಭಯಕ್ಕಿಂತ ಪ್ರಬಲವಾದ ಭಾವನೆ ಎಂದು ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದಾರೆ. ಕೇವಲ 48 ಗಂಟೆಗಳಲ್ಲಿ 2,200ಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದಾರೆ. 1000ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.


Snake, Hen, Viral Video, Social Media, Mother Love, ಹಾವು, ಕೋಳಿ, ವೈರಲ್ ವಿಡಿಯೋ, ಸಾಮಾಜಿಕ ಜಾಲತಾಣ, ತಾಯಿ ಪ್ರೀತಿ,Viral Video Hen Battles with a snake to protect her chicks ae
ಹಾವು-ಕೋಳಿಯ ಸೆಣೆಸಾಟದ ವಿಡಿಯೋ


ತಾಯಿ ಕೋಳಿ ತನ್ನ ಮರಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗುವುದೇ ಎಂಬ ಕುತೂಹಲದಿಂದ ಹಿಡಿದು, ಹಾವಿನ ಮೇಲೆ ಉಗ್ರ ಪ್ರತಾಪ ತೋರುತ್ತಾ ಹೋರಾಡುತ್ತಿರುವ ಕೋಳಿಯ ವರ್ತನೆವರೆಗೂ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


ಒಬ್ಬರು ಟ್ವೀಟ್‍ಗೆ ಪ್ರತಿಕ್ರಿಯಿಸಿ, ಕೊನೆಯದಾಗಿ ಕೋಳಿ ತನ್ನ ಮರಿಗಳನ್ನು ರಕ್ಷಿಸಿತೇ ಎಂದು ಕೇಳಿದ್ದಾರೆ. ಮಕ್ಕಳ ವಿಚಾರದಲ್ಲಿ ಪ್ರತಿಯೊಬ್ಬ ತಾಯಿಯ ವರ್ತನೆ ಇದೇ ರೀತಿಯಲ್ಲಿರುತ್ತದೆ. ಅವರ ಪ್ರೀತಿ ವಾತ್ಸಲ್ಯಕ್ಕೆ ಪ್ರತಿರೂಪವಿಲ್ಲ ಎಂದು ಹೇಳಿದ್ದಾರೆ. ಕೋಳಿ ಪ್ರದರ್ಶಿಸಿದ ಧೈರ್ಯ ಮತ್ತು ತಾಯಂದಿರು ತಮ್ಮ ಮಕ್ಕಳನ್ನು ಉಳಿಸಲು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಲು ಸಿದ್ಧರಿರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Kannada Bigg Boss 8: ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್​ ಆರಂಭ: ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್​..!


ಹೀಗೆ ಮಕ್ಕಳಿಗೆ ಕಷ್ಟ ಎಂದು ಬಂದಾಗ ತಾಯಿ ಎಲ್ಲವನ್ನು ತನ್ನ ಮೇಲೆ ಹಾಕಿಕೊಂಡು ನಿಭಾಯಿಸುತ್ತಾಳೆ. ಹಾಗಾಗಿ ಜಗತ್ತಿನಲ್ಲಿ ಯಾವುದಕ್ಕಾದರೂ ಕೊರತೆಯಿರಬಹುದು, ತಾಯಿ ಪ್ರೀತಿಗೆ ಕೊರತೆಯಾಗುವುದಿಲ್ಲ. ಮಕ್ಕಳಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡುವ ಆಕೆಯ ಪರಿ ಇಂದಿಗೂ ಎಂದಿಗೂ ಜೀವಂತ. ಇವಳ ಪ್ರೀತಿ, ಕಾಳಜಿ, ವಾತ್ಸಲ್ಯ, ಆರೈಕೆಯ ಎದುರು ಎಲ್ಲವೂ ನಶ್ವರ.

Published by:Anitha E
First published: