Viral Video: ಈ ಬಾಲಕಿಯ ತಲೆ ತುಂಬಾ ಸಾವಿರಾರು ಹೇನುಗಳು: ಕೇಶವಿನ್ಯಾಸಕಿ ನೀಡಿದ ಚಿಕಿತ್ಸೆಯ ವಿಡಿಯೋ ವೈರಲ್

ತಲೆಯಲ್ಲಿನ ಈ ಹೇನುಗಳನ್ನು ಸುಲಭವಾಗಿ ಹೇಗೆ ನಿವಾರಿಸಲಾಗುತ್ತದೆ ಎಂಬುವ ವಿಡಿಯೋ ಒಂದನ್ನು ಹೇನುಗಳ ತಜ್ಞೆ ಮತ್ತು ವೃತ್ತಿಯಲ್ಲಿ ಕೇಶ ವಿನ್ಯಾಸಕಿ ರೇಚೆಲ್ ಮರೂನ್ (Hairdresser Rachel Maroun) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕ ಮಕ್ಕಳಲ್ಲಿ (Children) ಹೇನು (Lice) ಸಮಸ್ಯೆ ಸರ್ವೇ ಸಾಮಾನ್ಯ. ಅಲ್ಲದೆ ಇವು ಬಹು ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಬಿಡುತ್ತವೆ. ದೊಡ್ಡವರಿಂದ ಮಕ್ಕಳಿಗೆ ಮತ್ತು ಮಕ್ಕಳಿಂದ ದೊಡ್ಡವರಿಗೆ ಹರಡಿ ತಲೆಯಲ್ಲಿ ಉಳಿದು ಬಿಡುತ್ತವೆ. ಒಂದೇ ಹೇನು ತಲೆಯಲ್ಲಿ ಸೇರಿಕೊಂಡರೂ ಸಹ ಅದು ಮೊಟ್ಟೆ ಇಟ್ಟು ತಲೆ ತುಂಬಾ ಆಗುತ್ತವೆ. ಮಕ್ಕಳ ತಲೆಯಲ್ಲಿ ಹೇನು ನಿವಾರಿಸಲು ತಾಯಂದಿರು (Mother) ಪ್ರಯತ್ನ ಪಡುತ್ತಲೇ ಇರುತ್ತಾರೆ. ಕೆಲವೊಮ್ಮೆ ತಲೆಯಲ್ಲಿ ಈ ಹೇನುಗಳು ಎಷ್ಟಾಗುತ್ತವೆ ಎಂದರೆ ತಲೆ ಕೂದಲಿಗಿಂತ ಇವೇ ಹೆಚ್ಚಾಗಿ ಕಾಣುತ್ತವೆ. ಹೇನುಗಳು ಮತ್ತು ಅದರ ಮೊಟ್ಟೆ, ಮರಿಗಳು ಕಿರಿಕಿರಿ ಜೊತೆಗೆ ಆರೋಗ್ಯ ಸಮಸ್ಯೆ ಮತ್ತು ಮುಜುಗುರಕ್ಕೀಡು ಮಾಡುತ್ತವೆ. ಇವುಗಳನ್ನು ನಿವಾರಿಸಲು ಮನೆ ಮದ್ದು ಮತ್ತು ವೈದ್ಯಕೀಯ ಸಲಹೆ ಸಹ ಪಡೆಯಲಾಗುತ್ತದೆ.

ತಲೆಯಲ್ಲಿನ ಈ ಹೇನುಗಳನ್ನು ಸುಲಭವಾಗಿ ಹೇಗೆ ನಿವಾರಿಸಲಾಗುತ್ತದೆ ಎಂಬುವ ವಿಡಿಯೋ ಒಂದನ್ನು ಹೇನುಗಳ ತಜ್ಞೆ ಮತ್ತು ವೃತ್ತಿಯಲ್ಲಿ ಕೇಶ ವಿನ್ಯಾಸಕಿ ರೇಚೆಲ್ ಮರೂನ್ (Hairdresser Rachel Maroun) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಾಲಕಿಯ ತಲೆಯಲ್ಲಿ ಸಾವಿರಾರು ಹೇನುಗಳು

ವಿಡಿಯೋದಲ್ಲಿ, ರೇಚೆಲ್ ತಲೆ ತುಂಬಾ ಹೇನು ಮಾಡಿಕೊಂಡಿರುವ ಚಿಕ್ಕ ಹುಡುಗಿಯ ತಲೆಯನ್ನು ತುಂಬಾ ಹತ್ತಿರದಿಂದ ತೋರಿಸುತ್ತಾರೆ. ಅಲ್ಲಿ ಸಾವಿರಾರು ಹೇನುಗಳು, (Thousands of lice visible) ಮೊಟ್ಟೆಗಳು ಕಂಡು ಬಂದಿವೆ. ಒಮ್ಮೆ ಬಾಲಕಿಯ ಕೂದಲಿನ ಎಳೆಯನ್ನು ಪಕ್ಕಕ್ಕೆ ಸರಿಸಿದರೆ, ಇನ್ನು ಸಾವಿರ ಹೇನುಗಳು ಮತ್ತು ಅದರ ಮೊಟ್ಟೆಗಳು ಸಹ ಅಲ್ಲಿ ಇರುವುದನ್ನು ತೋರಿಸಿದ್ದಾರೆ.

ಇದನ್ನೂ ಓದಿ:  Health Tips: ಮಹಿಳೆಯರಲ್ಲಿ ಅಧಿಕ ತೂಕ ಎಷ್ಟು ಡೇಂಜರ್? ಗರ್ಭಾಶಯದ ಕ್ಯಾನ್ಸರ್​ಗೆ ಇದೂ ಒಂದು ಕಾರಣ

ಮತ್ತೊಂದು ವಿಡಿಯೋದಲ್ಲೂ ಸಹ ತಲೆಯ ಕೂದಲಿನಲ್ಲಿ ನೂರಾರು ಹೇನುಗಳು ಸುತ್ತುತ್ತಿರುವುದನ್ನು ತೋರಿಸಿದ್ದಾರೆ. ಆ ಹುಡುಗಿ ತಲೆಯಲ್ಲಿ ಎಷ್ಟು ಹೇನುಗಳಿವೆ ಎಂದರೆ ಅವರ ಕೂದಲಲ್ಲಿ ಮಾತ್ರವಲ್ಲ, ಅವರ ಜಾಕೆಟ್, ಕೈಗಳು ಮತ್ತು ಅವಳ ಕತ್ತಿನ ಹಿಂಭಾಗವನ್ನು ಮುಚ್ಚಿ ಬಿಟ್ಟಿದ್ದವು.








View this post on Instagram






A post shared by Rachel (@trashywashyy)






ಕೂದಲು ತೆಗೆಯದೇ 9 ಗಂಟೆಗಳ ಕಾಲ ಚಿಕಿತ್ಸೆ

ಹೇನುಗಳು ಇವೆ ಎನ್ನುವುದಕ್ಕೆ ತಲೆ ಕೂದನ್ನು ಬೋಳಿಸುವುದು ಖಂಡಿತ ಪರಿಹಾರ ಎಲ್ಲ ಎನ್ನುವ ರೇಚೆಲ್, ಹುಡುಗಿಯ ಕೂದಲನ್ನು ತೆಗೆಯದೇ ಅವರಿಗೆ ಒಟ್ಟು 9 ಗಂಟೆಗಳ ಕಾಲ ಚಿಕಿತ್ಸೆ ನೀಡಲು ನಿರ್ಧರಿಸುತ್ತಾರೆ. ಹೇನುಗಳ ತಜ್ಞೆ ರೇಚೆಲ್ ಮರೂನ್ ಹೇನುಗಳನ್ನು ಕೂದಲಿನಿಂದ ನಿವಾರಿಸಲು ಚಿಕಿತ್ಸೆಯಲ್ಲಿ ಶಕ್ತಿಯುತವಾದ ಬಾಚಣಿಗೆ ಮತ್ತು ಕೆಲವು ರಾಸಾಯನಿಕ ಕ್ರೀಮ್‌ಗಳನ್ನು ಬಳಸಿದ್ದಾರೆ. ಚಿಕಿತ್ಸೆ ನಂತರ ಹೇಗೆ ಹೇನುಗಳು ತಲೆಯಿಂದ ಹೊರಬಿದ್ದಿದೆ ಎಂಬುದನ್ನು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ. ಒಂದೇ ಬಾರಿಗೆ ಹೊರಬರುವ ಹೇನುಗಳ ರಾಶಿಯನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ಬಾಚಣಿಕೆಯಲ್ಲಿ ಬಂದವು ಸಾವಿರಾರು ಹೇನುಗಳು

ಚಿಕಿತ್ಸೆಯಲ್ಲಿ ರೇಚೆಲ್ ಮೊದಲು ಹುಡುಗಿಯ ತಲೆಯನ್ನು ಪರಿಶೀಲಿಸಿದ್ದಾರೆ ಮತ್ತು ಕೂದಲನ್ನು ಭಾಗವಾಗಿ ಮಾಡಿಕೊಂಡಳು. ನಂತರ ಹೇನುಗಳ ಸಂಖ್ಯೆಯ ಪ್ರಮಾಣದ ಮೇರೆಗೆ ಒಂದು ರಾಸಾಯನಿಕವನ್ನು ಕೂದಲ ತುಂಬಾ ಹಚ್ಚಿ ನಂತರ ಬಲವಾದ ಬಾಚಣಿಕೆಯಲ್ಲಿ ಅದನ್ನು ಎಳೆದು ತರುತ್ತಾಳೆ. ಒಂದೇ ಬಾರಿ ಬಾಚಣಿಗೆಯಲ್ಲಿ ನೂರಾರು ಹೇನುಗಳು ಬರುವುದನ್ನು ಕಾಣಬಹುದು. ಈ ಮೂಲಕ ನಿಧಾನವಾಗಿ ಹೇನುಗಳನ್ನು ತೆಗೆಯಲಾಗುತ್ತದೆ.

ಕೆಲವು ದಿನಗಳ ನಂತರ, ರೇಚೆಲ್ ಚಿಕಿತ್ಸೆಯ ಭಾಗ-2 ಅನ್ನು ಹಂಚಿಕೊಂಡರು, ಅಲ್ಲಿ ಅವರು 12 ವರ್ಷದ ಬಾಲಕಿಯಲ್ಲಿ ಹೇನುಗಳ ಸಂಖ್ಯೆ ಕಡಿಮೆಯಾಗಿರುವ ಬೆಳವಣಿಗೆಯನ್ನು ತೋರಿಸುತ್ತಾರೆ, ಎರಡನೇ ವಿಡಿಯೋ ಕ್ಲಿಪ್ ಚಿಕಿತ್ಸೆಯಲ್ಲಿ ಹೆಚ್ಚಿನ ಹಂತಗಳನ್ನು ತೋರಿಸುತ್ತದೆ, ಅಲ್ಲಿ ಹೇನುಗಳನ್ನು ತೊಡೆದುಹಾಕಿದ ನಂತರ, ನೆತ್ತಿಯ ಹತ್ತಿರವಿರುವ ಮೊಟ್ಟೆಗಳನ್ನು ತೆಗೆದುಹಾಕಲಾಗುತ್ತದೆ.

ಇದನ್ನೂ ಓದಿ:  Fashion Tips: ಹೈಟ್ ಕಮ್ಮಿ ಇದ್ದರೆ ಯಾವ ಬಣ್ಣದ ಬಟ್ಟೆ ಬೆಸ್ಟ್? ವ್ಯಕ್ತಿತ್ವವನ್ನೇ ಹೈಲೈಟ್ ಮಾಡುತ್ತೆ ಉಡುಪು








View this post on Instagram






A post shared by Rachel (@trashywashyy)






ಹೇನಿನ ಸಮಸ್ಯೆಗೆ ಪರಿಹಾರ

ಹೀಗೆ ಒಂದೆರೆಡು ಬಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿದ್ದಲ್ಲಿ ಸಂಪೂರ್ಣವಾಗಿ ತಲೆ ಕೂದಲಿನಿಂದ ಹೇನುಗಳು ಮತ್ತು ಅದರ ಮೊಟ್ಟೆಗಳನ್ನು ತೆಗೆದುಹಾಕಬಹುದು ಎನ್ನುತ್ತಾರೆ ರೇಚೆಲ್.

ರೇಚೆಲ್ ಇಂತಹ ಹಲವು ಪ್ರಕರಣಗಳನ್ನು ನಿವಾರಿಸಿದ್ದು, ಅವರು ತಮ್ಮ ಚಿಕಿತ್ಸಾ ಕೇಂದ್ರದಲ್ಲಿ ಮಕ್ಕಳು ಸೇರಿ ದೊಡ್ಡವರು ಅನುಭವಿಸುವ ಹೇನಿನ ಸಮಸ್ಯೆಗೆ ಪರಿಹಾರ ನೀಡುವ ಮತ್ತು ಹೇನುಗಳನ್ನು ತೆಗೆದುಹಾಕುವ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ.
Published by:Mahmadrafik K
First published: