Viral Video: ಆಳ ಸಮುದ್ರದಲ್ಲಿ ಬೃಹತ್ ಸ್ಕ್ವಿಡ್ ಬೇಟೆ ಮಾಡುತ್ತಿರುವ ದೃಶ್ಯ ದಾಖಲು; ವಿಜ್ಞಾನಿಗಳನ್ನೇ ಅಚ್ಚರಿಗೆ ದೂಡಿದ ವಿಡಿಯೋ

ಸಮುದ್ರದ ನಡುವಿನ ದೈತ್ಯ ಗಾತ್ರದ ಸ್ಕ್ವಿಡ್ ತನ್ನ ಬೇಟೆಯನ್ನು ಬೆನ್ನಟ್ಟಿಕೊಂಡು ಹೋಗಿ ಬೇಟೆಯಾಡಿರುವ ದೃಶ್ಯ ಇದೀಗ ಸಾಕಷ್ಟು ವೈರಲ್ ಆಗಿದ್ದು, ವಿಜ್ಞಾನಿಗಳನ್ನೇ ಅಚ್ಚರಿಗೆ ದೂಡಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸಾಮಾನ್ಯವಾಗಿ ಸಮುದ್ರದ ಸಸ್ತನಿಗಳು ಹೊಂಚಿ ಕುಳಿತು ದಾಳಿ ಮಾಡಿ ಬೇಟೆಯನ್ನು ಹಿಡಿಯುತ್ತವೆ. ವಿಜ್ಞಾನಿಗಳ ಈ ಸಂಶೋಧನೆಗೆ ತದ್ವಿರುದ್ಧವಾಗಿ ಸಮುದ್ರದ ನಡುವಿನ ದೈತ್ಯ ಗಾತ್ರದ ಸ್ಕ್ವಿಡ್ ತನ್ನ ಬೇಟೆಯನ್ನು ಬೆನ್ನಟ್ಟಿಕೊಂಡು ಹೋಗಿ ಬೇಟೆಯಾಡಿರುವ ದೃಶ್ಯ ಇದೀಗ ಸಾಕಷ್ಟು ವೈರಲ್ ಆಗಿದ್ದು, ವಿಜ್ಞಾನಿಗಳನ್ನೇ ಅಚ್ಚರಿಗೆ ದೂಡಿದೆ. ಈ ಕುರಿತಂತೆ ಮೇಲ್ ಎಂಬ ಆನ್‌ಲೈನ್‌ ಪತ್ರಿಕೆ ವರದಿ ಮಾಡಿದ್ದು, ಅದರಲ್ಲಿ ದೈತ್ಯ ಸ್ಕ್ವಿಡ್ ಜೀವಿಯ ವಿಶೇಷ ನಡವಳಿಕೆಗಳ ಕುರಿತು ಸವಿವರ ಮಾಹಿತಿಯನ್ನು ನೀಡಿದೆ.

ಮೆಕ್ಸಿಕೋ ಕೊಲ್ಲಿಯಲ್ಲಿ ವಿಜ್ಞಾನಿಗಳು ಸ್ಕ್ವಿಡ್‌ಗಳ ಚಲನವಲನ ಅಧ್ಯಯನ ಮಾಡುವ ಸಲುವಾಗಿ ನಕಲಿ ಜೆಲ್ಲಿ ಫಿಶ್ ತಯಾರಿಸಿ ಸಮುದ್ರದ ಆಳಕ್ಕೆ ಬಿಟ್ಟಿದ್ದರು. ಈ ಜೆಲ್ಲಿ ಫಿಶ್ ಒಳಗೆ ವಿಜ್ಞಾನಿಗಳು ಸೂಕ್ಷ್ಮಾತಿಸೂಕ್ಷ್ಮ ಕ್ಯಾಮರಾ ಅಳವಡಿಸಿದ್ದರು. ಸಮುದ್ರದ ಆಳದಲ್ಲಿ 2500 ಅಡಿಗಳಷ್ಟು ಒಳಗೆ ಸ್ಕ್ವಿಡ್ ಗಳು ಬೇಟೆಯಾಡುವ ದೃಶ್ಯ ದಾಖಲಾಗಿದೆ.

ಸ್ಕ್ವಿಡ್ಸ್‌ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೋಗಿ ಕೊಲ್ಲುವ ವಿಡಿಯೋ ಚಿತ್ರೀಕರಣವಾಗಿರುವುದು ಇದೇ

ಸ್ಕ್ವೀಡ್ಸ್ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೋಗಿ ಕೊಲ್ಲುವ ವಿಡಿಯೋ ಚಿತ್ರೀಕರಣವಾಗಿರುವುದು ಇದೆ ಮೊದಲು. ಆರ್ಕಿಟೆಥಿಸ್ ಡಕ್ಸ್‌ನ ಬೇಟೆಯಾಡುವ ಕೌಶಲ್ಯವನ್ನು ವಿಜ್ಞಾನಿಗಳು ಚಿತ್ರೀಕರಣ ಮಾಡಿರುವ ನಿದರ್ಶನವೂ ಇದೇ ಮೊದಲು. ಇಂತಹ ಸಮುದ್ರ ಜೀವಿಗಳು ಸಮುದ್ರದಲ್ಲಿ ಬಹಳ ಆಳದಲ್ಲಿ ಜೀವಿಸುತ್ತವೆ. ಹೀಗಾಗಿ ಇವುಗಳ ಜೀವನ, ಕ್ರಮ, ಚಲನವಲನ, ಬೇಟೆ ಇತ್ಯಾದಿಗಳ ಚಿತ್ರೀಕರಣ ಬಹಳ ಕಷ್ಟ. ಅಲ್ಲದೆ ಸಮುದ್ರದಲ್ಲಿ ಆಳಕ್ಕೆ ಹೋದಂತೆಲ್ಲ ಕತ್ತಲು ಹೆಚ್ಚುತ್ತದೆ. ಅಲ್ಲದೆ ನೀರಿನ ಆಳದಲ್ಲಿ ಒತ್ತಡವೂ ಹೆಚ್ಚು. ಈ ಒತ್ತಡದ ಕಾರಣ ಉಪಕರಣಗಳು ಬೇಗನೇ ಹಾಳಾಗುತ್ತವೆ. ಹೀಗಾಗಿ ಈ ಹಿಂದೆ ಇಂತಹ ಜೀವಿಗಳ ಜೀವನ ಕ್ರಮ ವಿಡಿಯೋ ಚಿತ್ರೀಕರಣ ಮಾಡಿದ ಸಂದರ್ಭಗಳು ಇಲ್ಲವೇ ಇಲ್ಲ ಎನ್ನಬಹುದು. ಹೀಗಾಗಿ ವಿಜ್ಞಾನಿಗಳು ಈಗ ಚಿತ್ರೀಕರಣ ಮಾಡಿರುವುದನ್ನು ಬಹಳ ವಿಶೇಷ ಸಂಗತಿ ಎಂದು ಮೇಲ್ ಪತ್ರಿಕೆ ವರದಿ ಮಾಡಿದೆ.

ಈ ಸ್ಕ್ವಿಡ್‌ಗಳ ಚಲನವಲನ ದಾಖಲು ಮಾಡುವ ಸಲುವಾಗಿಯೇ ವಿಜ್ಞಾನಿಗಳು ಗಲ್ಫ್ ಆಫ್ ಮೆಕ್ಸಿಕೋ ಸಮುದ್ರದ 2500 ಮೀಟರ್ ಆಳದಲ್ಲಿ ನಕಲಿ ಜೆಲ್ಲಿ ಫಿಶ್ ಆಕೃತಿಯನ್ನು ನಿರ್ಮಿಸಿ, ಅವುಗಳ ಒಳಗೆ ಕ್ಯಾಮರಾ ಇರಿಸಿ, ಇತರ ಜೆಲ್ಲಿ ಫಿಶ್ ನಡುವೆ ಇರಿಸಲಾಗಿತ್ತು.

2019 ರಲ್ಲಿಯೇ ಚಿತ್ರೀಕರಣ ಮಾಡಲಾಗಿರುವ ಈ ವಿಡಿಯೋ ತುಣುಕನ್ನು ವಿಜ್ಞಾನಿಗಳು ಈಗ ಬಿಡುಗಡೆ ಮಾಡಿದ್ದಾರೆ. ಎಲ್ಲ ದೃಷ್ಟಿಕೋನದದಿಂದ ಅಳೆದು-ತೂಗಿ ಅಧ್ಯಯನ ಮಾಡಿರುವ ವಿಜ್ಞಾನಿಗಳು ದೈತ್ಯ ಸ್ಕ್ವಿಡ್ ಜೀವಿಗಳು ಬೇಟೆಯ ಮೇಲೆ ತೀವ್ರ ಸ್ವರೂಪದಲ್ಲಿ ಆಕ್ರಮಣ ಮಾಡುತ್ತವೆ. ಅಲ್ಲದೆ ಬೇಟೆಯನ್ನು ಬೆನ್ನಟ್ಟಿಕೊಂಡು ಹೋಗುತ್ತವೆ ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ.

ಇನ್ನು ವಿಶೇಷ ಸಂಗತಿ ಎಂದರೆ 2004 ರ ತನಕವೂ ದೈತ್ಯ ಸ್ಕ್ವಿಡ್ ಜೀವಿಗಳ ವಿಡಿಯೋ ಚಿತ್ರೀಕರಣ ಇರಲೇ ಇಲ್ಲ. 2004 ರಲ್ಲಿ ಮೊದಲ ಬಾರಿ ಸ್ಕ್ವಿಡ್ ಜೀವಿಗಳ ಚಿತ್ರೀಕರಣ ಮಾಡಲಾಯಿತು. ಆಳ ಸಮುದ್ರದಲ್ಲಿ ಜೀವಿಸುವ ಸ್ಕ್ವಿಡ್ ಭರ್ಜರಿ 40 ಅಡಿಗಳಷ್ಟು ದೊಡ್ಡದಾಗಿ ಬೆಳೆಯುತ್ತವೆ. ಅಲ್ಲದೆ ಇವುಗಳ ಕಣ್ಣುಗಳು ಬಾಸ್ಕೆಟ್ ಬಾಲ್‌ನಷ್ಟು ದೊಡ್ಡದಾಗಿರುವುದು ವಿಶೇಷ.
Published by:Sushma Chakre
First published: