Viral Video: ಗಾಳಿಯಲ್ಲಿ ಹಾರಿ ತಟ್ಟೆಗೆ ಬೀಳುತ್ತೆ ದೋಸೆ; ಅಂಗಡಿಯವನ ಸ್ಟೈಲ್ ನೋಡಿ ಜನರು ಫುಲ್ ಶಾಕ್!

ಆ ದೋಸೆ ಮಾಡುವ ವ್ಯಕ್ತಿಯ ಕಾರ್ಯಶೈಲಿಯಿಂದ ಪ್ರಭಾವಿತರಾದ ಗೋಯೆಂಕಾ ಈ ಕ್ಲಿಪ್‌ಗೆ "ನೀವು ಮಾಡುವ ಕೆಲಸದಲ್ಲಿ ಅತ್ಯುತ್ತಮವಾದದ್ದನ್ನು ನೀಡಲು ಮೊದಲು ನಿಮ್ಮ ಆ ಕೆಲಸವನ್ನು ಪ್ರೀತಿಸಬೇಕು" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

ದೋಸೆ

ದೋಸೆ

  • Share this:
ಈಗಂತೂ ರಸ್ತೆ ಬದಿಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ಮಾಡುವ ಅನೇಕ ರೀತಿಯ ದೋಸೆಗಳನ್ನು (Street Dosa) ನಾವು ನೋಡಿರುತ್ತೇವೆ ಮತ್ತು ಅದರ ರುಚಿಯನ್ನು (Taste) ಸಹ ನಾವು ಇಷ್ಟ ಪಟ್ಟಿರುತ್ತೇವೆ. ಹಾಗೂ, ದೋಸೆ ಮಾಡುವ ನಾನಾ ರೀತಿಯ ವಿಡಿಯೋಗಳು (Dosa Making Videos) ಸಹ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ವೈರಲ್ ಸಹ ಆಗಿರುತ್ತವೆ. ಕಳೆದ ವರ್ಷ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರನ್ನು ಒಬ್ಬ ದೋಸೆ ಮಾರಾಟಗಾರ ಬೆರಗುಗೊಳಿಸಿದ್ದರೆ, ಈ ಬಾರಿ ಆರ್‌ಪಿಜಿ ಎಂಟರ್‌ಪ್ರೈಸಸ್‌ ಮುಖ್ಯಸ್ಥರಾದ ಹರ್ಷ್ ಗೋಯೆಂಕಾ (Harsh Goenka) ಅವರನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಈ ದೋಸೆ ಮಾರಾಟಗಾರನ ಹತ್ತಿರ ಗೋಯೆಂಕಾ ಅವರು ಯಾವಾಗ ಹೋಗಿ ದೋಸೆ ರುಚಿಯನ್ನು ನೋಡಿ ಬಂದರು ಎಂದು ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಮೂಡಬಹುದು. ವಿಶಿಷ್ಟ ಶೈಲಿಯಲ್ಲಿ ದೋಸೆಗಳನ್ನು ಬಡಿಸುವ ಆ ವ್ಯಕ್ತಿಯನ್ನು ತೋರಿಸುವ ಹೊಸ ಕ್ಲಿಪ್ ಅನ್ನು ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.

ನಿಮ್ಮ ಕೆಲಸವನ್ನು ಪ್ರೀತಿಸಬೇಕು

ಆ ದೋಸೆ ಮಾಡುವ ವ್ಯಕ್ತಿಯ ಕಾರ್ಯಶೈಲಿಯಿಂದ ಪ್ರಭಾವಿತರಾದ ಗೋಯೆಂಕಾ ಈ ಕ್ಲಿಪ್‌ಗೆ "ನೀವು ಮಾಡುವ ಕೆಲಸದಲ್ಲಿ ಅತ್ಯುತ್ತಮವಾದದ್ದನ್ನು ನೀಡಲು ಮೊದಲು ನಿಮ್ಮ ಆ ಕೆಲಸವನ್ನು ಪ್ರೀತಿಸಬೇಕು" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

ದೋಸೆ ಮಾಡುವ ವಿಧಾನ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿಯು ದೋಸೆಯನ್ನು ಎಡಕ್ಕೆ ತಿರುಗಿಸಿ ಗಾಳಿಯಲ್ಲಿ ಎಸೆಯುವುದನ್ನು ಕಾಣಬಹುದು ಮತ್ತು ಇನ್ನೊಬ್ಬ ವ್ಯಕ್ತಿ ಅದನ್ನು ತಟ್ಟೆಯಲ್ಲಿ ತಕ್ಷಣವೇ ಹಿಡಿಯುವುದನ್ನು ಕಾಣಬಹುದು. ಟಾಪಿಂಗ್ ಗಳೊಂದಿಗೆ ದೋಸೆಯನ್ನು ಬಡಿಸುವಾಗ, ಆ ವ್ಯಕ್ತಿಯು ಆಹಾರ ಪದಾರ್ಥವನ್ನು ಒಂದು ತಟ್ಟೆಯೊಳಗೆ ಇರಿಸಿ ನಂತರ ಅದನ್ನು ತನ್ನ ಸಹಾಯಕನ ಕಡೆಗೆ ಜಾರಿಸುತ್ತಾನೆ. ಅವನು ಅಷ್ಟಕ್ಕೇ ಸುಮ್ಮನೆ ಇರದೇ ಮತ್ತೊಂದು ವಿಧದ ದೋಸೆ ತಯಾರಿಸುವುದನ್ನು ಮುಂದುವರಿಸುತ್ತಾನೆ.

ಇದನ್ನೂ ಓದಿ:  Venice: ಪರಂಪರೆ ರಕ್ಷಣೆಗೆ ಶತಪ್ರಯತ್ನ ನಡೆಸುತ್ತಿದೆ ತೇಲುವ ನಗರ ವೆನಿಸ್! ಏಕೆ ಏನಾಯ್ತು?

ಭಾನುವಾರ ಹಂಚಿಕೊಂಡಿರುವ ಈ ಕ್ಲಿಪ್ ಇದುವರೆಗೆ ಟ್ವಿಟ್ಟರ್‌ನಲ್ಲಿ 1,41,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಆ ವ್ಯಕ್ತಿಯ ವೇಗದ ಕಾರ್ಯಶೈಲಿಯಿಂದ ನೆಟ್ಟಿಗರು ಆಶ್ಚರ್ಯಚಕಿತರಾದರು ಮತ್ತು ಅನೇಕರು ದೋಸೆ ಹಿಡಿಯುವವರ ಬಗ್ಗೆ ತಮಾಷೆಯ ಕಾಮೆಂಟ್ ಸಹ ಮಾಡಿದ್ದಾರೆ .ನೆಟ್ಟಿಗರಿಂದ ಫನ್ನಿ ಕಮೆಂಟ್ ಗಳು

"ನಾವು ಟೀಮ್ ಇಂಡಿಯಾಕ್ಕಾಗಿ ಹೊಸ ವಿಕೆಟ್ ಕೀಪರ್ ಅನ್ನು ಕಂಡುಕೊಂಡಿದ್ದೇವೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸ್ಲಿಪ್ ನಲ್ಲಿ ಉತ್ತಮ ಕ್ರಿಕೆಟಿಗ, ಒಂದೇ ಒಂದು ಕ್ಯಾಚ್ ಸಹ ಮಿಸ್ ಮಾಡಲ್ಲ. ದೋಸೆ ತಯಾರಕನು ಸುಂದರವಾದ ಇನ್ನಿಂಗ್ಸ್‌ಗಾಗಿ ಎದುರು ನೋಡಬಹುದು" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಈ ಮಧ್ಯೆ, ಯಾರೋ ಒಬ್ಬರು "ಮಹೀಂದ್ರಾ ಅವರನ್ನು ಭೇಟಿ ಮಾಡಲು ಹೋಗಿಲ್ಲವೇ ಎಂದು ಕೇಳುತ್ತಾರೆ, ಇವರು ಇಲ್ಲಿಂದ ಹೋದರೆ ಆ ಸಮಯದಲ್ಲಿ ದೋಸೆ ಕೌಂಟರ್ ಅನ್ನು ಯಾರು ನೋಡಿಕೊಳ್ಳುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ. "ಈ ಸಂಭಾವಿತ ವ್ಯಕ್ತಿ ದೋಸೆ ಮಾಡುವ ವೇಗವನ್ನು ನೋಡಿದರೆ ರೋಬೊಟ್ ಸಹ ಇವರ ಮುಂದೆ ನಿಧಾನಗತಿಯಂತೆ ಕಾಣುವಂತೆ ಮಾಡುತ್ತಾರೆ. ನಾನು ಅವನನ್ನು ನೋಡಿ ದಣಿದಿದ್ದೇನೆ ಮತ್ತು ಹಸಿದಿದ್ದೇನೆ ಕೂಡ..ಕಳೆದ ವರ್ಷ ಮಹೀಂದ್ರಾ ಅವರು ಈ ದೋಸೆ ಮಾರುವವನ ಬಗ್ಗೆ ಟ್ವೀಟ್ ಮಾಡಿದ್ದರು" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.ಇದನ್ನೂ ಓದಿ:  Shark Video: ಶಾರ್ಕ್ ಏನಾದ್ರೂ ನುಂಗಿದ್ರೆ ಬಾಯಿ ಒಳಗೆ ಹೇಗಿರುತ್ತೆ? ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಕೆಲಸದಲ್ಲಿದೆ ನೈಪುಣ್ಯತೆ

"ನಾನು ಹಾರುವ ಸಾಸರ್ ಗಳನ್ನು ಕೇಳಿದ್ದೇನೆ, ಆದರೆ ಹಾರುವ ದೋಸೆಯ ಬಗ್ಗೆ ಕೇಳುತ್ತಿರುವುದು ಇದೇ ಮೊದಲು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಒಂದೇ ಕೆಲಸವನ್ನು ಪದೇ ಪದೇ ಮಾಡುವುದರಿಂದ ನಮ್ಮ ಕೌಶಲ್ಯಗಳು ಚುರುಕಾಗುತ್ತವೆ, ಈ ದೋಸೆ ತಯಾರಿಸುವವರು ಸಹ ತಮ್ಮ ಕೆಲಸದಲ್ಲಿ ನೈಪುಣ್ಯತೆಯನ್ನು ಹೊಂದಿರುವಂತೆ ಕಾಣುತ್ತದೆ" ಎಂದು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರು.
Published by:Mahmadrafik K
First published: