Video Viral: ಕರಡಿ ಮೇಲೆ ಎರಗಿ ಹಿಂಸಿಸಿದ ನಾಯಿಗಳ ಹಿಂಡು!

Image for representation.

Image for representation.

ಈ ಘಟನೆ ಕುರಿತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ ನಂತರ ಈ ದಂಪತಿಯನ್ನು ಬಂಧಿಸಲಾಯಿತು. ದರೋಡೆ ನಡೆಸಲು ಮಾಡುವ ಹುನ್ನಾರ, ಪ್ರಾಣಿಗಳ ಬೆಟ್ಟಿಂಗ್ ಮತ್ತು ಫೈಟಿಂಗ್, ಕಪ್ಪು ಕರಡಿಯನ್ನು ಕಾನೂನು ಬಾಹಿರವಾಗಿ ಹಿಡಿಯುವುದು ಹೀಗೆ ವಿವಿಧ ಆರೋಪಗಳ ಮೇಲೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.

ಮುಂದೆ ಓದಿ ...
  • Share this:

ಕರಡಿಯನ್ನು ಹಿಡಿಯಲು ಡೋನಟ್ಸ್ ಮತ್ತು ಪೇಸ್ಟ್ರಿ ಬಳಸಿರುವ ಫ್ಲೋರಿಡಾ ದಂಪತಿ ಇಡೀ ನಾಯಿಗಳ ಹಿಂಡು ಕರಡಿ ಮೇಲೆ ದಾಳಿ ನಡೆಸಿ ಘಾಸಿಗೊಳ್ಳುವಂತೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಮರದ ಮೇಲಿಂದ ಕರಡಿ ಜಿಗಿದಾಕ್ಷಣ ಇಡೀ ನಾಯಿಗಳ ಗುಂಪು ಕರಡಿ ಮೇಲೆ ಹಾರಿ ಕಚ್ಚುತ್ತಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಈ ಕೃತ್ಯ ಒಪ್ಪಿಕೊಂಡಿರುವ ದಂಪತಿ ಚಾರ್ಲ್ಸ್‌ ಸ್ಕಾರ್‌ಬ್ರೋ ಮತ್ತು ಹನ್ನಾ ಖುದ್ದಾಗಿ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ. ಈ ಘಟನೆ ಅಕಾಲಾ ರಾಷ್ಟ್ರೀಯ ಅರಣ್ಯದಲ್ಲಿ ತರಬೇತಿ ಪಡೆದ ನಾಯಿಗಳನ್ನು ಕರಡಿಯನ್ನು ಹಿಡಿಯಲು ಬಳಸಿಕೊಂಡಿರುವುದು ಕಾಣುತ್ತಿದೆ.


ಈ ಘಟನೆ ಕುರಿತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ ನಂತರ ಈ ದಂಪತಿಯನ್ನು ಬಂಧಿಸಲಾಯಿತು. ದರೋಡೆ ನಡೆಸಲು ಮಾಡುವ ಹುನ್ನಾರ, ಪ್ರಾಣಿಗಳ ಬೆಟ್ಟಿಂಗ್ ಮತ್ತು ಫೈಟಿಂಗ್, ಕಪ್ಪು ಕರಡಿಯನ್ನು ಕಾನೂನು ಬಾಹಿರವಾಗಿ ಹಿಡಿಯುವುದು ಹೀಗೆ ವಿವಿಧ ಆರೋಪಗಳ ಮೇಲೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.


ಒಕಲಾ ಸ್ಟಾರ್ ಬರ್ನಿಂಗ್ ಪ್ರಕಟಿಸುವ ವರದಿ ಪ್ರಕಾರ, ಈ ದಂಪತಿ ಕರಡಿಗಳ ಮೇಲೆ ನಾಯಿಗಳನ್ನು ಬಿಟ್ಟು ಹಿಂಸೆ ನೀಡುವ ಕೃತ್ಯದಲ್ಲಿ ಭಾಗಿಯಾಗಿದ್ದರು. ಕೆಲವೊಮ್ಮೆ ಕರಡಿಗಳನ್ನು ತಮ್ಮ ಜೀವವನ್ನು ಉಳಿಸಿಕೊಳ್ಳಲು ಮರಗಳನ್ನು ಹತ್ತುತ್ತಿದ್ದವು. ಅಕಸ್ಮಾತ್ ಕರಡಿಗಳು ಆಯತಪ್ಪಿ ನೆಲದ ಮೇಲೆ ಬಿದ್ದರೆ ನಾಯಿಗಳು ಅವುಗಳ ಮೇಲೆ ಅಮಾನವೀಯವಾಗಿ ದಾಳಿ ಮಾಡುತ್ತಿದ್ದವು.


ಈ ಹಿನ್ನೆಲೆ ಚಾರ್ಲ್ಸ್‌ ಸ್ಕಾರ್‌ಬ್ರೋಗೆ 2 ವರ್ಷ ಶಿಕ್ಷೆ ನೀಡಲಾಗಿದೆ. ಅವರು ತನಿಖೆಗೆ ಸಹಕರಿಸುವುದಾಗಿ ಹೇಳಿದ ಕಾರಣ ಶಿಕ್ಷೆ ಕಡಿಮೆಯಾಗಿದೆ. ಆದರೆ,ಕರಡಿಯನ್ನು ಕಾನೂನು ಬಾಹಿರವಾಗಿ ಇರಿಸಿಕೊಂಡಿದ್ದು ಹಾಗೂ ಕರಡಿಯನ್ನು ಸಂವಹನ ಸಾಧನವನ್ನಾಗಿ ಬಳಸಿಕೊಂಡಿರುವುದಕ್ಕಾಗಿ ಚಾರ್ಲ್ಸ್‌ ಪತ್ನಿ ಹನ್ನಾ ಅವರಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.


ರಾಜ್ಯದ ಕಾನೂನು ಅಧಿಕಾರಿಗಳಿಗೆ ಸುಮಾರು 19,68,583.50 ರೂ. ಹಾಗೂ 16,65,786.19 ರೂ. ಗಳ ಶುಲ್ಕವನ್ನು ಫ್ಲೋರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೆ ಪಾವತಿಸಲು ಹೇಳಲಾಗಿದೆ. ಕರಡಿಗಳನ್ನು ಬೆನ್ನಟ್ಟಲು ಹಾಗೂ ಬೇಟೆಯಾಡಲು ಬಳಸಿದ್ದ ತರಬೇತಿ ಪಡೆದ ನಾಯಿಗಳನ್ನು ಒಕಲಾ ರಾಷ್ಟ್ರೀಯ ಅರಣ್ಯಕ್ಕೆ ನೀಡಲು ತಿಳಿಸಲಾಗಿದೆ ಹಾಗೂ ಅವುಗಳನ್ನು ತರಬೇತಿ ನೀಡುವುದಕ್ಕೂ ನಿಷೇಧ ಹೇರಲಾಗಿದೆ ಎಂದು ಒಕಲಾ ಸ್ಟಾರ್ ಬರ್ನಿಂಗ್ ತಿಳಿಸಿದೆ.




ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾಸಿಕ್ಯೂಟರ್ಗ‌ಳೊಂದಿಗೆ ಸಹಕರಿಸಿದ ಕಾರಣ ಮೂರನೇ ಸಹ-ಪ್ರತಿವಾದಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಎಂದು ಪೋರ್ಟಲ್ ವರದಿ ಮಾಡಿದೆ. ರೆಡ್ಡಿಶ್ ಅವರ ಮಾಜಿ ಪತಿ, ಡಸ್ಟಿನ್ ಆಫ್ ಲೇಕ್ ಬಟ್ಲರ್, ಒರ್ಮಂಡ್ ಬೀಚ್‍ನ ಕ್ರಿಸ್ಟೋಫರ್ ಎಲಿಯಟ್ ಹಾನ್, ಲೇಕ್ ಬಟ್ಲರ್‍ನ ವಿಲಿಯಂ ಟೈಲರ್ ವುಡ್, ಜಾರ್ಜಿಯಾದ ಮಾರ್ಕ್ ಕ್ರಿಸ್ಟೋಫರ್ ಲಿಂಡ್ಸೆ, ಟ್ರಾಯ್ ಸ್ಟಾರ್ಲಿಂಗ್ ಆಫ್ ಲೇಕ್ ಬಟ್ಲರ್ ಮತ್ತು ವರ್ಜೀನಿಯಾದ ವಿಲಿಯಂ ಲ್ಯಾಂಡ್ರಮ್ ಎಂಬ ಹೆಸರಿನ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ. ಈ ಆರು ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.


First published: