HOME » NEWS » Trend » VIRAL VIDEO FISHERMAN FINDS AN UNOPENED WHISKY BOTTLE INSIDE A FISH STOMACH SHOCKING VIDEO GOES VIRAL STG SCT

Viral Video: ಮೀನಿನ ಹೊಟ್ಟೆಯಲ್ಲಿತ್ತು ಓಪನ್ ಮಾಡದ ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!

ಮೀನುಗಾರನೊಬ್ಬ ಬೀಸಿದ ಬಲೆಯಲ್ಲಿ ಸಿಲುಕಿಕೊಂಡ ಮೀನಿನ ಹೊಟ್ಟೆಯೊಳಗೆ ಏನೋ ಇದೆ ಎಂಬುದು ಮೀನುಗಾರನ ಗಮನಕ್ಕೆ ಬಂದಿದೆ. ಮೀನನ್ನು ಕೊಯ್ದಾಗ ವಿಸ್ಕಿಯ ಪೂರ್ತಿ ಬಾಟಲಿಯೊಂದು ದೊರಕಿದೆ.

Trending Desk
Updated:June 23, 2021, 10:02 AM IST
Viral Video: ಮೀನಿನ ಹೊಟ್ಟೆಯಲ್ಲಿತ್ತು ಓಪನ್ ಮಾಡದ ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!
ಮೀನಿನ ಹೊಟ್ಟೆಯೊಳಗಿದ್ದ ವಿಸ್ಕಿ ಬಾಟಲ್
  • Share this:

ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲ್ ಸಿಕ್ಕಿದರೆ ಅದಕ್ಕಿಂತ ಸಂಭ್ರಮ ಇನ್ನೊಂದಿದೆಯೇ? ಹೌದು ಮೀನುಗಾರನೊಬ್ಬ ಬೀಸಿದ ಬಲೆಯಲ್ಲಿ ಸಿಲುಕಿಕೊಂಡ ಮೀನಿನ ಹೊಟ್ಟೆಯೊಳಗೆ ಏನೋ ಇದೆ ಎಂಬುದು ಮೀನುಗಾರನ ಗಮನಕ್ಕೆ ಬಂದಿದೆ. ಮೀನನ್ನು ಕೊಯ್ದಾಗ ವಿಸ್ಕಿಯ ಪೂರ್ತಿ ಬಾಟಲಿಯೊಂದು ದೊರಕಿದೆ. ಈ ಘಟನೆಯನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂತೆಯೇ ಸೋಷಿಯಲ್ ಮೀಡಿಯಾದ ಇತರ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಪ್ರಸಾರ ಮಾಡಲಾಗಿದೆ.


ಮೀನುಗಾರನಿಗೆ ದೊರಕಿದ ವಿಸ್ಕಿ ಬಾಟಲಿಯಿಂದ ಆತ ಖುಷಿಯಾಗಿದ್ದರೂ ವನ್ಯಜೀವಿಗಳಿಗೆ ಬಂದೊದಗುತ್ತಿರುವ ಅಪಾಯ ಯಾರನ್ನೂ ಹೆದರುವಂತೆ ಮಾಡುತ್ತದೆ. ಸಾಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಮತ್ತು ಕೈಗಾರಿಕಾ ತ್ಯಾಜ್ಯಗಳು ಹೆಚ್ಚು ಪ್ರಮಾಣದಲ್ಲಿ ಸೇರುತ್ತಿರುವುದರಿಂದ ನೀರಿನಲ್ಲಿ ವಾಸಿಸುವ ಜಲಚರಗಳು ಇಂತಹುದೇ ವಸ್ತುಗಳನ್ನು ಸೇವಿಸುತ್ತಿವೆ. ಇವು ಉಸಿರಾಡುವಾಗ ಇಲ್ಲವೇ ಆಹಾರವೆಂದು ತಿನ್ನುವ ಸಂದರ್ಭದಲ್ಲಿ ಸಾಗರದಲ್ಲಿರುವ ಈ ತ್ಯಾಜ್ಯ ವಸ್ತುಗಳು ಅವುಗಳ ಹೊಟ್ಟೆಯನ್ನು ಸೇರಿಕೊಳ್ಳುತ್ತಿವೆ.Youtube Video

ಪರಿಸರ ನಾಶದಿಂದ ಇಡೀ ಜೀವ ಸಂಕುಲ ನಶಿಸುತ್ತಿದೆ. ಪ್ರತೀ ವರ್ಷ 1 ಲಕ್ಷ ಸಮುದ್ರ ಜೀವ ಸಂಪತ್ತು ನಾಶಹೊಂದುತ್ತಿದ್ದು, ಕಳೆದ ವರ್ಷ ಶೇ.23 ರಷ್ಟು ಜೀವ ಸಂಪತ್ತು ನಾಶಹೊಂದಿವೆ. ಪರಿಸರಕ್ಕೆ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಜೀವ ರಾಶಿ ಹಾಗೂ ಪರಿಸರ ಉಳಿವು ಸಾಧ್ಯ ಎಂಬುದು ಪರಿಸರ ಸಂರಕ್ಷಕರ ವಾದವಾಗಿದೆ.


ಇದನ್ನೂ ಓದಿ: DK Shivakumar: ಜೈಲಿನಲ್ಲಿದ್ದಾಗ ಸಹಾಯ ಮಾಡಿದ್ದ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಟ್ಟ ಡಿಕೆ ಶಿವಕುಮಾರ್!

ಮೀನುಗಾರನಿಗೆ ದೊರೆತಿರುವ ಈ ಮೀನಿನ ಹೊಟ್ಟೆಯೊಳಗೆ ಇಷ್ಟುದೊಡ್ಡ ಬಾಟಲಿ ಹೇಗೆ ಹೋಯಿತು ಎಂಬುದು ಪ್ರತಿಯೊಬ್ಬರ ಆಶ್ಚರ್ಯಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ಸಾಗರಗಳಿಗೆ ಹೆಚ್ಚಿನ ಹಾನಿ ಉಂಟುಮಾಡಿದೆ ಮತ್ತು ದೈನಂದಿನ ಜೀವಿಗಳು ತಮ್ಮ ಹೊಟ್ಟೆಯಲ್ಲಿ ಘನ ವಸ್ತುಗಳು ಅಥವಾ ಜೈವಿಕ ವಿಘಟನೀಯ ವಸ್ತುಗಳೊಂದಿಗೆ ಕಂಡುಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.


ಈ ವರ್ಷದ ಆರಂಭದಲ್ಲಿ, ಫ್ಲೋರಿಡಾದ ಎಫ್‌ಡಬ್ಲ್ಯೂಸಿ ಮೀನು ಮತ್ತು ವನ್ಯಜೀವಿ ಸಂಶೋಧನಾ ಕೇಂದ್ರದ ಜೀವಶಾಸ್ತ್ರಜ್ಞರು ಮೀನಿನ ಹೊಟ್ಟೆಯಲ್ಲಿ ದೊರಕಿರುವ ಈ ಬಾಟಲಿಯಿಂದ ಅಸಾಮಾನ್ಯ ಆವಿಷ್ಕಾರದಿಂದ ಬೆಚ್ಚಿಬಿದ್ದರು. ಈ ತಿಂಗಳ ಆರಂಭದಲ್ಲಿ, ದಕ್ಷಿಣ ಯೆಮನ್‌ನ ಸೆರಿಯಾ ಕರಾವಳಿಯಲ್ಲಿ 35 ಮೀನುಗಾರರ ಗುಂಪು ಏಡೆನ್ ಕೊಲ್ಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ದೈತ್ಯ ವೀರ್ಯ ತಿಮಿಂಗಿಲದ ಶವವನ್ನು ಕಂಡರು. ಅವರು ಮೃತದೇಹವನ್ನು ತೆರೆದಾಗ, ಪ್ರಾಣಿಗಳ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಮೇಣ ಮತ್ತು ಕಪ್ಪು ಕೆಸರು ಕಂಡುಬಂದಿತು. ಅವರು ನಿಜವಾಗಿಯೂ ಮಿಲಿಯನ್ 1.5 ಮಿಲಿಯನ್ ಮೌಲ್ಯದ ಅಂಬರ್ಗ್ರಿಸ್ (ತಿಮಿಂಗಿಲ ವಾಂತಿ) ಅನ್ನು ಅನ್ವೇಷಿಸಿದ್ದಾರೆ.

Youtube Video

ಒಟ್ಟಾರೆ ಸಾಗರದಲ್ಲಿ ನಡೆಯುತ್ತಿರುವ ಕೈಗಾರಿಕಾ ತ್ಯಾಜ್ಯಗಳ ವಿಷವು ಮೂಕ ಪ್ರಾಣಿಗಳ ಹೊಟ್ಟೆಯನ್ನು ಸೇರುತ್ತಿವೆ. ಸಮುದ್ರ ಸಂರಕ್ಷಣೆಗೆ ಅಗತ್ಯವಾಗಿರುವ ಕಾನೂನುಗಳಿದ್ದರೂ ಇದರ ಸರಿಯಾದ ನಿರ್ವಹಣೆ ನಡೆಯುತ್ತಿಲ್ಲ. ಕೈಗಾರಿಕೆಗಳು ತ್ಯಾಜ್ಯವನ್ನು ಬಿಡುಗಡೆ ಮಾಡುವ ಮೊದಲು ಅದನ್ನು ಸ್ವಚ್ಛಗೊಳಿಸಬೇಕೆಂಬ ನಿಯಮವಿದೆ. ಸಮುದ್ರದಲ್ಲಿ ಗಾಜು, ವಿಷ ಪದಾರ್ಥಗಳು ಎಷ್ಟೋ ಸಲ ದೊರಕಿದ ನಿದರ್ಶನಗಳಿವೆ. ಇದರ ಮೂಲ ಕಾರಣ ಕೈಗಾರಿಕಾ ತ್ಯಾಜ್ಯವನ್ನು ವಿಂಗಡಿಸದೇ ಇರುವುದಾಗಿದೆ.


Published by: Sushma Chakre
First published: June 23, 2021, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories