Viral News: 'ಜೀವಂತ ಡೈನೋಸಾರ್' ಖ್ಯಾತಿಯ 10.5 ಅಡಿ ಉದ್ದದ ಪುರಾತನ ಮೀನನ್ನು ಹಿಡಿದ ಮೀನುಗಾರ: ವೈರಲ್‌ ವಿಡಿಯೋ ನೋಡಿ..

ಕೆನಡಾ ದೇಶದ ಮೀನುಗಾರನೊಬ್ಬ ಇಂತಹ ಮೀನೊಂದನ್ನು ಹಿಡಿದು ತನ್ನ ಜೀವನದ ಅದೃಷ್ಟವನ್ನೇ ಬದಲಾಯಿಸಿಕೊಂಡಿದ್ದಾನೆ. ಅವನಿಗೆ ಸಿಕ್ಕಿರುವ ಈ ಮೀನು 10.5 ಅಡಿ ಉದ್ದವಾಗಿರುವುದಲ್ಲದೆ ಸುಮಾರು ನೂರು ವರ್ಷಗಳ ಆಯಸ್ಸು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ.

ಲಿವಿಂಗ್ ಡೈನೋಸರ್ ಖ್ಯಾತಿಯ ಮೀನು

ಲಿವಿಂಗ್ ಡೈನೋಸರ್ ಖ್ಯಾತಿಯ ಮೀನು

  • Share this:
ವಿಶ್ವ ಜಲ ದಿನ ಆಚರಣೆಯಾಗಿದೆ. ಜಲ ಎಂಬುದು ಎಲ್ಲ ಜೀವಿಗಳ ಜೀವಾಳ. ಅಂತೆಯೇ ಜಲ ಜೀವಿಗಳಿಗೆ ಪ್ರತಿ ಘಳಿಗೆಯೂ ಅವಶ್ಯಕವಾಗಿರುವ ಜಲ ತನ್ನ ಒಡಲಿನಲ್ಲಿ ಅದೆಷ್ಟೋ ಚಿತ್ರ ವಿಚಿತ್ರ ಜೀವಿಗಳಿಗೆ ಆಶ್ರಯ ನೀಡಿದೆ. ಈಗಲೂ ಸಾಗರದಾಳದಲ್ಲಿ ಹುಡುಕಿದರೆ ನಮಗೆ ಗೊತ್ತೇ ಇರದ ಅಥವಾ ಪಟ್ಟಿಯಲ್ಲಿ ಸೇರಿಸಲಾಗದ ಅದೆಷ್ಟೋ ಜೀವಿಗಳಿವೆ, ಮೀನುಗಳಿವೆ ಎಂದು ಹೇಳುತ್ತಾರೆ ಹಲವು ವಿಜ್ಞಾನಿಗಳು (Scientists). ಅದರಲ್ಲೂ ವಿಶೇಷವಾಗಿ ಮೀನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಬೇಧಗಳಿವೆ. ಅಂತಹ ಒಂದು ಪ್ರಬೇಧವಾಗಿದೆ ಸ್ಟರ್ಜನ್ ಎಂಬ ಮೀನು.

ಹೌದು, ಈ ಸ್ಟರ್ಜನ್ ಮೀನನ್ನು (Fish) 'ಜೀವಂತ ಡೈನೋಸಾರ್' (Living Dinosaur) ಎಂದೂ ಸಂಭೋದಿಸುತ್ತಾರೆ, ಕಾರಣ ಇವು ಅತಿ ಪುರಾತನವಾದ ಮೀನು ಪ್ರಬೇಧ. ಇದು ಸಾಮಾನ್ಯವಾಗಿ ಸಿಗುವುದಿರಲಿ, ಗೋಚರಿಸುವುದೂ ಸಹ ಅತ್ಯಂತ ವಿರಳ.

ನೂರು ವರ್ಷಗಳ ಆಯಸ್ಸು ಇರೋ ಮೀನು ಹಿಡಿದ

ಅಂಥದ್ದರಲ್ಲಿ ಕೆನಡಾ ದೇಶದ ಮೀನುಗಾರನೊಬ್ಬ ಇಂತಹ ಮೀನೊಂದನ್ನು ಹಿಡಿದು ತನ್ನ ಜೀವನದ ಅದೃಷ್ಟವನ್ನೇ ಬದಲಾಯಿಸಿಕೊಂಡಿದ್ದಾನೆ. ಅವನಿಗೆ ಸಿಕ್ಕಿರುವ ಈ ಮೀನು 10.5 ಅಡಿ ಉದ್ದವಾಗಿರುವುದಲ್ಲದೆ ಸುಮಾರು ನೂರು ವರ್ಷಗಳ ಆಯಸ್ಸು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ.

ಕೆನಡಾದ ಫ್ರೇಸರ್ ಎಂಬ ನದಿಯಲ್ಲಿ ಕಂಡುಬರುವ ಮೀನು

ಯ್ವೆಸ್ ಬಿಸ್ಸನ್ ಎಂಬ ಕೆನಡಾ ದೇಶದ ಮೀನುಗಾರ ಈ ದೈತ್ಯ ಮೀನನ್ನು ಹಿಡಿದಿದ್ದಾನೆ. ಈ ಮೀನುಗಳು ಕೆನಡಾದ ಫ್ರೇಸರ್ ಎಂಬ ನದಿಯಲ್ಲಿ ಕಂಡುಬರುತ್ತವೆ ಎನ್ನಲಾಗಿದ್ದು ಈ ರೀತಿಯ ದೈತ್ಯ ಮೀನು ಸಿಗುವುದು ಬಲು ಅಪರೂಪ ಎಂದೇ ಹೇಳಲಾಗುತ್ತದೆ. ಇಂತಹ ದೈತ್ಯ ಮೀನನ್ನು ಹಿಡಿದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅನುಭವಿ ಮೀನುಗಾರ ಬಿಸ್ಸನ್, ಈ ಮೀನು ಏನಿಲ್ಲವೆಂದರೂ ನೂರು ವರ್ಷಗಳಷ್ಟು ವಯಸ್ಸು ಹೊಂದಿರುವುದಾಗಿ ಅಂದಾಜಿಸಿ ಹೇಳಿದ್ದಾನೆ.

ಟಿಕ್​ಟಾಕ್​ನಲ್ಲಿ ವೈರಲ್ ಆಯ್ತು ಬೃಹತ್ ಮೀನು

ಬಿಸ್ಸನ್ ಈ ಮೀನನ್ನು ಹಿಡಿಯುತ್ತಿರುವ ಪ್ರಸಂಗವನ್ನು ಅವನ ಮೀನುಗಾರಿಕೆ ಕ್ರಿಯೆಯಲ್ಲಿ ಭಾಗೀದಾರನಾಗಿರುವಾತ ವಿಡಿಯೋ ಮಾಡಿಕೊಂಡು ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಪ್ಲೋಡ್ ಮಡುತ್ತಿದ್ದ ಹಾಗೆಯೇ ಈ ವಿಡಿಯೋ ಸಖತ್ ವೈರಲ್ ಆಗುತ್ತಿರುವುದಾಗಿ ತಿಳಿದುಬಂದಿದೆ. 'ಸ್ಟರ್ಜನ್ ಮಾರ್ಗದರ್ಶಿ' ಎಂತಲೇ ತನ್ನನ್ನು ತಾನ್ ಹೇಳಿಕೊಳ್ಳುವ ಬಿಸ್ಸನ್ ತಮ್ಮ ಜೀವಮಾನದಲ್ಲೇ ಇಷ್ಟು ದೊಡ್ಡ ಗಾತ್ರದ ಸ್ಟರ್ಜನ್ ಮೀನು ಹಿಡಿದಿರುವುದು ಪ್ರಥಮವಾಗಿದೆ ಎಂದು ಹೆಮ್ಮೆಯಿಂದ ನುಡಿಯುತ್ತಾನೆ.

ಗಾತ್ರ ದೊಡ್ಡದು, ತೂಕ ಹೆಚ್ಚು, ಅಂತಿಂಥಾ ಮೀನಲ್ಲ

ವಿಡಿಯೋದಲ್ಲಿ ಬಿಸ್ಸನ್ ಈ ತಾಜಾ ನೀರಿನ ವಾಸಿಯಾದ ಮೀನಿನ ತಲೆಯನ್ನು ಕ್ಯಾಮೆರಾದ ಕಡೆ ತಿರುಗಿಸಲು ಪರದಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಉತ್ಸುಕನಾಗಿರುವ ಬಿಸ್ಸನ್ "ಹೇ ಇದನ್ನೊಮ್ಮೆ ನೋಡು, ಇದು ಹತ್ತೂವರೆ ಅಡಿ ಉದ್ದವಿದೆ ಹಾಗೂ ಬಹುಶಃ 500 ಇಲ್ಲವೆ 600 ಪೌಂಡ್ಸ್‌ ಭಾರದಷ್ಟು ತೂಗಬಹುದು" ಎಂದು ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ಬಹಳಷ್ಟು ಜನರು ಅಚ್ಚರಿ ಹಾಗೂ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಜೀವಂತ ಡೈನೋಸಾರ್ ಹೆಸರೇಕೆ..?

ಈ ಸ್ಟರ್ಜನ್ ಎಂಬುದು ಮೀನಿನ ಒಂದು ಕುಟುಂಬದ ಹೆಸರಾಗಿದ್ದು ಇದರಲ್ಲಿ ಹಲವು ಪ್ರಬೇಧಗಳ ಮೀನುಗಳಿವೆ. ಇಲ್ಲಿಯವರೆಗೆ ಸುಮಾರು 29 ಪ್ರಬೇಧಗಳ ಮೀನುಗಳನ್ನು ಗುರುತಿಸಲಾಗಿದೆ. ಇವುಗಳ ಮೂಲ ಡೈನೋಸಾರ್ ಕಾಲದಿಂದಲೇ ಇದ್ದು ಇಲ್ಲಿಯವರೆಗೂ ಇವು ಗಮನಾರ್ಹವಾದ ವಿಕಸನದ ಬದಲಾವಣೆಗಳನ್ನು, ಮಾರ್ಪಾಡುಗಳನ್ನು ಪಡೆದುಕೊಂಡಿಲ್ಲ.

ಇದನ್ನೂ ಓದಿ: Viral Video: ಕಿಸ್​ ಕೊಟ್ಟಿದ್ದಕ್ಕೆ ಮಾಲೀಕನಿಗೇ ಕ್ಯಾಕರಿಸಿ ಉಗಿದ ಬೆಕ್ಕು, ಹ್ಹಹ್ಹ.. ವಿಡಿಯೋ ನೋಡಿ ಸಖತ್​ ಫನ್ನಿ ಇದೆ

ಇವು ಅತಿ ಪುರಾತನವಾದ ಮೀನಿನ ಕುಟುಂಬವಾಗಿದ್ದು ಏನಿಲ್ಲವೆಂದರೂ 200 ಮಿಲಿಯನ್ ವರ್ಷಗಳಿಂದಲೂ ಪ್ರಚಲಿತದಲ್ಲಿವೆ ಎನ್ನಲಾಗಿದೆ. ಹಾಗಾಗಿ ಇವುಗಳನ್ನು 'ಜೀವಂತ ಡೈನೋಸಾರ್' ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

RFID ಚಿಪ್ ಅಳವಡಿಸಿ ಮತ್ತೆ ನೀರಿಗೆ

ಬಿಸ್ಸನ್ ಈ ಮೀನನ್ನು ಹಿಡಿದು ಇದರ ಕುರಿತಾದ ದತ್ತಾಂಶಗಳನ್ನು ಸಂಗ್ರಹಿಸಿ ಮತ್ತೆ ನೀರಿಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಆ ಮೀನಿಗೆ RFID ಚಿಪ್ ಅನ್ನು ಸಹ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಅದನ್ನು ಪರೀಕ್ಷಿಸಿದವರಿಗೆ ಗೊತ್ತಾದ ಮತ್ತೊಂದು ವಿಷಯವೆಂದರೆ ಈ ಮೀನು ಮುಂಚೆ ಯಾರಿಗೂ ಸಿಕ್ಕಿಲ್ಲ ಎಂಬುದು, ಅಂದರೆ ಅದು ಹುಟ್ಟಿ ಬೆಳೆದಾಗಿನಿಂದ ಇಲ್ಲಯವರೆಗೆ ಯಾವ ಮೀನುಗಾರನಿಗೂ ಇದು ಸಿಕ್ಕಿಲ್ಲವಂತೆ. ಅಲ್ಲದೆ ಈ ಮೀನಿನ ವಯಸ್ಸು ಸುಮಾರು ನೂರಕ್ಕಿಂತಲೂ ಅಧಿಕವಾಗಿರಬಹುದೆಂದು ಪರಿಣಿತರು ಅಂದಾಜಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Viral Video: ಮಹಿಳೆ ಮೇಲೆ ಕೋತಿಗಳ ದಾಳಿ: ಮುಂದೇನಾಯ್ತು? ಈ ವಿಡಿಯೋ ನೋಡಿ

ವಿಶೇಷವೆಂದರೆ, ಇವು ಪುರಾತನ ಪ್ರಬೇಧವಾಗಿದ್ದರೂ ಈ ಮೀನುಗಳಿಗೆ ಹಲ್ಲುಗಳಿಲ್ಲ. ಹಾಗಾಗಿ ಇದರಿಂದ ಮನುಷ್ಯರಿಗೆ ಯಾವುದೇ ರೀತಿಯ ತೊಂದರೆಗಳಿರುವುದಿಲ್ಲ. ಸಾಮಾನ್ಯವಾಗಿ ಈ ಮೀನುಗಳು ಅಂದಾಜು 10 ಅಡಿಗಳವರೆಗೆ ಬೆಳೆಯುತ್ತವೆ ಎಂದು ಹೇಳಲಾಗಿದ್ದು, ಬ್ರಿಟಾನಿಕಾ ವರದಿ ಮಾಡಿರುವಂತೆ 26 ಅಡಿಗೂ ಉದ್ದದ ಸ್ಟರ್ಜನ್ ಮೀನುಗಳನ್ನು ನೋಡಲಾಗಿದೆ ಎಂಬ ಮಾಹಿತಿಯಿದೆ.
Published by:Divya D
First published: