Viral Video: ಕೇಳಿದ್ದು ಮೀನಿನ ಖಾದ್ಯ, ಕೊಟ್ಟಿದ್ದು ಜೀವಂತ ಮೀನು: ವೈರಲ್ ಆಗ್ತಿರೋ ವಿಡಿಯೋ ನೋಡಿ

ಈ ವೀಡಿಯೊವನ್ನು Instagram ನಲ್ಲಿ @takahiro4601 ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 7.8 ಮಿಲಿಯನ್ (78 ಲಕ್ಷಕ್ಕೂ ಹೆಚ್ಚು_ ವೀಕ್ಷಣೆಗಳು ಮತ್ತು 17 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ.

ಮೀನು

ಮೀನು

  • Share this:
ಇಂದು ಮೊಬೈಲ್(Mobile)ನಲ್ಲಿ ಸೋಶಿಯಲ್ ಮೀಡಿಯಾ (Social Media) ಓಪನ್ ಮಾಡಿದ್ರೆ ಸಾಕು ಸಾಲು ಸಾಲು ವಿಡಿಯೋಗಳು (Viral Videos) ಕಣ್ಮುಂದೆ ಬರುತ್ತವೆ. ಎಲ್ಲ ವಿಡಿಯೋಗಳು ನಿಜ ಅಂತ ನಂಬೋದು ಸಹ ಕಷ್ಟ. ಇದೀಗ ಇಂಟರ್ ನೆಟ್ (Internet) ನಲ್ಲಿ ಹಳೆಯ ವಿಡಿಯೋ(Old Video)ವೊಂದು ಮತ್ತೊಮ್ಮೆ ವೈರಲ್ ಆಗ್ತಿದೆ. ಇಲ್ಲಿ ರೆಸ್ಟೋರೆಂಟ್ (Restaurant) ಸಿಬ್ಬಂದಿ ಗ್ರಾಹಕರಿಗೆ ಜೀವಂತ ಮೀನು ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸುತ್ತಿದ್ದಾರೆ. ನಾವು ಹಿಂದೆಂದೂ ನೋಡಿರದ ವಿಡಿಯೋವನ್ನು ನೋಡುತ್ತಿದ್ದೇವೆ ಎಂದು ಕಮೆಂಟ್ ಹಾಕಿದ್ದಾರೆ. ಫಿಶ್ ಅಡುಗೆ (Fish Food) ಬದಲಾಗಿ, ಜೀವಂತ ಮೀನು (Live Fish) ನೀಡಿದ್ದು ತಪ್ಪು ಎಂದು ಗ್ರಾಹಕರು ಹೇಳಿದ್ದಾರೆ. ಈ ವಿಡಿಯೋದಲ್ಲಿ ಮೀನು ಬಾಯಿ ತೆರೆಯುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ವೀಡಿಯೊವನ್ನು Instagram ನಲ್ಲಿ @takahiro4601 ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 7.8 ಮಿಲಿಯನ್ (78 ಲಕ್ಷಕ್ಕೂ ಹೆಚ್ಚು_ ವೀಕ್ಷಣೆಗಳು ಮತ್ತು 17 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ.

ವೈರಲ್ ಆಗ್ತಿರೋ ಹಳೆ ವಿಡಿಯೋದಲ್ಲಿ ಏನಿದೆ?

ಇಂಟರ್ ನೆಟ್ ನಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ಒಂದು ತಟ್ಟೆಯಲ್ಲಿ ಮೀನು ಜೊತೆಗೆ ನಿಂಬೆ ತುಂಡು, ಗ್ಲಾಸ್ ನೂಡಲ್ಸ್ ಮತ್ತು ಕೆಲವು ತರಕಾರಿ ಇರಿಸೋದನ್ನು ಗಮನಿಸಬಹುದು. ಕೆಲ ಸೆಕೆಂಡ್ ‌ಗಳ ನಂತರ, ಚಾಪ್‌ ಸ್ಟಿಕ್ ತನ್ನ ಬಳಿಗೆ ಬಂದಾಗ ಮೀನು ತನ್ನ ಬಾಯಿ ತೆರೆಯುತ್ತದೆ. ಶೀಘ್ರದಲ್ಲೇ, ಮೀನು ಚಾಪ್ ಸ್ಟಿಕ್ ನಲ್ಲಿ ಮತ್ತೆ ಕಚ್ಚುವುದನ್ನು ನೋಡಬಹುದಾಗಿದೆ.

ಈ ವಿಲಕ್ಷಣ ವೀಡಿಯೋ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ಮೀನು ಬಾಯಿ ತೆಗೆಯುತ್ತಿದ್ದಂತೆ ಅದು ನಮ್ಮನ್ನ ಪ್ರಶ್ನೆ ಮಾಡಿದ ಹಾಗೆ ಆಯ್ತು ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಗೆಳತಿಗಾಗಿ ದೂರವಾದ ಪತಿ, ಮನೆಯಲ್ಲಿ ಅಳುತ್ತಾ ಕೂರದೇ FB Live ಬಂದ ಮಹಿಳೆ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್

ನೆಟ್ಟಿಗರಿಂದ ಆಕ್ರೋಶದ ಕಮೆಂಟ್!

ಇನ್ನೂ ಕೆಲವರು ಕ್ಷಮಿಸು, ಮೀನು ನಾವು ನಿನ್ನನ್ನು ತಿನ್ನುತ್ತಿದ್ದೇವೆ ಎಂದು ಬರೆದಿದ್ದಾರೆ. ಪ್ರತಿಯೊಂದು ಪ್ರಾಣಿಯೂ ತನ್ನ ಜೀವ ಇರೋ ಕೊನೆ ಕ್ಷಣದವರೆಗೆ ಹೋರಾಟ ನಡೆಸುತ್ತೆ ಎಂಬುದಕ್ಕೆ ಈ ವಿಡಿಯೋ ಉದಾಹರಣೆ ಅಂತ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಇದೇ ವಿಡಿಯೋ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದರು.








View this post on Instagram






A post shared by TAKAHIRO (@takahiro4601)






ಕಚ್ಚಾ ಬದಾಮ್ ಬಳಿಕ ವೈರಲ್ ಆಗ್ತಿದೆ ದ್ರಾಕ್ಷಿ ಮಾರಾಟಗಾರನ ವಿಡಿಯೋ

ಸ್ತೆ ಬದಿ ತಮ್ಮದೇ ಶೈಲಿಯಲ್ಲಿಯೇ ಕಡಲೆಕಾಯಿ (Peanuts) ಮಾರಾಟ ಮಾಡುತ್ತಿದ್ದ ಭುವನ್ ಬದ್ಯಾಕರ್ ಇಂದು ಸೆಲೆಬ್ರಿಟಿ ಆಗಿದ್ದಾರೆ. ಇವರ ಕಚ್ಚಾ ಬದಾಮ್ (Kacha Badam) ರಿಮಿಕ್ಸ್ ಹಾಡಿಗೆ ಬಹುತೇಕ ಎಲ್ಲ ಸ್ಟಾರ್ ಗಳು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಭುವನ್ ಬದ್ಯಾಕರ್ ಬಳಿಕ ಈಗ ದ್ರಾಕ್ಷಿ ಮಾರಾಟ (Grapes Seller) ಮಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ.

ಈ ದ್ರಾಕ್ಷಿ ಮಾರಾಟಗಾರ ಗ್ರಾಹಕರನ್ನು ತಮ್ಮದೇ ಶೈಲಿಯಲ್ಲಿ ಕರೆದಿದ್ದಾರೆ. ಅಂದ್ರೆ ಪ್ರಾಸವಾಗಿ ಪದಗಳನ್ನು ಜೋಡಿ ಕ್ಷಣಾರ್ಧದಲ್ಲಿ ದ್ರಾಕ್ಷಿ ಖರೀದಿಸಿ ಎಂದು ಹೇಳುತ್ತಾರೆ. ಗ್ರಾಹಕರನ್ನು ಕರೆಯುವ ಇವರ ಶೈಲಿ ನೆಟ್ಟಿಗರಿಗೆ ಇಷ್ವವಾಗಿದ್ದು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  Viral Video: ಬೆಳೆ ರಕ್ಷಣೆಗಾಗಿ ಕರಡಿ ತಂದ ರೈತ; ಇದಕ್ಕೆ ಪ್ರತಿದಿನ 500 ರೂ. ಸಂಬಳ

ವೈರಲ್ ವಿಡಿಯೋದಲ್ಲಿ ಏನಿದೆ?

ರಸ್ತೆ ಬದಿ ನಿಲ್ಲಿಸಲಾಗಿರುವ ಬಂಡಿಯ ಮೇಲೆ ಓರ್ವ ವ್ಯಕ್ತಿ ದ್ರಾಕ್ಷಿ ಹಾಕಿಕೊಂಡಿದ್ದಾನೆ. ಕೈಯಲ್ಲಿ ಟೀ ಕಪ್ ಹಿಡಿದು ಜಿಂಗಲ್ ಹಾಡುತ್ತಾ ಗ್ರಾಹಕರಿಗೆ ದ್ರಾಕ್ಷಿ ಖರೀದಿಸುವಂತೆ ಹೇಳಿದ್ದಾರೆ. ಈ ಮಾರಾಟಗಾರ ಲೇಲೋ 15 ರೂಪಾಯಿಗೆ 12 ದ್ರಾಕ್ಷಿ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.




ವ್ಯಕ್ತಿಯ ಪದಗಳ ಉಚ್ಛಾರಣೆ ಅಸ್ಪಷ್ಟವಾಗಿದ್ದರೂ ಕೇಳುಗರಿಗೆ ಅವರ ಧ್ವನಿ ಇಷ್ವವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by:Mahmadrafik K
First published: