Viral Video: ಈ ಆನೆ ಹಿಂದಿನ ಜನ್ಮದಲ್ಲಿ ರಾಜಕುಮಾರ ಆಗಿತ್ತಂತೆ, ಅದಕ್ಕೇ ಈಗ ಹೀಗೆ ಇದೆಯಂತೆ..ವಿಡಿಯೋ ನೋಡಿ!

"ಟ್ವಿಸ್ಟ್ ಮತ್ತು ಲಿಫ್ಟ್..! ಆಹಾರವನ್ನು ಹುಡುಕುತ್ತ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಓಲೋರಿಯನ್ ಹೇಗೆ ತನ್ನ ಸೊಂಡಿಲಿನ ಕೌಶಲ್ಯಗಳನ್ನು ತೋರಿಸುತ್ತದೆ. ಇವಳು ಜೀವನದ ಬಗ್ಗೆ ಮತ್ತು ಆಹಾರದ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದು, ಹಸಿವಿನಿಂದ ಬಳಲುತ್ತಿರುವ ಅನಾಥ ಶಿಶುವಾಗಿದ್ದಾಗ ಅವಳನ್ನು ರಕ್ಷಿಸಲಾಗಿದ್ದು ಈಗ ಅವಳ ಸೊಂಡಿಲಿನ ಕೌಶಲ್ಯಗಳು ನೋಡಲು ತುಂಬಾ ಸಂತೋಷದಾಯಕವಾಗಿದೆ

ಆನೆಮರಿ

ಆನೆಮರಿ

  • Share this:

ಆನೆಗಳು ಎಂದರೆ ನಮಗೆ ನೆನಪಿಗೆ ಬರುವುದು ಸರ್ಕಸ್‌ನಲ್ಲಿ ಆನೆಗಳ ಜೊತೆಯಲ್ಲಿ ಕ್ರಿಕೆಟ್ ಆಡುವುದನ್ನು ನೋಡಿದ ಕ್ಷಣ ಮತ್ತು ದೇವಸ್ಥಾನದ ಮುಂದೆ ಮುಖ್ಯ ದ್ವಾರದ ಬಳಿ ಒಮ್ಮೊಮ್ಮೆ ಆನೆಗಳನ್ನು ನಿಲ್ಲಿಸಿಕೊಂಡು ಮಾವುತರು ನಿಂತಿರುವುದು ನಮ್ಮ ಕಣ್ಮುಂದೆ ಬರುತ್ತವೆ. ಇತ್ತೀಚೆಗೆ ಆನೆಗಳ ಮುದ್ದಾದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ನೋಡುವ ಜನರಿಗೆ ಬೇರೆಯದೇ ರೀತಿಯ ಅನುಭವವನ್ನು ಕಟ್ಟಿಕೊಡುತ್ತಿದೆ.ಕೆಲವು ದಿನಗಳ ಹಿಂದೆ ಆನೆಮರಿಗಳ ಹಿಂಡೊಂದು ಕಾಡಿನಲ್ಲಿರುವಂತಹ ಕೆಸರಿನ ಗುಂಡಿಯಲ್ಲಿ ಬಿದ್ದು ಹೊರಳಾಡುತ್ತಾ ಮೋಜು ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದು ನಿಮಗೆ ನೆನಪಿರುತ್ತೆ. ಆ ನೆನಪು ಮಾಸುವ ಮುನ್ನವೇಶೆಲ್ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪೇಜಿನಲ್ಲಿ ಆನೆಯ ಮತ್ತೊಂದು ಆಹ್ಲಾದಕರ ವಿಡಿಯೋ ಹಂಚಿಕೊಂಡಿದ್ದು ವೈರಲ್‌ ಆಗಿದೆ.





ಶೆಲ್ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ 29 ಸೆಕೆಂಡುಗಳ ಮುದ್ದಾದ ವಿಡಿಯೊ ಹಂಚಿಕೊಂಡಿದ್ದು, ಕಾಡಿನಲ್ಲಿ ಆಹಾರ ಹುಡುಕುತ್ತಿರುವಾಗ ಓಲೋರಿಯನ್ ಎಂಬ ಹೆಸರಿನ ಆನೆ ತನ್ನ ಸೊಂಡಿಲಿನ ಕೌಶಲ್ಯ ತೋರಿಸಿರುವುದು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಹಂಚಿಕೊಂಡು ಅದಕ್ಕೆ ಒಂದು ಸುಂದರವಾದ ಶೀರ್ಷಿಕೆ ಬರೆಯಲಾಗಿದೆ. "ಟ್ವಿಸ್ಟ್ ಮತ್ತು ಲಿಫ್ಟ್..! ಆಹಾರವನ್ನು ಹುಡುಕುತ್ತ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಓಲೋರಿಯನ್ ಹೇಗೆ ತನ್ನ ಸೊಂಡಿಲಿನ ಕೌಶಲ್ಯಗಳನ್ನು ತೋರಿಸುತ್ತದೆ. ಇವಳು ಜೀವನದ ಬಗ್ಗೆ ಮತ್ತು ಆಹಾರದ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದು, ಹಸಿವಿನಿಂದ ಬಳಲುತ್ತಿರುವ ಅನಾಥ ಶಿಶುವಾಗಿದ್ದಾಗ ಅವಳನ್ನು ರಕ್ಷಿಸಲಾಗಿದ್ದು ಈಗ ಅವಳ ಸೊಂಡಿಲಿನ ಕೌಶಲ್ಯಗಳು ನೋಡಲು ತುಂಬಾ ಸಂತೋಷದಾಯಕವಾಗಿದೆ ಎಂದು ಬರೆದಿದ್ದಾರೆ.




ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಓಲೋರಿಯನ್ ಅತ್ಯಂತ ಸುಲಭವಾಗಿ ಸಸ್ಯಗಳು ಮತ್ತು ಪೊದೆಗಳನ್ನು ಆರಿಸುವಾಗ ತನ್ನ ಸೊಂಡಿಲು ತಿರುಗಿಸುತ್ತಿರುವುದನ್ನು ಮತ್ತು ಆ ಸಸಿಗಳನ್ನು ನೆಲದಿಂದ ಕಿತ್ತುಕೊಂಡು ತನ್ನ ಬಾಯಿಗೆ ಇರಿಸುವ ಮುನ್ನವೂ ತನ್ನ ಸೊಂಡಿಲನ್ನು ಅತ್ತ ಇತ್ತ ವೇಗವಾಗಿ ತಿರುಗಿಸುತ್ತಾ ಬಾಯಿಗೆ ಇಟ್ಟುಕೊಳ್ಳುವುದನ್ನು ನಾವು ನೋಡಬಹುದಾಗಿದೆ.


ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದೊಂದು ವಿಶಿಷ್ಟವಾದ ಕೌಶಲ್ಯವಾಗಿದ್ದು, ನೋಡುಗರನ್ನು ಮತ್ತೊಮ್ಮೆ ವಿಡಿಯೋ ನೋಡುವಂತೆ ಮಾಡುತ್ತದೆ. ಈ ವೈರಲ್ ವಿಡಿಯೋವನ್ನು ಇದುವರೆಗೂ 4,600ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಕೆಲ ನೆಟ್ಟಿಗರು ಓಲೋರಿಯನ್ ತುಂಬಾ ಪ್ರಭಾವಶಾಲಿ ಸೊಂಡಿಲು ಹೊಂದಿದ್ದು, ಆಹಾರ ಪ್ರಿಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.




ಈ ಮುದ್ದಾದ ಆನೆಯ ಸೊಂಡಿಲಿನ ಕೌಶಲ್ಯ ತೋರಿದ ವಿಡಿಯೋ ನೋಡಿದಂತಹ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಓಲೋರಿಯನ್ ತುಂಬಾ ಆಹಾರ ಪ್ರಿಯವಾಗಿದ್ದು, ಅದಕ್ಕೆ ಯಾವ ತರಹದ ಆಹಾರ ಬೇಕು ಎನ್ನುವುದರ ಬಗ್ಗೆ ಚೆನ್ನಾಗಿ ಅರಿವಿದ್ದು ಸೊಂಡಿಲ ಕೌಶಲ್ಯಗಳು ತುಂಬಾ ಚೆನ್ನಾಗಿವೆ ಎಂದು ಬರೆದಿದ್ದಾರೆ. "ಅವಳು ತನ್ನ ಸೊಂಡಿಲ ಕೌಶಲ್ಯದೊಂದಿಗೆ ನೋಡಲು ತುಂಬಾ ಸುಂದರವಾಗಿದ್ದಾಳೆ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

Published by:Soumya KN
First published: