Viral Video: ಮದುವೆಯ ದಿನ ವಧುವಿಗೆ ಸಹಾಯ ಮಾಡಿದ ವರನನ್ನು ನೋಡಿ ಫಿದಾ ಆದ ನೆಟ್ಟಿಗರು

ಮದುವೆಯ ದಿನದಂದು ತನ್ನ ಕೈ ಹಿಡಿಯುವ ವಧು ಚೆನ್ನಾಗಿ ಕಾಣಬೇಕು ಎಂದು ಆಸೆ ಹೊತ್ತ ವರರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವರನು ಖುದ್ದಾಗಿ ತಾನೇ ವಧುವಿನ ಕೋಣೆಗೆ ಬಂದು ಆಕೆಯ ಒದ್ದೆಯಾದ ಕೂದಲನ್ನು ಒರೆಸುತ್ತಿದ್ದಾನೆ ನೋಡಿ.

ವೈರಲ್ ಪೋಟೋ

ವೈರಲ್ ಪೋಟೋ

  • Share this:
ಸಾಮಾನ್ಯವಾಗಿ ಮದುವೆ (Marriage) ಎನ್ನುವುದು ಬಹುತೇಕರ ಬಾಳಿನಲ್ಲಿ (Life) ಒಂದೇ ಸಲ ನಡೆಯುವ ಸಂಭ್ರಮದ ಕ್ಷಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮನೆಯಲ್ಲಿ ಮದುವೆ ಇದ್ದರೆ ನಾನು ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕು ಎಂದು ಸ್ಪರ್ಧೆಗೆ ಇಳಿದಂತೆ ರೆಡಿ ಆಗ್ತಾ ಇರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಮದುವೆ ಆಗುವ ಮತ್ತು ಸಮಾರಂಭದ (Functions) ಕೇಂದ್ರ ಬಿಂದುವಾಗಿರುವ ವಧು ಮತ್ತೆ ವರ ಎಲ್ಲರಿಗಿಂತಲೂ ತುಂಬಾನೇ ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಮತ್ತು ಇದು ಸಹಜ ಕೂಡ. ಮದುವೆಗೆ ಬಂದವರು ‘ಅಬ್ಬಬ್ಬಾ.. ಏನ್ ಚೆನ್ನಾಗಿದೆ ಗುರು ಜೋಡಿ’ ಅಂತ ಎಲ್ಲರ ಮುಂದೆ ಮುಕ್ತವಾಗಿ ಹೇಳದೇ ಇದ್ದರೂ ಅವರ ಮನಸ್ಸಿನಲ್ಲಿ ಮಾತ್ರ ಮಿಸ್ ಮಾಡಿಕೊಳ್ಳದೆ ಅಂದುಕೊಳ್ಳಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ.

ಬೇರೆ ಸಮಯದಲ್ಲಿ ಇಷ್ಟೊಂದು ಜನರು ವಧು ವರನ ಜೊತೆಗೆ ಇರುತ್ತಾರೋ ಗೊತ್ತಿಲ್ಲ, ಆದರೆ ಮದುವೆಯ ದಿನ ಮಾತ್ರ ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನಂದು ಒಂದು ಕೈ ಇರಲಿ ಅಂತ ವಧು ಮತ್ತು ವರನನ್ನು ಮದುವೆಯ ಸಮಾರಂಭಕ್ಕೆ ರೆಡಿ ಮಾಡುತ್ತಿರುತ್ತಾರೆ.

ಈಗಂತೂ ವಧುವನ್ನು ಮದುವೆಗೆ ಗ್ರ್ಯಾಂಡ್ ಆಗಿ ರೆಡಿ ಮಾಡಲು ಬ್ಯೂಟಿ ಪಾರ್ಲರ್ ಅವರನ್ನೇ ಮದುವೆ ಮನೆಗೆ ಕರೆಸಿರುತ್ತಾರೆ ಮತ್ತು ಅವರಿಗೂ ಆ ದಿನ ಬಿಡುವಿಲ್ಲದ ಕೆಲಸ, ಏಕೆಂದರೆ ಪ್ರತಿಯೊಬ್ಬರು ತಾವು ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕು ಎಂಬ ಹಂಬಲ, ಎಲ್ಲರೂ ಆ ಕ್ಯೂ ಅಲ್ಲಿ ನಿಂತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Lollipop: ಮಕ್ಕಳಿಗೆ ಲಾಲಿಪಾಪ್​ ಕೊಡುವ ಮುನ್ನ ಹುಷಾರ್​!

ವಧುವನ್ನು ಸಿಂಗರಿಸಿದ ವರ:

ಆದರೆ ಇಲ್ಲಿ ನಾವು ಹೇಳಲು ಹೊರಟಿರುವುದು ಸ್ವಲ್ಪ ಡಿಫರೆಂಟ್ ಆಗಿದೆ ಎಂದು ಹೇಳಬಹುದು. ಮದುವೆಯ ದಿನದಂದು ತನ್ನ ಕೈ ಹಿಡಿಯುವ ವಧು ಚೆನ್ನಾಗಿ ಕಾಣಬೇಕು ಎಂದು ಆಸೆ ಹೊತ್ತ ವರರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವರನು ಖುದ್ದಾಗಿ ತಾನೇ ವಧುವಿನ ಕೋಣೆಗೆ ಬಂದು ಆಕೆಯ ಒದ್ದೆಯಾದ ಕೂದಲನ್ನು ಒರೆಸುತ್ತಿದ್ದಾನೆ ನೋಡಿ.


ಇಲ್ಲಿ ಸಿಂಕ್ ಮತ್ತು ದೊಡ್ಡ ಕನ್ನಡಿ ಇರುವ ಸ್ಥಳದಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ವರನು ವಧುವಿನ ಕೂದಲನ್ನು ತಾಳ್ಮೆಯಿಂದ ಒರೆಸುವುದನ್ನು ನಾವು ನೋಡಬಹುದಾಗಿದೆ. ಅವರಿಬ್ಬರೂ ತಮ್ಮ ವಿವಾಹದ ಉಡುಪನ್ನು ಧರಿಸಿದ್ದಾರೆ. ಅವರ ನಡುವೆ ಹಂಚಿಕೊಳ್ಳಲಾದ ಈ ಕೋಮಲವಾದ ಮತ್ತು ಸುಂದರ ಕ್ಷಣವು ನೆಟ್ಟಿಗರ ಹೃದಯವನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್:

ಕೃತಿಕಾ ಮತ್ತು ಕಮಲ್ ದಂಪತಿಗಳಿಗೆ ಸೇರಿದ ಸಾಮಾಜಿಕ ಮಾಧ್ಯಮದಲ್ಲಿನ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. "ನನಗಾಗಿ ಇವರು ಯಾವಾಗಲೂ ಇದ್ದಾರೆ" ಎಂದು ವಿಡಿಯೋದಲ್ಲಿರುವ ಪಠ್ಯವು ಮದುವೆಯ ದಿನ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹೇಳಿದೆ. "ನಿಮ್ಮ ಕಾಳಜಿ ವಹಿಸುವ ಸಂಗಾತಿಗೆ ಈ ವಿಡಿಯೋ ಟ್ಯಾಗ್ ಮಾಡಿ" ಎಂದು ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಟ್ರಕ್​ನಡಿ ಬೀಳಲಿದ್ದ ಕಂದನ ಉಳಿಸಿದ ತಾಯಿ, ಸೂಪರ್ ಮಮ್ಮಿಗೆ ಭೇಷ್ ಎಂದ ನೆಟ್ಟಿಗರು

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಜನರು ಈ ನವ ವಧು ವರರ ನಡುವಿನ ಕೆಮಿಸ್ಟ್ರಿಯನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಅನೇಕರು ವರನನ್ನು ಕಾಳಜಿ ವಹಿಸುವ ಸಂಗಾತಿ ಎಂದು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು "ತುಂಬಾ ಮುದ್ದಾಗಿದೆ ಮತ್ತು ಸುಂದರವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಎಷ್ಟೊಂದು ಕಾಳಜಿ ವಹಿಸುತ್ತಾರೆ ನೋಡಿ” ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯವನು "ಪಾಪ ಮುದ್ದಾದ ದಂಪತಿಗಳು, ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ" ಎಂದು ಬರೆದಿದ್ದಾರೆ.

ವಧು ವರರಿಗೆ ಹಾರೈಸಿದ ನೆಟ್ಟಿಗರು:

ಒಟ್ಟಿನಲ್ಲಿ ಹೇಳುವುದಾದರೆ ಈ ಮುದ್ದಾದ ವೀಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ 'ನೈಸ್' ಮತ್ತು 'ಕ್ಯೂಟ್' ಅಂತ ಹಾಕಿದ್ದೇ ಹಾಕಿದ್ದು. ವಿಶೇಷವೆಂದರೆ, ಈ ವಧು ವರರಿಬ್ಬರು 7 ವರ್ಷಗಳ ಸುದೀರ್ಘವಾದ ಸಂಬಂಧದ ನಂತರ ವಿವಾಹವಾದರು. ದಂಪತಿ ಅಮೆರಿಕದ ನೆವಾಡಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1,06,000 ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರು ಆಗಾಗ್ಗೆ ತಮ್ಮ ಈ ಸಂಬಂಧದ ಸುಂದರವಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
Published by:shrikrishna bhat
First published: