• Home
  • »
  • News
  • »
  • trend
  • »
  • Viral Video: ಮತ್ತೆ ಒಂದಾದ ಒಡಹುಟ್ಟಿದ ನಾಯಿಮರಿಗಳು! ಹೇಗೆ ಆಟವಾಡುತ್ತಿವೆ ನೋಡಿ

Viral Video: ಮತ್ತೆ ಒಂದಾದ ಒಡಹುಟ್ಟಿದ ನಾಯಿಮರಿಗಳು! ಹೇಗೆ ಆಟವಾಡುತ್ತಿವೆ ನೋಡಿ

ವಿಡಿಯೋದ ದೃಶ್ಯ

ವಿಡಿಯೋದ ದೃಶ್ಯ

ಈ 9 ಸೆಕೆಂಡುಗಳ ಪುಟ್ಟ ಮತ್ತು ಅದ್ಭುತವಾದ ವಿಡಿಯೋದಲ್ಲಿ ಈ ಎರಡು ಒಡಹುಟ್ಟಿದ ಶ್ವಾನಗಳು ಪರಸ್ಪರ ಮೇಲೆ ಬಿದ್ದು ಆಟವಾಡುವುದನ್ನು ನೋಡಬಹುದು.

  • Share this:

ಸಾಮಾನ್ಯವಾಗಿ ನಾವು ಸಿನಿಮಾಗಳಲ್ಲಿ ಒಂದು ಕಥೆಯನ್ನು ತುಂಬಾ ಸಲ ನೋಡಿರುತ್ತೇವೆ, ಅದು ಇಬ್ಬರು ಒಡಹುಟ್ಟಿದವರು ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದಾಗ ಯಾರೋ ಬೇರೆಯವರು ಬಂದು ಆ ಇಬ್ಬರು ಒಡಹುಟ್ಟಿದವರನ್ನು (Siblings) ಕರೆದುಕೊಂಡು ಹೋಗುತ್ತಾರೆ. ನಂತರ ಆ ಇಬ್ಬರು ಒಡಹುಟ್ಟಿದವರು ಬೇರೆ ಬೇರೆ ಊರುಗಳಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಅದ್ಯಾವುದೋ ಒಂದು ದಿನ ಆ ಇಬ್ಬರು ಒಡಹುಟ್ಟಿದವರು ಆಕಸ್ಮಾತ್ ಆಗಿ ಯಾವುದೋ ಜಾಗದಲ್ಲಿ ಭೇಟಿಯಾಗಿ ಅವರಿಬ್ಬರಿಗೂ ತಾವು ಒಡಹುಟ್ಟಿದವರು ಎಂದು ಗೊತ್ತಾಗುತ್ತದೆ. ಆಗ ಅವರಿಬ್ಬರಿಗೂ ಆಗುವ ಆ ಸಂತೋಷ ಇದೆಯಲ್ಲಾ ಅದನ್ನು ಎಷ್ಟೇ ಹಣ (Money) ಕೊಟ್ಟರೂ ಪಡೆಯಲು ಸಾಧ್ಯವಿಲ್ಲ.


ಇಂತಹ ಘಟನೆಗಳು ನಿಜ ಜೀವನದಲ್ಲಿ ತುಂಬಾನೇ ಅಪರೂಪ ಎಂದು ಹೇಳಬಹುದು. ಅನೇಕ ಜನರು ಅನಾಥಾಶ್ರಮದಲ್ಲಿ ಬೆಳೆಯುತ್ತಾರೆ, ಆದರೆ ಅವರಿಗೆ ಅವರ ಜೀವನದಲ್ಲಿ ತಮ್ಮ ಒಡಹುಟ್ಟಿದವರನ್ನು ಭೇಟಿ ಮಾಡುವ ಅವಕಾಶ ಸಿಗುವುದು ತುಂಬಾನೇ ವಿರಳ ಎಂದು ಹೇಳಬಹುದು. ಆದರೆ ಇಂತಹ ಘಟನೆ ಮನುಷ್ಯರ ಜೀವನದಲ್ಲಿ ಅಲ್ಲದೆ, ಮೂಕ ಪ್ರಾಣಿಗಳ ಜೀವನದಲ್ಲಿ ನಡೆದಿದೆ ನೋಡಿ.


ನಂಬುವುದೇ ಕಷ್ಟ..ಆದರೂ ನಂಬಲೇಬೇಕು!
ಹೌದು.. ಇಲ್ಲಿ ಎರಡು ನಾಯಿಮರಿಗಳು ಯಾವತ್ತೋ ಬೇರೆ ಬೇರೆಯವರ ಮನೆಯಲ್ಲಿ ಬೆಳೆದು, ಇಂದು ಎರಡು ನಾಯಿಮರಿಗಳು ಮತ್ತೆ ಒಟ್ಟಿಗೆ ಸೇರಿವೆ ಎಂದರೆ ಅದನ್ನು ನಂಬುವುದೇ ಕಷ್ಟ.


ಎರಡು ಒಡಹುಟ್ಟಿದ ಶ್ವಾನಗಳ ನಡುವಿನ ಪುನರ್‌ಮಿಲನವನ್ನು ತೋರಿಸುವ ಮುದ್ದಾದ ವಿಡಿಯೋವೊಂದು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಈಗ ರೆಡ್ಡಿಟ್‌ನಲ್ಲಿ ಅನೇಕರಿಗೆ ಸಂತೋಷದ ಮೂಲವಾಗಿ ಮಾರ್ಪಟ್ಟಿದೆ. ಮುದ್ದಾದ ಕ್ಲಿಪ್ ನಿಮ್ಮ ಹೃದಯವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.


ನಾಯಿಮರಿಗಳು ಪರಸ್ಪರ ಭೇಟಿ
ರೆಡ್ಡಿಟ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ನಾಯಿಮರಿಗಳು ಪರಸ್ಪರ ಭೇಟಿಯಾಗಿರುವ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.


"ನಾವು 3 ವಾರಗಳ ಹಿಂದೆ ಕಾರ್ಗಿ ನಾಯಿಮರಿಯನ್ನು ಮನೆಗೆ ತೆಗೆದುಕೊಂಡು ಬಂದಿದ್ದೆವು ಮತ್ತು ಆಕಸ್ಮಿಕವಾಗಿ ನಾನು ವಿಶ್ವವಿದ್ಯಾಲಯದಲ್ಲಿ ಅಂತಹದೇ ಒಂದು ನಾಯಿಮರಿಯನ್ನು ನೋಡಿದೆ. 11 ವಾರಗಳಾದ ಮೇಲೆ ಪ್ಯಾಬ್ಲೊ ಮತ್ತು ಅದರ ಸಹೋದರ ಯೋಶಿ ಮತ್ತೆ ಒಂದಾಗಿದ್ದರಿಂದ ನಾವು ಮೀಟಪ್ ಅನ್ನು ಏರ್ಪಡಿಸುವುದು ಸರಿ ಎಂದು ತೋರಿತು. ಎಂತಹ ಚಿಕ್ಕ ಜಗತ್ತು ನೋಡಿ" ಎಂದು ಅವರು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Street Venders: ಈ ವಿಡಿಯೋ ನೋಡಿದ್ರೆ ರಸ್ತೆ ಬದಿ ವ್ಯಾಪಾರಿಗಳ ಹತ್ತಿರವೇ ನೀವು ಖರೀದಿಸ್ತೀರಿ! ಅಷ್ಟಕ್ಕೂ ಏನಿದೆ ಇದರಲ್ಲಿ?


ಈ 9 ಸೆಕೆಂಡುಗಳ ಪುಟ್ಟ ಮತ್ತು ಅದ್ಭುತವಾದ ವಿಡಿಯೋದಲ್ಲಿ ಈ ಎರಡು ಒಡಹುಟ್ಟಿದ ಶ್ವಾನಗಳು ಪರಸ್ಪರ ಮೇಲೆ ಬಿದ್ದು ಆಟವಾಡುವುದನ್ನು ನೋಡಬಹುದು. ಎರಡು ನಾಯಿಮರಿಗಳು ನೋಡಲು ಒಂದೇ ರೀತಿಯಾಗಿರುವುದನ್ನು ನಾವು ಇಲ್ಲಿ ಗಮನಿಸಬಹುದು.


4,400ಕ್ಕೂ ಹೆಚ್ಚು ಅಪ್ ವೋಟ್
ಸುಮಾರು 14 ಗಂಟೆಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ಹಂಚಿಕೊಂಡಾಗಿನಿಂದಲೂ ಈ ಪೋಸ್ಟ್ ಸುಮಾರು 4,400ಕ್ಕೂ ಹೆಚ್ಚು ಅಪ್ ವೋಟ್ ಗಳನ್ನು ಸಂಗ್ರಹಿಸಿದೆ ಮತ್ತು ಈ ಸಂಖ್ಯೆ ಇನ್ನೂ ಹೆಚ್ಚುತ್ತಿದೆ ಎಂದು ಹೇಳಬಹುದು. ಈ ಹಂಚಿಕೆಯು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.


ಸೂಪರ್ ಕ್ಯೂಟ್ ವಿಡಿಯೋ
"ಈ ನಾಯಿಮರಿಗಳ ವೀಡಿಯೋ ಖಂಡಿತವಾಗಿಯೂ ನನ್ನನ್ನು ನಗುವಂತೆ ಮಾಡಿತು. ಸೂಪರ್ ಕ್ಯೂಟ್" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಬರೆದಿದ್ದಾರೆ. "ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ ಸಹೋದರ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. "ನೀವು ಈ ದಿನ ಆಡಿದ ಆಟವನ್ನು ಸದಾ ಆಡುತ್ತಿರಬೇಕು" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Carry Bag: 12 ರೂಪಾಯಿ ಲಾಭ ಮಾಡಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡ ಕಂಪನಿ! ಗ್ರಾಹನಿಗೆ ಸಿಕ್ತು ನ್ಯಾಯ


ಇನ್ನೊಬ್ಬ ವ್ಯಕ್ತಿಯು ನಾಯಿಗಳು ತುಂಬಾ ದಿನಗಳ ನಂತರ ಭೇಟಿಯಾದಾಗ ಪರಸ್ಪರ ಏನು ಮಾತಾಡಿಕೊಂಡಿರಬಹುದೆಂದು ಊಹಿಸಲು ಪ್ರಯತ್ನಿಸಿದನು ಮತ್ತು "ಇದು ನೀವು.. ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: