ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮಾಷೆ ವಿಡಿಯೋಗಳು ವೈರಲ್ (Funny Video Viral) ಆಗುತ್ತಿರುತ್ತವೆ. ಫೇಸ್ ಬುಕ್ (Facebook), ಇನ್ ಸ್ಟಾಗ್ರಾಂ (Instagram) ಓಪನ್ ಮಾಡಿದ್ರೆ ಸಾಕು ಸಾಲು ಸಾಲು ವಿಡಿಯೋಗಳು (Videos) ನಿಮ್ಮ ಮುಂದೆ ಬರುತ್ತವೆ. ಲಾಕ್ ಡೌನ್ (Lockdown) ನಂತರ ಜನರು ಸೋಶಿಯಲ್ ಮೀಡಿಯಾ(Social Media)ಗೆ ಜನರು ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಫನ್ನಿ ವಿಡಿಯೋಗಳನ್ನು ನೋಡಿ ಆನಂದಿಸುತ್ತಾರೆ. ಇತ್ತೀಚೆಗೆ ಅರಣ್ಯವಾಸಿಗಳು ಮೊದಲ ಬಾರಿ ಪಿಜ್ಜಾ (Pizza) ಸವಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಶ್ವಾನವೊಂದು ಮೊದಲ ಬಾರಿಗೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವಿಡಿಯೋ (Animal Videos)ಗಳು ಹೆಚ್ಚು ವೈರಲ್ ಆಗುತ್ತಿದೆ. ಪ್ರಾಣಿಗಳ ಬೇಟೆ, ಸಿಂಹದ ಘರ್ಜನೆ, ಬೆಕ್ಕುಗಳ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಳ್ಳುತ್ತಿವೆ.
ಇನ್ಸ್ಟಾಗ್ರಾಮ್ ಅಥವಾ ಫೇಸ್ ಬುಕ್ ನಲ್ಲಿ ಪ್ರಾಣಿಗಳ ವಿಡಿಯೋಗಳು ಹೆಚ್ಚು ಹರಿದಾಡುತ್ತಿರುತ್ತವೆ. ಜನರು ತಮ್ಮ ಸಾಕು ಪ್ರಾಣಗಳ ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ . ಇತ್ತೀಚೆಗೆ ಪಗ್ ತಳಿಯ ನಾಯಿಯ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ.
ಕನ್ನಡಿಯಲ್ಲಿ ಪ್ರತಿಬಿಂದ ಕಾಣುತ್ತಿದ್ದಂತೆ ಬೊಗಳುವ ನಾಯಿ
ಮೊದಲು ನಾಯಿ ಕನ್ನಡಿಯನ್ನು ನೋಡುತ್ತದೆ. ಅದರಲ್ಲಿ ತನ್ನದೇ ಪ್ರತಿಬಿಂಬ ಕಾಣುತ್ತಿದ್ದಂತೆ ನಾಯಿ ಒಂದು ಕ್ಷಣ ಗೊಂದಲಕ್ಕೆ ಒಳಗಾಗುತ್ತದೆ. ಕೆಲ ಕ್ಷಣಗಳ ಬಳಿಕ ಇದು ತನ್ನ ಶತ್ರು ಎಂದು ಬೊಗಳಲು ಪ್ರಾರಂಬಿಸುತ್ತದೆ. ಅತ್ತ ಪ್ರತಿಬಂಬದಲ್ಲಿರುವ ನಾಯಿ ಬೊಗಳುತ್ತಿದ್ದಂತೆ ಇದು ಮತ್ತಷ್ಟು ಜೋರಾಗಿ ಬೊಗಳಲು ಶುರು ಮಾಡುತ್ತದೆ. ಸದ್ಯ ಈ ಫನ್ನಿ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗುತ್ತಿದ್ದು, ಲೈಕ್ಸ್ ನೀಡುವದರ ಜೊತೆಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Viral Video: ಈ ಭಿಕ್ಷುಕನ ಶ್ರೀಮಂತ ಕಂಠಕ್ಕೆ ಜನರು ಫಿದಾ: ಇದು ದೈವಿಕ ಧ್ವನಿ ಅಂದ್ರು ನೆಟ್ಟಿಗರು
ಈ ವಿಡಿಯೊವನ್ನು Instagram ನಲ್ಲಿ archna.singh.3139 ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಖಾತೆಯು ಚಿಕ್ಕ ಹುಡುಗಿಯದ್ದಗಾಗಿದ್ದು. ಆಕೆ ತನ್ನ ಪೇಜ್ ನಲ್ಲಿ ಹಲವು ರೀಲ್ ಗಳನ್ನು ಹಂಚಿಕೊಂಡಿದ್ದಾಳೆ.
ಭಾರತದಲ್ಲಿ ಟಿಕ್ಟಾಕ್ ಅನ್ನು ನಿಷೇಧಿಸಿದ ನಂತರ ಇನ್ ಸ್ಟಾಗ್ರಾಮ್ ರೀಲ್ ಗಳ ಟ್ರೆಂಡ್ ಪ್ರಾರಂಭವಾಗಿದೆ. ಟ್ರೆಂಡಿಂಗ್ ವಿಷಯಗಳ ಮೇಲೆ ರೀಲ್ ಗಳನ್ನು ಮಾಡುವ ಮೂಲಕ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಲಾಗುತ್ತದೆ. ಈ ಮೂಲಕ ಜನರೂ ಹಣ ಸಹ ಸಂಪಾದಿಸುತ್ತಾರೆ.
ಇದನ್ನೂ ಓದಿ: Viral Video: ಮೊದಲ ಬಾರಿಗೆ ಟಿವಿಯಲ್ಲಿ ಡೈನೋಸಾರ್ ನೋಡಿದ ಮಗುವಿನ Reaction ನೋಡಿ
ಆಟಗಾರರು ಕಣ್ಣರಳಿಸುವಂತೆ ವಾಲಿಬಾಲ್ ಆಡುವ ಸೂಪರ್ ಡಾಗ್
ಗ್ರಾಮೀಣ ಭಾಗಗಳಲ್ಲಿ ಸಾಕು ಗಿಣಿ(Parrot)ಗಳು ಮಾತನಾಡೋದನ್ನು ನೋಡಬಹುದು. ಇನ್ನುಳಿದಂತೆ ಹಸು, ನಾಯಿ, ಮೇಕೆಗಳು ಮಾಲೀಕನ (Owner) ಮಾತು ಕೇಳುತ್ತವೆ. ವಿಶೇಷವಾಗಿ ನಾಯಿಗಳು ತನ್ನ ಮಾಲೀಕನಿಗೆ ಸಹಾಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸೂಪರ್ ಡಾಗ್ ವಿಡಿಯೋ (Super Dog Video) ಮಿಂಚಿನಂತೆ ಹರಿದಾಡುತ್ತಿದೆ.
ಈ ಸೂಪರ್ ಡಾಗ್ ತನ್ನ ಮಾಲೀಕನೊಂದಿಗೆ ವಾಲಿಬಾಲ್ ಆಟವನ್ನು ಆಡುತ್ತದೆ. ಹೌದು, ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮೂವರ ಜೊತೆ ಈ ನಾಯಿ ಸಹ ವಾಲಿಬಾಲ್ ಆಡೋದನ್ನು ನೋಡಬಹುದಾಗಿದೆ. ಒಂದು ಕಡೆ ಇಬ್ಬರು ನಿಂತಿದ್ರೆ, ಮತ್ತೊಂದು ಕಡೆ ಓರ್ವನ ಜೊತೆ ನಾಯಿ ನಿಂತಿದೆ. ಎದುರಾಳಿಯಿಂದ ಬರುವ ವಾಲಿಬಾಲ್ ನ್ನು ಮಾಲೀಕ ನಾಯಿಗೆ ಪಾಸ್ ಮಾಡುತ್ತಾನೆ. ಈ ನಾಯಿ ಸಹ ಅಷ್ಟೇ ಸರಳವಾಗಿ ಬಾಲ್ ಪಾಸ್ ಮಾಡುತ್ತದೆ. ಹೀಗೆ ಈ ಆಟ ಮುಂದುವರಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ