ಗ್ರಾಹಕಿಯ ಆಸೆ ಈಡೇರಿಸಲು ಆಕೆಯ ಮಾಜಿ ಬಾಯ್​ಫ್ರೆಂಡ್‌ ಮೇಲೆ ಟೀ ಎರಚಿದ ಡೆಲಿವರಿ ಬಾಯ್!

ಚೀನಾದ ಶಾಂಗ್‌ಡಾಂಗ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ಎಕ್ಸ್‌ ಬಾಯ್‌ಫ್ರೆಂಡ್‌ ಮೇಲೆ ದ್ವೇಷವನ್ನು ಅಸಾಮಾನ್ಯ ರೀತಿಯಲ್ಲಿ ತೀರಿಸಿಕೊಳ್ಳಲು ನಿರ್ಧರಿಸಿದಳು. ಎಕ್ಸ್ ಬಾಯ್‌ಫ್ರೆಂಡ್‌ಗೆ ಒಂದು ಕಪ್‌ ಚಹಾವನ್ನು ಆರ್ಡರ್‌ ಮಾಡಿ ವಿಶೇಷ ವಿನಂತಿಯನ್ನೂ ಮಾಡಿದಳು.

ವ್ಯಕ್ತಿಯ ಮೇಲೆ ಟೀ ಎರಚಿದ ಡೆಲಿವರಿ ಬಾಯ್

ವ್ಯಕ್ತಿಯ ಮೇಲೆ ಟೀ ಎರಚಿದ ಡೆಲಿವರಿ ಬಾಯ್

 • Share this:
  ಫೆಬ್ರವರಿಯನ್ನು ಪ್ರಪಂಚದಾದ್ಯಂತ ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ನಾಳೆಯೇ ಪ್ರೇಮಿಗಳ ದಿನವಾಗಿದ್ದು, ಪ್ರಪಂಚದಾದ್ಯಂತ ಕಪಲ್‌ಗಳು ತಮ್ಮ ಗರ್ಲ್‌ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ಗೆ ಸರ್‌ಪ್ರೈಸ್‌ ನೀಡಲು ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಆದರೆ, ಇತ್ತೀಚೆಗೆ ಬ್ರೇಕಪ್‌ಗೆ ಒಳಗಾದ ಜನರು ಕಷ್ಟಕರ ದಿನಗಳನ್ನು ಎದುರಿಸುತ್ತಿದ್ದಾರೆ.

  ಇದೇ ರೀತಿ, ಚೀನಾದ ಶಾಂಗ್‌ಡಾಂಗ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ಎಕ್ಸ್‌ ಬಾಯ್‌ಫ್ರೆಂಡ್‌ ಮೇಲೆ ದ್ವೇಷವನ್ನು ಅಸಾಮಾನ್ಯ ರೀತಿಯಲ್ಲಿ ತೀರಿಸಿಕೊಳ್ಳಲು ನಿರ್ಧರಿಸಿದಳು. ಎಕ್ಸ್ ಬಾಯ್‌ಫ್ರೆಂಡ್‌ಗೆ ಒಂದು ಕಪ್‌ ಚಹಾವನ್ನು ಆರ್ಡರ್‌ ಮಾಡಿ ವಿಶೇಷ ವಿನಂತಿಯನ್ನೂ ಮಾಡಿದಳು.

  ತನ್ನ ಮಾಜಿ ಪ್ರೇಮಿಗೆ ಚಹಾ ತಲುಪಿಸಿ, ಪಾನೀಯವನ್ನು ಅವನ ಮುಖದ ಮೇಲೆ ಎರಚಲು ಡೆಲಿವರಿ ಬಾಯ್‌ಗೆ ಕೇಳಿಕೊಂಡಳು. "ಅವನ ಬಳಿ ನೈಸ್‌ ಆಗಿರುವುದು ಬೇಡ. ಅವನ ಮುಖದ ಮೇಲೆ ಪಾನೀಯವನ್ನು ಎರಚಿ'' ಎಂದು ಮಹಿಳೆ ವಿನಂತಿಸಿದಳು.

  ಆಶ್ಚರ್ಯಕರ ಸಂಗತಿಯೆಂದರೆ, ಡೆಲಿವರಿ ಬಾಯ್‌ ಗ್ರಾಹಕರ ಕೋರಿಕೆಯನ್ನು ಈಡೇರಿಸಿದ್ದು, ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಟೀ ತೆಗೆದುಕೊಂಡು ಹೋದ ವ್ಯಕ್ತಿ ಮನುಷ್ಯನ ಮೇಲೆ ಚೆಲ್ಲಿದಾಗ, ಆತ ಗೊಂದಲಕ್ಕೊಳಗಾಗಿರುತ್ತಾನೆ. ಬಳಿಕ ಆತನಿಗೆ ಮಾಜಿ ಗೆಳತಿ ಮಾಡಿದ್ದ ಆದೇಶದ ರಶೀದಿಯನ್ನು ಹಸ್ತಾಂತರಿಸಿದನು ಮತ್ತು ಸೂಚನೆಗಳನ್ನು ತೋರಿಸಿದನು. ಡೆಲಿವರಿ ಬಾಯ್‌ ಆತುರದಿಂದ ಹೊರಡುವ ಮೊದಲು ಆತನಿಗೆ ಕ್ಷಮೆ ಯಾಚಿಸುತ್ತಾನೆ.

  ಡೆಲಿವರಿ ರೈಡರ್ ಕೆಲಸ ಮಾಡುವ ಟೇಕ್ಅವೇ ಸೇವೆಯಾದ ಮೀತುವಾನ್ ಕಂಪನಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಚೀನಾದ ಮಾಧ್ಯಮಗಳಿಗೆ ಹೇಳಿದರು. ಅವಿವೇಕದ ಆರ್ಡರ್‌ ಅನ್ನು ಸ್ವೀಕರಿಸಿದರೆ, ವಿತರಣಾ ಸಿಬ್ಬಂದಿ ಬಳಕೆದಾರರೊಂದಿಗೆ ಸಂವಹನ ನಡೆಸಬಹುದು ಅಥವಾ ಆರ್ಡರ್‌ ಅನ್ನು ತಿರಸ್ಕರಿಸಬಹುದು ಎಂದು ಓರಿಯಂಟಲ್ ಡೈಲಿ ವರದಿ ಮಾಡಿದೆ.  ಗ್ರಾಹಕರ ಮನವಿಯನ್ನು ಸ್ವೀಕರಿಸಿದ್ದಕ್ಕಾಗಿ ಕೆಲವು ನೆಟ್ಟಿಗರು ಡೆಲಿವರಿ ಬಾಯ್‌ ಅನ್ನು ಟೀಕಿಸಿದರೆ, ಹಲವರು ಗ್ರಾಹಕರ ದೂರುಗಳನ್ನು ಸ್ವೀಕರಿಸಲು ಡೆಲಿವರಿ ಬಾಯ್‌ ಬಯಸುವುದಿಲ್ಲ ಎಂದು ನಾವು ಅರ್ಥ ಮಾಡಿಕೊಂಡಿದ್ದಾಗಿ ಹೇಳಿದರು. ಇನ್ನು, ಮಹಿಳಾ ಗ್ರಾಹಕಿಯ ಧೈರ್ಯಶಾಲಿ ವಿನಂತಿಯನ್ನು ಮಾಡಿ ತೋರಿಸಿದ ಡೆಲಿವರಿ ಬಾಯ್‌ಗೆ 5-ಸ್ಟಾರ್ ರೇಟಿಂಗ್ ನೀಡಬೇಕು ಎಂದು ಬಳಕೆದಾರರ ಒಂದು ವಿಭಾಗ ಭಾವಿಸಿದೆ.
  Published by:Sushma Chakre
  First published: