Kareena In Traffic Light: ಟ್ರಾಫಿಕ್ ಲೈಟ್​ನಲ್ಲಿ ಕರೀನಾ! ಬಾಲಿವುಡ್ ಚೆಲುವೆಗೆ ವಾಹನ ಸವಾರರು ಫಿದಾ

ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದನ್ನು ತಪ್ಪಿಸಲು ದೆಹಲಿ ಪೋಲಿಸರು ಟ್ರಾಫಿಕ್ ಲೈಟ್ ಮೇಲೆ ಕರೀನಾ ಕಪೂರ್ ಪೂ ಪಾತ್ರದಲ್ಲಿ ನಟಿಸಿದ ಕಭಿ ಖುಷಿ ಕಭಿ ಗಮ್ ಸಿನಿಮಾದ ವೀಡೀಯೋ ಕ್ಲಿಪ್ ಅನ್ನು ಸಿಗ್ನಲ್ ಲೈಟ್ ಮೇಲೆ ಬಳಸಿದ್ದಾರೆ. ಈ ವೀಡೀಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಟ್ರಾಫಿಕ್ ಸಿಗ್ನಲ್ ಲೈಟ್ನಲ್ಲಿ ಕರೀನಾ ಕಪೂರ್ ನಟಿಸಿದ ಪೂ ಪಾತ್ರ

ಟ್ರಾಫಿಕ್ ಸಿಗ್ನಲ್ ಲೈಟ್ನಲ್ಲಿ ಕರೀನಾ ಕಪೂರ್ ನಟಿಸಿದ ಪೂ ಪಾತ್ರ

  • Share this:
ಪ್ರಸ್ತುತ ದಿನಗಳಲ್ಲಿನ ಅವಸರದ ಬದುಕು ವೇಗದ ಜೀವನ, ಜನರನ್ನು ಅಪಾಯವನ್ನು ಲೆಕ್ಕಿಸಿದಂತೆ ಮಾಡಿದೆ. ತಮ್ಮ ದಿನನಿತ್ಯದಲ್ಲಿನ ಕೆಲಸ ಕಾರ್ಯಗಳ ಹೆಚ್ಚಳ, ಉದ್ಯೋಗದ ಒತ್ತಡಗಳು ಜನರನ್ನು ಇಂದು ತಮ್ಮ ಜೀವದ ಕಡೆಗೆ ಗಮನ ವಹಿಸಿದಂತೆ ಮಾಡಿದೆ. ಆದುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾದಂತೆ ಹೊಸ ಹೊಸ ವಾಹನಗಗಳು ಜಾರಿಗೆ ಬರ್ತಾಯಿದೆ. ಇದರಿಂದ ವಾಹನ (Vehicle) ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಕೆಲಸದ ಒತ್ತಡಗಳನ್ನು ಕಡಿಮೆ ಮಾಡಬೇಕೇಂದ್ರೆ ಅತಿ ವೇಗವಾಗಿ ಪ್ರಯಾಣಿಸಬೇಕೆಂಬ ಪರಿಸ್ಥಿತಿ ಜನರಲ್ಲಿದೆ. ಇದರಿಂದಾಗಿ ಜನ ತಮ್ಮ ವಾಹನಗಳ ವೇಗವನ್ನು ಅಧಿಕಗೊಳಿಸುತ್ತಾರೆ ಅಲ್ಲದೆ ಹಿಂದೆ ಮುಂದೆ ನೋಡದೆಯೂ ಟ್ರಾಫಿಕ್ ಸಿಗ್ನಲ್ (Traffic Signal) ಜಂಪ್ (Jump) ಮಾಡುತ್ತಾರೆ. ಹೀಗೆ ಸಿಗ್ನಲ್ ಜಂಪ್ ಮಾಡುವುದನ್ನು ತಡೆಯಲು ಟ್ರಾಫಿಕ್ ಪೋಲಿಸರುಗಳು (Police) ದಿನೇ ದಿನೇ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದೀಗ ದೆಹಲಿ ಪೋಲಿಸರು (Delhi Police) ಕರೀನಾ ಕಪೂರ್ (Karina Kapoor) ಅವರ ವೀಡೀಯೋವನ್ನು (Video) ಟ್ರಾಫಿಕ್ ಲೈಟ್ನಲ್ಲಿ (Traffic Light) ಬಳಸುವ ಹೊಸ ಪ್ರಯತ್ನ ಮಾಡಿದ್ದಾರೆ.

ಸಿಗ್ನಲ್ ಲೈಟ್ನಲ್ಲಿ ಕರೀನಾ ಕಪೂರನ್ನು ಬಳಸಿದ ದೆಹಲಿ ಟ್ರಾಫಿಕ್ ಪೋಲಿಸ್
ದೆಹಲಿ ಪೋಲಿಸರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದನ್ನು ತಡೆಯಲು ಏನಾದರು ಹೊಸ ಪ್ರಯತ್ನ ಮಾಡುತ್ತಲೇ ಇರಿತ್ತಾರೆ. ಇದೀಗ ಅವರು ಸಿಗ್ನಲ್ ಲೈಟ್ನಲ್ಲಿ ಕರೀನಾ ಕಪೂರ್ ಅವರ ವೀಡೀಯೋವೊಂದನ್ನು ಬಳಸುವ ಮೂಲಕ ವಾಹನ ಸವಾರರು ಸಿಗ್ನಲ್ ಜಂಪ್ ತಡೆಯುವ ವಿನೂತನ ಪ್ರಯತ್ನವನ್ನು ಮಾಡಿದ್ದಾರೆ.

ಇದನ್ನೂ ಓದಿ: Viral Photo: ಹೊಟ್ಟೆ ತೋರಿಸಿ ದುಡ್ಡು ಮಾಡ್ತಾಳೆ ಈ ಮಹಿಳೆ! ಎಂಥಾ ಕಾಲ ಬಂತಪ್ಪಾ!

'ಕಭೀ ಖುಷಿ ಕಭಿ ಗಮ್' ಸಿನಿಮಾದ ಸಿಕ್ವೇನ್ಸ್ ಬಳಕೆ
ಟ್ರಾಫಿಕ್ ಸಿಗ್ನಲ್ ಜಂಪ್ ನಿಂದಾಗುವ ಅಪಾಯವನ್ನು ತಡೆಯಲು ದೆಹಲಿ ಪೋಲಿಸರು ವೀಡೀಯೋ ಕ್ಲಿಪ್ ಒಂದನ್ನು ಮಾಡಿದ್ದು ಕರೀನಾ ಕಪೂರ್ ಪೂ ಪಾತ್ರದಲ್ಲಿ ನಟಿಸಿದ 'ಕಭಿ ಖುಷಿ ಕಭೀ ಗಮ್' ಸಿನಿಮಾದ ಸ್ವಿಕೇನ್ಸ್ ಒಂದನ್ನು ಬಳಸಿದ್ದಾರೆ. ಈ ವೀಡೀಯೋ ಇದೀಗ ಸೋಶಿಯಲ್ ಮೀಡೀಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಟ್ವಿಟರ್ ನಲ್ಲಿ ವೈರಲ್ ಆದ ವೀಡೀಯೋ
ದೆಹಲಿ ಪೋಲಿಸರು ವೀಡೀಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡೀಯೋ ಇದೀಗ ಸೋಶಿಯಲ್ ಮೀಡೀಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡೀಯೋದಲ್ಲಿ ಟ್ರಾಫಿಕ್ ಲೈಟ್ ಮೇಲ್ ಪೂ ಚಿತ್ರ ಕಾಣಿಸಿಕೊಳ್ಳತ್ತದೆ ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದವರಿಗೆ ಅವಳು ಡೈಲಾಗ್ ಹೇಳುತ್ತಾಳೆ.

ಪೂ ಗಮನವನ್ನು ಇಷ್ಟ ಪಡುತ್ತಾಳೆ
ದೆಹಲಿ ಪೋಲಿಸ್ ಹಂಚಿಕೊಂಡ ವೀಡೀಯೋದಲ್ಲಿ, ಯಾರದು ಸಿಗ್ನಲ್ ಜಂಪ್ ಮಾಡುವುದು? ಪೂ ಗಮನವನ್ನು ಇಷ್ಟಪಡುತ್ತಾಳೆ, ಸಿಗ್ನಲ್ ಲೈಟನ್ನು ಗಮನಿಸಿ ಎಂದು ಬರೆದಿದ್ದಾರೆ. ಅಂದರೆ ಸಿಗ್ನಲ್ ಲೈಟ್ ಗಳ ಕಡೆಗೆ ಗಮನ ನೀಡಿ ಅದನ್ನು ಪೂ ಇಷ್ಟ ಪಡುತ್ತಾಳೆ ಎನ್ನುವ ಅರ್ಥವನ್ನು ಹೊಂದಿದೆ. ಈ ಯೋಚನೆಯನ್ಬು ತುಂಬಾ ಜನ ಇಷ್ಟಪಟ್ಟಿದ್ದಾರೆ.

ಯಾರವನು ನನ್ನತ್ತ ತಿರುಗಿ ನೋಡದವನು?
ವೀಡೀಯೋದಲ್ಲಿ ಕಾರೊಂದು ಅತೀ ವೇಗವಾಗಿ ಬಂದು ಸಿಗ್ನಲ್ ಲೈಟ್ ಜಂಪ್ ಮಾಡಿದಾಗ, ಸಿಗ್ನಲ್ ಲೈಟ್ ಮೇಲೆ ಪೂ ಕಾಣಿಸಿಕೊಳ್ಳುತ್ತಾಳೆ ಮತ್ತು ಅವಳು 'ಕೌನ್ ಹೈ ಯೇ, ಜಿಸ್ನೆ ದೋಬಾರಾ ಮುಝೆ ನಹೀ ದೇಖಾ' ಅಂದರೆ ಅವನು ಯಾರು, ನನ್ನತ್ತ ತಿರುಗಿ ನೋಡದವನು ಎಂಬ ಪ್ರಸಿದ್ಧ ಡೈಲಾಗ್ ಅನ್ನು ಕರೀನಾ ಹೇಳುವುದನ್ನು ಕೇಳಿಸಬಹುದು.

ಇದನ್ನೂ ಓದಿ: Weird Job: ತಬ್ಬಿಕೊಂಡು ಮುದ್ದು ಮಾಡುವುದೇ ಈತನ ಜಾಬ್! ಗಂಟೆಗೆ 7 ಸಾವಿರ ಸಂಪಾದನೆ

ದೆಹಲಿ ಪೋಲಿಸರ ಈ ಯೋಚನೆಯನ್ನು ಕಂಡು ಅನೇಕ ಮಂದಿ ಶ್ಲಾಘಿಸಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಹಲವಾರು ಮಂದಿ ತಮ್ಮ ಅಭಿಪ್ರಾಯುಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಕರೀನಾ ಕಪೂರ್ ಅವರನ್ನು ವೀಡೀಯೋದಲ್ಲಿ ಸಿಗ್ನಲ್ ಲೈಟ್ ಮೇಲೆ ನೋಡಿ ವಾಹನ ಸವರಾರು ಆಕರ್ಷಿತರಾಗಿದ್ದಾರೆ.
Published by:Nalini Suvarna
First published: