ನಾವು ಚಿಕ್ಕವರಾಗಿದ್ದಾಗ ಈ ಪತ್ರಗಳನ್ನು (Postcard) ಬರೆಯುವುದು ಮತ್ತು ನಮಗೆ ತುಂಬಾ ಬೇಕಾದವರು ಪತ್ರ ಬರೆದದ್ದನ್ನು ನೋಡಿ ಅದನ್ನು ಓದಿದರೇ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಸಿಗುತ್ತಿತ್ತು. ಪತ್ರಗಳ ಮೂಲಕ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ಆ ದಿನಗಳು ತುಂಬಾನೇ ಮುಗ್ದತೆಯಿಂದ ಕೂಡಿದ್ದವು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ನಾವು ಮನೆಯಿಂದ ಎಲ್ಲೋ ದೂರದಲ್ಲಿ ವಸತಿ ಶಾಲೆಯಲ್ಲಿದ್ದು, ನಮ್ಮ ತಾಯಿ (Mother) ಅಥವಾ ತಂದೆಯಿಂದ (Father) ಪತ್ರ ಬಂದರೆ ಅದನ್ನು ಓದಿ ನಾವು ಒಂದು ಕ್ಷಣ ಭಾವುಕರಾಗುತ್ತಿದ್ದೆವು . ಅದರಲ್ಲೂ ಈ ಮಗಳು ಮತ್ತು ತಂದೆಯ, ಮಗ ಮತ್ತು ತಾಯಿಯ ನಡುವಿನ ಪ್ರೀತಿಯ ಬಂಧವನ್ನು (Relationship) ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.
ಇಲ್ಲೊಂದು ವೀಡಿಯೋ ಇದೆ ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ವೀಡಿಯೋ ಮಗಳು ಮತ್ತು ತಂದೆಯ ಅವಿನಾಭಾವ ಸಂಬಂಧವನ್ನು ತೋರಿಸಿದ್ದು, ನೋಡಿದ ಜನರನ್ನು ಭಾವುಕರನ್ನಾಗಿ ಮಾಡಿದೆ ಎಂದು ಹೇಳಬಹುದು.
ವಿಡಿಯೋದಲ್ಲಿ ಏನಿದೆ?
ಈ ವೀಡಿಯೋದಲ್ಲಿ ಮಗಳು ತನ್ನ ತಂದೆಯು ಕೆಲಸದ ಪ್ರವಾಸಗಳಲ್ಲಿದ್ದಾಗ ತನ್ನ ಮಗಳಿಗೆ ಬರೆದ ಪೋಸ್ಟ್ ಕಾರ್ಡ್ಗಳನ್ನು ಮಗಳು ಹೇಗೆ ಒಂದು ಕಡೆ ಫ್ರೇಮ್ ಮಾಡಿಸಿ ತುಂಬಾ ಜೋಪಾನವಾಗಿ ಇರಿಸಿಕೊಂಡಿದ್ದಾರೆ ನೋಡಿ. ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಬಳಕೆದಾರರಾದ ಲಾರೆನ್ ರೋಸಾ ಮಿಲ್ಲರ್ ಹಂಚಿ ಕೊಂಡಿರುವ ಈ ವೀಡಿಯೋ ನಿಮ್ಮ ಮನಸ್ಸನ್ನು ಕರಗಿಸದೆ ಇರದು.
View this post on Instagram
ನಾನು ಅಪ್ಪನನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ...
ನಾನು ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನಾನು ಪ್ರತಿದಿನವೂ ಅವರ ಪ್ರೀತಿಯನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಅವರು ವೀಡಿಯೋವನ್ನು ಪೋಸ್ಟ್ ಮಾಡುವಾಗ ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮಗಳಿಗೆ ಲೇಟ್ ಟ್ರೈನ್ ಸಿಕ್ಕಾಗಲೆಲ್ಲಾ ಪ್ಲಾಟ್ಫಾರ್ಮ್ಗೆ ಬಂದು ಕಾಯ್ತಾರೆ ಈ ತಂದೆ, ಈ ಪ್ರೀತಿಗೆ ಬೇರೇನು ಸಾಟಿ?
ಮಹಿಳೆಯು ಒಂದು ಗೋಡೆಯ ಮೇಲೆ ಕೆಲವು ಫ್ರೇಮ್ ಮಾಡಿದ ಪೋಸ್ಟ್ ಕಾರ್ಡ್ ಗಳನ್ನು ನೇತು ಹಾಕಿ ಅದರ ಮುಂದೆ ನಿಂತಿರುವ ದೃಶ್ಯದಿಂದ ಈ ವೀಡಿಯೋ ಆರಂಭವಾಗುತ್ತದೆ. ಈ ವೀಡಿಯೋದಲ್ಲಿ ಪಠ್ಯ ಸೇರ್ಪಡಿಸುವಿಕೆಗಳು ಈ ಪೋಸ್ಟ್ ಕಾರ್ಡ್ ಗಳ ಹಿಂದಿನ ಕಥೆಯನ್ನು ವಿವರಿಸುತ್ತವೆ. "ನಾನು ಚಿಕ್ಕವಳಿದ್ದಾಗ ನನ್ನ ತಂದೆ ತಮ್ಮ ಎಲ್ಲಾ ಪ್ರವಾಸಗಳಲ್ಲಿ ನನಗೆ ಪೋಸ್ಟ್ ಕಾರ್ಡ್ ಗಳನ್ನು ಬರೆಯುತ್ತಿದ್ದರು. ತಮ್ಮದೇ ಆದ ಸ್ವಂತ ಕೆಲಸಕ್ಕೆ ಸಾಕಷ್ಟು ಪ್ರಯಾಣಿಸಬೇಕಾಯಿತು" ಎಂದು ಅವರು ಹೇಳಿದರು.
ಫುಲ್ ವೈರಲ್ ಆಯ್ತು ವಿಡಿಯೋ!
ಕೆಲವು ದಿನಗಳ ಹಿಂದೆ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಇದುವರೆಗೂ ಈ ಕ್ಲಿಪ್ ಸುಮಾರು 7,205 ಲೈಕ್ ಗಳನ್ನು ಗಳಿಸಿದೆ. ಈ ಪೋಸ್ಟ್ ಜನರಿಂದ ವಿವಿಧ ಕಾಮೆಂಟ್ ಗಳನ್ನು ಸಹ ಸ್ವೀಕರಿಸಿದೆ.
ಈ ವೀಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಇದು ತುಂಬಾ ಸುಂದರವಾಗಿದೆ" ಎಂದು ಬರೆದಿದ್ದಾರೆ. "ಇಂತಹ ವೀಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.. ನಾನು ಈಗ ಸುಮಾರು 4 ತಿಂಗಳ ಹಿಂದೆ ನನ್ನ ತಂದೆಯನ್ನು ಕಳೆದು ಕೊಂಡಿದ್ದೇನೆ. ನಾನು ನನ್ನ ತಂದೆಗೆ ತುಂಬಾ ಹತ್ತಿರವಾಗಿದ್ದೆ, ಅವರು ಬಿಟ್ಟುಹೋದ ನಂಬಿಕೆ ಮತ್ತು ಪ್ರೀತಿಯ ಪರಂಪರೆಗೆ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದ್ರು, ಚಲಿಸುವ ಕಾರಿನ ಮೇಲೆ ಕುಣಿದ್ರು! ಕುಡುಕ ಯುವಕರ ಹುಚ್ಚಾಟದ ವಿಡಿಯೋ ವೈರಲ್
“ತಂದೆ ಮತ್ತು ಹೆಣ್ಣು ಮಕ್ಕಳ ನಡುವಿನ ಪ್ರೀತಿಯ ಇತರ ಕಥೆಗಳನ್ನು ಕೇಳುವುದು, ನೋಡುವುದು ನನ್ನ ಜೀವನದ ಉತ್ಸಾಹವನ್ನು ಹೆಚ್ಚಿಸುತ್ತದೆ... ಇದು ಸುಂದರವಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ನಾನು ನೋಡಿದ ಅತ್ಯಂತ ಸುಂದರವಾದ ವೀಡಿಯೋ" ಎಂದು ಸಹ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ