ಸಿಂಹಗಳ ವಿರುದ್ಧ ಹೋರಾಟ ಮಾಡಿದ ಏಡಿ: ವಿಡಿಯೋ ವೈರಲ್‌

Crab and lions

Crab and lions

Viral Video: ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ಮಲಮಾಲಾ ಖಾಸಗಿ ಗೇಮ್ ರಿಸರ್ವ್‌ನಲ್ಲಿ ಈ ವಿಡಿಯೋ ತುಣುಕನ್ನು ಚಿತ್ರೀಕರಿಸಲಾಗಿದೆ. ಇದು ದಕ್ಷಿಣ ಆಫ್ರಿಕದ ಅತಿದೊಡ್ಡ ಮತ್ತು ಹಳೆಯ ಉದ್ಯಾನವನ. ರೇಂಜರ್ಸ್ ರಗ್ಗಿರೊ ಬ್ಯಾರೆಟೊ ಮತ್ತು ರಾಬಿನ್ ಸೆವೆಲ್ ಅವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.

ಮುಂದೆ ಓದಿ ...
 • Share this:

  ನಾವು ಯಾರಾದರೂ ‘ಸಿಂಹ’ ಎಂಬ ಹೆಸರನ್ನು ಕೇಳಿದಾಗ ನಾವು ಸ್ವಯಂಚಾಲಿತವಾಗಿ ‘ಕಾಡಿನ ರಾಜ’ ಅಥವಾ ‘ನಿರ್ಭೀತ ಪ್ರಾಣಿ’ ಎಂದು ಭಾವಿಸುತ್ತೇವೆ. ಈ ಭವ್ಯ ಪ್ರಾಣಿಗಳ ವಿಭಿನ್ನ ರೀತಿಯ ದೃಶ್ಯವನ್ನು ಅಥವಾ ನಿಮಗೆ ಅಚ್ಚರಿಯನ್ನು ಉಂಟುಮಾಡುವ ವಿಭಿನ್ನ ರೀತಿಯ ನಡುವಳಿಕೆಯ ದೃಶ್ಯಾವಳಿಗಳನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು. ಒಂದು ಸಣ್ಣ ಏಡಿಯು ಸಿಂಹಗಳ ಗುಂಪನ್ನು ನಿರ್ಬಂಧಿಸುವ ಹಾಗೂ ಸಿಂಹಗಳ ವಿರುದ್ದ ಛಲ ಬಿಡದೆ ಹೋರಾಟ ಮಾಡಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ ಹಾಗೂ ಭಾರಿ ಸುದ್ದಿ ಮಾಡುತ್ತಿದೆ. ಆ ವಿಡಿಯೋವನ್ನು ನೋಡುವುದೇ ಒಂದು ರೀತಿಯ ಖುಷಿ ನೀಡುತ್ತದೆ.


  ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ಮಲಮಾಲಾ ಖಾಸಗಿ ಗೇಮ್ ರಿಸರ್ವ್‌ನಲ್ಲಿ ಈ ವಿಡಿಯೋ ತುಣುಕನ್ನು ಚಿತ್ರೀಕರಿಸಲಾಗಿದೆ. ಇದು ದಕ್ಷಿಣ ಆಫ್ರಿಕದ ಅತಿದೊಡ್ಡ ಮತ್ತು ಹಳೆಯ ಉದ್ಯಾನವನ. ರೇಂಜರ್ಸ್ ರಗ್ಗಿರೊ ಬ್ಯಾರೆಟೊ ಮತ್ತು ರಾಬಿನ್ ಸೆವೆಲ್ ಅವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.


  ಈ ವಿಡಿಯೊವನ್ನು ನೋಡಲು ಈ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಹಾಗೂ ವಿಡಿಯೋವನ್ನು ನೋಡಿ ಆನಂದಿಸಿ


   


  ಈ ವಿಡಿಯೋವನ್ನು ಸುಮಾರು 4 ಲಕ್ಷ ಜನರು ವೀಕ್ಷಿಸಿದ್ದಾರೆ ಹಾಗೂ ಕೆಲವರು ವಿಡಿಯೋ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


  “ಇದು ಕಾಡಿನಲ್ಲಿನ ಸಿಂಹಗಳ ಹೆಮ್ಮೆಯ ದೃಶ್ಯವನ್ನು ಕಾಣುವಂತಹ ಅದ್ಭುತ ಕ್ಷಣವಾಗಿದೆ… ಉಗ್ರ ಸಿಂಹಗಳು ನಾಲ್ಕು ಇಂಚಿನ ಏಡಿ ಯೊಂದಿಗೆ ಆಟವಾಡುವ ದೃಶ್ಯ!” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೋವು ಸಿಂಹಗಳು ಕುತೂಹಲಕಾರಿಯಾಗಿ ಏಡಿಯನ್ನು ನೋಡುವುದನ್ನು ಮತ್ತು ಗಮನಿಸುವುದನ್ನು ತೋರಿಸುತ್ತದೆ. ಏಡಿಯನ್ನು ಹತ್ತಿರದಿಂದ ನೋಡುವ ಸಲುವಾಗಿ ಸಿಂಹಗಳು ಅದರ ಹಿಂದೆ ನಡೆಯಲು ಪ್ರಾರಂಭಿಸಿತು.


  ನಂತರ ಏಡಿ ನಡುವಳಿಕೆಯು ಸಿಂಹಿಣಿ ಮತ್ತು ಮೂರು ಸಿಂಹಗಳಿಗೆ ಅಚ್ಚರಿ ಉಂಟುಮಾಡುತ್ತದೆ ಇದರಿಂದಾಗಿ ಸಿಂಹಿಣಿ ಮತ್ತು ಮೂರು ಸಿಂಹಗಳ ಗುಂಪು ದೂರಸರಿಯಲು ಆರಂಭಿಸುತ್ತವೆ, ಇದನ್ನು ಒಂದು ಏಡಿಯ ‘ಧೈರ್ಯಶಾಲಿ’ ಹೋರಾಟ ಎಂದು ಕರೆಯಲಾಗುತ್ತದೆ.  ಏಡಿ ಒಂದು ಸಣ್ಣ ಬಿಲದಲ್ಲಿ ಕಣ್ಮರೆಯಾಗುವ ಮೊದಲು ಅದರ ಪಿಂಕರ್‌ಗಳನ್ನು ಕೂಡ ಸುರಕ್ಷಿತವಾಗಿ ಜೊತೆ ಜೊತೆಯಲ್ಲಿ ರಕ್ಷಿಸಿಕೊಳ್ಳುತ್ತದೆ. ಈ ಸುದ್ದಿ ಇಂಟರ್‌ನೆಟ್‌ನಲ್ಲಿ ಭಾರಿ ಸುದ್ದಿಗೆ ಕಾರಣವಾಗಿದೆ .ಈ ರೀತಿಯ ದೃಶ್ಯಗಳನ್ನು ನೋಡುವುದರಿಂದ ನಮ್ಮ ಮನಸಿಗೆ ತುಂಬ ಖುಷಿಯಾಗುತ್ತದೆ. ಈ ವಿಡಿಯೋ ಭಾರಿ ಮೆಚ್ಚುಗೆಯನ್ನು ಪಡೆದಿದೆ ಹಾಗೂ 129 ಲೈಕ್ಸ್‌ ಅನ್ನು ಪಡೆದಿದೆ.


  Covid-19: ಮನುಷ್ಯರಿಗೆ ಮಾತ್ರವಲ್ಲ ಇಲ್ಲಿ ಪ್ರಾಣಿಗಳಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ!

  ನಾವೆಲ್ಲರೂ ಸಾಮಾನ್ಯವಾಗಿ ಸಿಂಹಕ್ಕೆ ಹೆದರುತ್ತೇವೆ. ಆದರೆ ಈ ರೀತಿಯ ವೀಡಿಯೊಗಳು ಸಿಂಹದ ಇತರ ದೃಷ್ಟಿಕೋನವನ್ನು ನೀಡುತ್ತವೆ. ಈ ವೀಡಿಯೊಗಳು ಪ್ರಾಣಿಗಳು ಕಾಡಿನಲ್ಲಿ ಹೇಗೆ ವಾಸಿಸುತ್ತಿವೆ ಎಂಬುದನ್ನು ತೋರಿಸುತ್ತದೆ. ದಯವಿಟ್ಟು ನಿಮ್ಮ ಮಕ್ಕಳೊಂದಿಗೆ ಈ ರೀತಿಯ ವೀಡಿಯೊಗಳನ್ನು ನೋಡಿ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ಹೇಗೆ ಬಲಶಾಲಿಯಾಗಬೇಕೆಂದು ಅವರಿಗೆ ಕಲಿಸಿ.

  top videos
   First published: