ಸೋಷಿಯಲ್ ಮೀಡಿಯಾದಲ್ಲಿ (Social Media) ಏನೆಲ್ಲಾ ವೈರಲ್ ಆಗುತ್ತೆಅಂತ ಹೇಳಲು ಸಾಧ್ಯವಿಲ್ಲ. ನಾವು ಊಹಿಸಲೂ ಬಾರದಂತಹ ಕೆಲವು ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ದಿನಕ್ಕೊಂದು ವೈರಲ್ (Viral) ಲೋಕದಲ್ಲಿ ಊಹೆಗೂ ನಿಲುಕದ್ದನ್ನು ನಾವು ಕಾಣಬಹುದು. ಕೆಲವೊಂದಷ್ಟು ಮಜವಾಗಿದ್ದರೆ, ಇನ್ನೋ ಕೆಲವೊಂದಷ್ಟು ಭಾವನಾತ್ಮಕವಾಗಿರುತ್ತದೆ (Emotional). ಅಂತಹ ಕಾರಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆ ವಿಡಿಯೋ ನೋಡಿ ಜನ ಶಾಕ್ ಆಗಿದ್ದಾರೆ. ಇಂತಹ ವಿಷಯ ಸಂಭವಿಸಬಹುದು ಎಂದು ಜನರು ನಂಬಿರೋದಿಲ್ಲ. ಈ ವಿಡಿಯೋದಲ್ಲಿ ಕಾರು ನೇರವಾಗಿ ಹೋಗುವ ಉಲ್ಟಪಲ್ಟ ಆಗಿ ಹೋಗುತ್ತಿದೆ. ಮೂಲತಃ ಕಾರಿನ ವಿನ್ಯಾಸವನ್ನು ಹಾಗೆ ಮಾಡಲಾಗಿದೆ. ಹೀಗಾಗಿ ನೋಡುಗರು ಗೊಂದಲಕ್ಕೆ ಸಿಲುಕಿದ್ದಾರೆ.
ನೀವು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕಾರುಗಳನ್ನು ನೋಡಿರಬಹುದು. ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಓಡುವ ಕಾರುಗಳನ್ನು ನಾವು ನೋಡುತ್ತೇವೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಾರುಗಳನ್ನು ನೀವು ನೋಡಿರಬೇಕು. ಅದೇ ಸಮಯದಲ್ಲಿ, ಹಾರುವ ಕಾರುಗಳು ಸಹ ಮಾರುಕಟ್ಟೆಗೆ ಬರುತ್ತಿವೆ. ಆದರೆ ವೈರಲ್ ವಿಡಿಯೋದಲ್ಲಿರುವಂತಹ ಕಾರನ್ನು ನೀವು ಎಲ್ಲಿಯೂ ನೋಡಿಲ್ಲ. ಈ ರಿವರ್ಸ್ ರನ್ನಿಂಗ್ ಕಾರು ಜನರ ಆಕರ್ಷಣೆಯಾಗಿದೆ. ವೀಡಿಯೊದಲ್ಲಿ ಕಾರು ತಲೆಕೆಳಗಾಗಿ ಓಡುತ್ತಿರುವಂತೆ ತೋರುತ್ತಿದೆ, ಅಂದರೆ ಅದರ ಟೈರ್ಗಳು ಮೇಲಕ್ಕೆ ಮತ್ತು ಮೇಲ್ಭಾಗವು ಕೆಳಗಿರುತ್ತದೆ; ಆದರೆ ಆ ಕಾರಿನ ವಿನ್ಯಾಸವನ್ನು ಹಾಗೆ ಮಾಡಲಾಗಿದೆ. ವಿನ್ಯಾಸವು ತುಂಬಾ ವಿಶಿಷ್ಟವಾಗಿದೆ, ಅದನ್ನು ವೀಕ್ಷಿಸಲು ನೆಟಿಜನ್ಗಳು ಅಕ್ಷರಶಃ ವೀಡಿಯೊದ ಮೇಲೆ ಬೀಳುತ್ತಿದ್ದಾರೆ.
ಈ ಕಾರನ್ನು ನೋಡ್ತಾ ಇದ್ರೇ ಒಂದಷ್ಟು ಜನಕ್ಕೆ ಕ್ರೇಜಿ ಅಂತ ಅನಿಸಿದ್ರೆ, ಇನ್ನೂ ಒಂದಷ್ಟು ಜನರಿಗೆ ಹಿಂಗೂ ಇರ್ತಾರಾ? ಅಂತ ಅನಿಸಿರಬಹುದು. ಯಾಕಂದ್ರೆ ಮ್ಯಾಜಿಕ್ನಂತೆ ಈ ಕಾರನ್ನು ವಿನ್ಯಾಸ ಮಾಡಲಾಗಿದೆ. ದೊಡ್ಡ ಚಕ್ರ ಮೇಲೆ, ಕೆಲಗೆ ಸಣ್ಣ ಚಕ್ರ ಕೆಳಗೆ ಇದೆ ಈ ಕಾರ್ನಲ್ಲಿ, ಡ್ರೈವರ್ ಕೂಡ ಗತ್ತಿನಲ್ಲಿ ಟರ್ನ್ ಮಾಡಿಕೊಂಡು ಹೋಗುತ್ತಾನೆ. ಯಾಕಂದ್ರೆ ಎಲ್ಲರೂ ನನ್ನ ಮತ್ತು ನನ್ನ ಕಾರ್ ನೋಡುತ್ತಾ ಇದ್ದಾರೆ ಎಂಬ ಜಂಬ ಆತನಿಗೆ.
ಟ್ವಿಟ್ಟರ್ ಹ್ಯಾಂಡಲ್ @BornAKang ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಕೇವಲ 7 ಸೆಕೆಂಡುಗಳು ಮಾತ್ರ. 3 ಮಿಲಿಯನ್ ಲೈಕ್ಸ್ ಬಂದಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಒಂದು ದಿನದ ಹಿಂದೆ ಶೇರ್ ಆಗಿರುವ ಈ ವಿಡಿಯೋ 3 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ.ವೀಡಿಯೋಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ವಿಡಿಯೋ ಕೂಡ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಇದನ್ನೂ ಓದಿ: ನಿಂತ ನೀರಾದ ನಯಾಗರ, ಮಂಜುಗಡ್ಡೆಯಾದ ಜಲಪಾತಕ್ಕೆ ನೋ ಎಂಟ್ರಿ!
ಈ ವಿಡಿಯೋಗೆ ಅಕ್ಷರಶಃ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಒಬ್ಬ ಬಳಕೆದಾರರು "ಈ ವೀಡಿಯೊ ನನ್ನನ್ನು ಗೊಂದಲಗೊಳಿಸಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ನಾನು ಈ ವೀಡಿಯೊವನ್ನು ಹಲವು ಬಾರಿ ವೀಕ್ಷಿಸಿದ್ದೇನೆ. ಏನು ವಿನ್ಯಾಸ!" ಮತ್ತೊಬ್ಬ ಬಳಕೆದಾರ, "ಏನು ಹೊಸ ಪವಾಡ" ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಈ ತಲೆಕೆಳಗಾದ ಕಾರಿನ ವಿನ್ಯಾಸ ನೋಡಿ ಎಲ್ಲರಿಗೂ ಒಂದು ಪ್ರಶ್ನೆ ಮೂಡುತ್ತದೆ.
This SpongeBob ass car pic.twitter.com/sryrx5dmUr
— Lance🇱🇨 (@BornAKang) December 26, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ