Viral Video: ಕ್ರಿಸ್ಟಿಯಾನೋ ರೊನಾಲ್ಡೊಗೆ ಸ್ಪರ್ಧೆ ನೀಡುವಂತೆ Football ಆಡುತ್ತೆ ಈ ಕೋಳಿ: ವಿಡಿಯೋ ನೋಡಿ
ಈ ವಿಡಿಯೋವನ್ನು wonderdixe ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 1 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ವಿಡಿಯೋ ಎಡಿಟ್ ಮಾಡಿದ ವ್ಯಕ್ತಿಗೆ ನೆಟ್ಟಿಗರು ತಮ್ಮನ್ನು ನಗುವಂತೆ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು ಕ್ರಿಸ್ಟಿಯಾನೋ ರೊನಾಲ್ಡೊ (Footballer Cristiano Ronaldo). ಅವರ ಆಟ, ಕೊನೆ ಕ್ಷಣದಲ್ಲಿ ಪಂದ್ಯ (Match) ಗೆಲ್ಲಿಸಿಕೊಳ್ಳುವ ಪರಿ ಕಂಡು ಇಡೀ ಜಗತ್ತು ನಿಬ್ಬೆರಗಾಗುತ್ತದೆ. ಇದೀಗ ಕ್ರಿಸ್ಟಿಯಾನೋ ರೊನಾಲ್ಡೋಗೆ ಸ್ಪರ್ಧೆ (Competition) ನೀಡುವ ಸ್ಪರ್ಧಿ ಬಂದಿದ್ದು, ಅವರ ವಿಡಿಯೋ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral) ಆಗಿದೆ. ಹೌದು, ಕ್ರಿಸ್ಟಿಯಾನೋ ರೊನಾಲ್ಡೋಗೆ ಸ್ಪರ್ಧೆ ನೀಡುತ್ತಿರುವ ಸ್ಪರ್ಧಿ ಈ ಕೋಳಿ (hen). ಇದು ಸಾಮಾನ್ಯ ಕೋಳಿ ಅಲ್ಲ. ಇದು ಫುಟ್ಬಾಲ್ (Football) ಆಡುತ್ತದೆ. ಒಂದು ವೇಳೆ ರೊನಾಲ್ಡೋ ಈ ವಿಡಿಯೋ (Viral Video) ನೋಡಿದ್ರೆ ಕೋಳಿಯನ್ನು ತನ್ನ ಸ್ಪರ್ಧಿ ಎಂದು ಒಪ್ಪಿಕೊಳ್ಳಬಹುದು ಎಂದು ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ. ಯಾವ ಆಟಗಾರನಿಗೂ ಕಡಿಮೆ ಇಲ್ಲ ಎಂಬಂತೆ ಕೋಳಿ ತನ್ನ ಮೊಟ್ಟೆ ಬಳಸಿ ಫುಟ್ಬಾಲ್ ಆಡಿದೆ.
ಕ್ರಿಸ್ಟಿಯಾನೋ ರೊನಾಲ್ಡೋ ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಗೆ ಫಾರ್ವರ್ಡ್ ಆಟಗಾರನಾಗಿ ಆಡುತ್ತಾರೆ. ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕನಾಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ ಈ ಕೋಳಿಯ ಕೌಶಲ್ಯದಿಂದ ಪ್ರಭಾವಿತರಾಗಬಹುದು.
ಆದ್ರೆ ಈ ವಿಡಿಯೋ ಎಡಿಟ್ ಮಾಡಲಾಗಿದ್ದು ಎಂದು ಎಲ್ಲರಿಗೂ ಮೊದಲ ಕ್ಷಣದಲ್ಲಿಯೇ ತಿಳಿಯುತ್ತದೆ. ಆದ್ರೆ ವಿಡಿಯೋ ಮಾತ್ರ ನೋಡಲು ಫನ್ನಿ ಮತ್ತು ಆಕರ್ಷಕವಾಗಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.
ಈ ಕೋಳಿಯು ಫುಟ್ ಬಾಲ್ ನಂತೆ ತನ್ನ ಪಾದಗಳಿಂದ ಮೊಟ್ಟೆಗಳನ್ನು ಉರುಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಫುಟ್ಬಾಲ್ ಆಟಗಾರನಂತೆ ಮೊಟ್ಟೆಯನ್ನು ಪಾದಗಳ ಮೇಲೆ ಡ್ರಿಬ್ಲಿಂಗ್ ಸಹ ಮಾಡುತ್ತದೆ. ನಂತರ ಆ ಮೊಟ್ಟೆಯನ್ನು ತನ್ನ ಬೆನ್ನಿನ ಮೇಲೆ ಎಸೆದು, ಕುತ್ತಿಗೆ ಹಾಗೂ ರೆಕ್ಕೆಗಳ ಸಹಾಯದಿಂದ ಅದನ್ನು ಬ್ಯಾಲೆನ್ಸ್ ಮಾಡುತ್ತದೆ. ಇದನ್ನು ನೆಕ್ ಸ್ಟಾಲ್ ಎಂದು ಕರೆಯುತ್ತಾರೆ. ಕುತ್ತಿಗೆ ಹಿಂಭಾಗದಲ್ಲಿ ಆಟಗಾರರು ಫುಟ್ ಬಾಲ್ ಇರಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಅದೇ ರೀತಿ ಈ ಕೋಳಿ ಮಾಡಿದೆ.
ಈ ವಿಡಿಯೋವನ್ನು wonderdixe ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 1 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ವಿಡಿಯೋ ಎಡಿಟ್ ಮಾಡಿದ ವ್ಯಕ್ತಿಗೆ ನೆಟ್ಟಿಗರು ತಮ್ಮನ್ನು ನಗುವಂತೆ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದ್ದಾರೆ.
ಬೆಕ್ಕುಗಳು ಮತ್ತು ನಾಯಿಗಳನ್ನು ಒಟ್ಟಿಗೆ ಪ್ರದರ್ಶಿಸುವ ವೀಡಿಯೊಗಳನ್ನು ನೀವು ಇಷ್ಟಪಡುತ್ತೀರಾ? ಹಾಗಾದರೆ ನಿಮಗೆ ತುಂಬಾ ಖುಷಿ ಕೊಡುವ ಕ್ಲಿಪ್ ಇಲ್ಲಿದೆ. ಎರಡು ನಾಯಿಗಳು ಬೆಕ್ಕನ್ನು ತಮ್ಮ ಸ್ನೇಹಿತನನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ. ಅಬ್ಬಾ ಇವುಗಳು ಆಡುವ ರೀತಿ ನೋಡಿ ಮುದ್ದಾಗಿದೆ ಎನ್ನದಿರಲು ನೆಟ್ಟಿಗರಿಗೆ ಸಾಧ್ಯವಿಲ್ಲ.
"ಅವರು ಬೆಕ್ಕಿನೊಂದಿಗೆ ಸ್ನೇಹಿತರಾಗಲು ಬಯಸುತ್ತಾರೆ. ಬೆಕ್ಕು ಅವರನ್ನು ಇಷ್ಟಪಡುವುದಿಲ್ಲ ಎಂದು ನಟಿಸುತ್ತದೆ" ಎಂದು ರೆಡ್ಡಿಟರ್ ವೀಡಿಯೊವನ್ನು ಹಂಚಿಕೊಳ್ಳುವಾಗ ಪೋಸ್ಟ್ ಮಾಡಿದ್ದಾರೆ.
“ಇಬ್ಬರು ಸಹೋದರಿಯರು. 4 ತಿಂಗಳ ವಯಸ್ಸು. ಲಿಲಿ ಮತ್ತು ಗಸಗಸೆ. ಸಣ್ಣ ವಿಷಯಗಳನ್ನು ಕಚ್ಚುವುದು. ಚೂಪಾದ ನಾಯಿಮರಿ ಹಲ್ಲುಗಳು,” ಎಂದು ತಮ್ಮ ಸ್ವಂತ ಪೋಸ್ಟ್ನಲ್ಲಿ ಕಾಮೆಂಟ್ ಮಾಡುವಾಗ ಮೂಲ ಪೋಸ್ಟರ್ ಬರೆದಿದ್ದಾರೆ. ವೀಡಿಯೊ ಎರಡು ದೃಶ್ಯಗಳನ್ನು ತೋರಿಸುತ್ತದೆ. ಎರಡು ನಾಯಿಗಳು ಬೆಕ್ಕನ್ನು ನೋಡುತ್ತಿರುವುದು ಮತ್ತು ಅವಳ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ನಾಯಿಮರಿಗಳು ಬೆಕ್ಕನ್ನು ಮನವೊಲಿಸಲು ಬಹಳ ಪ್ರಯತ್ನಿಸುತ್ತವೆ ಆದರೆ ವಿಫಲವಾಗುತ್ತವೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ