• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ನೋಡ ನೋಡ್ತಿದ್ದಂತೆ ಮಾಯವಾಯ್ತು, ಬೆಕ್ಕು ಫುಲ್ ಕನ್ಫ್ಯೂಸ್; ಕ್ಯೂಟ್ ವಿಡಿಯೋ ನೋಡಿ

Viral Video: ನೋಡ ನೋಡ್ತಿದ್ದಂತೆ ಮಾಯವಾಯ್ತು, ಬೆಕ್ಕು ಫುಲ್ ಕನ್ಫ್ಯೂಸ್; ಕ್ಯೂಟ್ ವಿಡಿಯೋ ನೋಡಿ

ಬೆಕ್ಕು ಫುಲ್ ಕನ್ಫ್ಯೂಸ್ (ಸಾಂದರ್ಭಿಕ ಚಿತ್ರ)

ಬೆಕ್ಕು ಫುಲ್ ಕನ್ಫ್ಯೂಸ್ (ಸಾಂದರ್ಭಿಕ ಚಿತ್ರ)

"ಗುಳ್ಳೆಗಳಿಂದ ಗೊಂದಲಕ್ಕೊಳಗಾಗಿದ್ದೇನೆ!" ಅಂತ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಗೆ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ವಿಡಿಯೋದಲ್ಲಿ ಎರಡು ಬೆಕ್ಕುಗಳು ಬಬಲ್ ಅನ್ನು ದಿಟ್ಟಿಸಿಕೊಂಡು ನೋಡುತ್ತಿರುವುದನ್ನು ನೋಡಬಹುದು.

  • Trending Desk
  • 3-MIN READ
  • Last Updated :
  • New Delhi, India
  • Share this:

ಮನೆಯಲ್ಲಿ ಚಿಕ್ಕಮಕ್ಕಳು (Children) ಇದ್ದರೆ, ಅವರು ಈ ಸಾಬೂನಿನ ನೊರೆಯಿಂದ (Bubbles) ಬರುವಂತಹ ದೊಡ್ಡ ದೊಡ್ಡ ಗುಳ್ಳೆಗಳನ್ನು ಎಂದರೆ ಬಬಲ್ ಗಳನ್ನು ನೋಡುವುದನ್ನು ಮತ್ತು ಅವುಗಳ ಬಳಿ ಹೋಗಿ ತಮ್ಮ ಎರಡು ಪುಟ್ಟ ಕೈಗಳನ್ನು ಅದರತ್ತ ಮಾಡಿ ತಮ್ಮ ಪುಟ್ಟ ಪಾದಗಳನ್ನು ಸ್ವಲ್ಪ ಸ್ವಲ್ಪ ಮೇಲಕ್ಕೆ ಎತ್ತಿ ಹಾರುತ್ತಾ ಆ ಬಬಲ್ ಗಳನ್ನು (Catching Bubbles) ಹಿಡಿಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಆ ನೊರೆಯ ಗುಳ್ಳೆಗಳು ಆ ಮಗುವಿನ (Baby) ಕೈಗೆ ತಾಕುತ್ತಿದ್ದಂತೆ ಒಡೆದು ಕಣ್ಮರೆಯಾಗುತ್ತಿರುತ್ತವೆ. ಹೀಗೆ ಒಡೆದು ಕಣ್ಮರೆಯಾದ ಬಬಲ್ ಎಲ್ಲಿ ಹೋಯಿತು ಅಂತ ಮಕ್ಕಳು ಸ್ವಲ್ಪ ಹೊತ್ತು ಗೊಂದಲಕ್ಕಿಡಾಗುವುದು, ಅದು ನಮಗೆ ಮಜ ಕೊಡುವುದು ಸಹಜ ಅಂತ ಹೇಳಬಹುದು. ಹೀಗೆ ಕೆಲ ಸಾಕು ಪ್ರಾಣಿಗಳು (Pet Animals) ಮಾಡಿದಾಗ ನೋಡುಗರಿಗೂ (Video Viewers) ಒಂದು ಆಹ್ಲಾದಕರ ಭಾವನೆ ಮೂಡಬಹುದು.


ಬೆಕ್ಕು ಫುಲ್ ಕನ್ಫ್ಯೂಸ್


ಚಿಕ್ಕ ಮಕ್ಕಳು ಹೇಗೆ ಈ ಒಡೆದು ಕಣ್ಮರೆಯಾದ ಗುಳ್ಳೆಗಳನ್ನು ನೋಡಿ ಅದೆಲ್ಲಿಗೆ ಹೋಯಿತು ಅಂತ ಕನ್ಫ್ಯೂಸ್ ಆಗುತ್ತಾರೋ, ಇಲ್ಲಿಯೂ ಸಹ ಒಂದು ಬೆಕ್ಕು ಸಹ ತನ್ನ ಕಣ್ಣು ಮುಂದೆ ಬಬಲ್ ಒಂದು ಬಂದು ಒಡೆದು ಕಣ್ಮರೆಯಾದ ದೃಶ್ಯ ನೋಡಿ ಫುಲ್ ಕನ್ಫ್ಯೂಸ್ ಆಗಿದೆ ನೋಡಿ.


ಬಬಲ್ ಒಡೆದು ಕಣ್ಮರೆಯಾದಾಗ ಈ ಬೆಕ್ಕಿನ ಪ್ರತಿಕ್ರಿಯೆ ನೋಡೋದಕ್ಕೆ ತುಂಬಾನೇ ಮಜವಾಗಿತ್ತು. ಈ ಬೆಕ್ಕಿನ ಪ್ರತಿಕ್ರಿಯೆಯನ್ನು ಸೆರೆ ಹಿಡಿದ ವಿಡಿಯೋ ಕ್ಲಿಪ್ ಈಗ ರೆಡ್ಡಿಟ್ ನಲ್ಲಿ ಅನೇಕರಿಗೆ ಸಖತ್ ಮನರಂಜನೆ ನೀಡಿದೆ ಅಂತ ಹೇಳಬಹುದು.


ತೇಲುತ್ತಾ ಬಂದು ಮಾಯವಾದ ಗುಳ್ಳೆಗಳು 


ಹೀಗೆ ಗಾಳಿಯಲ್ಲಿ ತೇಲುತ್ತಾ ಬಂದ ಒಂದು ಗುಳ್ಳೆ ಒಡೆದು ಕಣ್ಮರೆಯಾಗುತ್ತಿದ್ದಂತೆ ಈ ಮುದ್ದಾದ ಬೆಕ್ಕು ಹೇಗೆ ಸಂಪೂರ್ಣವಾಗಿ ಗೊಂದಲಕ್ಕೊಳಗಾಗುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.


ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗಾಗಲೇ ವಿಭಿನ್ನ ಉಲ್ಲಾಸದ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ ಅಂತ ಹೇಳಬಹುದು.




ಬೆಕ್ಕುಗಳ ಬಬಲ್ ಗಳನ್ನು ಹೇಗೆ ದಿಟ್ಟಿಸಿಕೊಂಡು ನೋಡುತ್ತಿವೆ ನೋಡಿ


"ಗುಳ್ಳೆಗಳಿಂದ ಗೊಂದಲಕ್ಕೊಳಗಾಗಿದ್ದೇನೆ!" ಅಂತ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಗೆ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ವಿಡಿಯೋದಲ್ಲಿ ಎರಡು ಬೆಕ್ಕುಗಳು ಬಬಲ್ ಅನ್ನು ದಿಟ್ಟಿಸಿಕೊಂಡು ನೋಡುತ್ತಿರುವುದನ್ನು ನೋಡಬಹುದು.


ಅದರಲ್ಲಿ ಒಂದು ಬೆಕ್ಕು ಮಾತ್ರ ತುಂಬಾನೇ ಗಮನ ಹರಿಸಿ ನೋಡುತ್ತಿದ್ದರೆ, ಇನ್ನೊಂದು ಅಷ್ಟೇನು ಕೇರ್ ಮಾಡುತ್ತಿರಲಿಲ್ಲ. ತಕ್ಷಣವೇ ಆ ಬೆಕ್ಕು ಕುತೂಹಲಗೊಳ್ಳುತ್ತದೆ, ಏಕೆಂದರೆ ಆ ಬಬಲ್ ಸ್ವಲ್ಪ ಕೆಳಗೆ ಬಂದಂತೆ ಒಡೆದು ಕಣ್ಮರೆಯಾಗುತ್ತದೆ.


ಇದನ್ನು ನೋಡಿ ಆ ಬೆಕ್ಕು ಒಂದು ಕ್ಷಣ ಫುಲ್ ಕನ್ಫ್ಯೂಸ್ ಆಗುತ್ತದೆ ಮತ್ತು ಆ ಬಬಲ್ ಎಲ್ಲಿ ಹೋಯಿತು ಅಂತ ಹುಡುಕಲು ಶುರು ಮಾಡುತ್ತದೆ. ಪ್ರತಿ ಸಾರಿ ಬಬಲ್ ಬಂದಾಗಲೆಲ್ಲಾ ಇದು ಹಾಗೆಯೇ ಪುನರಾವರ್ತನೆಯಾಗುತ್ತಿರುತ್ತದೆ.


ಇದನ್ನೂ ಓದಿ: Viral Video: ಆನ್‌ಲೈನ್ ಕ್ಲಾಸ್‌ನಲ್ಲಿ ಹುಡುಗಿ ಜೊತೆ ಫುಲ್ ಚಾಟಿಂಗ್! ಏನಪ್ಪಾ ನಿನ್ ಕಥೆ ಅಂತ ಕೇಳಿದ್ದಕ್ಕೆ ವಿದ್ಯಾರ್ಥಿ ಹೇಳಿದ್ದೇನು?


ಈ 29 ಸೆಕೆಂಡಿನ ವಿಡಿಯೋವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದ್ದು, ಇದನ್ನು ಶೇರ್ ಮಾಡಿದಾಗಿನಿಂದ, ಇದಕ್ಕೆ 3,600 ಕ್ಕೂ ಹೆಚ್ಚು ಅಪ್‌ವೋಟ್ ಗಳು ಬಂದಿದ್ದು, ಈ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇವೆ.


ಸಖತ್ ಮನರಂಜನೆ ನೀಡುವ ವೀಡಿಯೋಗೆ ಕಾಮೆಂಟ್ ಮಾಡಿದ ರೆಡ್ಡಿಟ್ ಬಳಕೆದಾರರು

top videos


    "ಅರೇ ಆ ಗುಳ್ಳೆ ಎಲ್ಲಿಗೆ ಹೋಯಿತು? ಇದು ಯಾವ ಚಮತ್ಕಾರ!" ಎಂದು ರೆಡ್ಡಿಟ್ ಬಳಕೆದಾರರು ಬೆಕ್ಕಿನ ಆಲೋಚನೆಗಳನ್ನು ಊಹಿಸಿ ಕಮೆಂಟ್ ಮಾಡಿದ್ದಾರೆ.

    Confused by the bubbles!
    by u/1TimeT00Many in AnimalsBeingDerps


    "ನಾನು ಸಹ ಇದನ್ನು ನನ್ನ ಮನೆಯಲ್ಲಿ ಟ್ರೈ ಮಾಡುತ್ತೇನೆ" ಎಂದು ಇನ್ನೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. “ಒಂದು ಸೆಕೆಂಡು ಬಬಲ್ ತೇಲುತ್ತಿದ್ದು, ನಂತರ ಅದು ಮಾಯವಾಗಿದೆ, ಇದು ಹೇಗೆ ಸಾಧ್ಯ? ಆ ಗುಳ್ಳೆ ಎಲ್ಲಿ ಕಣ್ಮರೆಯಾಗಿದೆ” ಎಂದು ಮೂರನೆಯವರು ತಮಾಷೆ ಮಾಡಿ ಪ್ರತಿಕ್ರಯಿಸಿದ್ದಾರೆ.

    First published: