ಈ ಕಾರು ಎಂಥಾ ಮಳೆಗೂ ಅಲುಗಾಡುವುದಿಲ್ಲ! ಹೇಗೆ ಅಂತೀರಾ..ಈ ವಿಡಿಯೋ ನೋಡಿ

Viral Video: ಮನೆಯಲ್ಲಿರುವ ವಸ್ತುಗಳು ಮತ್ತು ವಾಹನಗಳು ನಮ್ಮ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋದರೂ ನಾವು ಏನು ಮಾಡಲಾಗದೆ ಕೈ ಕಟ್ಟಿಕೊಂಡು ಮಳೆಯ ಆರ್ಭಟವನ್ನು ಮೂಕ ಪ್ರೇಕ್ಷಕನಂತೆ ನೋಡಬೇಕಾಗುತ್ತದೆ.

(Photo: Youtube)

(Photo: Youtube)

 • Share this:

  ಜೋರಾಗಿ ಮಳೆ ಬಂದು ಮನೆ ಮುಂದೆ ಮೊಣಕಾಲಿನವರೆಗೆ ನೀರು ಜಮಾಯಿಸಿ ಹಾಗೆ ಮನೆಯ ಮುಂದೆ ಇಟ್ಟಂತಹ ಕಾರು, ಬೈಕ್ ಮತ್ತು ಇತರೆ ವಾಹನಗಳು ನಮ್ಮ ಕಣ್ಣ ಮುಂದೆಯೇ ನೀರಿನಲ್ಲಿ ಮಳೆಯ ರಭಸಕ್ಕೆ ಹಾಗೆ ತೇಲಿಕೊಂಡು ಹೋಗುವುದನ್ನು ನಾವೆಲ್ಲಾ ನೋಡಿರುತ್ತೇವೆ.ಈ ದೃಶ್ಯವನ್ನು ತುಂಬಾ ಸಾಮಾನ್ಯವಾಗಿ ಟಿವಿಯಲ್ಲಿ ನೋಡಿರುತ್ತೇವೆ ಮತ್ತು ಕೆಲವೊಮ್ಮೆ ಭಾರಿ ಮಳೆಯಾದರೆ ನಮ್ಮ ಜೊತೆಯಲ್ಲಿಯೂ ಈ ರೀತಿಯ ಘಟನೆಗಳು ನಡೆದಿರುತ್ತವೆ. ಮನೆಯಲ್ಲಿ ನೀರು ನುಗ್ಗುವುದು ಮತ್ತು ಅದನ್ನು ಹೊರಹಾಕಲು ಮನೆಯವರೆಲ್ಲರೂ ಸೇರಿ ಪಡುವ ಪಾಡು ಅಷ್ಟಿಷ್ಟಲ್ಲ.


  ಮನೆಯಲ್ಲಿರುವ ವಸ್ತುಗಳು ಮತ್ತು ವಾಹನಗಳು ನಮ್ಮ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋದರೂ ನಾವು ಏನು ಮಾಡಲಾಗದೆ ಕೈ ಕಟ್ಟಿಕೊಂಡು ಮಳೆಯ ಆರ್ಭಟವನ್ನು ಮೂಕ ಪ್ರೇಕ್ಷಕನಂತೆ ನೋಡಬೇಕಾಗುತ್ತದೆ.


  ಇದೆಲ್ಲವೂ ಮಳೆಗಾಲದಲ್ಲಿ ಇದ್ದದ್ದೇ, ಆದರೆ ಎಷ್ಟು ವರ್ಷಗಳು ಹೀಗೆ ಸಮಸ್ಯೆ ಇರಿಸಿಕೊಂಡು ಕುಳಿತುಕೊಳ್ಳುವುದು ಹೇಳಿ. ಇಲ್ಲೊಬ್ಬ ವ್ಯಕ್ತಿ ಭಾರಿ ಮಳೆಗೆ ಯಾವುದೇ ರೀತಿಯಲ್ಲಿ ತನ್ನ ವಾಹನಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ತುಂಬಾ ಒಳ್ಳೆಯ ಉಪಾಯ ಮಾಡಿದ್ದಾನೆ. ಕೇಳಿದರೆ ನಿಮಗೂ ನಗು ಬರಬಹುದು, ಆದರೆ ಇದು ಒಂದು ಒಳ್ಳೆಯ ಉಪಾಯ ಎಂದು ಹೇಳುವಲ್ಲಿ ಸಂಶಯವೇ ಇಲ್ಲ.


  ಹೀಗೆ ಮಂಗಳವಾರದಂದು ತೆಲಂಗಾಣ ರಾಜ್ಯದ ಅನೇಕ ಭಾಗಗಳಲ್ಲಿ ಭಾರಿ ಮಳೆ ಸುರಿಯಿತು. ಆ ಭಾರಿ ಮಳೆಯನ್ನು ಮತ್ತು ಅದರಿಂದ ತಾನು ವಾಸಮಾಡುವ ಏರಿಯಾದಲ್ಲಿ ನೀರು ಎಷ್ಟರ ಮಟ್ಟಿಗೆ ತುಂಬುತ್ತದೆ ಮತ್ತು ಇತರೆ ಕಾರುಗಳು ಕೊಚ್ಚಿಕೊಂಡು ಹೋಗುವುದನ್ನು ನೋಡಿದಂತಹ ಒಂದು ಮನೆಯ ಮಾಲೀಕ ಮೊದಲೇ ಎಚ್ಚೆತ್ತುಕೊಂಡು ತಮ್ಮ ಕಾರನ್ನು ನಾಲ್ಕು ಬದಿಯನ್ನು ಹಗ್ಗದಿಂದ ಕಟ್ಟಿ ಅದನ್ನು ತಮ್ಮ ಮನೆಯ ಮೇಲೆ ಇರುವಂತಹ ದೊಡ್ಡ ಕಾಂಕ್ರೀಟ್ ಕಂಬಗಳಿಗೆ ಕಟ್ಟಿರುವುದನ್ನು ನಾವು ಈ 23 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ನೋಡಬಹುದಾಗಿದೆ.


  Read Also- ಸೆಕ್ಸ್​​ಗೆ ಒಪ್ಪಿಲ್ಲವೆಂದು ಅಶ್ಲೀಲ ಸೈಟ್​ಗೆ ಯವತಿಯ ಫೋನ್ ನಂಬರ್ ಅಪ್ಲೋಡ್ ಮಾಡಿದ ಯುವಕ; ಮುಂದೇನಾಯ್ತು ಗೊತ್ತಾ?

  ಈ ವಿಡಿಯೋವನ್ನು ತೆಲುಗು ಸಿನಿಮಾ ಎಂಬ ಯುಟ್ಯೂಬ್ ಚಾನೆಲ್ ಒಂದರಲ್ಲಿ ಅಪ್ಲೋಡ್ ಮಾಡಲಾಗಿದ್ದು, ತುಂಬಾ ವೈರಲ್ ಆಗಿದೆ. ಈ ವಿಡಿಯೋವನ್ನು ಪ್ರವಾಹ ಪೀಡಿತ ತೆಲಂಗಾಣ ರಾಜ್ಯದ ಸಿರಿಸಿಲ್ಲಾ ಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋ ನೋಡಿದ ಅನೇಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದನ್ನು ತುಂಬಾ ಹಾಸ್ಯಾಸ್ಪದವಾಗಿ ನೋಡಿದರೂ, ಒಳ್ಳೆಯ ಉಪಾಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  Read Also- Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

  ಸುದ್ದಿ ಮಾಧ್ಯಮದ ವರದಿಗಳ ಪ್ರಕಾರ, ಈ ಪ್ರವಾಹದಲ್ಲಿ ಹಲವಾರು ದ್ವಿಚಕ್ರ ಮತ್ತು ಕಾರುಗಳು ಕೊಚ್ಚಿಹೋಗಿವೆ ಎಂದು ಹೇಳಲಾಗಿದೆ. ಇದನ್ನು ಮೊದಲೇ ಅರಿತು ಈ ಮನೆಯ ಮಾಲೀಕ ತನ್ನ ಬಳಿ ಇದ್ದ ಕಾರನ್ನು ಸುರಕ್ಷಿತವಾಗಿ ಕಾಪಾಡಿ ಕೊಳ್ಳುವುದಕ್ಕಾಗಿ ಈ ರೀತಿ ಉಪಾಯ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.


   

  ವಿಡಿಯೋದಲ್ಲಿ ಕಾರಿನ ನಾಲ್ಕು ತುದಿಗಳಲ್ಲಿ ಹಗ್ಗದಿಂದ ಕಟ್ಟಿ ಮತ್ತೊಂದು ಹಗ್ಗದ ತುದಿಯನ್ನು ತನ್ನ ಮನೆಯ ಮೇಲಿನ ಕಾಂಕ್ರೀಟ್ ಕಂಬಗಳಿಗೆ ಕಟ್ಟಿರುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ನಿಮ್ಮ ವಾಹನ ಕಾಪಾಡಿಕೊಳ್ಳಲು ಉಪಾಯವಂತೂ ಸಿಕ್ಕಂತಾಯಿತು.

  First published: