ತಾನು ಮದುವೆ (Marriage) ಆಗುವ ಹುಡುಗನ (Groom) ಬಗ್ಗೆ ಯುವತಿಯರು ನೂರಾರು ಕನಸುಗಳನ್ನು (Dreams) ಕಟ್ಟಿಕೊಂಡಿರುತ್ತಾರೆ. ಕೆಲವರು ತಮ್ಮ ಡ್ರೀಮ್ ಬಾಯ್ (Dream Boy) ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದಿಷ್ಟೂ ಜನ ಇಲ್ಲ. ಇನ್ನು ಮದುವೆಯೂ ಯಾವ ರೀತಿ ನಡೆಯಬೇಕು ಎಂಬುದರ ಬಗ್ಗೆಯೂ ಪ್ಲಾನ್ ಮಾಡಿಕೊಂಡಿರುತ್ತಾರೆ. ಉತ್ತರ ಭಾರತದಲ್ಲಿ (North India) ವಧು (Birde) ಮದುವೆ ದಿನ ಡಿಸೈನರ್ ಲೆಹೆಂಗಾ (Designer Lehenga) ಧರಿಸಿ ಮಿಂಚಬೇಕೆಂಬ ಕನಸು ಕಂಡಿರುತ್ತಾರೆ. ಅದಕ್ಕಾಗಿಯೇ ಒಂದಿಷ್ಟು ಹಣ ಸೇವ್ (Money) ಮಾಡಿಕೊಂಡು ತಮ್ಮ ಶಕ್ತಿಗನುಸಾರವಾಗಿ ಬಟ್ಟೆ ಧರಿಸಬೇಕು. ಕೆಲವೊಮ್ಮೆ ಈ ಡಿಸೈನರ್ ತೊಡುಗೆಗಳು ಸುಮಾರು 30 ರಿಂದ 40 ಕೆಜಿ ಸಹ ತೂಕ ಹೊಂದಿರುತ್ತಾರೆ. ದಿಢೀರ್ ಅಂತ ಒಮ್ಮೇ ಈ ತರಹದ ಬಟ್ಟೆ ಧರಿಸಿದಾಗ ನಡೆಯುವ ವೇಳೆ ಅಡಚಣೆ ಉಂಟಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ವಧು ವೇದಿಕೆಯ ಮೇಲೆ ಬರುವಾಗ ಲೆಹೆಂಗಾ ಕಾಲಡಿ ಸಿಲುಕಿ ತೊಡಕಾಗಿತ್ತು. ಇದನ್ನು ಗಮನಿಸಿದ ವರ, ಲೆಹೆಂಗಾ ಸರಿಪಡಿಸಿ ವಧುವನ್ನು ಮೇಲೆ ಕರೆದುಕೊಂಡು ಬಂದಿದ್ದಾನೆ. ವಧು ಜೊತೆಯಲ್ಲಿದ್ದ ಕೆಲ ಯುವತಿಯರು ಸಹ ಸಹಾಯ ಮಾಡಿದ್ದಾರೆ.
ಮಹಿಳೆಯರ ಮನ ಗೆದ್ದ ವಿಡಿಯೋ
ಮದುವೆ ದಿನವೇ ಹುಡುಗ ತನ್ನಾಕೆಗೆ ಸಹಾಯ ಮಾಡಿದ ವಿಡಿಯೋ ಮಹಿಳೆಯರ ಮನ ಗೆದ್ದಿದೆ. ಮದುವೆಯಲ್ಲಿ ಅಷ್ಟು ಜನರ ಮುಂದೆ ವರ ತೋರಿದ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.ಇನ್ನು ಕೆಲ ಮಹಿಳೆಯರು ವರ ಅಂದ್ರೆ ಹೀಗೆ ಇರಬೇಕು ಎಂದು ಕಮೆಂಟ್ ಮಾಡುವ ಮೂಲಕ ತಮ್ಮಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
Wetty_Wedding ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಸದ್ಯ ವೈರಲ್ ಆಗಿರೋ 1.5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಲೆಕ್ಸ್ ಬಂದಿವೆ.
ತೂಕದ ಲೆಹೆಂಗ ಧರಿಸಿದ ವಧುವಿನ ಪುಶ್ ಅಪ್ಸ್
ನಾವೆಲ್ಲ ಮನೆಯಲ್ಲಿ ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ವ್ಯಾಯಾಮ ಮಾಡುತ್ತೇವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ತೂಕದ ಲೆಹೆಂಗ ಧರಿಸಿದ್ದ ನವ ವಧು ತನ್ನ ಮದುವೆ ದಿನದಂದು ಪುಶ್ ಅಪ್ಸ್ ಮಾಡಿದ್ರು. ಹೀಗೆ ಮಾಡುವ ಮೂಲಕ ಮದುವೆಗೆ ಬಂದಿದ್ದ ಅತಿಥಿಗಳಿಗೆ ತಾವು ಮನೆಗೆ ಹೋಗಿ ದಿನನಿತ್ಯ ವ್ಯಾಯಾಮ ಮಾಡುವ ಬಗ್ಗೆ ಒಂದು ಯೋಚನೆ ಹುಟ್ಟಿಹಾಕಿದ್ದಂತೂ ಸುಳ್ಳಲ್ಲ.
ಈ ಎಂಟು ಸೆಕೆಂಡುಗಳ ಚಿಕ್ಕದಾದ ವಿಡಿಯೋ ತುಣುಕನ್ನು ಮಾಡೆಲ್ ಮತ್ತು ಡಯಟೀಷಿಯನ್ ಆನಾ ಅರೋರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನಾ ಅರೋರಾ ತಮ್ಮ ಇನ್ಸ್ಟಾಗ್ರಾಂ ಖಾತೆಯ ಪುಟದಲ್ಲಿ ಹೊಸ ಹೊಸ ತರಹದ ವ್ಯಾಯಾಮಗಳನ್ನು ಮತ್ತು ಅವುಗಳನ್ನು ಮಾಡುವ ರೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಡಿಯೋಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಿರುತ್ತಾರೆ.
ವರನ ಕಪಾಳಕ್ಕೆ ಹೊಡೆದ ವಧು
ವರನು ಗುಟ್ಕಾ ಅಗಿಯುತ್ತಿದ್ದಾನೆ ಎಂದು ತಿಳಿದ ವಧು ಕೆಂಡಾಮಂಡಲವಾಗಿ ತಕ್ಷಣವೇ ಬಾಯಲ್ಲಿರುವುದನ್ನು ಹೋಗಿ ಉಗಿದು ಬನ್ನಿ ಎಂದು ವರ ಮತ್ತು ಅವನ ಸ್ನೇಹಿತರಿಬ್ಬರ ಮೇಲೆ ತನ್ನ ಕೋಪ ವ್ಯಕ್ತಪಡಿಸುತ್ತಾರೆ.
ವಧು ಗುಟ್ಕಾ ಅಗಿಯುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾಳೆ. ವಧು, ವರನನ್ನು ದೂರಕ್ಕೆ ತಳ್ಳಿ ನಂತರ ಅವನನ್ನು ಹೊಡೆಯುತ್ತಾಳೆ. ವಧುವಿನ ಈ ರೂಪ ನೋಡಿ ಹೆದರಿದ ವರ ತಕ್ಷಣವೇ ಅಲ್ಲಿಂದ ಎದ್ದು ಹೋಗಿ ತನ್ನ ಬಾಯಲ್ಲಿ ಅಗಿಯುತ್ತಿರುವಂತಹ ಗುಟ್ಕಾ ಉಗಿದು ಬರುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ