Viral Video: ಹಾರ ಹಾಕಿಸಿಕೊಳ್ಳದೆ ಸ್ಟೇಜ್‌ ಮೇಲೆ ವರನ ಜೊತೆ ಕಬಡ್ಡಿ ಆಡಿದ ವಧು, ವರ ಕಕ್ಕಾಬಿಕ್ಕಿ!

ಹಲವರು ಈ ಕಬಡ್ಡಿ ಆಟವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡರು. ವರನ ಸ್ನೇಹಿತರು ವರನಿಗೆ ವಧುವಿಗೆ ಹಾರ ಹಾಕಲು ಸಹಾಯವಾಗಲು ಸ್ಟೇಜ್ ಮೇಲೆ ಇದ್ದಂತಹ ವಧು ವರನಿಗೆ ಕುಳಿತುಕೊಳ್ಳಲು ತಂದಂತಹ ಕುರ್ಚಿಯನ್ನೂ ಪಕ್ಕಕ್ಕೆ ತೆಗೆದು ಇಡುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Viral Video: ಇತ್ತೀಚೆಗೆ ಮದುವೆಗಳಲ್ಲಿ ವಿಚಿತ್ರವಾದಂತಹ ಘಟನೆಗಳು ನವ ವಧು ವರರಿಂದ ನಡೆಯುತ್ತಿದ್ದು ಮದುವೆಗೆ ಬಂದ ಅತಿಥಿಗಳು ಹೀಗೂ ಆಗಬಹುದೇ ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುವಂತಾಗಿದೆ. ಒಟ್ಟಿನಲ್ಲಿ ಮದುವೆಗೆ ಬಂದ ಅತಿಥಿಗಳು ಕೆಲವು ವಿಚಿತ್ರ ಮತ್ತು ಕೆಲವು ಹಾಸ್ಯಾಸ್ಪದವಾದಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ.ಇಲ್ಲಿ ನಡೆದ ಒಂದು ಘಟನೆಯಲ್ಲಿ ವರನು ತನ್ನ ವಧುವಿನ ಕೈಯಿಂದ ಹೂವಿನ ಹಾರವನ್ನು ಹಾಕಿಸಿಕೊಳ್ಳುತ್ತಾನೆ, ಅದೇ ರೀತಿಯಾಗಿ ವರನು ನಂತರ ವಧುವಿಗೆ ಹಾರವನ್ನು ಹಾಕಲು ಹೋದಾಗ ವಧು ವರನ ಜೊತೆ ಮದುವೆಯ ಸ್ಟೇಜ್ ಮೇಲೆ ಕಬಡ್ಡಿ ಆಟವೇ ಆಡುತ್ತಾಳೆ.ಈ ವಿಡಿಯೋವನ್ನು ಉತ್ತರ ಪ್ರದೇಶದ ಪತ್ರಕರ್ತರಾದ ಮನೀಶ್ ಮಿಶ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಹಾಸ್ಯಾಸ್ಪದ ಘಟನೆಯನ್ನು ನೆಟ್ಟಿಗರು ಇಷ್ಟಪಟ್ಟಿದ್ದು ವಿಡಿಯೋ ವೈರಲ್ ಆಗಿದೆ.


ಮನೀಶ್ ವಿಡಿಯೋದ ಕೆಳಗೆ "ವಧುವಿಗೆ ಇದು ಆಕೆಯ ಮದುವೆ ಸಮಾರಂಭ ಆಗಿತ್ತು. ಆದರೆ ಆಕೆಯು ತನ್ನ ಕೈ ಹಿಡಿಯಲಿರುವ ವರನ ಜೊತೆ ಕಬಡ್ಡಿ ಆಡುವ ಉದ್ದೇಶವಿತ್ತು ಅಂತ ಕಾಣಿಸುತ್ತೆ ಮತ್ತು ವಧುವಿಗೆ ಹಾರ ಹಾಕಲು ವರನಿಗೆ ಸಹಾಯ ಮಾಡಿದಂತಹ ಎಲ್ಲಾ ವರನ ಸ್ನೇಹಿತರಿಗೆ ಧನ್ಯವಾದಗಳು" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ನಂತರ ಈ 2 ನಿಮಿಷದ ವಿಡಿಯೋವನ್ನು ಯುಟ್ಯೂಬ್ನಲ್ಲಿಯೂ ಹಂಚಿಕೊಳ್ಳಲಾಯಿತು. ವೈರಲ್ ಆದ ವಿಡಿಯೋದಲ್ಲಿ ವರನು ವಧುವಿಗೆ ಹಾರ ಹಾಕಲು ಪ್ರಯತ್ನಿಸಿದಾಗ ವಧು ಅನೇಕ ಬಾರಿ ಹಿಂದಕ್ಕೆ ಬಾಗಿದ್ದು ನಂತರ ಹಿಂದಕ್ಕೆ ಸರಿದು ಅಲ್ಲಿಂದ ಸ್ಟೇಜ್ನ ಇನ್ನೊಂದು ಬದಿಗೆ ಓಡಿಹೋಗಿ ಹಾಗೆಯೇ ಪೂರ್ತಿ ಸ್ಟೇಜ್ ಸುತ್ತಲೂ ತಿರುಗಿ ವರನನ್ನು ಕಾಡಿದರು.




[embed]https://www.youtube.com/watch?v=uaHCmFYLIw8&t=76s[/embed]


ವರನು ಇನ್ನೂ ಸ್ವಲ್ಪ ಮುಂದೆ ಮುಂದೆ ಹೋಗಿ ಹಾರ ಹಾಕಲು ಪ್ರತ್ನಿಸಿದಾಗ ವಧುವು ಪೂರ್ತಿ ಸ್ಟೇಜ್ ಮೇಲೆ ಓಡಾಡಿದ್ದು ಮತ್ತು ವರ ಹಾರ ಹಾಕಲು ಕೈಯಲ್ಲಿ ಹಾರವನ್ನು ಹಿಡಿದು ಆಕೆಯನ್ನು ಹಿಂಬಾಲಿಸಿದ್ದು ಅಲ್ಲಿ ಬಂದ ಅತಿಥಿಗಳಿಗೆ ವಧು ವರ ಇಬ್ಬರೂ ಕಬಡ್ಡಿ ಆಟ ಆಡಿದಂತೆ ಅನ್ನಿಸಿತು.
ಹಲವರು ಈ ಕಬಡ್ಡಿ ಆಟವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡರು. ವರನ ಸ್ನೇಹಿತರು ವರನಿಗೆ ವಧುವಿಗೆ ಹಾರ ಹಾಕಲು ಸಹಾಯವಾಗಲು ಸ್ಟೇಜ್ ಮೇಲೆ ಇದ್ದಂತಹ ವಧು ವರನಿಗೆ ಕುಳಿತುಕೊಳ್ಳಲು ತಂದಂತಹ ಕುರ್ಚಿಯನ್ನೂ ಪಕ್ಕಕ್ಕೆ ತೆಗೆದು ಇಡುತ್ತಾರೆ. ಕೊನೆಗೂ ಹರಸಾಹಸ ಮಾಡಿ ವಧುವಿನ ಕೊರಳಿಗೆ ಹಾರ ಹಾಕುವಲ್ಲಿ ವರ ಯಶಸ್ವಿ ಆಗುತ್ತಾನೆ. ಹಾರವನ್ನು ಹಾಕಿಸಿಕೊಳ್ಳಲು ವರನ ಜೊತೆ ಈ ಪರಿಯ ಕಬಡ್ಡಿ ಆಡಿದ್ದು ಇದೇ ಮೊದಲು ಅಂತ ಅನ್ನಿಸಬಹುದು.





ಹೀಗೆ ಹತ್ತು ಬೇರೆ ಬೇರೆ ವಿಶಿಷ್ಟವಾದ ಮತ್ತು ವಿಚಿತ್ರವಾದ ಘಟನೆಗಳು ಮದುವೆ ಮನೆಯಲ್ಲಿ ನಡೆಯುತ್ತಿರುವುದನ್ನು ನಾವು ಇತ್ತೀಚೆಗೆ ನೋಡುತ್ತಿದ್ದೇವೆ. ಇಂತಹದೇ ಒಂದು ಘಟನೆಯಲ್ಲಿಮೂರು ಷರತ್ತುಗಳಿಗೆ ವರನಿಂದ ಸಹಿ ಹಾಕಿಸಿಕೊಂಡು ಮನೆಯೊಳಗೇ ಬಿಟ್ಟ ಘಟನೆಯ ವಿಡಿಯೋ ಸಹ ವೈರಲ್ ಆಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
Published by:Soumya KN
First published: