ತಾವು ಫೇಮಸ್ ಆಗಬೇಕೆಂದು ಕೆಲವರು ಏನೇನೋ ಮಾಡುತ್ತಾರೆ. ಈಗ ಇಂಥದ್ದಕ್ಕೆ ಅಂತಲೇ ಸೋಷಿಯಲ್ ಮೀಡಿಯಾದಲ್ಲಿ ಟಿಕ್ಟಾಕ್ ಸೇರಿ ಅನೇಕ ಆ್ಯಪ್ ಗಳು ಬಂದಿವೆ. ಈಗ ಇದೇ ಟಿಕ್ಟಾಕ್ ಆ್ಯಪ್ ನಲ್ಲಿ ಮಹಿಳೆಯೊಬ್ಬರು ತಮ್ಮ ಕಂಕುಳಿನಿಂದ ಹಾಲು ಚಿಮ್ಮಿಸಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅಮೆರಿಕದ ಮಿನ್ನೇಸೋಟದ ಈ ಮಹಿಳೆ ಟಿಕ್ಟಾಕ್ ವಿಡಿಯೋವೊಂದರಲ್ಲಿ ತನ್ನ ಕಂಕುಳಿನಿಂದ ಹಾಲನ್ನು ಜಿಗಿಸುತ್ತೇನೆಂದು ಪ್ರಯೋಗ ಮಾಡಿ ತೋರಿಸಿಯೇ ಬಿಟ್ಟಿದ್ದಾರೆ. ಟಿಕ್ಟಾಕ್ ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿದ್ದು, ಈ ಮಹಿಳೆ ತನ್ನ ಅನನ್ಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಜನರು ಕೂಡ ತಮ್ಮ ದೇಹಗಳು ಮಾಡಬಹುದಾದ ವಿಚಿತ್ರ ಸಂಗತಿಗಳ ಬಗ್ಗೆ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮಹಿಳೆ ಮಾಡಿದ ಈ ಕಸರತ್ತಿನ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನಿಜಕ್ಕೂ ನಿಮ್ಮ ದೇಹದ ವಿಚಿತ್ರ ಸಂಗತಿ ಬಗ್ಗೆ ತಿಳಿಸಿ, ಕೇವಲ ನಿಮ್ಮ ದೇಹ ಮಾತ್ರವೇ ಈ ರೀತಿ ಮಾಡುತ್ತದಯೇ ಅಥವಾ ಬೇರೆಯವರಿಂದಲೂ ಇದು ಸಾಧ್ಯವೇ ಎಂದು ಆ ಮಹಿಳೆಗೆ ಪ್ರಶ್ನಿಸಲಾಗಿದೆ. ವಿಡಿಯೋದಲ್ಲಿ ನನ್ನ ದೇಹದ ವಿಚಿತ್ರ ಸಂಗತಿ ಬಗ್ಗೆ ನಿಮಗೆ ತಿಳಿಸಲಿದ್ದೇನೆ, ದಯವಿಟ್ಟು ಸ್ವಲ್ಪ ಸಮಯ ಸುಮ್ಮನಿರಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಮನೆಗೆ ನುಗ್ಗಿ 8 ದಿನದ ಹಸುಗೂಸನ್ನು ಎಳೆದೊಯ್ದ ಕೋತಿ; ಅಸುನೀಗಿದ ಮಗು..!
ಬಳಿಕ ‘ಪಿಟ್ಟೀಸ್ ಎಂಬುದರ ಬಗ್ಗೆ ವಿವರಿಸುತ್ತಾರೆ. ಎದೆಹಾಲು ಉಣಿಸುವ ತಾಯಂದಿರು ‘ಪಿಟ್ಟೀಸ್’ ಅನ್ನು ಅನುಭವಿಸಬಹುದು. ಇದರಲ್ಲಿ ಎದೆಯ ಅಂಗಾಂಶವು ಹಾಲಿನಿಂದ ತುಂಬಿಕೊಂಡಾಗ ಅದನ್ನು ಕಂಕುಳಿನಲ್ಲಿ ಬರಿಸಿಕೊಳ್ಳಬಹುದು’ ಎಂದು ಹೇಳುತ್ತಾರೆ.
ಈ ರೀತಿ ನನ್ನ ದೇಹದೊಳಗೆ ಮಾತ್ರ ನಡೆಯುತ್ತದೆಯೋ? ಅಥವಾ ಬೇರೆಯವರಲ್ಲಿಯೂ ಇದೇ ರೀತಿ ಆಗುತ್ತದೆಯೋ ಎನ್ನುವ ಬಗ್ಗೆ ನನಗೆ ತಿಳಿದಿಲ್ಲವೆಂದು ಅವರು ಹೇಳುತ್ತಾರೆ. ಕೆಲ ಕ್ಷಣಗಳ ನಂತರ ಅವರು ತನ್ನ ಕಂಕುಳಿನಿಂದ ಹಾಲನ್ನು ಜಿಗಿಸುತ್ತೇನೆ ಎಂದು ಹೇಳುತ್ತಾರೆ. ಬಳಿಕ ಕ್ಯಾಮರಾಕ್ಕೆ ಎದುರಾಗಿ ಕುಳಿತ ಆ ಮಹಿಳೆ ತನ್ನ ಕಂಕುಳಿನಿಂದ ಹಾಲನ್ನು ಹಿಂಡಲು ಮುಂದಾಗುತ್ತಾರೆ. ನೋಡ ನೋಡುತ್ತಿದ್ದಂತೆ ಹಾಲು ಹೊರಗೆ ಬರುತ್ತದೆ.
ಇದನ್ನು ತನ್ನ ಅನುಯಾಯಿಗಳಿಗೆ ಮನವರಿಕೆ ಮಾಡಲು ಹಾಲಿನ ದ್ರವವನ್ನು ಹೈಲೈಟ್ ಮಾಡುವ ಮೂಲಕ ಮಹಿಳೆ ನಿಧಾನಗತಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.
ಈ ವಿಡಿಯೋವನ್ನು ಜನವರಿ ತಿಂಗಳಿನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು. ಆದರೆ ಅದು ಈಗ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಇತರ ತಾಯಂದಿರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡೈಲಿ ಮೇಲ್ ಪ್ರಕಾರ ಇನ್ನೊಬ್ಬ ಮಹಿಳೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಹಾಲನ್ನು ಅತಿಯಾಗಿ ಉತ್ಪಾದಿಸಿದಾಗ ತಾನು ಕೂಡ ಇದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೆಲವರು ಕಂಕುಳಿನಿಂದ ಬರುವ ಹಾಲನ್ನು ಬಾಟಲ್ ಮಾಡಬಹುದೆಂದು ಸೂಚಿಸಿದರೆ, ಇನ್ನು ಕೆಲವರು ಅದನ್ನು ಅವರ ಮಗುವಿಗೆ ನೀಡಲು ಸಾಧ್ಯವಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ