ಸುಲಭವಾಗಿ ಜೀರಿಗೆ ಪುಡಿ ಮಾಡುವುದನ್ನು ಹೇಳಿಕೊಟ್ಟ ನೀನಾ ಗುಪ್ತಾ: ವಿಡಿಯೋ ನೋಡಿ ವಾವ್​ ಎಂದ ನೆಟ್ಟಿಗರು..!

ನೀನಾ ಗುಪ್ತಾ ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ಪೋಸ್ಟ್ ಮಾಡುವ ವಿಡಿಯೋಗಳು ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುತ್ತವೆ. ಈಗ ಶೇರ್ ಮಾಡಿರುವ ‘ಜುಗಾಡ್’ ವಿಡಿಯೋ ಕೂಡ ಅಷ್ಟೇ.

ನಟಿ ನೀನಾ ಗುಪ್ತಾ

ನಟಿ ನೀನಾ ಗುಪ್ತಾ

  • Share this:
ನಾವು ಭಾರತೀಯರು ಯಾವುದೇ ಸಮಸ್ಯೆಗೆ ದಿಢೀರ್ ಅಥವಾ ಸುಲಭ ‘ಪರಿಹಾರ’ ಕಂಡು ಹಿಡಿಯುವುದರಲ್ಲಿ ನಿಸ್ಸೀಮರು. ಬಾಲಿವುಡ್ ನಟಿ ನೀನಾ ಗುಪ್ತಾ (Neena Gupta) ತಮ್ಮ ಇತ್ತೀಚಿನ ವಿಡಿಯೋದಲ್ಲಿ ತನಗೂ ಅಂತಹ ಕಲೆ ಕರಗತವಾಗಿದೆ ಎಂಬುದನ್ನು ತೋರಿಸಿದ್ದಾರೆ. ಆ ವಿಡಿಯೋ ನೋಡಿದರೆ ನಿಮ್ಮ ತುಟಿಯಂಚಿನಲ್ಲಿ ನಗುವೊಂದು ಮಿಂಚುವುದರಲ್ಲಿ ಸಂಶಯವೇ ಇಲ್ಲ. ಅಷ್ಟು ಮಾತ್ರವಲ್ಲ ಆಕೆ ಹುರಿದ ಜೀರಿಗೆ ಪುಡಿ ಮಾಡಲು ಬಳಸಿದ ಉಪಾಯವನ್ನು ನೀವು ಕೂಡ ಬಳಸುವಂತೆ ಮಾಡುವುದು ಖಂಡಿತ.

ಬಾಲಿವುಡ್ ನಟಿ ನೀನಾ ಗುಪ್ತಾ ದಶಕಗಳಿಂದ ಬಾಲಿವುಡ್‍ನಲ್ಲಿ ಪೋಷಕ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈ ಹಿಂದೆ ತೆರೆ ಕಂಡ ಬದಾಯಿ ಹೋ ಸಿನಿಮಾ ವಿಶೇಷ ಜನಪ್ರಿಯತೆ ತಂದುಕೊಟ್ಟಿತ್ತು. ನೀನಾ ಗುಪ್ತಾ ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ಪೋಸ್ಟ್ ಮಾಡುವ ವಿಡಿಯೋಗಳು ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುತ್ತವೆ. ಈಗ ಶೇರ್ ಮಾಡಿರುವ ‘ಜುಗಾಡ್’ ವಿಡಿಯೋ ಕೂಡ ಅಷ್ಟೇ.
View this post on Instagram


A post shared by Neena Gupta (@neena_gupta)


ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ವಿಡಿಯೋ ಶೇರ್ ಮಾಡುತ್ತಾ ಅದಕ್ಕೆ “ಜುಗಾಡ್” (ಸುಲಭ ಪರಿಹಾರ) ಎಂಬ ಅಡಿಬರಹವನ್ನು ಕೂಡ ನೀನಾ ಗುಪ್ತ ನೀಡಿದ್ದಾರೆ. ಈ ವಿಡಿಯೋ, ಅವರು ಈಗ ಅಮೆರಿಕದಲ್ಲಿ ಹೇಗಿದ್ದಾರೆ ಎಂಬುದನ್ನು ವಿವರಿಸುವ ದೃಶ್ಯದೊಂದಿಗೆ ಆರಂಭವಾಗುತ್ತದೆ. ತಾನು ಸ್ವಲ್ಪ ಜೀರಿಗೆ ಹುರಿದಿದ್ದು, ಅದನ್ನು ಪುಡಿಮಾಡಲು ಗ್ರೈಂಡರ್ ಇಲ್ಲದಿರುವ ಬಗ್ಗೆ ನೀನಾ ಗುಪ್ತಾ ಹೇಳುತ್ತಾರೆ. ನಂತರ ವಿಡಿಯೋದಲ್ಲಿ ಆಕೆ ಹುರಿದ ಜೀರಿಗೆಯನ್ನು ಪುಡಿ ಮಾಡಲು ಯಾವ ಉಪಾಯ ಹುಡುಕಿದರು ಎಂಬುದನ್ನು ತೋರಿಸುವ ದೃಶ್ಯವಿದೆ.

ಇದನ್ನೂ ಓದಿ: Bigg Boss Kannada Season 8 Finale: ಮಂಜು ಕೇಳಿದ ಆ ಒಂದು ವರ ಫಿನಾಲೆಗೆ ಕಾಲಿಟ್ಟಿರುವ ದಿವ್ಯಾ ಉರುಡುಗ ಪಾಲಿಗೆ ಶಾಪವಾಯ್ತು..?

ಈ ವಿಡಿಯೋವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಿದ್ದರು. ಅವರು ಪೋಸ್ಟ್ ಮಾಡಿದ ಕ್ಷಣದಿಂದ ಇದುವರೆಗೆ ಸುಮಾರು 1.7 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಅಷ್ಟೇ ಅಲ್ಲ, ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ನೀನಾ ಗುಪ್ತಾ ಪೋಸ್ಟ್ ಮಾಡಿರುವ ಈ ವಿಡಿಯೋ ಎಷ್ಟು ಚೆನ್ನಾಗಿದೆ ಎಂದರೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರತಿಕ್ರಿಯೆಗಳ ಸುರಿಮಳೆಯೇ ಹರಿದು ಬಂದಿದೆ.

“ಮೇಡಮ್ , ನಾವು ಭಾರತೀಯರು ಈ ರೀತಿಯ ಜುಗಾಡ್‍ಗಳಿಗೆ ಹೆಸರುವಾಸಿ” ಎಂದು ಒಬ್ಬರು ಇನ್‍ಸ್ಟಾಗ್ರಾಂ ಬಳಕೆದಾರ ಬರೆದಿದ್ದರೆ, “ನಾನು ಹೋಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದೆ ಮತ್ತು ಅವರು ಕೊಟ್ಟ ಊಟ ತುಂಬಾ ತಣ್ಣಗಿತ್ತು. ಭಾರತೀಯರಾದ ನಮಗೆ ಬಿಸಿ ಊಟ ಇಷ್ಟ ಅಲ್ಲವೇ. ಅದಕ್ಕೆ ಹೋಟೆಲ್‌ ಬ್ಲೋ ಡ್ರೈಯರ್ ಬಳಸಿಕೊಂಡು ಊಟ ಬಿಸಿ ಮಾಡಿಕೊಂಡೆ” ಎಂದು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ನೀವೆಷ್ಟು ಮುದ್ದು ನೀನಾಜಿ” ಎಂದು ಮತ್ತೊಬ್ಬ ನೆಟ್ಟಿಗ, ನೀನಾ ಗುಪ್ತಾ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Kantara: ಹೊಸ ಕಿಚ್ಚಿನೊಂದಿಗೆ ಬಂದ ಕಾಂತಾರ: ಹೊಂಬಾಳೆ ಫಿಲಂಸ್​ನ 11ನೇ ಚಿತ್ರದಲ್ಲಿ ನಿರ್ದೇಶಕ-ನಾಯಕನಾಗಿ ರಿಷಭ್ ಶೆಟ್ಟಿನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: