Video: ಗಂಡು ಇಲ್ಲದೇ ಇದ್ರೂ ಮರಿ ಮಾಡಿದೆ ಹೆಣ್ಣು ಶಾರ್ಕ್!

ಅಚ್ಚರಿಯ ವಿಚಾರವೆಂದು  10 ವರ್ಷಗಳಿಂದ ಎರಡು ಹೆಣ್ಣು ಶಾರ್ಕ್​​ಗಳನ್ನು ತೊಟ್ಟಿಯಲ್ಲಿ ಹಾಕಿ ಸಾಕಲಾಗುತ್ತಿತ್ತು. ಅದರಲ್ಲಿರುವ ಒಂದು ಹೆಣ್ಣು ಶಾರ್ಟ್ ವರ್ಷಗಳ ಬಳಿಕ​ ಮರಿ ಶಾರ್ಕ್​ಗೆ ಜನ್ಮ ನೀಡಿದೆ.

ಶಾರ್ಕ್​ ಮರಿ

ಶಾರ್ಕ್​ ಮರಿ

  • Share this:


    ಏನಿದು ಪವಾಡ! ಒಂದು ಹೆಣ್ಣು ಮತ್ತು ಗಂಡು ಸೇರಿದಾಗ ಮಾತ್ರ ಮತ್ತೊಂದು ಜೀವಿ ಜನಿಸಲು ಸಾಧ್ಯ. ಆದರೆ ಇಲ್ಲೊಂದು ಘಟನೆ ಎಲ್ಲರಿಗೂ ಆಶ್ಚರ್ಯ ಪಡುವಂತೆ ಮಾಡಿದ್ದು, ಎರಡು ಹೆಣ್ಣು ಶಾರ್ಕ್​ಗಳಿರುವ ತೊಟ್ಟಿಯಲ್ಲಿ ಪುಟ್ಟ ಶಾರ್ಕ್​ ಮರಿ ಜನಿಸಿದೆ.

    ಅಚ್ಚರಿಯ ವಿಚಾರವೆಂದು  10 ವರ್ಷಗಳಿಂದ ಎರಡು ಹೆಣ್ಣು ಶಾರ್ಕ್​​ಗಳನ್ನು ತೊಟ್ಟಿಯಲ್ಲಿ ಹಾಕಿ ಸಾಕಲಾಗುತ್ತಿತ್ತು. ಅದರಲ್ಲಿರುವ ಒಂದು ಹೆಣ್ಣು ಶಾರ್ಟ್ ವರ್ಷಗಳ ಬಳಿಕ​ ಮರಿ ಶಾರ್ಕ್​ಗೆ ಜನ್ಮ ನೀಡಿದೆ. ಈ ಘಟನೆ ಅಲೈಗಿಂಕ ಸಂತಾನೋತ್ಪತ್ತಿಯಿಂದ ನಡೆದಿದೆ ಎಂದು ಹೇಳಲಾಗುತ್ತಿದೆ.

    ಅಂದಹಾಗೆಯೇ ಈ ಘಟನೆ ನಡೆದದ್ದು, ಇಟಲಿಯಲ್ಲಿ. ಅಲ್ಲಿನ ಸಾರ್ಡಿನಿಯಾದಲ್ಲಿರುವ ಅಕ್ವೇರಿಯಾ ಕಾಲಾ ಗೊನೋನ್​​ ನಡೆದಿದೆ. ಕಳೆದ ಎರಡು ದಶಕದಿಂದ ಎರಡು ಹೆಣ್ಣು ಶಾರ್ಟ್​ ಒಂದೇ ತೊಟ್ಟಿಯಲ್ಲಿ ಜೀವಿಸುತ್ತಿದೆ ಎಂದು ಅಕ್ವೇರಿಯಂ ಸಿಬ್ಭಂದಿ ಇಸ್ಟೆರಾ ಹೇಳಿದ್ದಾರೆ.

    ಇದು ಹೇಗೆ ಸಾಧ್ಯ?

    ಹೆಣ್ಣು ಶಾರ್ಕ್​ಗಳ ನಡುವೆ ಲೈಂಗಿಕ ಕ್ರಿಯೆ ಸಾಧ್ಯವೇ? ಅಥವಾ ಇದು ಹೇಗೆ ಸಾಧ್ಯವಾಯಿತು? ಎಂಬ ಕುತೂಹಲ ಅನೇಕರಲ್ಲಿ ಹುಟ್ಟಿರಬಹುದು. ಆದರೆ ಶಾರ್ಕ್​​ ಫಾರ್ಥೆನೋಜೆನೆಸಿಸ್​​ ಪ್ರಕ್ರಿಯೆಯಿಂದ ಸಂತಾನೋತ್ಪತ್ತಿಯಾಗಿದೆ  ಎಂದು ನಂಬಲಾಗಿದೆ.

    ಅಂದರೆ ಇಂದು ಒಂದು ಅಲೈಂಗಿ ಸಂತಾನೋತ್ಪತ್ತಿಯಾಗಿದ್ದು, ವೀರ್ಯಾಣು ಇಲ್ಲದೆ ಕೇವಲ ಅಂಡಾಣುವೇ ಇದ್ದರೂ ಅದರಿಂದ ಭ್ರೂಣ ಹುಟ್ಟುವ ಬಗೆ. ಗಂಡು ಮತ್ತು ಹೆಣ್ಣಿನ ಸಮಾಗಮ ಇಲ್ಲದೇ ಮರಿ ಶಾರ್ಕ್​​ ಜನಿಸಿದೆ.

    ಇನ್ನು ಮರಿ ಶಾರ್ಕ್​ ಅನ್ನು ತಾಯಿಯ ತದ್ರೂಪಿ ಎಂದು ವೈಧ್ಯರು ತಿಳಿಸಿದ್ದಾರೆ. ಅಕ್ವೇರಿಯಂ ಸಿಬ್ಬಂಧಿಗಳು ಈ ಘಟನೆ ಬಳಿಕ ಶಾರ್ಕ್​ಗಳ ಡಿಎಸ್​ಎ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಫಾರ್ಥೆನೋಜೆನೆಸಿಸ್ ಪ್ರಕ್ರಿಯೆ ಯಿಂದ ಹೀಗೆ ಸಾಧ್ಯ ಎಂಬುದನ್ನು ದೃಢಪಡಿಸಿದ್ದಾರೆ.



    ಫಾರ್ಥೆನೊಜಿನಿಸಿಸ್​ ಹುಳುಗಳು, ಕೀಟಗಳು, ಅಕಶೇರುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವು ಉಭಯಚರಗಳು, ಹಲ್ಲಿ, ಮೀನು ಸೇರಿದಂತೆ ಕಶೇರುಕಗಳಲ್ಲಿ ವಿರಳವಾಗಿ ಕಾಣಿಸುತ್ತದೆ.



    Published by:Harshith AS
    First published: