Viral Video: ಒಂದೇ ಬಣ್ಣದ ಸೀರೆ ತೊಟ್ಟವರಲ್ಲಿ ಅಮ್ಮನನ್ನು ಹುಡುಕಿದ ಕಂದಮ್ಮ: ವಿಡಿಯೋ ನೋಡಿ

ಮಾರ್ಚ್ 6ರಂದು ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 18 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ಮಗು ಮತ್ತು ತಾಯಿ

ಮಗು ಮತ್ತು ತಾಯಿ

  • Share this:
ಸೋಶಿಯಲ್ ಮೀಡಿಯಾ (Social Media) ತೆರೆದ್ರೆ ಸಾಕು ಸಾಲು ಸಾಲು ವಿಡಿಯೋಗಳು (Video) ಕಣ್ಮುಂದೆ ಬರುತ್ತವೆ. ಅದರಲ್ಲೂ ಮದುವೆ (Marriage), ಅಡುಗೆ (Recipe) ಮತ್ತು ಹಾವಿನ (Snakes) ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸುಂದರವಾದ ತಾಯಿ (Mother) ಮತ್ತು ಮಗುವಿನ (Child) ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆರು ಮಹಿಳೆಯರು (Woman) ಒಂದೇ ಬಣ್ಣದ ಸೀರೆ (Saree) ಧರಿಸಿ ಕುಳಿತಿದ್ದಾರೆ. ಒಳಗೆ ಓಡಿ ಬರುವ ಮಗು (Baby) ಅಮ್ಮನನ್ನು ಹುಡುಕಲು ಶುರು ಮಾಡುತ್ತದೆ. ಮುಖಕ್ಕೆ ಸೆರಗು ಹಾಕಿರೋದರಿಂದ ಮಗುವಿಗೆ ತಾಯಿ ಮುಖ ಕಾಣಲ್ಲ. ಆದ್ರೂ ಮಗು ತನ್ನ ತಾಯಿಯನ್ನು ಹುಡುಕಲು ಶುರು ಮಾಡುತ್ತದೆ.

ಮೊದಲಿಗೆ ಕುಂತಿದ್ದ ಮಹಿಳೆ ಬಳಿ ಬರುವ ಮಗು ಬರುತ್ತದೆ. ಆದ್ರೆ ಕ್ಷಣಾರ್ಧದಲ್ಲಿ ಮಗು ಹಿಂದೆ ಬರುತ್ತದೆ. ಕೊನೆಗೆ ಕೊನೆಯಲ್ಲಿ ಹೋಗಿ ತನ್ನ ತಾಯಿ ಬಳಿ ಹೋಗಿ ತನ್ನನ್ನು ಎತ್ತಿಕೊಳ್ಳುವಂತೆ ಸನ್ನೆ ಮಾಡುತ್ತದೆ.

ಈ ವಿಡಿಯೋಗೆ 18 ಲಕ್ಷಕ್ಕೂ ಅಧಿಕ ವ್ಯೂವ್

ಮಾರ್ಚ್ 6ರಂದು ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 18 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ನೆಟ್ಟಗರಿ ಮನಗೆದ್ದಿರುವ ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಹೇಳುತ್ತಿದೆ.

ಇದನ್ನೂ ಓದಿ:  Singapore: ರೈಲಿನಲ್ಲೇ ಸಿಂಗಾಪುರ್ ಹೋಗಬಹುದು.. ವೀಸಾ-ಪಾಸ್​ಪೋರ್ಟ್​​ ಬೇಕಾಗಿಲ್ಲ!

ಓರ್ವ ನೆಟ್ಟಿಗ "ಮಾ ಕಿ ಖುಷ್ಬು ಅಲಗ್ ಹೈ ಹೋತಿ ಹೈ ಎಂದು ಬರೆದರೆ, ಇನ್ನೊಬ್ಬರು "ಮುದ್ದಾದ ವೀಡಿಯೊ" ಎಂದು ಬರೆದಿದ್ದಾರೆ.








View this post on Instagram






A post shared by SFT (@status.fan.tranding)






ಐದು ಸಾವಿರಕ್ಕೆ ಮಗು ಮಾರಾಟ ಮಾಡಿದ ತಾಯಿ

ಎರಡನೇ ಮಗುವನ್ನು ಸಾಕಲು ಸಾಧ್ಯವಾಗದೇ ಹೆತ್ತ ತಾಯಿಯೊಬ್ಬಳು ನವಜಾತ ಗಂಡು ಮಗುವನ್ನು(New born child sold for money) ಮಾರಾಟ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ (Vijayapura district hospital) ಈ ಘಟನೆ ನಡೆದಿದ್ದು, 8 ದಿನದ ಗಂಡು ಮಗುವನ್ನು ಕೇವಲ ಐದು ಸಾವಿರಕ್ಕೆ ಹೆತ್ತ ತಾಯಿ ನರ್ಸ್​ ಮೂಲಕ ಮಾರಾಟ ಮಾಡಿದ್ದಾಳೆ.

ಇದಾದ ಎರಡು ದಿನಗಳ ಬಳಿಕ ಮಗು ತಮಗೆ ಬೇಕು ಎಂದು ಬಂದಿದ್ದು ಆಸ್ಪತ್ರೆಗೆ ಬಂದಿದ್ದಾಳೆ. ಈ ವೇಳೆ ಮಗು ಸಿಗದಿದ್ದಾಗ ಸಹಾಯವಾಣಿ ಮೊರೆ ಹೋಗಿದ್ದು, ಪರಿಣಾಮ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:   Viral News: ಬಂಡಿಯಲ್ಲಿ ವೆಜ್ ಬಿರಿಯಾನಿ ಮಾರಾಟ ಮಾಡ್ತಿರುವ ಇಂಜಿನೀಯರ್ ಗಳು ಜೀವನದ ಬಗ್ಗೆ ಹೇಳಿದ್ದೇನು?

ಏನಿದು ಘಟನೆ?
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಕಾಂಬಳೆ‌ ಎಂಬ ಮಹಿಳೆ ಈಗಾಗಲೇ ಒಂದು ಹೆಣ್ಣು ಮಗು ಇತ್ತು. ಈ ವೇಳೆ ಕಳೆದ ತಿಂಗಳು ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಕಡು ಕಷ್ಟದ್ದಲ್ಲಿದ್ದ ರೇಣುಕಾಗೆ ಮಗು ಸಾಕುವುದು ಕಷ್ಟವಾಗಿದೆ. ಇದನ್ನು ತಿಳಿದ ಆಸ್ಪತ್ರೆಯ ನರ್ಸ್ ಕಸ್ತೂರಿ ರೇಣುಕಾಗೆ​ ಮಗುವನ್ನು ಮಾರಾಟ ಮಾಡಲು ತಿಳಿಸಿದ್ದಾಳೆ. ಇದರಿಂದ ಮಗು ಕೂಡ ಬೇರೆ ಕಡೆ ಚೆನ್ನಾಗಿ ಬೆಳೆಯಲಿದೆ. ನಿಮಗೂ ಹಣ ಸಿಗಲಿದೆ ಎಂದು ತಿಳಿಸಿದ್ದಾಳೆ.

ಮಗುವಿನ ಭವಿಷ್ಯದ ಜೊತೆ ಹಣದ ದುರಾಸೆಗೆ ಬಿದ್ದ ರೇಣುಕಾ ಕೂಡ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ. ಜಿಲ್ಲಾಸ್ಪತ್ರೆಯ ನರ್ಸ್ ಹಾಗೂ ಆಕೆಯ ಪತಿಯ ಸಹಾಯದಿಂದ ರೇಣುಕಾ ಕೂಡ ತನ್ನ 8 ದಿನದ ಮಗುವನ್ನು ಮಾರಾಟ ಮಾಡಿದ್ದಾಳೆ. ರೇಣುಕಾ ಗಂಡ ಮಂಜುನಾಥ ಪಡಸಲಗಿ ಆಗಸ್ಟ್​​​ 26 ರಂದು ನರ್ಸ್​ ತೋರಿಸಿದ ವ್ಯಕ್ತಿಗೆ ಮಗುವನ್ನು ಜಿಲ್ಲಾಸ್ಪತ್ರೆ ಆವರಣದಲ್ಲೇ ಮಗುವನ್ನು ಮಾರಾಟ ಮಾಡಿದ್ದಾನೆ.

ನರ್ಸ್​ ಅಮಾನತು ಮಾಡಿದ ಜಿಲ್ಲಾಡಳಿತ

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸ್​ಗಳು ಮಗುವಿನ ಮಾರಾಟ ಜಾಲದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಬಡ ಕುಟುಂಬದ ಅಸಹಾಯಕತೆಯನ್ನು ಬಂಡಾವಳವಾಗಿಸಿಕೊಂಡು ಮಗು ಮಾರಾಟ ಮಾಡುತ್ತಿದ್ದ ನರ್ಸ್ ಕಸ್ತೂರಿಯನ್ನು ಜಿಲ್ಲಾಡಳಿತ ಅಮಾನತು ಮಾಡಲಾಗಿದೆ.
Published by:Mahmadrafik K
First published: