Viral Video: ಗರ್ಲ್ಫ್ರೆಂಡ್ ಜೊತೆಗಿದ್ದ ಗಂಡನಿಗೆ ಟ್ರಾಫಿಕ್ನಲ್ಲೇ ಹೆಂಡತಿಯಿಂದ ಚಪ್ಪಲಿಯೇಟು; ವಿಡಿಯೋ ವೈರಲ್
Viral Video: ತನ್ನ ಪ್ರೇಯಸಿಯೊಂದಿಗೆ ಕಾರಿನಲ್ಲಿ ಹೊರಟಿದ್ದ ವ್ಯಕ್ತಿಯನ್ನು ಟ್ರಾಫಿಕ್ ಸಿಗ್ನಲ್ನಲ್ಲೇ ಆತನ ಹೆಂಡತಿ ಅಡ್ಡಗಟ್ಟಿದಳು. ನಡು ರಸ್ತೆಯಲ್ಲೇ ಗಂಡನಿಗೆ ಚಪ್ಪಲಿಯಿಂದ ಹೊಡೆದ ಆಕೆ ಆತನ ಜೊತೆಗಿದ್ದ ಯುವತಿಗೂ ಮೈ ಚಳಿ ಬಿಡಿಸಿದ ವಿಡಿಯೋ ವೈರಲ್ ಆಗಿದೆ.
ಮುಂಬೈ ಟ್ರಾಫಿಕ್ನಲ್ಲಿ ಗಂಡನ ಕಾರು ಹತ್ತಿದ ಮಹಿಳೆಯ ವಿಡಿಯೋ ವೈರಲ್
'ಗಂಡ-ಹೆಂಡಿರ ಜಗಳ ಉಂಡು ಮಲಗೋವರೆಗೆ' ಎಂಬ ಗಾದೆಯೇ ಇದೆ. ಆದರೆ, ಮುಂಬೈನ ಹೆಂಡತಿಯೊಬ್ಬಳು ನಡುರಸ್ತೆಯಲ್ಲಿ ತನ್ನ ಗಂಡನ ಕಾರನ್ನು ಅಡ್ಡಹಾಕಿ, ಅದರಲ್ಲಿದ್ದ ಗಂಡನ ಪ್ರೇಯಸಿಯನ್ನು ಕೆಳಗೆ ಇಳಿಯುವಂತೆ ರಸ್ತೆಯಲ್ಲೇ ಅವಾಂತರ ಸೃಷ್ಟಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ಗೆಳತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಪತಿಯನ್ನು ಪತ್ನಿ ಚೇಸ್ ಮಾಡಿ ಹಿಡಿದಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತನ್ನ ಗಂಡ ಆತನ ಪ್ರೇಯಸಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದುದನ್ನು ಗಂಡ ಮಹಿಳೆ ಆತನ ಕಾರನ್ನು ಹಿಂಬಾಲಿಸಿದಳು. ಗಂಡನ ಕಾರು ಸಿಗ್ನಲ್ ಬಳಿ ನಿಲ್ಲುತ್ತಿದ್ದಂತೆ ತನ್ನ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಗಂಡನ ರೇಂಜ್ ರೋವರ್ ಕಾರಿನೆದುರು ಹೋಗಿ ನಿಂತ ಮಹಿಳೆ ಗಂಡನ ಪಕ್ಕದಲ್ಲಿ ಕುಳಿತಿದ್ದ ಯುವತಿಯನ್ನು ಕೆಳಗೆ ಇಳಿಯುವಂತೆ ಗದರಿದಳು. ಅಷ್ಟರಲ್ಲಾಗಲೇ ಅಲ್ಲಿಗೆ ಟ್ರಾಫಿಕ್ ಪೊಲೀಸ್ನವರು ಬಂದು ಕಾರನ್ನು ರಸ್ತೆಯ ಪಕ್ಕಕ್ಕೆ ಹಾಕುವಂತೆ ಸೂಚಿಸಿದರು.
ಆದರೆ, ಟ್ರಾಫಿಕ್ನವರ ಮಾತನ್ನು ಕೇಳಿಸಿಕೊಳ್ಳದ ಪೊಲೀಸ್ಗೆ ಫೋನ್ ಮಾಡಿ ತನ್ನ ಗಂಡನನ್ನು ಬಂಧಿಸಲು ಹೇಳುವಂತೆ ಕಿರುಚಾಡಿದಳು. ಅಲ್ಲದೆ, ರೇಂಜ್ ರೋವರ್ ಕಾರನ್ನು ಹತ್ತಿ ಗ್ಲಾಸ್ ಮೇಲಿಂದಲೇ ಗಂಡನ ಪ್ರೇಯಸಿಗೆ ಚಪ್ಪಲಿಯೇಟೂ ಕೊಟ್ಟಳು! ಕಾರಿನ ಬಾನೆಟ್ ಮೇಲೆ ಹತ್ತಿ ಜಗಳವಾಡಿದ ಮಹಿಳೆಯ ವಿಡಿಯೋ ಈಗ ವೈರಲ್ ಆಗಿದೆ. ಹೆಂಡತಿಯ ಅವಾಂತರವನ್ನು ನೋಡಲಾಗದೆ ಗಂಡ ಕೆಳಗಿಳಿದು ಬಂದು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಕೋಪದಿಂದ ಆಕೆ ಗಂಡನನ್ನು ಕಾಲಿನಿಂದ ಒದ್ದ ಘಟನೆಯೂ ನಡೆಯಿತು.
ಗಂಡ-ಹೆಂಡತಿ ಇಬ್ಬರೂ ರಸ್ತೆಯಲ್ಲಿ ನಿಂತು ಜಗಳವಾಡುತ್ತಿರುವಾಗ ಕಾರಿನಲ್ಲಿದ್ದ ಆತನ ಪ್ರೇಯಸಿ ತಾನೇ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ತಕ್ಷಣ ಕಾರಿನ ಹಿಂದೆ ಓಡಿದ ಮಹಿಳೆ ಆಕೆಯನ್ನು ತಡೆದು, ಕಾರಿನ ಕಿಟಕಿಯಿಂದಲೇ ಆಕೆಯ ಮೇಲೆ ಹಲ್ಲೆ ನಡೆಸಿದಳು. ಇದರಿಂದ ತುಸು ಹೊತ್ತು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ನಡುರಸ್ತೆಯಲ್ಲಿ ಅವಾಂತರ ಸೃಷ್ಟಿಸಿದ ಮಹಿಳೆಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ