HOME » NEWS » Trend » VIRAL VIDEO ANGRY GOAT ATTACKS WOMAN DURING SELFIE VIDEO WATCH THE VIRAL VIDEO SCT STG

Viral Video: ಸೆಲ್ಫಿ ತೆಗೆಯುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಮೇಕೆ!; ವೈರಲ್ ಆಯ್ತು ವಿಡಿಯೋ

Viral Video: ಯುವತಿ ಸೆಲ್ಫಿ ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮೇಕೆ ಅವಳತ್ತ ಒಂದು ಬಾರಿ ಹತ್ತಿರ ಹೋಗಿ ಹಿಂದೆ ಬಂದು ಜೋರಾಗಿ ಯುವತಿಗೆ ಡಿಕ್ಕಿ ಹೊಡೆದಿದೆ.

news18-kannada
Updated:March 17, 2021, 12:57 PM IST
Viral Video: ಸೆಲ್ಫಿ ತೆಗೆಯುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಮೇಕೆ!; ವೈರಲ್ ಆಯ್ತು ವಿಡಿಯೋ
ವಿಡಿಯೋದಲ್ಲಿರುವ ಯುವತಿ ಮತ್ತು ಮೇಕೆ
  • Share this:
ಮೊಬೈಲ್​ನಲ್ಲಿ ಸೆಲ್ಫಿ ಕ್ಯಾಮೆರಾ ಬಂದ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಯುವತಿಯರು ಎಲ್ಲಿ ಏನೇ ಮಾಡಿದರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳದಿದ್ದರೆ ಸಮಾಧಾನವಾಗುವುದಿಲ್ಲ. ಅತಿಯಾದ ಸೆಲ್ಫಿ ಹುಚ್ಚಿನಿಂದ ಅನಾಹುತಕ್ಕೆ ಕಾರಣವಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಯುವತಿಯೊಬ್ಬಳ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಯುವತಿಯೊಬ್ಬಳು ಹಳ್ಳಿ ಪ್ರದೇಶದಲ್ಲಿ ಮೇಕೆಯೊಂದನ್ನು ನೋಡಿದ್ದಾಳೆ. ತಕ್ಷಣ ಮೇಕೆಯ ಸಮೀಪ ಹೋಗಿ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ಯುವತಿ ಸೆಲ್ಫಿ ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮೇಕೆ ಅವಳತ್ತ ಒಂದು ಬಾರಿ ಹತ್ತಿರ ಹೋಗಿ ಹಿಂದೆ ಬಂದು ಜೋರಾಗಿ ಯುವತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣ ಯುವತಿ ನೆಲಕ್ಕೆ ಬಿದ್ದಿದ್ದಾಳೆ. ಇವೆಲ್ಲವೂ ಯುವತಿಯ ಸೆಲ್ಪಿ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ‘ದಿ ವಿಲ್ಡ್‌ಕ್ಯಾಪ್ಚರ್’ (thewildcapture) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರ ಮನಸೆಳೆದಿದೆ.

ಯುವತಿಯ ಮೇಲೆ ಮೇಕೆಯ ದಾಳಿ ಮಾಡಿದ್ದ ವಿಡಿಯೋ ಭರ್ಜರಿ ವೈರಲ್ ಆದ ಪರಿಣಾಮ ಯುವತಿಯು ನೆಟ್ಟಿಗರಿಂದ ಟ್ರೋಲ್ ಆಗಿದ್ದಾಳೆ. ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು ಜನರು ವಿವಿಧ ರೀತಿಯ ಅಭಿಪ್ರಾಯಗಳನ್ನು ವಿಡಿಯೋ ಕಮೆಂಟ್ ನಲ್ಲಿ ಹಾಕಿದ್ದಾರೆ.

‘ದಿ ವಿಲ್ಡ್‌ಕ್ಯಾಪ್ಚರ್’ ಹೆಸರಿನ ಇನ್‌ಸ್ಟಾಗ್ರಾಮ್ ಪುಟವು “ಏನು ತಪ್ಪು ಆಗಬಹುದು?” ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯ ಮೇಲೆ ಮೇಕೆಯಿಂದ ದಾಳಿಯ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಡಿಯೋ ವೈರಲ್ ಆದ ಕೂಡಲೇ, ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಗಳನ್ನು ಹಂಚಿಕೊಂಡರು. ಮುಂದಿನ ಬಾರಿ ಅವರು ಪ್ರಾಣಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಹೆಲ್ಮೆಟ್ ಧರಿಸಬೇಕು ಎಂಬಂತಹ ಅನೇಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಮಹಿಳೆಗೆ ಗಂಭೀರವಾದ ಗಾಯವನ್ನು ಹೊಂದಿರಬೇಕು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.






ಯುವತಿಯು ತಾನೇ ಹೋಗಿ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿದ್ದಾಳೆ. ಅದೃಷ್ಟವಾತ್ ಮೇಕೆಯನ್ನು ಕಟ್ಟಲಾಗಿತ್ತು. ಮೇಕೆಯನ್ನು ಹಗ್ಗದಿಂದ ಕಟ್ಟಿದ್ದರ ಪರಿಣಾಮ ಸಣ್ಣ ಪ್ರಮಾಣದ ಪೆಟ್ಟಿನಿಂದ ಯುವತಿಯು ಸುರಕ್ಷಿತವಾಗಿದ್ದಾಳೆ. ಇಲ್ಲದಿದ್ದರೆ ಯುವತಿಯ ಮೇಲೆ ಮೇಕೆಯಿಂದ ಹಲವಾರು ಬಾರಿ ದಾಳಿ ಮಾಡುವ ಸಾಧ್ಯತೆ ಇತ್ತು. ಸೆಲ್ಫಿ ತೆಗೆಯಲು ಬಂದ ಮಹಿಳೆಯ ಮೇಲೆ ಮೇಕೆಯಿಂದ ದಾಳಿಯ ವಿಡಿಯೋ ನೋಡಲು ಹಾಸ್ಯಸ್ಪದವೆನ್ನಿಸಬಹುದು. ಆದರೆ ನಾವೆಲ್ಲರೂ ಇದೊಂದು ಎಚ್ಚರಿಕೆ ಸಂದೇಶ ಎಂಬುದು ಮರೆಯಬಾರದು.

ಸೆಲ್ಫಿ ಫೋಟೋ ಮತ್ತು ವಿಡಿಯೋ ಮಾಡಲು ಹೋಗಿ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಜನರು ಅದರಲ್ಲೂ ಯುವ ಜನಾಂಗವೂ ಸೆಲ್ಫಿ ಚಟದಿಂದ ಹೊರ ಬರುತ್ತಿಲ್ಲ. ಏನೇ ಆಗಲಿ ಈ ಸೆಲ್ಫಿ ಹುಚ್ಚಿನಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಈ ಘಟನೆಯಿಂದ ಯುವ ಜನಾಂಗ ಪಾಠ ಕಲಿಯಬೇಕಾಗಿದೆ.
Published by: Sushma Chakre
First published: March 17, 2021, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories