ಆತ ಕಳ್ಳತನ ಮಾಡಿ ಜೈಲುಪಾಲಾಗಿದ್ದ ಆಸಾಮಿ… ಜೈಲುಕಂಬಿ ಹಿಂದೆ ಶಿಕ್ಷೆ ಅನುಭವಿಸುತ್ತಿದ್ದರೂ ಆತನಿಗೆ ತನ್ನ ತಪ್ಪಿನ ಅರಿವಾಗಿರಲಿಲ್ಲ. ಮಾಡಿದ ತಪ್ಪಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದ ವೇಳೆಯೇ ಆತ ನ್ಯಾಯಾಧೀಶೆಗೆ ಲೈನ್ ಹಾಕಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ. ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆತನ ವರ್ತನೆಗೆ ಅನೇಕರು ಕೆಂಡಕಾರಿದ್ದಾರೆ. ಅಷ್ಟಕ್ಕೂ ಏನಿದು ಘಟನೆ ಅಂತೀರಾ? ಹಾಗಾದ್ರೆ ಈ ಸ್ಟೋರಿಯನ್ನು ಕೊನೆವರೆಗೂ ಓದಿ.
ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಅಮೆರಿಕದ ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕೋರ್ಟ್. ವಿಡಿಯೋದಲ್ಲಿ ಒಂದೆಡೆ ಕಳ್ಳತನದ ಆರೋಪಿ ಡೆಮೆಟ್ರಿಯಸ್ ಲೂಯಿಸ್ ಇದ್ದರೆ ಮತ್ತೊಂದು ಕಡೆ ಮಹಿಳಾ ಜಡ್ಜ್ ತಬಿತಾ ಬ್ಲ್ಯಾಕ್ಮನ್ ವಿಚಾರಣೆ ನಡೆಸಲು ಹಾಜರಾಗುತ್ತಾರೆ. ವರ್ಚುವಲ್ ಕೋರ್ಟ್ ಮೂಲಕ ನ್ಯಾಯಾಧೀಶೆ ತೀರ್ಪಿನ ಪ್ರತಿ ಓದಲು ಆರಂಭಿಸುತ್ತಿದ್ದಂತೆ ಸುಮ್ಮನೇ ನಿಲ್ಲದ ಆರೋಪಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ.
ರಾಜಸ್ಥಾನದ ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ನರ್ಸ್ಗಳ ಡ್ಯಾನ್ಸ್ ವಿಡಿಯೋ ವೈರಲ್: ಆಸ್ಪತ್ರೆಯಿಂದ ತನಿಖೆಗೆ ಆದೇಶ
ತಾನು ಮಾಡಿದ ಅಪರಾಧಕ್ಕೆ ಶಿಕ್ಷೆ ಪ್ರಕಟಿಸುತ್ತಿರುವುದು ಕೋರ್ಟ್ ನ ನ್ಯಾಯಾಧೀಶರು ಎಂಬ ಪರಿಜ್ಞಾನವೇ ಇಲ್ಲದೆ ಆರೋಪಿ ಅನುಚಿತವಾಗಿ ವರ್ತಿಸಿದ್ದಾನೆ. ‘ನ್ಯಾಯಾಧೀಶರೇ ನೀವು ನೋಡಲು ಬಹಳ ಸುಂದರವಾಗಿದ್ದೀರಾ.. ನಾನು ನಿಮಗೆ ಹೇಳುವುದು ಇಷ್ಟೇ, ನೀವು ಬಹಳ ಸುಂದರವಾಗಿ ಇದ್ದೀರಾ.. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ತೀರ್ಪು ಪ್ರಕಟಿಸಲು ಆತ ಅಡ್ಡಿಯನ್ನುಂಟು ಮಾಡಿದ್ದಾನೆ.
ಆರೋಪಿ ಹೀಗೆ ಹೇಳುತ್ತಿದ್ದಂತೆಯೇ ತುಸು ವಿಚಲಿತರಾದ ಮಹಿಳಾ ಜಡ್ಜ್ ಬಳಿಕ ನಗೆಯಾಡಿದ್ದಾರೆ. ಅಲ್ಲದೇ ಎಲ್ಲಿ ಬೇಕಿದ್ದರೂ ನೀನು ಕಳ್ಳತನ ಮಾಡಬಹುದು. ಆದರೆ ಕೋರ್ಟ್ನಲ್ಲಿ ಅಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದರು. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಲೂಯಿಸ್ ಈಗಾಗಲೇ 4 ವರ್ಷಗಳ ಜೈಲುವಾಸ ಅನುಭವಿಸಿದ್ದಾನೆ. ನ್ಯಾಯಾಧೀಶೆ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಆತನಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲವಾದರೂ ಕೂಡ ಆತನ ಅತಿರೇಕದ ವರ್ತನೆಯಿಂದ ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾನೆ.
ಆತನ ವರ್ತನೆಯಿಂದ ಅನೇಕ ನೆಟಿಜನ್ ಗಳಿಗೆ ಭರ್ಜರಿ ಮನರಂಜನೆ ಸಿಕ್ಕಿದೆ. ಒಬ್ಬಾತ ಕಾಮೆಂಟ್ ಮಾಡಿ, ‘ಆತ ಏನಾದರೂ ಪ್ರಾಮಾಣಿಕನಾಗಿದ್ದರೆ ಅವನು ಮತ್ತೊಂದು ಅಪರಾಧವನ್ನು ಮಾಡುತ್ತಾನೆ. ಹೀಗಾಗಿ ಅವನು ಮತ್ತೆ ನ್ಯಾಯಾಧೀಶೆಯನ್ನು ನೋಡಬಹುದು’ ಎಂದು ಟ್ವಿಟ್ ಮಾಡಿದ್ದಾನೆ.
Viral Photo | ಫಸ್ ನೈಟ್ಗೆ ಕಾಯುತ್ತಿರುವ ವಧು, ಕಂಪ್ಯೂಟರ್ ಮುಂದೆ ಬ್ಯುಸಿಯಾದ ವರ; ಟ್ವಿಟ್ಟರ್ನಲ್ಲಿ ಫೋಟೋ ವೈರಲ್
‘ಇದು ನಿಜವೇ ಎಂದು ನನ್ನ ಮನಸ್ಸು ಇಂದಿಗೂ ಕೇಳುತ್ತದೆ. ಕ್ಯಾಮೆರಾದ ಕೆಲಸ, ಮುಖದ ಅಭಿವ್ಯಕ್ತಿ ಮತ್ತು ಪಾಯಿಂಟ್, ಪ್ರತಿಯೊಬ್ಬರೂ ತಮ್ಮ ಪಾತ್ರಗಳ ಕೇಂದ್ರಬಿಂದುವಿನಂತೆ ನೇರವಾಗಿ ಕಾಣುತ್ತಾರೆ. ಇದು ಮ್ಯಾಜಿಕ್’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಈ ತಮಾಷೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಭರ್ಜರಿ ಸದ್ದು ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ