Viral Video: ಚರಂಡಿಗೆ ಇಳಿದ AAP ನಾಯಕನಿಗೆ ಕಾರ್ಯಕರ್ತರಿಂದ ಕ್ಷೀರಾಭಿಷೇಕ: ವಿಡಿಯೋ ನೋಡಿ

ಮಂಗಳವಾರ ಶಾಸ್ತ್ರಿ ಪಾರ್ಕ್‌ಗೆ ಭೇಟಿ ನೀಡಿದಾಗ ಅಲ್ಲಿಯ ಚರಂಡಿ ದುರ್ವಾಸನೆಯಿಂದ ತುಂಬಿ ಹರಿಯುತ್ತಿತ್ತು. ಅನಿಲ್ ಕಪೂರ್ ಸಿನಿಮಾ ನಾಯಕ್ ಚಿತ್ರದಲ್ಲಿ ಇದ್ದಂತೆ ಸಹ ಚರಂಡಿಗೆ ಇಳಿದಿದ್ದರು.

AAP ನಾಯಕ

AAP ನಾಯಕ

  • Share this:
ಚುನಾವಣೆಗಳು (Elections) ಬಂದ್ರೆ ಸಾಕು ಊರಿನ ಗಲ್ಲಿಗಳಲ್ಲಿ ರಾಜಕೀಯ ನಾಯಕರು (Political Leaders) ಕಾಣಿಸಿಕೊಳ್ಳುತ್ತಾರೆ. ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಪ್ರಯತ್ನ ಮಾಡುತ್ತಾರೆ. ದೆಹಲಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳ (Delhi Municipal Election) ಹಿನ್ನೆಲೆ ಎಲ್ಲ ರಾಜಕೀಯ ಮುಖಂಡರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗ  ಅದೇ ರೀತಿಯಲ್ಲಿ AAP ನಾಯಕ ಹಸೀಬ್ ಉಲ್ ಹಸನ್ (Haseeb-Ul-Hasan) ಎಂಬವರು ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ(Social media)ದಲ್ಲಿ ವೈರಲ್ ಆಗ್ತಿದೆ. ಚರಂಡಿಯ ನೀರು ಹಸನ್ ಅವರ ಎದೆ ಭಾಗದವರೆಗೂ ಇತ್ತು. ಚರಂಡಿಗೆ ಇಳಿದ ಹಸನ್ ಅವರಿಗೆ ಕೆಲವರು ಕಸ ಮೇಲೆತ್ತುವ ಉಪಕರಣಗಳನ್ನು ನೀಡುತ್ತಾರೆ. ಅದರಿಂದ ಕಸವನ್ನು ಮೇಲೆತ್ತಿದ್ದಾರೆ. ಚರಂಡಿ ಸ್ವಚ್ಚಗೊಳಿಸಿದ ಹಸನ್ ಅವರಿಗೆ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಹಸೀಬ್-ಉಲ್-ಹಸನ್ ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್ ಆಗಿದ್ದಾರೆ. ಮಂಗಳವಾರ ಶಾಸ್ತ್ರಿ ಪಾರ್ಕ್‌ಗೆ ಭೇಟಿ ನೀಡಿದಾಗ ಅಲ್ಲಿಯ ಚರಂಡಿ ದುರ್ವಾಸನೆಯಿಂದ ತುಂಬಿ ಹರಿಯುತ್ತಿತ್ತು. ಅನಿಲ್ ಕಪೂರ್ ಸಿನಿಮಾ ನಾಯಕ್ ಚಿತ್ರದಲ್ಲಿ ಇದ್ದಂತೆ ಸಹ ಚರಂಡಿಗೆ ಇಳಿದಿದ್ದರು.

ಹಸನ್ ಹೇಳೋದೇನು?

ಚರಂಡಿ ಸ್ವಚ್ಛಗೊಳಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಹಸನ್, ಇಲ್ಲಿಯ ಚರಂಡಿ ಬಗ್ಗೆ ಸ್ಥಳೀಯರು ಹಲವು ಬಾರಿ ದೂರು ಸಲ್ಲಿಸಿದ್ದರು. ನಾನು ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹಾಗಾಗಿ ನಾನೇ ಚರಂಡಿ ಸ್ವಚ್ಚಗೊಳಿಸಿದೆ ಎಂದು ಹೇಳಿದ್ದಾರೆ.ಸದ್ಯ ಹಸನ್ ಅವರು ಚರಂಡಿ ಸ್ವಚ್ಛಗೊಳಿಸುತ್ತಿರುವ ಮತ್ತು ಹಾಲಿನ ಅಭಿಷೇಕ ಮಾಡಿಸಿಕೊಳ್ಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರೋಧ ಪಕ್ಷದ ನಾಯಕರು ಈ ರೀತಿ ಹಾಲಿನ ಅಭಿಷೇಕ ಮಾಡಿಸಿಕೊಳ್ಳಲು ಚರಂಡಿಗೆ ಇಳಿದ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ವಧುವನ್ನ ನೋಡಿ ವರ ಕೊಟ್ಟ ರಿಯಾಕ್ಷನ್ ನೋಡಿ ಎಲ್ಲರೂ ಶಾಕ್!

ವಧು ವೇದಿಕೆ ಬಳಿ ಬರುತ್ತಿದ್ದಂತೆ ವರ ಸಿನಿಮಾ ಸ್ಟೈಲಿನಲ್ಲಿ ರಿಯಾಕ್ಷನ್ ನೀಡಿದ್ದಾನೆ. ಜನರು ಸಹ ತಮ್ಮ ಮದುವೆ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ವಿಶೇಷವಾಗಿ ವಿಡಿಯೋಗ್ರಾಫರ್ ಗಳನ್ನ ನೇಮಕ ಮಾಡಿರುತ್ತಾರೆ. ಮದುವೆಯ ದಿನ ನಡೆಯುವ ಎಲ್ಲ ಸಂಪ್ರದಾಯಗಳನ್ನು ಸೆರೆಯಾಗುವಂತೆ ಮಾಡುತ್ತಾರೆ.

ಇದನ್ನೂ ಓದಿ:  Viral News: ಈ ಮುಸ್ಲಿಂ ದೇಶದಲ್ಲಿ ಮನೆಯ ಗೋಡೆಯ ಮೇಲೆ ಪತ್ನಿ ಫೋಟೋ ಹಾಕಲೇಬೇಕು!

ವೇದಿಕೆ ಮೇಲೆ ಮೊದಲೇ ವರ ಬಂದು ನಿಂತಿರುತ್ತಾನೆ. ವೇದಿಕೆ ಮೇಲೆ ವರನ ಜೊತೆ ಆತನ ಗೆಳೆಯರು ಇರ್ತಾರೆ. ವಧು ಸಮೀಪಕ್ಕೆ ಬರುತ್ತಿದ್ದಂತೆ, ವರ ಸಿನಿಮಾದಲ್ಲಿ ಹೀರೋ ಹೃದಯದ ಹತ್ತಿರ ಕೈ ಹಿಡಿದುಕೊಂಡು ಹಿಂದೆ ನಿಂತಿದ್ದ ಗೆಳೆಯರ ಮೇಲೆ ಬಿದ್ದಿದ್ದಾನೆ.
View this post on Instagram


A post shared by WedAbout.com (@wedabout)


ಹುಡುಗ ತುಂಬಾ ರೊಮ್ಯಾಂಟಿಕ್ ಅಂದ್ರು ನೆಟ್ಟಿಗರು

ವರ ಖುಷಿಯಿಂದ ಈ ರೀತಿ ಮಾಡುತ್ತಿದ್ದಂತೆ ಆತನ ಗೆಳೆಯರೆಲ್ಲರೂ ಓ.. ಎಂದು ಕೂಗಿದ್ದಾರೆ. ನಂತರ ವಧುವಿನ ಕೈ ಹಿಡಿದು ಮೇಲೆ ವರನೇ ಕರೆದುಕೊಂಡು ಬಂದಿದ್ದಾನೆ. ಇನ್ನೂ ಮದುವೆ ಆಗಮಿಸಿದ ಅತಿಥಿಗಳು ಒಂದು ಕ್ಷಣ ಶಾಕ್ ಆಗಿದ್ದುಂಟು. ಕೊನೆಗೆ ಇದೆಲ್ಲ ತಮಾಷೆ ಎಂದು ನಕ್ಕು ಸುಮ್ಮನಾಗಿದ್ದಾರೆ. ಇದೀಗ ವಿಡಿಯೋ ನೋಡಿದ ನೆಟ್ಟಿಗರು, ಹುಡುಗ ತುಂಬಾ ರೊಮ್ಯಾಂಟಿಕ್ ಆಗಿದ್ದಾನೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:  Toilet Theft: ಸಾರ್ವಜನಿಕರೇ ಗಮನಿಸಿ, ಯಾವುದು ಸೇಫ್ ಅಲ್ಲ: ಶೌಚಾಲಯವನ್ನೇ ಕದ್ದು ನೀರು ಕುಡಿದ ಕಳ್ಳರು

ವಧುವಿನ ಎಂಟ್ರಿ ನೋಡಿ ಕಣ್ಣೀರಿಟ್ಟ ವರ

ಇತ್ತೀಚಿನ ದಿನಗಳಲ್ಲಿ ವಧು ಮತ್ತು ವರ ತಮ್ಮ ಎಂಟ್ರಿ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಈ ಎಂಟ್ರಿ ಎಲ್ಲರ ಹುಬ್ಬೇರುವಂತಿರಬೇಕು ಅಂತೆಲ್ಲ ಸಿದ್ಧತೆ ನಡೆಸಿರುತ್ತಾರೆ. ಇಂತಹ ಗ್ರ್ಯಾಂಡ್ ಎಂಟ್ರಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅದೇ ರೀತಿ ವಧುವಿನ ಎಂಟ್ರಿ ನೋಡಿ ವರ ಸಂತೋಷದಿಂದ ಕಣ್ಣೀರು ಹಾಕಿರುವ ವಿಡಿಯೋ ನೆಟ್ಟಿಗರ ಹೃದಯ ಕದ್ದಿದೆ.
Published by:Mahmadrafik K
First published: