ಈಗಿನ ಕಾಲದಲ್ಲಿ ಸಾಲ ಕೊಡೋಕೇ ಹಿಂದು ಮುಂದು ನೋಡ್ತಾರೆ. ಅದ್ರಲ್ಲೂ ಸಾಕಷ್ಟು ಹಣ ಬರುವ ವೃತ್ತಿಯಲ್ಲಿ ಇರುವವರು ಸಾಲ ಕೊಡಲು ಹಿಂಜರಿಯುತ್ತಾರೆ. ಸಾಲ ಕೊಟ್ಟರೂ ಅಬ್ಬಬ್ಬಾ ಅಂದ್ರೆ ಒಂದು ತಿಂಗಳು ಅಥವಾ 6 ತಿಂಗಳು ಬಿಡಬಹುದೇನೋ, ಇನ್ನೂ ಚೂರು ಕರುಣೆ ಗಿರುಣೆ ಇರೋರು 1ವರ್ಷ ಬಿಡಬಹುದು. ಇನ್ನೂ ಕೊಡಲಿಲ್ಲ ಅಂದ್ರೆ ಕಾಲ್ ಮೇಲೆ ಕಾಲ್, ಮೆಸೇಜ್ ಅಥವಾ ಮನೆಗೇ ನುಗ್ಗಿ ಬಿಡ್ತಾರೆ. ಇದರಿಂದಲೇ ಸಾಲಬಾಧೆಯನ್ನು ತಾಳಲಾರದೇ ಜನರು ಸುಸೈಡ್ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು (Example) ಇದೆ. ಪೋಷಕರು ಮಾಡಿಕೊಂಡ ಸಾಲದಿಂದ ಮಕ್ಕಳು ಜೀವನವಿಡೀ ಸಾಲಗಳನ್ನು ತೀರಿಸುವ ಘಟನೆಗಳು ನಮ್ಮ ಸಮಾಜದಲ್ಲಿ ನಡಿಯುತ್ತಿದೆ. ಯಾಕೆ ಇಷ್ಟೆಲ್ಲಾ ಹೇಳ್ತಾ ಇರೋದು ಅಂದ್ರೆ ಇಲ್ಲೋರ್ವ ವೈದ್ಯರು ತನ್ನ ಬಳಿ ಬಂದ ರೋಗಿಗೆ ಎಂಥಾ ಮಾತು ಹೇಳಿದ್ರು ಮತ್ತು ಆ ರೋಗಿ ಏನು ಮಾಡಿದ್ದಾರೆ ಅಂತ ನೀವು ಕೇಳಿದ್ರೆ ಪಕ್ಕಾ ಶಾಕ್ (Shock) ಆಗ್ತೀರಾ! ಈ ವಿಡಿಯೋ ಮತ್ತು ಸುದ್ಧಿ ಎಲ್ಲಾ ಕಡೆನೂ ಸಖತ್ ವೈರಲ್ ಆಗ್ತಾ ಇದೆ.
ಹೌದು, ಈ ರೀತಿಯಾಗಿ ಸಮಾಜದಲ್ಲಿ ಎಲ್ರೂ ಇರೋಲ್ಲ. 'ವೈದ್ಯೋ ನಾರಾಯಣೋ ಹರಿಃ' ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ ಮಾಡಿದ್ದಾರೆ ಇಲ್ಲಿನ ವೈದ್ಯರು. ವಿಡಿಯೋ ವೈರಲ್.
ಏನಪ್ಪಾ ವಿಷಯ?
ಭಗವಂತ್ ಸಿಂಗ್ ಎನ್ನುವ ಪಂಜಾಬ್ನ ವೈದ್ಯರು ರಾಮ್ ಸಹಾಯ್ ಎನ್ನುವವರು ಅಪೇಂಡಿಕ್ಸ್ನಿಂದ ಬಳಲುತ್ತಾ ಇದ್ದರು. ಅದಾಗ ಈ ರೋಗಿಗೆ ಅಷ್ಟು ಕೊಡುವಷ್ಟು ಹಣ ಇರಲಿಲ್ಲ. ಆದರೆ, ವೈದ್ಯರು ನಿನಗೆ ಯಾವಾಗ ಹಣ ಕೊಡಲು ಸಾಧ್ಯವಾಗುತ್ತೋ ಆಗ ಕೊಡು, ಈಗೇನು ಬೇಡ ಎಂದು ಹೇಳಿದ್ದರು.
ಇದನ್ನೂ ಓದಿ: ಕ್ರಿಸ್ಮಸ್ ಮರದ ಹಿಂದಿದೆ ಒಂದು ದೊಡ್ಡ ಕಥೆ!
ಆಪರೇಷನ್ ಆದ ಬಳಿಕ ಒಂದು ಬಾರಿಯೂ ವೈದ್ಯರು ರಾಮ್ ಸಹಾಯ್ ಬಳಿ ಹಣ ಕೇಳಲು ಸಂಪರ್ಕಿಸಿಲ್ಲ. ಬಹುಶಃ ಅವರಿಗೆ ನೆನಪು ಕೂಡ ಇರಲಿಲ್ಲ ಅನ್ಸುತ್ತೆ. ಆದರೆ, 11 ವರ್ಷದ ಬಳಿಕ ಮತ್ತೆ ಅದೇ ಆಸ್ಪತ್ರೆಯ ಬಳಿ ಬರುತ್ತಾರೆ. ಆದರೆ, ವೈದ್ಯರು ಯಾವುದೋ ಕಾರಣಾಂತರಗಳಿಂದ ಆ ಊರಲ್ಲಿ ಇರೋದಿಲ್ಲ, ಬೇರೆ ಕಡೆಗೆ ಹೋಗಿರುತ್ತಾರೆ. ಆದರೆ, ರಾಮ್ ಸಹಾಯ್ 2 ದಿನಗಳ ಕಾಲ ಅದೇ ಊರಿನಲ್ಲಿ ವೈದ್ಯರಿಗಾಗಿ ಕಾದು, ಅವರು ಬಂದ ಬಳಿಕ ಆಪರೇಷನ್ನ ಹಣವನ್ನು ಮರುಪಾವತಿಸಿದ್ದಾರೆ.
View this post on Instagram
ಒಂದು ಭಾವನಾತ್ಮಕವಾಗಿ ವೈದ್ಯರು ಮಾತನಾಡಿ, ಹೀಗೆ 11 ವರ್ಷಗಳ ಬಳಿಕ ಹಣವನ್ನು ಇವರು ಪಾವತಿಸಿದ್ದಾರೆ. ಎಷ್ಟು ಹ್ಯಮಾನಿಟಿ ಇವರಿಗೆ. ಇಂತವರೂ ಇಂತಹ ಕಾಲದಲ್ಲಿ ಇದ್ದಾರಾ? ಅಂತ ವಿಡಿಯೋದಲ್ಲಿ ಮಾತನಾಡಿದ್ದಾರೆ. ರಾಮ್ ಸಹಾಯ್ನನ್ನು ನೋಡುತ್ತಾ ಇದ್ದರೆ ಎಂಥವರಿಗಾದರೂ ಪಾಪ ಅನಿಸುತ್ತೆ.
ಈ ವಿಡಿಯೋ ಇದೀಗ brut.india ಇನ್ಸ್ಟಾಗ್ರಾಮ್ನಲ್ಲಿ ಸಖತ್ ವೈರಲ್ ಆಗ್ತಾ ಇದೆ. 12ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದೆ ಹಾಗೆಯೇ ಇಂತಹ ಜನರು ಸಮಾಜದಲ್ಲಿ ಸಿಗೋದು ಕಷ್ಟ, ಈ ವಿಡಿಯೋ ನೋಡಿ ಇಂದಿನ ದಿನ ಅದ್ಭುತವಾಯ್ತು ಅಂತೆಲ್ಲಾ ಕಮೆಂಟ್ಗಳು ಬಂದಿದೆ. ನೀವೂ ಕೂಡ ಈ ವಿಡಿಯೋ ನೋಡಿ ಏನ್ ಅನ್ಸುತ್ತೆ ಅಂತ ಕಮೆಂಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ